ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಐಬೀಯೆಮ್ಸನ್ನನ್ನುಂಗೋ ಸುದ್ದಿ ...

ನೆನ್ನೆಯಿಂದ ಗುಲ್ಲೋಗುಲ್ಲು. ಐಬೀಯೆಮ್ಮು ಸನ್ಮೈಕ್ರೋಸಿಸ್ಟಂಸ್ನಾ ಎತ್ತಾಕ್ಕೊಳೋ ಸ್ಕೆಚ್ಬಿಟ್ಟು ಸ್ಕೀಮ್ಹಾಕ್ತಾ ಇದೇಂತಾ. ಆಗ್ಲೇ ಜನ ಮುಂದೇನು, ಆಮೇಲೇನು ಅಂತ ತಲೆಒಬ್ಬ್ರಂತೆ ಮಾತಾಡ್ಕೋತಾವ್ರೆ.

ಬಾರೆ ಬಾ

ಬಾರೆ ಬಾ

ಚಂದಿರ ವದನದಿ ಅಂದದಾ ನಗೆಯ ಹೊತ್ತು ಬಾ

ತೊಂಡೆಯ ತುಟಿಗಳಲಿ ಮಲ್ಲಿಗೆಯಾ ನಗೆಯ ಸೂಸಿ ಬಾ

ಕೈಗಳ ತುಂಬ ಘಲು ಘಲು ಬಳೆಯ ತೊಟ್ಟು ಬಾ

ಬಳುಕುವ ಸೊಂಟಕೆ ರೇಶಿಮೆಯಾ ಸೀರೆಯ ಸುತ್ತಿ ಬಾ

ಮೋಹಕ ಪಾದಂಗಳಿಗೆ ಬೆಳ್ಳಿಯಾ ಗೆಜ್ಜೆ ಕಟ್ಟಿ ಬಾ

ಬಾರೆ ಬಾ

ಬರುವ ಮುನ್ನ ನಮ್ಮ ಹಸುಗೂಸನ್ನ
ನಿಮ್ಮಮ್ಮನ ಕೈಯಲ್ಲಿ ಕೊಟ್ಟು ಬಾ.....

ನುಡಿಮುತ್ತು - ೧

ಕೆಲವರನ್ನು ಪ್ರತಿ ಬಾರಿ ಮೂರ್ಖರನ್ನಾಗಿಸಬಹುದು. ಕೆಲವು ಬಾರಿ ಎಲ್ಲರನ್ನು ಮೂರ್ಖರನ್ನಾಗಿಸಬಹುದು. ಆದರೆ ಎಲ್ಲರನ್ನು ಎಲ್ಲ ಬಾರಿ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ.

ಐತಿಹಾಸಿಕ ನಗರ ಓರ್ಚಾದ ಚಿತ್ರಗಳು

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮದ್ಯಪ್ರದೇಶ್ ಬೇಟಿ ನೀಡಿದಾಗ ತೆಗೆದ ಕೆಲವು ಪೋಟೋಗಳನ್ನು ಸುಮಾರು ದಿನಗಳಿಂದ ಸಂಪದದಲ್ಲಿ ಹಾಕಬೇಕು ಅಂತ ಕಾದು ಕಾದು  ಈದಿನ ಹಾಕ್ತಾ ಇದ್ದೀನಿ

 

ಸಂಕ್ರಮಣ

ಪ್ರಖರ ಕಿರಣಗಳಿಂದ ಮೆರೆದ ಸೂರ್ಯ
ಮರೆಯಾಗಲು ಹಿಮರಾಜನ ಮಡಿಲಲ್ಲಿ
ಆರ್ಭಟಿಸಲು ವರುಣ ಕಾರ್ಮೋಡಗಳ ಮುಗಿಲಲ್ಲಿ
ಉರುಳುತಿದೆ ಕಾಲಚಕ್ರ ನೀ ನಿಂತರೂ ನಾನಿಲ್ಲೆನೆನುತ

ಪುನರಾಗಮಿಸಲು ಹೇಮಂತ ಶರದಾದಿ ಋತುಗಳು
ಬದಲಾಗಲು ರವಿ-ಚಂದ್ರ-ಭುವಿ ನಕ್ಷೆಗಳು
ಕೈ ಜೋಡಿಸುತಿಹಳು ಇಳೆ, ಕಾಲನ ಜೊತೆಗೆ

