ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೇವಲ ಕಲೆ - ಅಭಿಮಾನಕ್ಕಾಗಿ ಜೀವನ ಸವೆಸಲು ಯಾವ ಮಹನೀಯರೂ ಉಳಿದಿಲ್ಲ!

ಕನ್ನಡ ಚಿತ್ರರಂಗದ ೭೫ನೇ ವರ್ಷದ ಸಂಭ್ರಮಾಚರಣೆಯ ಸಮಾರಂಭದಲ್ಲಿ ಸನ್ಮಾನಿತರಾದ ತಮಿಳು ಚಿತ್ರ ನಟ ರಜನೀಕಾಂತ್ "ಸಿನಿಮಾದಲ್ಲಿ ರಾಜಕೀಯ ಬೆರಸಿ ಕಲಾಕ್ಷೇತ್ರವನ್ನು ಕೊಳಕು ಮಾದುವುದು ಬೇಡ, ಕನ್ನಡಿಗರು ಮತ್ತು ತಮಿಳರು ಸಹೋದರರು, ನಾವು ಒಂದಾಗಿ ಬಾಳಬೇಕು" ಎಂದೂ ಹಾಗು ಕಮಲಹಾಸನ್ 'ಕಲೆ ಎಂಬ ಶಾಂತ, ನಿರ್ಮಲ ಕೊಳಕ್ಕೆ ರಾಜಕೀಯದ ಕಲ್ಲೆಸಯಬೇಡಿ, ಈ ಪುಷ್ಕರಣಿಯನ್ನು ರಕ್ತದ

ನಗೆಯು ಬರುತಿದೆ ಎನಗೆ ನನ್ನನೆ ನೋಡಿ!

’ನಗೆಯು ಬರುತಿದೆ ಎನಗೆ ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು ’ ಅಂತ ಪು.ದಾಸರು ಹಾಡಿದರು. ಅವರಿವರನ್ನ ನೋಡಿ ನಗೋದು ಬಲೇ ಸುಲಭ . ನಮ್ಮನ್ನು ನಾವೇ ನೋಡಿ ನಗೋದು ಬಲು ಅಪರೂಪ.

ಈಗ ನನ್ನನ್ನೇ ನೋಡಿ.

ಹಳ್ಳಿಯವರಂದ್ರೆ ತಮಾಷೇನಾ??

ತುಂಬಾ ದಿನದ ಹಿಂದೇನೇ ಸಂಪದ ಸೇರಿದೆ. ಬರೆಯೋ ಆಸೆ ಸಿಕ್ಕಾಪಟ್ಟೆ ಇದ್ರೂ ಸೋಮಾರಿತನದಿಂದಾಗಿ ಆಗಿರ್ಲಿಲ್ಲ (ವೇಳೆಯ ಅಭಾವ ಅಂತ ಬರೆಯೋಣ ಅನ್ಕೊನ್ಡೆ; ಅದು ನನಗೆ ನಾನೆ ಹೇಳ್ಕೊಳ್ಳೊ ಸುಳ್ಳು ಅಂತ ಗೊತ್ತಾಗಿ ಸುಮ್ನಾದೆ)

ಪಾತರಗಿತ್ತಿ

ನಿನ್ನ ಕಣ್ಣ ಮುಂದೆ ಸುತ್ತಿದ್ದ
ಪಾತರಗಿತ್ತಿಗಾಗಿ ಕೈ ಚಾಚಿದ್ದ
ನೀನು...
ಮತ್ತೆ ಕೈಗೆ ಸಿಕ್ಕಾಗ ಮುತ್ತಿಕ್ಕಿ
ಮುದ್ದಿಸಿದ್ದೆ..

ಬಣ್ಣ ಬಣ್ಣದ ರೆಕ್ಕೆಗಳು
ನಿನ್ನ ಕಣ್ಣ ಸೆಳೆದಾಗ
ನಿನ್ನೆದೆಯ ಮಂಚದಲಿ
ಸ್ನೇಹ ಸಿಂಚನವ ಹರಿಸಿದವ..

ಮೈಯೆಲ್ಲಾ ಬೆರಳಾಡಿಸಿ
ರಸ ಹೀರಿದಾಗ ನನ್ನ
ಬಣ್ಣದ ಪುಟ್ಟ ರೆಕ್ಕೆಗಳ
ಕತ್ತರಿಸಿ ಬಿಸಾಕಿದ್ದೆ...

