ನರಗುಂದ, ನವಲಗುಂದ ಕುಱಿತು

ನರಗುಂದ, ನವಲಗುಂದ ಕುಱಿತು

Comments

ಬರಹ

ನರಗುಂದ ಮತ್ತು ನವಲಗುಂದಗಳು ಮುಂಚಿನ ಧಾರವಾಡಜಿಲ್ಲೆಯ ತಾಲೂಕುಕೇಂದ್ರಗಳು ಮತ್ತು ಅದೇ ಹೆಸರುಳ್ಳ ಊರುಗಳು. ಈಗ ನವಲಗುಂದ ಧಾರವಾಡಜಿಲ್ಲೆಗೆ ಸೇರಿದೆ. ನರಗುಂದ ಗದಗಜಿಲ್ಲೆಗೆ ಸೇರಿದೆ. ನರಗುಂದವನ್ನು ನರಿಗುಂದವೆನ್ನುತ್ತಿದ್ದರು. ನರಿ+ಕುಂದ ಅಂದರೆ ನರಿಗಳಿರುವ ಬೆಟ್ಟ. ಹಿಂದೆ ಇಲ್ಲಿ ನರಿಗಳಿದ್ದುವೇನೋ. ಇದು ಕರ್ಣಾಟಕದ ಪ್ರಖ್ಯಾತ ಗಣಿತಜ್ಞನಾದ ಜೈನನೂ ಆದ ಶ್ರೀಧರಾಚಾರ್ಯನ ಊರು. ನವಲಗುಂದ ಅಥವಾ ನವಿಲಗುಂದ ನವ(ವಿ)ಲ್+ಕುಂದ. ಅಂದರೆ ನವಿಲುಗಳನ್ನುಳ್ಳ ಬೆಟ್ಟ. ಈ ಊರಿನಲ್ಲಿ ಮುಂಚೆ ಹೆಚ್ಚು ನವಿಲುಗಳಿದ್ದುವೇನೋ. ಆದರೆ ಯಾವ ಊರಿಗೆ ಹೆಣ್ಣು ಕೊಟ್ಟರೂ ನವಲಗುಂದಕ್ಕೆ ಹೆಣ್ಣು ಕೊಡಬೇಡವೆಂಬ ಮಾತೊಂದಿದೆ. ಈ ಎರಡೂ ಊರುಗಳು ಬಯಲುಸೀಮೆಯಲ್ಲಿದ್ದು ಎರಡೂ ಊರುಗಳಲ್ಲೂ ಕುಂದ ಅಂದರೆ ಬೆಟ್ಟ ಇರುವುದಱಿಂದ ನೀರಿನ ಅಭಾವ ಹೆಚ್ಚಿದ್ದು ಊರಿಗೋಸ್ಕರ ಹೆಣ್ಣುಮಕ್ಕಳು ಮೈಲುಗಟ್ಟಲೆ ನಡೆಯಬೇಕಾದುದಱಿಂದ ಅವರ ಬವಣೆ ನೋಡಿದ ಮಹಾಶಯನೊಬ್ಬ ಹೇೞಿದ ಮಾತಿದಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet