ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಲವ ಮಿಡಿತ

ಯಾವೊದೋ ಮಾತಿಗೆ
ಯಾವುದೋ ಉತ್ತರ
ತಿಳಿಯದಾಗಿದೆ ಹೀಗೇಕೆಂದು
ತಾಳಲಾರೆ ಈ ಮೌನ ಅಂತರ

ಬಿಡದೆ ಕಾಡುವ ನೆನಪು
ಒಂದಾಗಿ ತೇಲಿ ಬರುತಿದೆ
ದೂರ ಸರಿಸಲಾರೆ ಅದನು
ಮತ್ತೂ ಬೇಕೆನಿಸುತ್ತದೆ

ಎತ್ತಲೋ ಮುಖ ಮಾಡಿ
ನಿಂತು ಕಾಡುವೆ ಹೀಗೇಕೆ?
ಕನಸು ಕಾಣುವ ಕಂಗಳನು
ಕಾಣುವುದೆನ್ನ ಬಯಕೆ

ಯಾರದೋ ಮಾತಿಗೆ
ನಿನಗೆಕಿಷ್ಟು ಬೇಸರ
ನಿನ್ನೊಳಗೆ ನಾನಿರಲು
ಮತ್ತಿನ್ನೇಕೆ ಮುಜುಗರ

ಬಣ್ಣ

ಬಣ್ಣ

ತಂದಿರಿ ನೀವು ರಂಗನು
ಬಗೆಬಗೆಯ ಬಣ್ಣಗಳನು
ಚೆಲ್ಲಿದಿರಿ ಎನ್ನೀ ಮುಖದಲಿ

ಬಣ್ಣಗಳಿಲ್ಲದೆ ರಂಗೆಲ್ಲಿಯದು?
ಬೇಡವೆನ್ನಲಾರೆ ನೀವಿಟ್ಟ ಬಣ್ಣಗಳ
ಬಣ್ಣಗಳೇ ಭಾವಗಳಾಗಿರುವಾಗ
ಭಾವಗಳಿಲ್ಲದೇ ಬಾಳೇನು?

-- ಅರುಣ ಸಿರಿಗೆರೆ

ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ...

ನಮ್ಮ ಆಫೀಸ್ ಎದುರುಗಡೆ ಸ್ಕೂಲಿದೆ, ಅಲ್ಲಿ ಹುಡುಗಿಯರು ಕುಂಟಬಿಲ್ಲೆ ಆಡ್ತಿದ್ರು ಅದನ್ನು ನೋಡಿ ನನ್ನ ಹಳೆಯ ದಿನಗಳು ಜ್ನಾಪಕಕ್ಕೆ ಬಂತು.

ಎಷ್ಟು ಚೆನ್ನಾಗಿತ್ತಲ್ವ ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಮರಕೋತಿಯಾಟ, ಕಳ್ಳ ಪೋಲಿಸ್ ಇನ್ನೂ ಏನೇನೋ....
ಆಮೇಲೆ ಯಾವುದೇ ರೀತಿಯ ಚಿಂತೆಗಳಿರಲಿಲ್ಲ.

ಅಂತರ

ಮುಂಜಾನೆಯ ಹಿಮದಲ್ಲಿ
ಉಸಿರಿನ ಹೊಗೆಯಲ್ಲಿ
ಮರಗಟ್ಟುವ ಚಳಿಯಲ್ಲಿ
ಮುಸುಕಿದ್ದ ಮಂಜಿನೊಡನೆ ಸೂರ್ಯನ ಹೋರಾಟ
ಭುವಿ ತಲುಪಲು ರವಿತೇಜನ ಪರದಾಟ

ಮಂಜಿನೊಡನೆ ಬೆಳಕಿನ ಸರಸ
ಹಸಿರು ಹುಲ್ಲಿಗೆಂತೊ ಸಂತಸ
ನೀರ ಹನಿಗಳಲ್ಲೇನೊ ಉಲ್ಲಾಸ
ಹುಲ್ಲಿನ ಅಂಚಿನಲ್ಲೊಂದು ಕತ್ತಿಯ ಛಳಪು
ನೀರ ಹನಿಗಳಲ್ಲಿ ವಜ್ರದ ಹೊಳಪು

ಸೀಳಿ ಬಂದಿರಲು ಸೂರ್ಯ ರಶ್ಮಿ
ಮುಗಿಲೆತ್ತರದ ದಟ್ಟ ಮರಗಳ,

ಹೀಗೊಂದು ಮಿಲನ....

