ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಿಸೆಶ್ಶನ್ ಆನ್ ಬಾವಿಕಟ್ಟೆ..

ರಾಮಕ್ಕ : ಲಕ್ಷ್ಮಿ ಆಯ್ತ ಮನೆ ಕೆಲ್ಸಾ ಎಲ್ಲಾ ..
ಲಕ್ಷ್ಮಿ : ಆಯ್ತು ರಾಮಕ್ಕ.. ಹೊಲಕ್ಕೆ ಬುತ್ತಿ ತಗೊಂಡು ಹೋಗ್ಬೇಕು... ಮನೇಲಿ ಒಂಚೂರು ನೀರಿರ್ಲಿಲ್ಲಾ... ಅದ್ಕೆ ನಮ್ಮ male ಗೆ mail ಕಳಿಸಿ ಹಗ್ಗ ತರಕ್ಕೆ ಹೇಳ್ದೆ.. ಇನ್ನೂ ಬಂದಿಲ್ಲಾ .. ಹೊತ್ತಾಗೋಯ್ತು...
ರಾಮಕ್ಕ :ಹಗ್ಗ ತರಕ್ಕೆ ಹೇಳ್ದ ಯಾಕೆ ಎಕ್ಸ್ಟ್ರಾ ಮನೇಲಿಲ್ವಾ...
ಲಕ್ಶ್ಮಿ : ಇದೇ .. ಆದ್ರೆ ಅದನ್ನ ನಮ್ male ಅಟ್ಟದ್ ಮೇಲ್ ಇಟ್ಬುಟ್ಟಿದ್ದಾರೆ...
ರಾಮಕ್ಕ : ಅಟ್ಟದ್ ಮೇಲಾ.... ಅದ್ಯಾಕೆ....?
ಲಕ್ಷ್ಮಿ : ಅದೇನೊ recession ಅಂತೆ ... ಯಾವ್ದಕ್ಕೊ ಇರ್ಲಿ ಅಂತ ಅದನ್ನ ಮೇಲ್ ಎತ್ತಿಟ್ಟು ನೇಗಿಲ್ಗೆ ಕಟ್ಟಿರೋದನ್ನೇ ನೀರ್ಸೇದಕ್ಕೂ ಬಳಸು ಅಂತ ಆರ್ಡ್ರ್ ಮಾಡಿದಾರೆ...ಹೋಗ್ಲಿ ಬುಡು ನೀನಾದ್ರು ಸಿಕ್ದ್ಯಲ್ಲಾ... ನೀನ್ಯಾಕೆ ಇನ್ನೂ ನೀರ್ಸೇದ್ದೆ ಸುಮ್ನೆ ಕುಂತಿದೀಯಾ

ನವ ವಸಂತ!!!

ಹಸಿರೊಡೆದ ಹುಲ್ಲಿನ ಹೊದಿಕೆಯಲಿ
ಭೂದೇವಿ ಕಂಗೊಳಿಸುತಲಿ
ಚೈತ್ರದ ಚಿಗುರೆಲೆಗಳಲಿ
ತುಂಬಿದ ಗಿಡ-ಮರಗಳಲಿ
ಮೊಗ್ಗೊಡೆದು ಹೂವರಳಿ
ಮಕರಂಧ ಸೂಸುತಲಿ
ಕೂಗಿಹುದು ದುಂಬಿಗಳ
ದುಂದುಬಿ ನಾದಗಳ ಅಲೆಗಳಲಿ
ಹಕ್ಕಿಗಳ ಚಿಲಿ-ಉಲಿ
ಚಲಿಸಿ ದೂರದಲಿ
ಸಾರಿತು ಹೊಸ ಋತುವನಿಲ್ಲಿ
ಬಂದನೋ ಬಂದನೋ ನವ ವಸಂತ ಬಂದನು
ತಂದನೋ ತಂದನೋ ಹೊಸ ಹರುಷವ ತಂದನು!!!

ಕಪ್ಪು ರಂಧ್ರ

ಕಪ್ಪುರಂಧ್ರ

ನಗುವಿಗೆ ......
ಮೆರಗನ್ನು... ಮೆಚ್ಚುಗೆಯನ್ನು.....
ಅಳುವಿಗೆ....
ಕಣ್ಣೀರ ಜೀವಂತಿಕೆಯನ್ನು........
ಬಿಂಬಿಸುವ .....
ದರ್ಪಣ ನೀನಾಗಬೇಕೆಂದು
ಬಯಸಿದೆ.....

