ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಿಗನಾಗಿ

ವೇಷ ಬೇರೆ ಬಾಷೆ ಬೇರೆ, ದೇಶ ಒಂದೇ ಭಾರತ*
ಹಲವು ಬಾಷೆ ಒಂದೇ ನಾಡು ಎಂಬ ನೀತಿ ನಮ್ಮದು!!

ಚಿನ್ನದಂತ ನುಡಿಯು ನಮ್ಮದು , ರನ್ನದಂತ ಭಾಷೆ ನಮ್ಮದು
ಕಲಿಸಿ, ನುಡಿಸಿ, ನಲಿಸಿ ಬೆಳೆಸೋಣ ಮುಂದಕೆ !!

ಎಲ್ಲರೊಡನೆ ಕೂಡಿ ಬೆಳೆವೆವು ನಮ್ಮ ದ್ಯೇಯ ಭಾರತ
ನಮ್ಮ ತನವ ಕೂಡಿ ಸೆಳೆದು ನಡೆಯೋಣ ಮುಂದಕೆ!!

ನಾಡ ಸಂಸ್ಕೃತಿಯ ತಿಳಿದು, ನಡೆದು, ತಿಳಿಸೋಣ ಮುಂದಕೆ

ಅಂದು - ಇಂದು .... ಸುಮ್ಮ್ನೆ ಹಾಗೇ

ಇಂದಿಗಿಂತ ಅಂದೇನೇ ಚೆಂದವೋ ಅಂತ ಬರೀ ಫ಼್ಲಾಶ್ ಬ್ಯಾಕ್ ನಲ್ಲೇ ಇರುವವರಿಗೆ ಇದೊಂದು ಮಾತು. ಹಳೆಯದೆಲ್ಲಾ ಒಳ್ಳೇದಲ್ಲಾ ಹೊಸದೆಲ್ಲಾ ಕೆಟ್ಟದಲ್ಲ ಅಂತ ಕವಿ ಕಾಳಿದಾಸನೇ ಹೇಳಿದ್ದಾನೆ. ಕೆಲವೊಂದು ಹಳೆಯ ವಿಚಾರಗಳನ್ನು, ವಸ್ತು ವಿಷಯಗಳನ್ನು, ಕಥೆಗಳನ್ನೋ ಅವಲೋಕಿಸಿದಾಗ ಈಗಾಲೂ ಅದು ಚಾಲ್ತಿಯಲ್ಲಿದೆ ಅಂತ ಅನ್ನಿಸುತ್ತದೆ.

ನಾನು ಯಾರು - ತರಾಸು ಅವರ ‘ಹಿಂತಿರುಗಿ ನೋಡಿದಾಗ’

ಇಂದು ಸಂಪದದಲ್ಲಿ ವಿದಾಯ, ಅದಕ್ಕೆ ವಾದ-ವಿವಾದ-ಪ್ರತಿವಾದಗಳನ್ನು ನೋಡಿ ಬೇಸರ ಬಂದು ತರಾಸು ಅವರ ‘ಹಿಂತಿರುಗಿ ನೋಡಿದಾಗ’ ಓದಲೂ ಶುರು ಮಾಡಿದೆ. ಅಲ್ಲಿಯೂ ಕೂಡ ಇದರ ಛಾಯೆಯನ್ನು ನೋಡಿ ಸಂಪದಿಗರಲ್ಲಿ ಹಂಚಿಕೊಳ್ಳುವ ಎನಿಸಿ ಇದನ್ನು ಬರೆಯುತ್ತಿದ್ದೇನೆ. ಇದು ಯಾರಿಗಾದರೂ ನೋವನ್ನುಂಟು ಮಾಡಿದರೆ ಕ್ಷಮಿಸಿ.

ಜವಾಬ್ದಾರಿಯೂ ಸ್ವಲ್ಪ ಜಾಸ್ತಿ ಆದಂತಾಯ್ತು!!

