ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದದಲ್ಲಿ "ಅರವಿಂದ" ಹೆಸರಿನವರು

ಸಂಪದದಲ್ಲಿ ತುಂಬಾ ಜನ ಅರವಿಂದ ಹೆಸ್ರಿನೋರು ಇದಾರೆ ಅಂತ ಅನ್ನಿಸ್ತು, ಸರಿಯಾಗಿ ಕುಳಿತು ಲೆಖ್ಖ ಹಾಕೆ ಬಿಡೋಣ ಅಂತ ಕುಳಿತೆ...
ಮೊದಲಿಗೆ ಎಷ್ಟು ತರಹದಲ್ಲಿ ಅರವಿಂದ ಅಂತ ಬರೆಯಬಹುದು  ಎಂದು ಪಟ್ಟಿ ಮಾಡಿದೆ. ಆ ಪಟ್ಟಿ ಹೀಗಿದೆ,

ಉಬುಂಟುವಿನಲ್ಲಿ ಬರೆದ ಮೊದಲ ಬ್ಲಾಗು

ಇಂದು ಉಬುಂಟು install ಮಾಡಿದೆ. ಓಂಪ್ರಕಾಶ್ ಅವರ ಲಿನಕ್ಸಾಯಣದಲ್ಲಿ ಕನ್ನಡ ಬಳಸುವುದು ಹೇಗೆ ಅಂತ ನೋಡಿ ಉಬುಂಟುನಲ್ಲೇ ಈ ಬ್ಲಾಗ್ ಬರ್ದಿದೀನಿ. ಓಂಪ್ರಕಾಶ್ ಅವರಿಗೆ ತುಂಬಾ ಧನ್ಯವಾದ.
ಖುಶಿಯಾಗಿದ್ದೇನಪ್ಪಾ ಅಂದ್ರೆ ಇದರಲ್ಲಿ ಮೂ(mU) ಮತ್ತೆ ಮಾ(mA) ಎರಡೂ ಬೇರೆ ಥರ ಬರತ್ವೆ. ಒಂದೇ ಥರ ಅಲ್ಲ :)
ಆದರೆ ಲಿನks ಬರೆಯೋದು ಹೇಗೆ? ks ಕನ್ನಡದಲ್ಲಿ ಬರ್ತಿಲ್ಲ. ಇಂಗ್ಲೀಷಲ್ಲೇ ಬರ್ತಿದೆ.

ಪರೀಕ್ಷೆ ಹತ್ತಿರ ಬಂತು !

ಬಹಳ ದಿವಸಗಳಾಗಿದ್ದವು ಬ್ಲಾಗ್ ಬರೆದು. ಬೇಸರವಾಗಿ ವಾಕಿಂಗ್ ಗೆ ಹೋದಾಗ ಕಂಡಿದ್ದು ಎಲ್ಲಾ ಅಪ್ಪ ಅಮ್ಮಂದಿರು, ಮನೆಯ ಹೊರಗಡೆ ವರಾಂಡದಲ್ಲಿ ಪುಸ್ತಕಗಳ ರಾಶಿ ಹಾಕಿ ತಮ್ಮ ತಮ್ಮ ಮಕ್ಕಳನ್ನು ಓದಿಸುತ್ತಿದ್ದದ್ದು. ಜೊತೆಜೊತೆಗೆ ಏಟುಗಳು ಕೂಡಾ ಬೀಳುತ್ತಿತ್ತು. "ಆ ಶಶಾಂಕನನ್ನು ನೋಡು, ಕ್ಲಾಸಿಗೆ ಮೊದಲು ಬರ್ತಾನೆ, ನೀನು ಇದ್ದೀಯ!" ಮುಂತಾದ ಮೂದಲಿಕೆಗಳು ಬೇರೆ.

ಆನಂದಭೈರವಿ - ಚಲನಚಿತ್ರ

ಆನಂದ ಭೈರವಿ ಚಿತ್ರ ೧೯೮೨ರಲ್ಲಿ ಬಿಡುಗಡೆಯಾಯಿತು.

ಸಂಗೀತಕ್ಕೆ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವವಿದ್ದ ಚಿತ್ರವಿದು.

ಈ ಚಿತ್ರವನ್ನು "ಕನ್ನಡಚಿತ್ರರಂಗದ ಕುಳ್ಳ" ಎಂಬ ಖ್ಯಾತಿ ಪಡೆದಿರುವ ದ್ವಾರಕೀಶ್ ಅವರು ನಿರ್ಮಿಸಿದರು.

ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.

ಈ ಚಿತ್ರಕ್ಕೆ ಸೋರಟ್ ಅಶ್ವಥ್ ಅವರ ಸಾಹಿತ್ಯ ಹಾಗೂ ರಮೇಶ್ ನಾಯ್ಡು ಅವರ ಸಂಗೀತವಿದೆ.

ಹಿನ್ನೆಲೆಗಾಯನದಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ವಾಣಿ ಜಯರಾಂ ರಾರಾಜಿಸಿದ್ದಾರೆ.

ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

ಸ್ವ-ಗತ

ನಿನಗೆ ನಿಜವಾಗಿ ತಿಳಿಯಲಿಲ್ವ? ನಾಟಕ ಮಾಡುತ್ತಿದ್ದ? ಅಷ್ಟೊಂದು ಚಡಪಡಿಸಿ ಹೋಗ್ತಿದ್ದೆ ನಿನಗೋಸ್ಕರ. ತಮಾಷೆ ನಿನಗೆ. ಊರವರಿಗೆಲ್ಲ ತಿಳಿಯೋದು ನಿನಗೆ ಮಾತ್ರ ಗೊತ್ತಾಗಲಿಲ್ಲ ಕಡೇವರ್ಗೂ. ನೀನು ಎರಡು ಮೂರು ದಿನ ಕಾಣಲಿಲ್ಲವೆಂದ್ರೆ, ನಿನ್ನೊಂದಿಗೆ ಜಗಳವಾಡಿ ಅಳುಮುಖ ಮಾಡ್ಕೊಂಡು ಮೊಂಡು ಹಿಡೀತಿದ್ನಲ್ಲ? ಅದೆಷ್ಟು ತಾಳ್ಮೆಯಿಂದ ಸಮಾಧಾನ ಮಾಡ್ತಿದ್ದೆ.

ಕರ್ನಾಟಕ ಪೋಲಿಸ್ ಹೊಸ ಕಾಯಿದೆ

ಸಂಪದ ಮಿತ್ರರೇ..ಈ ತಿಂಗಳ 9 ನೇ ತಾರೀಖಿನಂದು ಕರ್ನಾಟಕ ಪೋಲೀಸ್ ಇಲಾಖೆ ಹೊಸ ಕಾಯಿದೆಯನ್ನು ತರಲು ಪ್ರಕಟಣೆಯನ್ನು ಪ್ರಕಟಿಸಿದೆ ಅದರ ಬಗ್ಗೆ ನಿಮಗೇನಾದ್ರು ಗೊತ್ತಿದೆಯಾ...? ಗೊತ್ತಿಲ್ಲ ಅಂದ್ರೆ ಬೇಗ ತಿಳಿದುಕೊಳ್ಳಿ.

ಏನ್ ಮಾಡಬಕಿತ್ತೊ...? ಏನ್ ಮಾಡಿದ್ನ..? ಈಗೇನ್ ಮಾಡಕತ್ತೇನ...?

ಟೈಮೆಶ್ಟು ?

ಹ್ಹೂಂ......ಒಂಭತ್ತೂವರಿ......

ಟೈಮ್ ನೋಡ್ಕ್ಯಂಡಾಗೆಲ್ಲಾ ಒಂಭತ್, ಹತ್, ಹನ್ನೊಂದೂವರಿನ ಆಗಿರ್ತವಲ.....

ಇವತ್ ಬುದ್ವಾರ ಅಲ..., ಮೊನ್ನಿನು ಸೋಮ್ವಾರ ಸುರು ಆಗಿತ್ತಲ. ಇವತ್ ಡೇಟ..?

(ಟಾಸ್ಕ್ಬ್-ಬಾರ್ ತಳ-ಬಲಬದಿ ಮೌಸ್ ಸರಿಸಿದ್ರ...., ಹ್ಯಾಂಗ್.., ಎಲ್ಲಾ ಹ್ಯಾಂಗ್....)

(ವಾಚ್ ನೋಡ್ಕ್ಯಂಡೆ..)

ಆಲೇ, ಮಾರ್ಚ್ ಹದ್ನೆಂಟು.. ಮೊನ್ನಿನು ಜನವರಿ ಒಂದ್ ಆಗಿತ್ತಲೋ....

ಕವಿತೆ ಹುಟ್ಟುತ್ತಿಲ್ಲ ಮನದೊಳಗೊಂದು,,,,,,

ಕವಿತೆ ಹುಟ್ಟುತ್ತಿಲ್ಲ ಮನದೊಳಗೊಂದು,
ನಿರ್ಭಾವುಕ ಮನ ಏನನ್ನ ತಾನೆ ಸ್ರಷ್ಟಿಸೀತು?
ಕಿಂಚಿತ್ತು ಒಲವಿಲ್ಲದ ಮನ,ಬಿಡುವಿಲ್ಲದ ಮನ,
ಒಡಲಿಲ್ಲದ ಮನ,ಕಡಲನರಿಯದ ಮನ,
ಪದವರಿಯದ ಮನ,ಪರಿಯರಿಯದ ಮನ!

’ಮನಸಿದ್ದರೆ ಮಾರ್ಗವೆಂಬೋ’ ಹಸಿ ಸುಳ್ಳ
ನೆನೆಯುತ್ತಿಹುದು ಮನವೆಂಬೋ ಮನ,
ಛಲವಿಲ್ಲದ ಮನ,ಬಲವಿಲ್ಲದ ಮನ,
ಗುರಿಯಿಲ್ಲದ ಮನ,ಅರಿವಿಲ್ಲದ ಮನ