ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆಳೆಯನ ಪ್ರಾರ್ಥನೆ

ಪ್ರೀತಿ ಮಂತ್ರ ಜಪಿಸುತಿರುವ ಪ್ರೇಮಿ ನಾನು
ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು
ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ
ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ

ನಮ್ಮನ್ನು ಅಗಲುವಂತೆ ಮಾಡಿತ್ತು ಆ ಸುಡುಗೆಂಪು ಜಾವ
ನನ್ನೊಲವಿನ ಗೆಳತಿಯ ಸಿಗುವಂತೆ ಮಾಡುವೆಯ ಮುಂಜಾವ

ಹರಿಹರಪುರ ದುರ್ಗಾಪರಮೇಶ್ವರಿ ತೇರು, ಸಿಡಿಜಾತ್ರೆ , ಕೆಂಡ-ಕೊಂಡ ದೃಶ್ಯಾವಳಿ

/ಸಿಡಿಯಾಟ

ದಿನಾಂಕ ೨೧.೦೩.೨೦೦೯ ರಂದು ಹರಿಹರಪುರ ದುರ್ಗಾ ಪರಮೇಶ್ವರಿ ತೇರು, ಸಿಡಿಜಾತ್ರೆ, ಕೆಂಡ-ಕೊಂಡ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಸುಮಾರು ಮೂವತ್ತು ಸಹಸ್ರ ಭಕ್ತರು ದೇವಿಯ ದರ್ಶನ ಪಡೆದು ಜಾತ್ರೆಯಲ್ಲಿ ಸಂಬ್ರಮಿಸಿದರು. ಜಾತ್ರೆಯ ಕೆಲವು ದೃಶ್ಯಾವಳೀ ಸಂಪದಿಗರಿಗಾಗಿ.

ನಮ್ಮಹಳ್ಳಿ ಬೋರ್ನ ಅನುಭವದ ಮದುವೆಯ ಗುಟ್ಟೇನು? ?

ಬೋರ್ನ ಅನುಭವ:ಮದುವೆಗೆ ಮುಂಚೆ

ನಮ್ಮ್ ಬೋರಂಗೆ ಹುಡುಗಿ ಕೈ ಕೊಟ್ಟಾಗ ಅವನ ಹೊಸ ಮನಸ್ಥಿತಿ:

ಬೋರ್ನ ಹೊಸ thoughtಉ 1:ನೆನ್ನೆಯವೆರಗು ಅವಳು ಇದ್ದಳು, ಇವತ್ತು ಅವಳು ಇಲ್ಲ, ನಾಳೆಗೆ ಯಾರು ಬರುತ್ತಾರೋ.
ಬೋರ್ನ ಹೊಸ thoughtಉ 2:ನೆನ್ನೆಯವರೆಗೂ ನಾನೆ ಇದ್ದೆ, ಇವತ್ತು ನಾನೇ ಇದ್ದೇನೆ, ನಾಳೆಗೂ ನಾನೆ ಇರುತ್ತೇನೆ.

ಸಮೋಸ

ಕಿಸ್

ಹಣೆಗೆ ಕಿಸ್ ಕೊಟ್ರೆ SWEET KISS......

ಕೆನ್ನೆಗೆ ಕಿಸ್ ಕೊಟ್ರೆ  LOVELY KISS......

ತುಟಿಗೆ ಕಿಸ್ ಕೊಟ್ರೆ ROMANTIK KISS......

HOT KISS ಬೇಕಾದ್ರೆ.....................

ಐರನ್ ಬಾಕ್ಸ್ ಗೆ ಕೊಡಿ ಸಕ್ಕತ್ತಾಗಿರತ್ತೆ.     :)

 

ನರಗುಂದ, ನವಲಗುಂದ ಕುಱಿತು

ನರಗುಂದ ಮತ್ತು ನವಲಗುಂದಗಳು ಮುಂಚಿನ ಧಾರವಾಡಜಿಲ್ಲೆಯ ತಾಲೂಕುಕೇಂದ್ರಗಳು ಮತ್ತು ಅದೇ ಹೆಸರುಳ್ಳ ಊರುಗಳು. ಈಗ ನವಲಗುಂದ ಧಾರವಾಡಜಿಲ್ಲೆಗೆ ಸೇರಿದೆ. ನರಗುಂದ ಗದಗಜಿಲ್ಲೆಗೆ ಸೇರಿದೆ. ನರಗುಂದವನ್ನು ನರಿಗುಂದವೆನ್ನುತ್ತಿದ್ದರು. ನರಿ+ಕುಂದ ಅಂದರೆ ನರಿಗಳಿರುವ ಬೆಟ್ಟ. ಹಿಂದೆ ಇಲ್ಲಿ ನರಿಗಳಿದ್ದುವೇನೋ.