ಹದಿನೈದನೇ ವಯಸ್ಸಿನಲೇ
ಬರೆಯಲು ಆರಂಭಿಸಿದ್ದೆ
ಕವಿತೆಗಳನು ನಾನು

ಆದರೆಲ್ಲೂ ಪ್ರಕಟಿಸದೇ ನನ್ನ
ಜೊತೆಗೆ ಜೋಪಾನವಾಗಿ
ಕಾಪಾಡಿದ್ದೆ ಅವುಗಳನು

ಐದು ವರುಷಗಳ ಹಿಂದೆ
ಶುರುವಾಯ್ತು ಪ್ರಕಾಶಕದ
ಜೊತೆಗೆ ನನ್ನ ನಂಟು

ಅಲ್ಲಿ ಬರೆದ ಕವನ ಬರಹ
ಓದಿದವರು ಪ್ರತಿಕ್ರಿಯಿಸಿ
ಮೆಚ್ಚಿದ್ದೂ ಉಂಟು

ಕನ್ನಡಧ್ವನಿಯಲಿ ನನ್ನ
ಧ್ವನಿಯೂ ಸೇರಿಕೊಂಡು
ಜಗಕೆಲ್ಲಾ ಕೇಳಿಬಂತು

ಕಾಣದ ಕವಿತೆ ....

ಕಾಣದ ಕವಿತೆ ಅಡಗಿದೆ ಒಳಗೆ
ಬಾರದೆ ಹೊರಗೆ ಕಾದಿದೆ ಯಾರಿಗೆ?
ಕಾಯುತ ಕಾಯುತ ನಿನ್ನಿ ಹಾದಿಗೆ...
ಕವಿತೆಯ ಅರ್ಥ ಮರೆತೇ ಹೋಗಿದೆ :(

ಕಾಣದ ಕವಿತೆ ಅಡಗಿದೆ ಒಳಗೆ
ಬರೆಯುತ ಬರೆಯುತ ಮನಸಿನ ಒಳಗೆ
ಮಾಡಿದೆ ಗಾಯ ಕಾಣದ ಕಣ್ಣಿಗೆ ...
ಮನಸಿನ ಅರ್ಥ ಆಗದೆ ಕಣ್ಣಿಗೆ??

ಕಾಣದ ಕವಿತೆ ಅಡಗಿದೆ ಒಳಗೆ
ಹುಡುಕುತ ಹೋದರೆ ಹುಡುಗಿಯ ಕಡೆಗೆ!!
ಅವಳಲೇ ಕಂಡೆ ಕಾಣದ ಕವಿತೆ

ಯಾರ ಜೊತೆ ಆಡುತ್ತದೆ, ಎಲ್ಲಿ ಆಡುತ್ತದೆ, ಒಂಟಿ ಮಗು??

ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು. ಆ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು. ಆ ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು. ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು. ಬರಬರುತ್ತ (ಕಾಲಕ್ರಮೇಣ) ಒಂದು ಅಥವ ಎರಡಕ್ಕೆ ನಿಂತಿತು. ಒಂದು ಮನೆಯ ಮಕ್ಕಳು ಅವರವರೇ ಆಡಿಕೊಳ್ಳುತ್ತಿದ್ದರು.

ಆಂಗ್ಲದೊಳ್ ಅಕಾರ ಮತ್ತು ಕಮಕಾರಗಳ ನಡುವಣ ಲಕಾರಂ ನಿಶ್ಶಬ್ದಂ

ಆಂಗ್ಲದಲ್ಲಿ ಅ=a ಮತ್ತು ಕ್=k ಅಥವಾ ಮ್=m ನಡುವೆ ಲ್=l ಬಂದರೆ ಅದು ನಿಶ್ಶಬ್ದ.
ನೋಡಿ ಈ ಉದಾಹರಣೆಗಳನ್ನು , talk, walk, alms, palm ಇತ್ಯಾದಿ.

ಏನ ಹೇಳಲಿ ನಾನು?

ಸಖೀ,

ಏನ ಹೇಳಲಿ ನಾನು,
ನಮ್ಮ ಮಿಲನವಾಗಿರದೇ
ಇದ್ದಿದ್ದರೆ ಏನಾಗುತ್ತಿತ್ತೆಂದು
ಕೇಳಿದರೆ ನೀನು

ನನಗೇನೂ
ಆಗುತ್ತಿರಲಿಲ್ಲ,

ನಾನೂ ಕೂಡ
ಏನೂ ಆಗಿರುತ್ತಿರಲೇ ಇಲ್ಲ,

ಹತ್ತಾರು ವರುಷಗಳಿಂದ
ಕಂಡಿರುವ ನನ್ನ ಕನಸುಗಳು
ನನಸಾಗುತ್ತಿರಲಿಲ್ಲ,

ಪ್ರೀತಿ ಎಂದರೇನೆಂದೇ
ನನ್ನಿಂದ ಅರಿತು
ಕೊಳ್ಳಲಾಗುತ್ತಿರಲಿಲ್ಲ,

ಪ್ರೀತಿಯಲ್ಲಿರುವ ಈ
ನೋವು - ನಲಿವಿನ ಅನುಭವ