ರೆಕ್ಕೆ ಕಳೆದುಕೊಂಡ ಮೇಲೆ

ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೩

ಅವಿನಾಶ್ ಮುಖ ಮುಚ್ಚಿ ಕುಳಿತಿದ್ದ. ಅಳುತ್ತಿದ್ದನೋ ಗೊತ್ತಾಗಲಿಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟು ಅಡುಗೆ ಮನೆಗೆ ನಡೆದೆ. ಪ್ರಳಯವೇ ಆಗಿದ್ದರೂ ಈ ಹೊಟ್ಟೆಗೆ ಹಸಿವಾಗುತ್ತಲ್ಲ ಅಂತಾ ನನ್ನನ್ನು ನಾನೇ ಬೈದುಕೊಂಡೆ. ಇನ್ನೊಂದು ಜೀವ ನನ್ನಲ್ಲಿ ಬೆಳೆಯುತ್ತಿದೆ ಎಂಬ ನೆನಪಾಯಿತು. ಅದಕ್ಕಾದರೂ ಊಟ ಮಾಡಬೇಕಲ್ಲ ಅನಿಸಿತು.

ಸ್ನೇಹ ಸೇತು ಕಡಿಯುವ ಮುನ್ನ

ತನ್ನನ್ನು ತಾನು ಗೇಲಿ ಮಾಡಿಕೊಂಡು ನಗುವುದೇ ಅತ್ಯಂತ ಶ್ರೇಷ್ಠವಾದ ಹಾಸ್ಯ. ಇನ್ನೊಬ್ಬನ ಕಾಲೆಳೆಯುವುದೂ, ಅಸಹಾಯಕತೆಯನ್ನು ಲೇವಡಿ ಮಾಡುವುದೂ ಹಾಸ್ಯದ ಪರಿಧಿಯಲ್ಲಿ ಓಡಾಡಿಕೊಂಡಿರಲು ಪರವಾನಿಗೆ ಪಡೆದಿದೆಯಾದರೂ ಅದು ಆ ಇನ್ನೊಬ್ಬನಿಗೆ ನೋವುಂಟು ಮಾಡುವ ಯಾವ ಹಕ್ಕನ್ನು ಹೊಂದಿಲ್ಲ. ಇನ್ನೊಬ್ಬನನ್ನು ನೋಯಿಸುವ ಹಾಸ್ಯ ಕುಹಕವಾಗುತ್ತದೆ.

ನಿನ್ನಲೊಂದು ಬಿನ್ನಹ

ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ?
ಅ ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ?

ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ?
ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ ಸಹಮತವಿದ್ದುದೂ ನಿಜವಲ್ಲವೆ?

ಏಕೀ ಸಂಶಯ ಅಪನಂಬಿಕೆ ನುಸುಳಿದೆ ನಮ್ಮ ನಡುವಲ್ಲಿ?
ಅಥವಾ ಸಮಾಜ ಏನೆನ್ನಬಹುದೆಂಬ ಭಯ ಮನೆಮಾಡಿದೆಯೇ ನಿನ್ನಲ್ಲಿ?

ಮೃಗತೃಷ್ಣ.. ’ಮಣ್ಣ್ ದ ಲೆಪ್ಪು’

ಮುಂಬಯಿಯ ಸುಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘದ ’ಕಲಾಭಾರತಿ’ ತಂಡವು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಸ್ತುತ ಪಡಿಸುತ್ತಿರುವ ಒಂದು ವಿಶೇಷ ನಾಟಕದ ಹೆಸರು ’ಮೃಗತೃಷ್ಣ’. ಖ್ಯಾತ ಲೇಖಕಿ ವಸುಮತಿ ಉಡುಪರು ಈ ನಾಟಕವನ್ನು ರಚಿಸಿದ್ದಾರೆ. ಅತ್ಯಂತ ಸರಳ Narrative ಹೊಂದಿರುವ ಈ ನಾಟಕವು, ಕೆಲವು ಕ್ಲಿಷ್ಟ ಪ್ರಶ್ನೆಗಳನ್ನು ಕೇಳುತ್ತದೆ.