ವ್ಯವಹಾರ : ಒಂದು ಸಮೋಸದಿಂದ

ವ್ಯವಹಾರವೆಂದರೇನು? ಸರಳ ಉದಾಹರಣೆ

ತಂದೆ: ಮಗನೇ ನಾನು ನೋಡಿದ ಹುಡುಗಿಯನ್ನೇ ನೀನು ಮದುವೆ ಮಾಡಿಕೊಳ್ಳಬೇಕು
ಮಗ: ಇಲ್ಲ, ಸಾದ್ಯವಾಗಲ್ಲ ಪಪ್ಪ
ತಂದೆ: ಹುಡುಗಿ ಯಾರೆಂದು ಕೊಂಡಿದ್ದೀಯಾ? ಬಿಲ್ ಗೇಟ್ಸ್ ಮಗಳು
ಮಗ: ಹಾಗಾದರೆ ಸರಿ, ಒಪ್ಪಿಕೊಳ್ಳುತ್ತೇನೆ
ತಂದೆ ಬಿಲ್ ಗೇಟ್ಸ್ ಹತ್ತಿರ ಹೋಗುತ್ತಾನೆ
ತಂದೆ: ನಿಮ್ಮ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡಬೇಕು

ಮಾತಿಗೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು

ಕೆಲವರಿರುತ್ತಾರೆ,ಅವರ ಕೈಯಲ್ಲಿ ಮಾಡಲಾಗದ ಕೆಲಸಕ್ಕೆಲ್ಲ ದೇಶವನ್ನೇ ಬೈಯ್ಯುವವರು, ನನ್ನ ಒಬ್ಬ ಗೆಳೆಯ ಇದ್ದಾನೆ, ಅವನಿಗೆ ಹೇಳಿದ ಟೈಮ್ಗೆ ಬರೋ ಅಭ್ಯಾಸನೆ ಇಲ್ಲ, ಕೇಳಿದ್ರೆ
"ನೋಡಮ್ಮ ,ನಾವ್ ಎಷ್ಟೇ ಆದ್ರೂ 'ಇಂಡಿಯನ್ಸ್' ನಾವ್ ಹಿಂಗೆ ಬರೋದು ಅಂತಾನೆ'.

ನಮಸ್ಕಾರ...!!!!!

ಬಹಳ ದಿನಗಳಿಂದ ಸಂಪದಕ್ಕೆ ಮನಸೋತಿದ್ದೆ.... ಪ್ರತಿದಿನ ಎಲ್ಲ ಲೇಖನ ಬರಹಗಳನ್ನು ಓದುತ್ತಿದ್ದೆ... ಆದರೆ ತುಂಬಾ ಸೋಮಾರಿಯಾದ ಕಾರಣ ಬಹಳ ತಡವಾಗಿ ತಮ್ಮ ಕುಟುಂಬವನ್ನು ಸೇರುತ್ತಿದ್ದೇನೆ....

ನನ್ನಿ
ದೃಶ್ಯ ಪ್ರದೀಪ :)

ಮುನಿಸು ಥರವೇ ......

ಏಕಿಂದು ನಿನ್ನ ಮುಖ
ಕೊಂಚ ಬಾಡಿದೆ
ಮುದ್ದು ಮುದ್ದಿನ ಮಾತು
ಮುನಿಸು ತೋರಿದೆ

ಅಮ್ಮನೊಡನೆ ಕೋಪವೇನೆ
ಹೀಗೆ ಮಲಗಿಹೆ
ಮೋರೆಗಡ್ಡ ಕೈಯನಿಟ್ಟು
ಮಗ್ಗುಲಾಗಿಹೆ

ಪುಟ್ಟ ಹೆಜ್ಜೆ ಇಟ್ಟು
ಮನೆಯ ಅಳತೆ ಮಾಡೆಯಾ
ತುಂಟ ನೋಟದಲ್ಲಿ ನನ್ನ
ಇಣುಕಿ ನೋಡೆಯಾ

ಕಾಡಬೇಡ ಕಂದ ಹೀಗೆ
ನನ್ನ ನೋಡದೆ
ಮುನಿಸಿನಲ್ಲಿ ಮಲಗಬೇಡ
ಮಾತನಾಡದೆ

ಕಾಯುತಿರುವೆ ಕಂದ ನಿನ್ನ
ಒಲವ ಬಂಧಕೆ