ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀರ ನಿಶ್ಚಿಂತೆಗೆ ನೂರಾರು ಕೈಗಳು

ಮೊನ್ನೆ ಮಾರ್ಚ್ ೧೫ ರ ಭಾನುವಾರ ನೀರ ಚಿಂತಕರ ಚಾವಡಿ. ವಿವಿಧ ವಯೋಮಾನ ಮತ್ತು ವರ್ಗಗಳ ಸಮ್ಮಿಶ್ರ ಗುಂಪಿನ ಜಮಾವಣೆ. ಇಡೀ ದಿನ ತುಮಕೂರು ಜಿಲ್ಲೆಯ ನೀರ ಸಮಸ್ಯೆಗಳ ಚರ್ಚೆ, ಪ್ರಶ್ನೋತ್ತರ, ಕಾರ್ಯಯೋಜನೆ, ಅಂತರ್ಜಾಲ ಬಳಕೆ ಮೂಲಕ ಪರಿಹಾರ ಹುಡುಕುವತ್ತ ಚಿಂತನೆ.

ಪರಿಸರ ಚಿಂತಕ ಸಿ.ಯತಿರಾಜುರವರ ನೀರು ಮತ್ತು ಇತರ ಸಂಪನ್ಮೂಲಗಳು ಎದುರಿಸುತ್ತಿರುವ  ಸಮಸ್ಯೆಗಳ ವಿಶ್ಲೇಷಣೆಯಿಂದ ಪ್ರಾರಂಭವಾದ ಕಾರ್ಯಕ್ರಮ ಪಂಜಾಬ್ನ ಸಂತರೊಬ್ಬರ ನದಿ ಪುನರುಜ್ಜೀವನದ ಯಶೋಗಾಥೆಯ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಅರ್ಥಪೂರ್ಣವಾಗಿ ಮುಕ್ತಾಯವಾಯಿತು.

“ಇಂಟರ್ನೆಟ್ ಒಂದು ಅಧ್ಬುತ ಜ್ಞಾನದ ಭಂಡಾರ. ಬೇರೆ ಮಾಧ್ಯಮಗಳಿಗಿಂತ ಸರಳ, ಸುಲಭ. ಕ್ಷಣಾರ್ಧದಲ್ಲಿ ವಿಶ್ವದ ಎಲ್ಲ ಮೂಲೆಗಳಿಗೂ ತಲುಪಬಹುದಾದ ಏಕೈಕ ಮಾಧ್ಯಮ” ಎಂದು ಮಾತಿಗಾರಂಭಿಸಿದ ವಸಂತ ಕಜೆ ಅಂತರ್ಜಾಲ ಎಷ್ಟು ಉಪಯುಕ್ತ ಎಂಬುದನ್ನು ವಿವರಿಸಿದರು. ಅದು ಬೆಳೆಯುತ್ತಿರುವ ವೇಗದ ಬಗ್ಗೆ ಗಮನ ಸೆಳೆದರು.

ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೨

ಅಮಾನ್ ಎಲ್ಲರೆದುರು ಠೀವಿಯಿಂದ 'ನೋಡಿದ್ರ ಮೇಷ್ಟ್ರು ಹೆದರಿಕೊಂಡುಬಿಟ್ರು' ಎಂದು ಬೀಗಿದ .ಅಂದಿನಿಂದ ಹುಡುಗರನ್ನ ಹೊದೆಯುವುದನ್ನ ಬಿಟ್ಟು ಬಿಟ್ರು ಡಿಕೆಎನ್ ಮೇಷ್ಟ್ರು."ಸಾರ್ ಸಾರ್ ಇವ್ನು ಬೈತ ಇದಾನೆ ಸಾರ್",ಸ್ಟಾಪು ರೂಮಿನಲ್ಲಿ ಕೂತಿದ್ದ ಡಿಕೆಎನ್ ಮೇಷ್ಟ್ರಿಗೆ ರಮೇಶ್ ನ ಕಂಪ್ಲೇಂಟ್ ಬಂತು ."ಏನಂತ ಬೈದ್ನೋ ಇವ್ನು" ."ಸಾರ್ ನನ್ಮಗನೇ ಅಂತಾನೆ ಸಾರ್".ಅಂದ ರಾಜೇಶ್ .ಮೇ

ಕರ್ವಾಲೋ ಓದಿದಾಗ...

ತೇಜಸ್ವಿಯವರ ಕರ್ವಾಲೋ ಓದಿದಾಗ ನನಗನಿಸಿದ್ದು...

1) ಚಾರಣ ಮಾಡಿದ ಅನುಭವ.

2) ನನ್ನ ಊರಿನ ಜನಗಳೊಂದಿಗೆ ಮಾತಾಡಿದ ಅನುಭವ.

