ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆರಂಭ

ನಾನೂ ಸಂಪದಕ್ಕೆ ಬಂದಿದ್ದೇನೆ ... ಸಂಪದದಲ್ಲಿ ಕೆಲವು ಲೇಖನಗಳು, ಅವುಗಳ ಕುರಿತು ಪ್ರತಿಕ್ರಿಯೆಗಳನ್ನು ಓದಿದ್ದೇನೆ. ಅದೇಕೋ, "ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು" ನೆನಪಾಗುತ್ತಿದೆ!

ಚಂದಮಾಮ

ರಾತ್ರಿ ಮಲಗಲೆಂದು ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದೆ
ಅಲ್ಲಿ ತೆರದ ಕಿಟಕಿಯಾಚೆ ನಿಂತಿದ್ದ ಒಬ್ಬ ಪೋರ
ನನ್ನಂಥ ಅನೇಕ ಹುಡುಗಿಯರ ನಿದ್ದೆ ಕೆಡಿಸಿದ ಚೋರ
ನನ್ನನ್ನೇ ದಿಟ್ಟಿಸುತ್ತಾ……..
ನಾಚಿಕೆಯಿಂದ ಹಾಗೆ ಮುಖವನ್ನು ಮುಚ್ಚಿಕೊಂಡೆ….
ಅವನ ಪ್ರತಿಕ್ರಿಯೆ ಏನಿತ್ತೋ ನಾ ಕಾಣೆ
ಯಾಕೋ ಏನೋ ಅವನು ನನ್ನವನೇ ಅಲ್ಲವೇ ನೋಡಿದರೆ ತಪ್ಪೇನು????

ಪೈ ಸಂಖ್ಯೆ (ಕನ್ನಡದಲ್ಲಿ) ನೆನಪಿಟ್ಟುಕೊಳ್ಳುವುದು ಹೇಗೆ ?

ಶ್ರೀ ಎ.ಪಿ ರಾಧಾಕೃಷ್ಣರು “ಈ ದಿನ ಪೈಗಳ ದಿನ” ಎಂಬ ಒಳ್ಳೆಯ ಲೇಖನ ಬರೆದಿದ್ದಾರೆ. (http://sampada.net/article/17904)

ಅದರಲ್ಲಿ ಅವರು ಪೈಯ ಸಂಖ್ಯೆಯನ್ನು (3.14159265358979323846264…..) ನೆನಪಿಡುವುದಕ್ಕೆ ಒಂದು ಇಂಗ್ಲೀಷ್ ವಾಕ್ಯ ಉದಾಹರಿಸಿದ್ದಾರೆ.

How I want a drink, alcoholic of course, after the heavy lectures involving
3 1 4 1 5 9 2 6 5 3 5 8 9
quantum mechanics. All of thy geometry, Herr Planck, is fairly hard...:

Naanu mattu Baduku

ಪ್ರೀತಿ ಹೇಳದ ಪದಗಳನೇಕೆ ಪೊಣಿಸಲಿ
ಒಲವ ತುಂಬದ ಭಾವಗಳನೇಕೆ ಬೆರೆಸಲಿ
ಪ್ರಿತಿಸುವೆನೆಂದು ಸರಳವಾಗಿ ಹೇಗೆ ಹೇಳಲಿ
ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ

ಉಸಿರ ಏರಿಲಿತದಲಿ ನೀ ನಿಂತಿರುವೆ
ಕಂಗಳಲಿ ಕಾಂತಿಯಾಗಿ ಕೂತಿರುವೆ
ನನ್ನೀ ತನು-ಮನಗಳ ನೀ ತುಂಬಿರುವೆ ಎಂದರೆ
ನಂಬುವೆಯ ಗೆಳತಿ , ಸಿಹಿ ಭಾವಗಳ ಹೇಗೆ ತಿಳಿಸಲಿ ಹೇಳೇ ಗೆಳತಿ

ರಾಧೆ-ಒ೦ದು ದೃಷ್ಟಿ

ರಾಧೆ ಪ್ರೇಮಲೋಕದ ಪುತ್ಥಳಿ. ಭಕ್ತಿ ಮತ್ತು ಪ್ರೀತಿ ಒ೦ದಾಗಿ ಅಮರ ಪ್ರೇಮದ ಕಲ್ಪನೆಗೆ ಕಾವು ಕೊಟ್ಟವಳು. ಹೊಲಸಿಲ್ಲದ ಸೊಗಸಿಗೆ ಸೊಪ್ಪು ಹಾಕಿದವಳು. ಕೃಷ್ಣನನ್ನು ರಾಜಕೀಯ ಕುತ೦ತ್ರದ ಬಲೆಯಿ೦ದ ಹೊರಗೆಳೆದು ಅವನನ್ನು ಮನಮೋಹಕನನ್ನಾಗಿ ಮಾಡಿ ಜನಸಾಮಾನ್ಯರ ಹೃದಯದಲ್ಲಿ ಸದಾ ನೆಲೆಸುವ೦ತೆ ಮಾಡಿದವಳು. ತಾರುಣ್ಯಕ್ಕೆ, ಮೋಹಕ್ಕೆ ಹೊಸ ಪಟ್ಟ ಕಟ್ಟಿದವಳು.

