ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಬ್ಲಾಗರುಗಳ ಸಮುದಾಯ ಆರಂಭ:ಸೇರಿದಿರಾ?

ಕನ್ನಡ ಬ್ಲಾಗರುಗಳ ಸಮುದಾಯ ಆರಂಭವಾಗಿದೆ. ಎಲ್ಲರೂ ಸೇರಿಕೊಳ್ಳಿ. ತಾಣದ ವಿಳಾಸ ಇಲ್ಲಿದೆ.
http://kannadablogs.ning.com/

ಶ್ರೀಕೃಷ್ಣದೇವರಾಯನೂ ಪು.ದಾಸರೂ

ಶ್ರೀಕೃಷ್ಣದೇವರಾಯನು ಪುರಂದರದಾಸರನ್ನ ಒಮ್ಮೆ ಭೆಟ್ಟಿಯಾದನಂತೆ . ಆಗ ಅವರು ತಮ್ಮಿಬ್ಬರ ಭಾಗ್ಯವನ್ನು ಹೋಲಿಸಿಕೊಂಡು ಒಂದು ರಚನೆ ಮಾಡಿದರಂತೆ . ಕೃ.ರಾಯನು ನಕ್ಕನಂತೆ . ಆ ರಚನೆ ಇಲ್ಲ್ಲಿದೆ.

ನಂಬಿ ಕೆಟ್ಟವರು

ಹಣವ ಗಳಿಸಿದೆ ಬೆವರ ಸುರಿಸುತ
ರಣದ ಸೈನಿಕನಂದದಿಂ ಕಂ
ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ||
ತೃಣದಿ ನಾ ಕಂಡೆನು ಸುಖವ ಚಣ
ಚಣವು ಕಷ್ಟದಿ ದುಡಿದೆ ನಾ ಕಡಿ
ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು ||

ಚಲಿಸಿದೆನು ಕಾಲ್ಗಳಲಿ ನಡೆಯುತ
ಉಳಿಸಿದೆನು ಹಣವನ್ನು ವ್ಯಯಿಸದೆ
ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ||
ಮುಳುಗಿ ಹೋಯಿತು ಎಲ್ಲ ಹಣ ನಾ

ಕಲ್ಯಾಣಮಸ್ತು

ಹೌದು...ನಾನೀಗ ಬರೆಯುತ್ತಿರುವುದು ಮದುವೆ ಬಗ್ಗೆ. ಸ್ವಂತ ಅನುಭವ ಇಲ್ಲ ನಿಜ ಆದರೆ ಅಲ್ಲಿ -ಇಲ್ಲಿ ಕೇಳಿ -ಓದಿ- ನೋಡಿ ಮದುವೆ ಬಗ್ಗೆ ತುಂಬಾ ತಿಳಿದುಕೊಂಡಿದ್ದೇನೆ . "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡಿ" ಎಂಬ ಗಾದೆಯೇ ಇದೆ . ಸ್ವಂತ ಅನುಭವದ ಮೇಲೆ ಒಂದು ಸಂಪುಟವನ್ನೇ ರಚಿಸುತ್ತೇನೆ . ಈಗ ಅದರ Trailors ನೋಡಿ ಆನಂದಿಸಿ . ಯಾಕೆಂದರೆ Picture abhi bhi baaki hai mere dost ......

ಮದುವೆ ಗೆ ಅಗತ್ಯ ಜನರು :

ಬೆಂಗಳೂರಲ್ಲಿ "ಹೆಲ್ತಿ ದಾದಾ "

ಬೆಂಗಳೂರಿನ ಭೂಗತ ಜಗತ್ತಿನ ಬಗ್ಗೆ ವರದಿ ಇರಬಹುದು ಅನ್ಕೊಂಡ್ರಾ?
"ಹೆಲ್ತಿ ದಾದಾ" ಅನ್ನೋದು "RELIGARE SRL DIAGNOSTICS" ಕಂಪನಿಯ ಆರೋಗ್ಯ ತಪಾಸಾಣಾ ಕೇ೦ದ್ರದ ಒ೦ದು ಹೆಲ್ತ್ ಪ್ಯಾಕೇಜ್ ನ ಹೆಸರು. "ಸಾಮಾನ್ಯ ಆರೋಗ್ಯ"ದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿರೋದು ಕ೦ಡು ಎಲ್ಲೆಡೆ ಆರೋಗ್ಯ ತಪಾಸಾಣಾ ಕೇ೦ದ್ರಗಳು ಪ್ರಾರ೦ಭಗೊಳ್ಳುತ್ತಿವೆ.