3) ತೋಟದಲ್ಲಿ ತಿರುಗಾಡಿದ ಅನುಭವ.

4) ಅದರಲ್ಲಿಯ ತೇಜಸ್ವಿ ಪಾತ್ರ ನಮ್ಮಪ್ಪನಿಗೆ ಹೋಲಿಕೆಯಾದ ಅನುಭವ.

ಒಟ್ಟಿನಲ್ಲಿ ಒಂದು ಸರಳವಾದ ಸುಂದರವಾದ ಪುಸ್ತಕ‌

ಡಾ|| ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಪೂರ್ಣ ಹೆಸರು: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಜನನ: ಮಾರ್ಚ್ ೧೭, ೧೮೮೭
ಮರಣ: ಅಕ್ಟೋಬರ್ ೭, ೧೯೭೫
ತಂದೆ: ವೆಂಕಟರಮಣಯ್ಯ
ತಾಯಿ: ಅಲಮೇಲಮ್ಮ
ತಮ್ಮಂದಿರು: ಡಿ.ವಿ.ಶೇಷಗಿರಿರಾವ್, ಡಿ.ವಿ.ರಾಮರಾವ್
ಪತ್ನಿ: ಭಾಗೀರಥಮ್ಮ
ಮಕ್ಕಳು: ಡಾ||ಬಿ.ಜಿ.ಎಲ್.ಸ್ವಾಮಿ, ಇಂದಿರ
ವಿದ್ಯಾಭ್ಯಾಸ: ಎಸ್.ಎಸ್.ಎಲ್.ಸಿ
ವೃತ್ತಿ: ಸಾಹಿತಿ, ಪತ್ರಕರ್ತ, ಸಮಾಜ ಸೇವಕ
ಪ್ರಶಸ್ತಿಗಳು: ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ (೧೯೬೧)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಜೀವನಧರ್ಮಯೋಗ - ೧೯೬೭)
ಪದ್ಮಭೂಷಣ (೧೯೭೪)

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ  ’ಡಾ||ಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು. ಡಿವಿಜಿ ಯವರ  ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ. ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಎಲ್ಲೊ ಇರುವ ತೇಜಸ್ವಿಯವರ ಆತ್ಮ ಸಂತಸದಿಂದ ಮಗ್ಗಲು ಬದಲಿಸಿ ನಕ್ಕಂತಾಗಲಿ . .

ಸುಮ್ಮನೆ ಅಂದುಕೊಳ್ಳಿ ಸಂಜೆ ಕಾಡ ಹಾದಿಯಲ್ಲಿ ನೀವು ನಿಮ್ಮ ಎಳು ಎಂಟು ವರ್ಷದ ಮಗು ನಡೆಯುತ್ತಿರುವಾಗ ಧುತ್ತನೆ ಮೊಲಗಳ ಹಿಂಡೊಂದು ನಿಮ್ಮ ಎದುರಿಗೆ ಹಾದು ಹೊದರೆ ನಿಮ್ಮ ಮಗುವಿಗೆ ಆಗುವ ರೊಮಾಂಚನ ಹೇಗಿರಬಹುದು, ಮಲೆನಾಡಿನ ರಸ್ತೆರಲ್ಲಿ ಬೈಕ್ ನಲ್ಲಿ ಹೊಗುವಾಗ ಇದ್ದಕ್ಕಿಂದಂತೆ ನಾಲ್ಕು ಜಿಂಕೆಗಳ ಗುಂಪು ರಸ್ತೆಯಾಚೆ ಜಿಗಿದರೆ ಆಗುವ ಅನುಭೂತಿ , ಇದ್ದಕ್ಕಿಂದಂತೆ ರಸ್

ಎಮ್.ಎನ್.ಪಿ ಬಗ್ಗೆ ನಿಮ್ಮ ಅಭಿಪ್ರಾಯ

ಮೊನ್ನೆ ಆಕಾಶವಾಣಿಯಲ್ಲಿ ಮೊಬೈಲ್ ನಂಬರ್ ಪೊರ್ಟಬಿಲಿಟಿ [MNP] ಬಗ್ಗೆ ಜಾಹೀರಾತು ಕೇಳಿದೆ. ಅಂದರೆ ನಿಮ್ಮ ಮೊಬೈಲ್ ನಂಬರನ್ನು ಬೇರೆ ಯಾವುದೆ service providerಗೆ ಮಾರ್ಪಾಡಿಸಬಹುದು. ಇದಕ್ಕೆ ಸೇವಾ ಶುಲ್ಕ ಕೂಡ ಇಲ್ಲವಂತೆ. ಇದು ಒಂದು ಉತ್ತಮ ಸೌಲಭ್ಯ ಎಂಬ ಅನಿಸಿಕೆ ನನ್ನದು.