ಭುವನ ವರ್ಮ ಎಂಬ ರಾಜ ಬೇಟೆಗೆಂದು ಕಾಡಿಗೆ ಬಂದಿರುತ್ತಾನೆ. ಅದೇ ಸಮಯದಲ್ಲಿ ದೇವಲೋಕದ ಕನ್ಯೆಯೊಬ್ಬಳು (ಸುಗಂಧಿನಿ), ದೇವಲೋಕದ ಕಟ್ಟುಪಾಡುಗಳನ್ನು ಮೀರಿ, ತನ್ನ ಸಖಿಯೊಂದಿಗೆ ಭೂಲೋಕಕ್ಕೆ ಇಳಿದು ಅದೇ ಅರಣ್ಯಕ್ಕೆ ಬಂದಿದ್ದಾಳೆ. ಕಾಡಿನ ಪಕ್ಕದಲ್ಲಿರುವ ಅಲಕನಂದಾ ನದಿಯ ತೀರದಲ್ಲಿ ಅವರಿಬ್ಬರ ಭೇಟಿಯಾಗಿ, ಪ್ರೇಮಾಂಕುರವಾಗುತ್ತದೆ. ಸುಗಂಧಿನಿ ಗರ್ಭಿಣಿಯಾಗುತ್ತಾಳೆ.

ಮರ್ತ್ಯನೊಬ್ಬನ ಜೊತೆ ಅಂಗಸಂಗ ಮಾಡಿದ್ದಕ್ಕಾಗಿ ಸಿಟ್ಟಿಗೆದ್ದ ದೇವಲೋಕದ ರಾಜ, ತನ್ನ ಮಗಳು ಸುಗಂಧಿನಿಯನ್ನು ಹೀಯಾಳಿಸುತ್ತಾನೆ. ಭುವನವರ್ಮನನ್ನು ಮರೆತುಬಿಡುವಂತೆ ಅವಳಿಗೆ ಆದೇಶಿಸುತ್ತಾನೆ. ಆದರೆ ಸುಗಂಧಿನಿ ಆತನ ಮಾತನ್ನು ಒಪ್ಪುವುದಿಲ್ಲ. ಮತ್ತೆ ಭೂಲೋಕಕ್ಕೆ ತೆರಳಿ, ತಾನು ಪ್ರೀತಿಸಿದ ರಾಜನ ಜೊತೆಯೇ ಬದುಕುವೆ ಎನ್ನುತ್ತಾಳೆ. ಅವಳ ತಾಯಿಯೂ (ದೇವಲೋಕದ ರಾಣಿ) ಆಕೆಯನ್ನು ಸಮರ್ಥಿಸಿದಾಗ, ದೇವತಾ ರಾಜ ಸುಗಂಧಿನಿಯನ್ನು ಮತ್ತೆ ಭೂಲೋಕಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡುತ್ತಾನೆ. ಭುವನವರ್ಮನಿಗೆ ’ಚಿರಂಜೀವಿತ್ವದ’ ವರವನ್ನೂ ನೀಡುತ್ತಾನೆ. ಆದರೆ ಅವನದ್ದೊಂದು ಶರತ್ತು ಇದೆ. ಪ್ರೀತಿಯು ಮಾಸಿ, ಭೂಲೋಕದ ಸಹವಾಸ ಸಾಕು ಎನಿಸಿ ಆಕೆ ಮರಳಿ ದೇವಲೋಕಕ್ಕೆ ಬಂದರೆ, ಪುನಹ ಆಕೆ ಭೂಲೋಕಕ್ಕೆ ತೆರಳುವಂತಿಲ್ಲ ಎಂಬುದು. ಆ ಶರತ್ತನ್ನು ಮನಸಾರೆ ಒಪ್ಪಿ, ತಾನು ಪ್ರೀತಿಸುವ ರಾಜನಿಗೆ ’ಅಮರತ್ವದ’ ವರ ಸಿಕ್ಕಿದ್ದನ್ನು ಕೇಳಿ, ಸುಗಂಧಿನಿ ಅತ್ಯಂತ ಸಂತಸದಿಂದ ಭೂಲೋಕಕ್ಕೆ ಮರಳಿ, ಭುವನವರ್ಮನ ಜೊತೆ ಸಂಸಾರ ನಡೆಸುತ್ತಾಳೆ.