ಪಾತರಗತ್ತಿಯು ಹಾರುತಿದೆ,

ಹೂವಿಂದ ಹೂವಿನ ಮೇಲೆ.........

ಬೀಸುತ ರೆಕ್ಕೆಯ, ಕಾಣುತ ಪುಷ್ಪವ,

ಸವಿಯಲು ಮಕರಂದವ ಅದು ಹೊರಟಿದೆ....

ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ,

ಹಾಗೇ ಹೂವಿಗೆ ಕೇವಲ ಸಾಕು ಪತರಗತ್ತಿ ತರುವ ಪರಾಗದ ಸವಿಮಿಲನದ ಅನುಬಂಧ....

ಅಂತು ಒಂದು ಪಾತರ, ಮತ್ತೊಂದು ಹೊವಿನ ಮಧ್ಯ ಇದೆ..,

ಕಾಣದ ಒಂದು ಮಧುರ ಮಿಲನ,

ಕಾಮಣ್ಣನ ಮಕ್ಕಳು...

ಕಾಮಣ್ಣನ ಮಕ್ಕಳು, ಕಳ್ಳ ಸುಳ್ಳ(/ಸೂ..) ಮಕ್ಕಳು… ಹೋಳಿ ಹುಣ್ಣಿಮೆ ಬಂದರೆ ಸಾಕು ಇದೇ ಸ್ಲೋಗನ್ ಅಲ್ಲವೆ ಮೊದಲೆಲ್ಲ? ಹೋಳಿ ಹುಣ್ಣಿಮೆ, ಕಾಮ ದಹನ, ಅದಕ್ಕಾಗಿ ಕುಳ್ಳು ಕಟ್ಟಿಗೆ ಕಳವು ಮಾಡುವದು. ಅದರ ಜೊತೆಗೆ ಅವತ್ತು ಬಾಯಿಗೆ ಬಂದ ಬಯ್ಗಳೆಲ್ಲ ಯಥೇಚ್ಛೆ ಹೇಳಿ ಬಾಯಿ ಶುದ್ಧಿ ಮಾಡಿಕೊಳ್ಳುವದೂ ಒಂದು ಸಂಪ್ರದಾಯ!!

ಹೀಗೇಕೆ ನಾನಾದೆ

"ಇದ್ಯಾಕೆ ಇಷ್ಟೊಂದು ಖರ್ಚು ಮಾಡಿ ಬುಕ್ಸ್ ತಂದಿದೀಯಾ.ನಿಂಗೇ ಯಾಕೆ ಈ ಪುಸ್ಕಕಾ ಎಲ್ಲಾ ಓದೋ ಮನಸಾಯ್ತು? ಇಷ್ಟು ಬೇಗ ಈ ವಯಸ್ಸಲ್ಲಿ"
ಅಮ್ಮ ರೇಗಿಸ್ತಿದ್ದರು
"ಎಲ್ಲಾ ನಿಂಗೆ ತಂದಿದ್ದೂ" ಅದು ಸುಳ್ಳು ಅಂತ ನಂಗೆ ಗೊತ್ತಿತ್ತು
ನೆನ್ನೆ ಅವೆನ್ಯೂ ರೊಡ್‌ನಲ್ಲ್ ಒಂದಷ್ಟು ಕಂಪ್ಯೂಟರ್ ಪುಸ್ತಕ ಕೊಳ್ಳುವುದಿತ್ತು.