ನೀನೋ.......
ಒಂದು ಬೆಳಕ ಜೀವ ಕಣವನ್ನೂ
ಬಿಡದೆ ಸೆಳೆದು
ನನ್ನ ನಿಸ್ತೇಜನನ್ನಾಗಿಸಿದೆ.....
ನಿನ್ನೊಳಗೆ ಅಂತರ್ಧಾನವಾಗುವ
ಮುನ್ನ ಸಾವರಿಸಿಕೊಂಡು ಅರುಹುತ್ತಿರುವೆ.....

ನಿನ್ನ (ನೆಟ್) ಸ್ನೇಹದಿಂದ ನಾನ್ಯಾಕೆ ಕೆಟ್ಟೆ?

ನಿನ್ನ ಸ್ನೇಹ ಆದ ದಿನದಿಂದ ಸಖೀ
ಅದೇಕೋ ನಾನು ಈಗ ಇಲ್ಲ ಸುಖಿ

ಅದೆಂತಹ ದಿವ್ಯ ಮೋಡಿ ನೋಡು
ನಿನ್ನಿಂದಾಗಿ ನನ್ನ ಬುದ್ಧಿ ಕುರುಡು

ದೂರದಲಿದ್ದೂ ನೀ ನನ್ನೊಳಗಿರುವಂತೆ
ನನ್ನೊಳಗಿದ್ದೂ ನೀನು ಇಲ್ಲೇ ಇರದಂತೆ

ಬಯಕೆ ಮೂಡಿದೆ ಈಗ ನನ್ನ ಮನದೊಳಗೆ
ಬಂದು ಬಿಡು ಒಮ್ಮೆ ಬೇಗ ನೀನನ್ನ ಬಳಿಗೆ
--------

ನನ್ನ ಕಣ್ಣ ಮುಂದೆ ಬಂದೆ ನೀನು
ನಿನ್ನ ಕಣ್ಣಲ್ಲೇ ನನ್ನ ಕೊಂದೆ ನೀನು

ಶಾಶ್ವತ ಪ್ರೀತಿ

ಮೋಡಗಳು ಚಲಿಸದೆ ನಿಂತಲ್ಲೇ ನಿಲ್ಲುವತನಕ
ನದಿ ಹರಿಯಲಾಗದೆ ತಟಸ್ತವಾಗುವತನಕ
ಹಕ್ಕಿ ಹಾರುವುದ ಮರೆತು ಕೂತಲ್ಲೇ ಕೂರುವತನಕ
ನನ್ನ ನಿನ್ನ ಪ್ರೀತಿ ಜೀವಂತವಾಗಿರಲಿ

ಹಿರಿಯರ ಸಿರಿ

ಕಡಲು ತಾನೇ ಮುತ್ತಿನೊಡವೆಯನು ತೊಡುವುದೆ?
ವಿಂಧ್ಯಗಿರಿ ಬಯಸುವುದೆ ಆನೆಗಳ ಪಹರೆ?
ಮಲೆನಾಡ ಗಿರಿಬೆಟ್ಟ ಗಂಧಲೇಪವ ಕೇಳೀತೆ?
ಹಿರಿಯರ ಸಿರಿಯೆಲ್ಲ ಪರರ ನೆರವಿಗೆಂದೆ!

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

ನಮ್ಮೂರಿಗೆ ಬನ್ರಪ್ಪೋ ಬನ್ರಮ್ಮೋ.....

ಸಂಪದ ಸ್ನೇಹ ಮಿಲನ ದ ಬಗ್ಗೆ ಸಾಕಷ್ಟು ಓದಿದೆ...
ಆದ್ರೆ ಯಾರೂ ಯಾವ ನಿರ್ಧಾರಕ್ಕೆ ಬಂದ ಹಾಗೆ ಕಾಣಲಿಲ್ಲ..
ಸರಿ ಈಗಲಾದರು ನಿರ್ಧಾರ ಮಾಡಿ
ಬಂದು ಬಿಡಿ ನಮ್ಮೂರಿಗೆ..
ಮೇ ೧೦ನೇ ತಾರೀಖು ಆಗಬಹುದಾ???
ಮೇ ೧೦ ಭಾನುವಾರ....
ಸಂಜೆ ಮಂಡ್ಯದಲ್ಲಿ ಒಂದು ಒಳ್ಳೆಯ ಕಾರ್ಯಕ್ರಮವೂ ಇದೆ...