ಆಸ್ತಿಕರು ‍ಯಾಕೆ ಹಿಂಗಾಡ್ತಾರೊ ?

ನಾನು ಆಸ್ತಿಕ. ಆದರೆ ದೇವರು ಇದ್ದಾನೆ ಎಂದು ಸಾಧಿಸುವ ಅವಶ್ಯಕತೆಯಾಗಲೀ, ಬುದ್ಧಿಯಾಗಲೀ, ಆಳವಾದ ಜ್ಞಾನವಾಗಲೀ ನನಗಿಲ್ಲ. ಆಸ್ತಿಕರೆಲ್ಲಾ ಯಾಕೆ ನಾಸ್ತಿಕರ ಹಿಂದೆ ಬಿದ್ದು ದೇವರಿದ್ದಾನೆ ಎಂದು ನಿರೂಪಿಸಲು ಹೊರಡುತ್ತಾರೊ ತಿಳಿಯದು. ಏನೇನೊ ತರ್ಕಗಳನ್ನು ಹುಡುಕುತ್ತಾರೆ. ಧರ್ಮಗ್ರಂಥಗಳಲ್ಲಿ ವಿಜ್ಞಾನವನ್ನು ಹುಡುಕುತ್ತಾರೆ!

ಜಗತ್ತಿನ ಅದ್ಭುತ ಪ್ರೇಮ ಕ(ವಿ)ತೆ!

ಕನ್ನಡಿ ಮುಂದೆ ಇಂದು
ಮುಕ್ಕಾಲು ಘಂಟೆ
ಅಲಂಕರಿಸಿಕೊಂಡಿದ್ದರೂ
ಅವನು ನನ್ನತ್ತ ಕಿಂಚಿತ್ತೂ ನೋಡಲಿಲ್ಲ
ಎಂದು ಬೇಸರಿಸಿಕೊಂಡ ಹುಡುಗಿ..

ಅವಳನ್ನು ಹಾಗೆ ತಿನ್ನುವ ಹಾಗೆ
ನೋಡುತ್ತಿದ್ದೇನೆಂದು ತಿಳಿದರೆ
ಅವಳೆಲ್ಲಿ ತನ್ನನ್ನು
ಜೊಲ್ಲುಬುರುಕ
ಅಂದುಕೊಂಡುಬಿಡುವಳೋ
ಎಂದು ಹೆದರಿ ಡೀಸೆಂಟ್ ಆಗಿ
ತಲೆ ತಗ್ಗಿಸಿ ಕುಳಿತ ಹುಡುಗ..

ತ್ಯಾಗ ರಾಗ ಸಂಯೋಗ

ಹೋದ ವರ್ಷ ಒಂದು ಅತ್ಯಂತ ಅಪರೂಪದ ಹಾಗು ನನಗೆ ತಿಳಿದಿರುವಂತೆ ನಡೆದ ಪ್ರಥಮ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಇದರ ಬಗ್ಗೆ ಯಾರದರೂ ಸಂಪದದಲ್ಲಿ ಬರೆದಿದ್ದಾರೇನೋ ನನಗೆ ಗೊತ್ತಿಲ್ಲ.

ಸಂಗೀತ ರೋಗಗಳನ್ನು ಗುಣಪಡಿಸುತ್ತದೆಯೆಂಬ ಸಿದ್ಧಾಂತ ವೈಗ್ನಾನಿಕವಾಗಿ, ಈಗ ಎಲ್ಲರೂ ಒಪ್ಪಿಕೊಂಡಿರುವ ವಿಷಯವೇ ಆದರು, ಈ ಥರಹದ ಪ್ರಯೋಗಳು ಹೆಚ್ಚು ಹೆಚ್ಚು ನಡೆದಷ್ಟೂ, ನಮ್ಮ ಸಂಗೀತ ಪ್ರಚಾರ ಹಾಗೂ ಪ್ರಚಲಿತವಾಗತ್ತೆ ಎಂಬುದು ನನ್ನ ಅನಿಸಿಕೆ.