ಪಯಣ

ಮಾಯಾಜಾಲದಲಿ ಮಿಂದು ಮಸುಕಾದ ಮುಸ್ಸಂಜೆ ಮನತುಂಬಿಹುದು, ಮಾಯದೀ ಮನವೊಲಿಸುವ ಮಾಯೆಯ ಮನವರಿತು ಮಂಥನ ಮಾಡಿ ಮುಕ್ತನಾಗಿ ಮೈಮರೆಯಲು ಮನದಾಳದ ಮುತ್ತಿಗೆ ಮುತ್ತಿಗೆ ಮಾಡಲು ಮಾಯದ ಮೇಘಧೂತದಿ ಮಿಂಚಲು ಮನವು ಮುದದಿಂದ ಮಾಯೆಯಾಗಿದೆ!

ಮಾಯದ ಮನದಾಳಕೆನ್ನ ಪಯಣ!

ಹುಳು, ಹಕ್ಕಿಗಳನ್ನು ಬೆನ್ನಟ್ಟಿಹೋದವರಿಗೆ ಹೊನ್ನ ಕಿರೀಟದಂಥ ಪ್ರಶಸ್ತಿಗಳು ಬೆನ್ನಟ್ಟಿ ಬಂದವು!

ಈಗ್ಗೆ ಒಂದು ತಿಂಗಳ ಹಿಂದೆಯಷ್ಟೇ ಒಬ್ಬರು ನನ್ನ ಬ್ಲಾಗಿಗೆ www.bisilahani.blogspot.com ಹೊಸದಾಗಿ ಭೇಟಿಕೊಟ್ಟು ಅಲ್ಲಿ ನಾನು ಪ್ರಕಟಿಸಿದ ಕವನವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ “ಹೀಗೆ ಹಾರಾಡುತ್ತಾ ನಿಮ್ಮ ಬ್ಲಾಗಲ್ಲಿ ಬಿದ್ದೆ. ರವೀಂದ್ರನಾಥ ಟ್ಯಾಗೋರ್‌ರವರ ಕವನವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ. ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ. ಅಲ್ಲಿ ಒಂದಷ್ಟು ಚೆಂದದ ಫೋಟೊಗಳಿವೆ, ಲೇಖನಗಳಿವೆ. ಭೂಪಟಗಳಿವೆ, ಪುಟ್ಟ ಪುಟ್ಟ ಕತೆಗಳಿವೆ” ಎಂದು ಹೇಳಿದ್ದರು. ನಾನು ಎಂದಿನಂತೆ ಸಹಬ್ಲಾಗಿಗರು ಪ್ರತಿಕ್ರಿಯಿಸಿದಾಗ ಅವರಿಗೊಂದು ಧನ್ಯವಾದ ಹೇಳಿ ಸುಮ್ಮನಾಗುವಂತೆ ಸುಮ್ಮನಾಗುವದಾಗಲಿ, ಅಥವಾ ಅವರು ತಮ್ಮ ಬ್ಲಾಗನ್ನು ನೋಡಲು ಹೇಳಿದಾಗ ವಿಳಂಬಮಾಡುವಂತೆ ವಿಳಂಬ ಮಾಡುವದನ್ನಾಗಲಿ ಇವರ ವಿಷಯದಲ್ಲಿ ಮಾಡಲಿಲ್ಲ. ತಕ್ಷಣ ಅವರ ಬ್ಲಾಗಿಗೆ ಭೇಟಿಕೊಟ್ಟೆ. ಅದಕ್ಕೆ ಕಾರಣ- ಅದರಲ್ಲಿರುವ ಒಂದಷ್ಟು “ಚೆಂದನೆಯ ಫೋಟೋಗಳು”! ಹಾಗೂ ನನಗೂ ಫೋಟೊಗ್ರಾಫಿಯಲ್ಲಿ ಮೊದಲಿನಿಂದಲೂ ಅಲ್ಪ ಸ್ವಲ್ಪ ಆಸಕ್ತಿ ಇತ್ತಲ್ಲ? ಒಮ್ಮೆ ನೋಡೇ ಬಿಡುವಾ ಎಂದುಕೊಂಡು ಅವರ ಬ್ಲಾಗಿನೊಳಕ್ಕೆ ಇಣುಕಿದೆ.

ನಾಯಿ ಪಾಡು!

ನಾನು ಬೆಳಿಗ್ಗೆ ವಾಕಿಂಗ್ ಅಥವಾ ಜಾಗಿಂಗ ಮಾಡದೆ ಇರುವುದಕ್ಕೆ ಹಲವಾರು ಕಾರಣಗಳುಂಟು, ಅದರಲ್ಲೊಂದು, "ನಾಯಿ" ಅನ್ನೊ ಅದ್ಭುತ ಪ್ರಾಣಿ! ಹೌದು ಬೆಳಿಗ್ಗೆ ಎಷ್ಟೋ ಜನ ತಮ್ಮ ನಾಯಿಗೋಸ್ಕರವೇ ಜಾಗಿಂಗ ಮಾಡ್ತಾರೆ.