ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಳ್ಳಿಯಲ್ಲಿ ಇವತ್ತೂ ನೀರಿಲ್ಲ...

ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ.

ಬೋರ ಕಂಡಂತೆ ರಾಜಕೀಯ

ಸೆಕುರಲಿಸ್ಟ್ - ಇಟಲಿಯ ಆದಿದೇವತೆಯ ಕ್ಲಾಸ್ ಮೊರು ಸೇವಕರಂಗೆ ಸೆಕುರೆಡ್ ಲಿಸ್ಟ್ನಲ್ಲಿ ಕುನ್ತವೆ ಮಂಗಗಳಂಗೆ
ಎಡ ಪಂಥಿಯರು - ಬಲಭಾಗದಗೆ ಒಂಚೂರು ಬುದ್ದಿ ಇಲ್ವಂತೆ ಕಣ್ಣಣ್ಣ
ಬಲ ಪಂಥಿಯರು - ಎಡಭಾಗದಗೆ ಒಂಚೂರು ಬುದ್ದಿ ಇಲ್ವಂತೆ ಕಣ್ಣಣ್ಣ,

ನಿನ್ನೊಲುಮೆ ನಮಗಿರಲಿ ತಂದೆ (ಚಿತ್ರ- ನಮ್ಮ ಮಕ್ಕಳು)

ಆರ್. ಎನ್. ಜಯಗೋಪಾಲ್ ರಚಿಸಿದ...........

ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀನಡೆಸು ಮುಂದೆ

ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನೀನೆಮ್ಮ ಅನುಗ್ರಹಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆಮ್ಮ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ (ಬರೀ ಸಂಪದ ಸಾಕು!!!)
ನಿನ್ನ ಕರುಣೆಯೇ ಒಂದು ಸಾಕೆಮಗೆ ತಂದೆ...............೧

ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ "ಹಿಂದುಳಿದವರು", ಒಳಮೀಸಲಾತಿ, "ಅನಂತ ನಿಷ್ಠ" ಭಟ್...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 20, 09 ರ ಸಂಚಿಕೆಯಲ್ಲಿನ ಲೇಖನ.)

ಭಾರತದ ಸಮಾಜದಲ್ಲಿಯ ಜಾತಿವ್ಯವಸ್ಥೆಯಿಂದಾಗಿ "ಸಾಮಾಜಿಕವಾಗಿ ಮುಂದುವರೆದವರು" ಎಂದು ಗುರುತಿಸಲಾಗುವ ಮೇಲ್ಜಾತಿಗಳ ಜನರಿಗೆ ಕೆಲವು ವಿಶೇಷ ಹಕ್ಕು ಮತ್ತು ಸವಲತ್ತುಗಳು ಸುಲಭವಾಗಿ ಬಂದುಬಿಡುತ್ತವೆ. ಒಂದು ಸ್ವಸ್ಥ ಸಮಾಜದಲ್ಲಿ ಆ ಹಕ್ಕು ಮತ್ತು ಸವಲತ್ತುಗಳನ್ನು ಬಳಸಿಕೊಳ್ಳಲು ಜನ ಹೇಸಿಗೆ ಪಟ್ಟುಕೊಳ್ಳಬೇಕು. ಆದರೆ ಹಾಗೆ ಹೇಸಿಗೆ ಪಟ್ಟುಕೊಳ್ಳಲು ಜನಕ್ಕೆ ಅದು ಹೇಸಿಗೆ ಅನ್ನುವುದು ಮೊದಲು ಗೊತ್ತಾಗಬೇಕು. ಅದು ಗೊತ್ತಾಗಬೇಕಾದರೆ ನಾವು ಶತಮಾನಗಳಿಂದ ಪಾಲಿಸಿಕೊಂಡ ಬಂದ ಜಾತಿರಿವಾಜುಗಳನ್ನು, ಅವುಗಳ ನೈತಿಕತೆ/ಅನೈತಿಕತೆಯನ್ನು ಮುಕ್ತವಾಗಿ ವಿಮರ್ಶೆಗೆ ಒಡ್ಡಿಕೊಳ್ಳಬೇಕು. ಆಧುನಿಕ ವಿಚಾರಗಳಿಗೆ ತೆರೆದುಕೊಳ್ಳಬೇಕು. ಆದರೆ ಇವು ಈಗಲೂ ಅಗತ್ಯವಾದಷ್ಟು ಆಗುತ್ತಿಲ್ಲ. ಆದ್ದರಿಂದಲೇ, ಯಾವ ನಡವಳಿಕೆಗಳಿಗೆ ಜನ ಹೇಸಿಗೆ ಪಟ್ಟುಕೊಳ್ಳಬೇಕೊ ಅದಕ್ಕೆ ಪಟ್ಟುಕೊಳ್ಳುತ್ತಿಲ್ಲ. ಎಲ್ಲಾ ಜಾತಿನಾಯಕರುಗಳು ಯಾವೊಂದು ಎಗ್ಗುಸಿಗ್ಗಿಲ್ಲದೆ ತಮ್ಮ ಜಾತಿಸಮಾವೇಶ ಏರ್ಪಡಿಸುತ್ತಾರೆ. ಅಲ್ಲಿ ತಮ್ಮ ಜಾತಿಪರಾಕ್ರಮಗಳನ್ನು ಊದಿಕೊಳ್ಳುತ್ತಾರೆ. ನೆರೆದ ಜಾತಿ-ಜನ ಅಂತಹ ತುತ್ತೂರಿಗೆ ಚಪ್ಪಾಳೆ ತಟ್ಟುತ್ತಾರೆ. ಜಾತಿವಾದ ಮಾಡುವುದು ಹೆಮ್ಮೆಯ ವಿಚಾರ, ಅದರಲ್ಲಿ ಮುಜಗರ ಪಟ್ಟುಕೊಳ್ಳುವುದು ಏನೂ ಇಲ್ಲ, ಎನ್ನುವ ಸ್ಥಿತಿಗೆ ನಾವು ತಲುಪಿಬಿಟ್ಟಿದ್ದೇವೆ.