ಈ ತ್ಯಾಗ ರಾಗ ಸಂಯೋಗ ಕಾರ್ಯಕ್ರಮ ಶ್ರೀ ನಿಮಿಷಾನಂದ ಗುರೂಜಿಯವರ ವಿಷಯ ವಿವರಣೆಯೊಂದಿಗೆ, ವಿದ್ವಾನ್ ಶ್ರೀ ಆರ್ ಕೆ ಪದ್ಮನಾಭ ಮತ್ತು ತಂಡದವರಿಂದ ಧ್ಯಾನಕ್ಕೆ ಸಮಂಜಸವಾದ ಸಂಗೀತದ ಜೊತೆ ನಡೆಯಿತು. ಪೂರ್ಣಕುಂಭದ ಸ್ವಾಗತದೊಂದಿಗೆ ಸ್ವಾಮೀಜಿಯವರ ಆಗಮನವಾಯಿತು. ಗುರುಗಳ ಶಿಷ್ಯರ ಭಜನೆಯ ನಂತರ ಗುರೂಜಿಯವರು ಪ್ರವಚನ ಆರಂಭಿಸಿದರು. ಮೊದಲು "ತ್ಯಾಗ" ಎಂದರೇನು ಮತ್ತು ಮನುಷ್ಯ ಏನನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು. ಶ್ರೀ RKP ಯವರು ಪಹಾಡಿ ರಾಗದಲ್ಲಿ ಶ್ರೀ ಗುರುನಾಪಾಲಿತೋ ಶ್ರೀ ಸಚ್ಛಿದಾನಂದನಾಥೇನ ಹಾಡಿದರು. ಜೊತೆಗೆ ಶ್ರುಂಗಪುರಾಧೀಶ್ವರಿ ಶಾರದೆ - ಪದ್ಮ ಚರಣ ರಚನೆ, ಪಂಚಾಷಟ್ಪೀಟ ರೂಪಿಣಿ - ದೇವಗಾಂಧಾರಿ or ಅಭೇರಿ or ಭೀಮಪಲಾಸ್ ಕೂಡ ಹಾಡಿದರು. ಮಧ್ಯೆ ಮಧ್ಯೆ ಗುಗುಗಳ ಪ್ರವಚನ ನಡೆಯುತ್ತಿತ್ತು. ಬಾಕಿ ವಿಷಯಗಳ ಬಗ್ಗೆ ನಾನಿಲ್ಲಿ ವಿವರವಾಗಿ ಏನನ್ನೂ ಬರೆಯುತ್ತಿಲ್ಲ ಏಕೆಂದರೆ ನಾನು ಬರೀ ಸಂಗೀತ ಅದಕ್ಕೆ ಸಂಬಂಧ ಪಟ್ಟ ಮಾತುಗಳನ್ನು ಮಾತ್ರ ಹೇಳುತ್ತಿದ್ದೇನೆ. ಗುರೂಜಿಯವರು ಸಂಗೀತದ ಸಪ್ತ ಸ್ವರಗಳು ನಮ್ಮ ದೇಹದಲ್ಲಿನ ಚಕ್ರಗಳಿಗೆ ನೇರವಾಗಿ ಸಂಬಂಧಿಸಲ್ಪಟ್ಟವು - ಉದಾ. ಸ - ಮೂಲಧಾರ ಚಕ್ರ, ರ - ಸ್ವಾದಿಷ್ಟಾನ ಮತ್ತು ಗ ಮಣಿಪುರ....... ಕೇವಲ ಈ ಮೂರೇ ಮೂರು ಸ್ವರಗಳನ್ನು ನಾವು ಆಲಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ, ನಮ್ಮಲ್ಲಿರುವ "ಅಹಂ" ಅನ್ನು ಕಳೆದುಕೊಂಡು ಬಿಡಬಹುದು ಎಂದರು. "ತ್ಯಾಗ" ಇಲ್ಲಿ ಅಹಂ ತ್ಯಜಿಸುವುದು ಎಂಬರ್ಥದಲ್ಲಿದೆ. ಅಹಂ ಬಿಡುವುದು or ತ್ಯಜಿಸುವುದು ಎಂದರೆ loosing our name identity and recognising HIM as supreme ಎಂದು ತಿಳಿಸಿದರು. ಈ ಹಂತದಲ್ಲಿ ಶ್ರೀ RKP ಯವರು ಬಿಂದುಮಾಲಿನಿ ರಾಗದಲ್ಲಿ - ಎಂಥಮುದ್ದೋ ಎಂಥ ಸೊಗಸೋ, ಪ್ರಾರ್ಥಿಪೆ ವಾದಿರಾಜರ - ನಠಭೈರವಿಯಲ್ಲಿ (ಸ್ವಂತ ರಚನೆ), ವರಲಕ್ಶ್ಮೀ ನಮೋಸ್ತುತೆ - ಗೌರಿಮನೋಹರಿಯಲ್ಲಿ, ತಮಿಳು ಚಿತ್ರದ ಅತ್ಯಂತ ಜನಪ್ರಿಯ ಹಾಡು ಪಾಟ್ಟುಂ ನಾನೆ... ಪಾಡವುಂ ನಾನೆ... ಹಾಡಿದರು.