ಮನುಜನಿಲ್ಲ!!

ಮನುಜನಿಲ್ಲ!!

ಕಳೆದು ಹೋಗಿದ್ದಾನೆ
ಮನುಜ ಜಗದಲಿಂದು!
ಸಿಗುವರು ಹಿಂದೂ,ಕ್ರೈಸ್ತ,
ಮುಸಲ್ಮಾನರಸ್ತೆ
ನಮ್ಮೊಳಗಿಂದು.

ಪ್ರೀತಿ,ಪ್ರೇಮ, ಸಹಕಾರದ
ಸಹಬಾಳ್ವೆ ಇಲ್ಲ!
ಇಹುದು ಕೇವಲ
ಗುಡಿ, ಚರ್ಚು,ಮಸಿದಿಗಳು
ನಮ್ಮೊಡನೆ ಇಂದು.

ಗಂಟೆ, ಗೋಪುರ, ಗುಂಬಜ,
ಶಿಲುಬೆಗಳ ನಾಡಿನಲಿ
ಉಸಿರುಗಟ್ಟಿ ಪರಿತಪಿಸಿ
ಸತ್ಹಿದೆ ಮಾನವತೆಯು!
ಗುಡಿ,ಚರ್ಚು, ಮಸಿದಿಗಳಲಿ
ಮನಃ ಶಾಂತಿಗೆ

ನಾ ಓದಿದ ಸುಭಾಷಿತ

ನಮಸ್ಕಾರ ಸ೦ಪದಿಗರೆ,

ಮಾನ್ಯ ಹ೦ಸಾನ೦ದಿಯವರಿ೦ದ ಪ್ರೇರಿಪತನಾದ ನಾನು ಒ೦ದು ಒಳ್ಳೆಯ ಸುಭಾಷಿತವನ್ನು ಕನ್ನಡಕ್ಕೆ ಅನುವಾದ ಮಾಡುವ ಅಪರಾಧವನ್ನೆಸಗಿದ್ದೇನೆ. ಓದಿ ನೋಡಿ

ಸ೦ಸ್ಕೃತ ಮೂಲ:
ಯೇಷಾ೦ ಬಾಹುಬಲ೦ ನ ಅಸ್ತಿ ಯೇಷಾ೦ ನ ಅಸ್ತಿ ಮನೋಬಲ೦ |
ತೇಷಾ೦ ಚ೦ದ್ರಬಲ೦ ದೇವಃ ಕಿ೦ ಕರೋತಿ ಅ೦ಬರೇ ಸ್ಥಿತಂ ||

ಕನ್ನಡ ಭಾವಾರ್ಥ:
ಛಲವು ಮನಸಿನಲಿ ಬಲವು ತೋಳಿನಲಿ ಇರದಿರೆ |

ಸ್ಪೂರ್ತಿಯಾದೆ ನೀನು

ನನ್ನಲ್ಲಿ ಕುಳಿತು ಕೊರಗಿದ್ದ ಕವನಕ್ಕೆ
ಹೊರಗೆ ಬರಲು ಸ್ಪೂರ್ತಿಯಾದೆ ನೀನು

ನನ್ನಲ್ಲಿದ್ದ ಪದ ಪುಷ್ಪಕ್ಕೆ ಮುಂಜಾನೆಯ
ಸೂರ್ಯ ರಶ್ಮಿಯ ಹಿತ ಸ್ಪರ್ಶವಾದೆ ನೀನು

ಸೋತು ಸೊರಗಿ ಸತ್ತಂತಾಗಿದ್ದ ನನ್ನ
ಕೈಗಳನ್ನು ಪಾದರಸವಂತಾಗಿಸಿದ್ದು ನೀನು

ತುಕ್ಕು ಹಿಡಿದು ಮೊಂಡಾದ ಮಚ್ಚಿನಂತಾ
ಮೆದುಳನ್ನು ಹರಿತವಾಗಿಸಿದ್ದು ನೀನು

ಯಾಕೆ..?
ಇವೆಲ್ಲಾ ಸಾದ್ಯವಾಗಿಸಲು ನನ್ನ