ಗೆಜ್ಜೆಯ ದನಿ

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು  ಕಾಲಂದುಗೆಯ ನಲುದನಿಯ ತೆರದಿ

 

ಸಂಸ್ಕೃತ ಮೂಲ: 

ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ 
ಹರಂತಿ ಸಂತೋ ಮಣಿನೂಪುರಾ ಇವ ||

ಸದಸ್ಯರ ಗಮನಕ್ಕೆ: ಹೊರಗಿನ ಕಂಟೆಂಟ್ ತಂದು ಹಾಕದಿರಿ

ಇತ್ತೀಚೆಗೆ ಸಂಪದದಲ್ಲಿ "ಮಿಂಚಂಚೆಯಲ್ಲಿ ಬಂದದ್ದು" ಎನ್ನುತ್ತ ಹೊರಗಿನಿಂದ ತಂದ ಮಾಹಿತಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೊರಗಿನಿಂದ ಕಾಪಿ ಮಾಡಿದ ಯಾವುದೇ ಕಂಟೆಂಟ್ ಕೂಡ ಸಂಪದದಲ್ಲಿ ಹಾಕುವಂತಿಲ್ಲ. ಹಾಗೆ ಹಾಕಿದ ಪುಟಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಪ್ರಕಟಣೆಯಿಂದ ತೆಗೆದುಹಾಕಲಾಗುವುದು. ಚಿತ್ರ ಪುಟಗಳಿಗೆ ಸೂಕ್ತ ಕ್ರೆಡಿಟ್ಸ್ ಚಿತ್ರ ಪುಟಗಳನ್ನು ಅಪ್ಲೋಡ್ ಮಾಡುವಾಗ ಚಿತ್ರ ಯಾರದ್ದು? ಎನ್ನುವುದನ್ನು ಓದುಗರಿಗೆ ತಿಳಿಸುವ ಕುರಿತು ಸದಸ್ಯರ ಗಮನವಿದ್ದರೆ ಉತ್ತಮ. ಹೊರಗಿನಿಂದ ತೆಗೆದುಕೊಂಡ ಚಿತ್ರವಾದರೆ ಅದನ್ನು ಬಳಸಲು ಅನುಮತಿ ಇರುವುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ಚಿತ್ರವನ್ನು ಅಪ್ಲೋಡ್ ಮಾಡುವಾಗ ಅದನ್ನು ತೆಗೆದವರಿಗೆ ಸೂಕ್ತ ಕ್ರೆಡಿಟ್ಸ್ ಕೊಡುವುದು ಮರೆಯದಿರಿ. ಕ್ರೆಡಿಟ್ಸ್ ಬರೆಯುವಾಗ "ಗೂಗಲ್ ನಿಂದ ಪಡೆದದ್ದು" ಎಂದೆಲ್ಲ ಇದ್ದರೆ ಯಾವುದೇ ಮುನ್ಸೂಚನೆಯಿಲ್ಲದೆ ಚಿತ್ರವನ್ನು ಅಳಿಸಿಹಾಕಲಾಗುತ್ತದೆ. ಹೊರಗಿನಿಂದ ತಂದು ಹಾಕಿದ, ನೇರ cut/paste ಮಾಡಿದ ಮಾಹಿತಿಯಿಂದ ಸಂಪದಕ್ಕೆ ತೊಂದರೆಯಾಗುತ್ತದೆ ಎಂಬುದು ಸದಸ್ಯರ ಗಮನದಲ್ಲಿರಲಿ. - ನಿರ್ವಹಣೆಯ ಪರವಾಗಿ