ಕೊನೆ ಬೆಂಚಿನ ಪ್ರಭುಗಳು(ಲಾರ್ಡ್ಸ್ ಆಫ್ ಲಾಸ್ಟ್ ಬೆಂಚ್)

ಕ್ಲಾಸ್ರೂಮಿನ ಮೊದಲ ಬೆಂಚು
ಸನ್ಯಾಸಿಗಳಿಗೆ
ಮಾತ್ರ ಮೀಸಲು
ನಗು ಸಂತೋಷ
ತುಂಟಾಟಗಳನ್ನು
ತ್ಯಾಗ ಮಾಡಿರುವಂಥ
ಪುಣ್ಯ ಜೀವಿಗಳವರು
ಲೆಕ್ಚರರ್ ಗಳ ಕಣ್ಣಿಗೆ
ಮಾತ್ರವೇ ಕಾಣುವಂತಹವರು

ಕನಸನ್ನು ಕಾಣುವವರು
ಮೊದಲ ಬೆಂಚಿಗರಾದರೆ
ಅದನ್ನು ಹಂಚುವ ಕಾಯಕ
ಕೊನೆ ಬೆಂಚಿಗರದು(ನಮ್ಮದು)

ಕ್ಲಾಸಿನ ಜೀವಾಳ ನಾವು
ಸಂತೋಷದ ರಸಬುಗ್ಗೆ
ನಗೆಯ ಚಿಲುಮೆ
ಚಿಮ್ಮಿಸುತ್ತಾ

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!--- ಗ್ರಾಮೀಣ ಹಿನ್ನೆಲೆಯವರಾಗಿದ್ದರೆ,ಅದರಲ್ಲೂ ಕುರಿ,ಮೇಕೆಗಳನ್ನು ಮೇಯಿಸಿ ಅನುಭವವಿದ್ದರೆ,ಎಲ್ಲಾದರೂ ಒಮ್ಮೆಯಾದರೂ ಈ ಮುಳ್ಳುಹುಳುವಿನ ದರ್ಶನ ಭಾಗ್ಯ ಸಿಕ್ಕಿರಲೇ ಬೇಕು.ಹೆಚ್ಹಾಗಿ ಕರಿ ಜಾಲಿ ಗಿಡಗಳಲ್ಲಿ ಈ ಹುಳು ಕಾಣಸಿಗುತ್ತದೆ.
ಏನಿದರ ವೈಶಿಷ್ಟ್ಯ ಗೊತ್ತೇ???
ಕಡ್ಡಿಹುಳುಗಳ (praying mantis)ಅನೇಕ ಪ್ರಭೇಧಗಳನ್ನು ನಾವು ನಿಸರ್ಗದಲ್ಲಿ ಕಾಣುತ್ತೇವೆ.ನನಗನಿಸಿದಂತೆ ಮುಳ್ಳು ಹುಳುವಿನ ಪ್ರಭೇಧ ಇದೊಂದೇ ಇರಬಹುದೇನೋ,ತಿಳಿಯದು.ಅಪಾರ ಮುಳ್ಳುಗಳಿಂದಾವರಿಸಿದ ಜಾಲಿ ಗಿಡಗಳ ಎತ್ತರದ ಕೊಂಬೆಗಳಲ್ಲಿ ಇದರ ವಾಸ.ಮುಟ್ಟಲೂ ಸಹ ಮುಳ್ಳುಗಳ ಹಂದರವನ್ನೇ ದಾಟಿ ಕೈಹಾಕಿ ಕೀಳಬೇಕಾಗುತ್ತದೆ.ಸುಲಭವಾಗಿ ಕೀಳಲು ಸಹಾ ಆಗದು.ಅದೊಂದು ರೀತಿಯ ಅಂಟಿನ ದಾರದ ಜೊತೆ ನಂಟು ಸಾಧಿಸುವ ಈ ಹುಳು ದಾರದ ಸಹಕಾರದೊಂದಿಗೆ ರೆಂಬೆಯಲ್ಲಿ ನೇತಾಡುತ್ತಿರುತ್ತದೆ.
ಔಷಧೀಯ ಗುಣಗಳು.