ಜಾರ್ಜಿಯಾ: ಜೈಲಿನಿಂದ ಆರಾಮವಾಗಿ ಪಾರಾದ, ಮತ್ತೆ ಹಿಂದಿರುಗಿದಾಗ ಸಿಕ್ಕಿಬಿದ್ದ

ಜೈಲಿನಲ್ಲಿ ಕೊಳೆಯುತ್ತಿರುವವರು ತಾವು ಯಾವಾಗ ಜೈಲಿನಿಂದ ಪಾರಾಗುತ್ತೇವೆಯೋ ಎಂದು ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ.

ಕಾಂಗ್ರೆಸ್ ಮತ್ತು ಬೀಜೇಪಿ ಯಾಕೆ ಒಟ್ಟುಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು?

ಇದೇ ಹೆಸರಿನ ಚರ್ಚೆಯ ತಂತೊಂದನ್ನು ಚರ್ಚೆ ವಿಭಾಗದಲ್ಲಿ ಎರಡು ದಿನಗಳ ಹಿಂದೆ ಹಾಕಿದ್ದೆ.

ಅದನ್ನು ಹೆಚ್ಚಿಗೆ ಜನ ಓದಿಯೇ ಇಲ್ಲ :(

(ಚರ್ಚೆವಿಭಾಗದ ವಿಷಯಗಳು ಎಲ್ಲಾ ಪುಟದಲ್ಲಿಯೂ ಯಾವಾಗಲೂ ಕಾಣುವುದಿಲ್ಲ - ಬ್ಲಾಗು ಕಂಡಂತೆ- ಎನ್ನುವುದೂ ಒಂದು ಕಾರಣ ಇರಬಹುದು )

ಸಂಪದದಲ್ಲಿ ಬ್ಲಾಗಿನಷ್ಟು ಜನಪ್ರಿಯತೆ , ಇತರ ಸೆಕ್ಷನ್ನುಗಳಿಗೆ ಬಹುಷಃ ಇಲ್ಲ ಅಂತ ಕಾಣುತ್ತದೆ.

ನೂರು ವರ್ಷ ಹಿಂದೆ ಸೂಳೆಕೆರೆ ಹೀಗಿತ್ತು.

ನೂರು ವರ್ಷಗಳ ಹಿಂದಿನ ಸೂಳೆಕೆರೆಯ ಚಿತ್ರಕ್ಕಾಗಿ ಇಲ್ಲಿ ನೋಡಿ. http://www.indianaturewatch.net/displayimage.php?id=7060

ಬ್ರಿಟಿಷ್ ಲೈಬ್ರರಿಯ ಚಿತ್ರಕ್ಕೆ ಅನುಮತಿ ಪಡೆಯದಿರುವದರಿಂದ ಕೊಂಡಿಯನ್ನಷ್ಟೇ ಕೊಡಲಾಗಿದೆ.

ಇದರ ಚರಿತ್ರೆ ಇಲ್ಲಿದೆ: http://sampada.net/image/17721#comment-57265

ಇದರತ್ತ ಸಂಪದಿಗರ ಗಮನ ಸೆಳೆದ ಶ್ರೀ ಬಿ.ವಿ. ಗುರುರಾಜ್ ರವರಿಗೆ ಆಭಾರ.