ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ನೇಹಿತನ ಮನೇಲಿ 4-ವ್ಹೀಲರ್?!

ದಿಲೀಪ ಫೋನ್ ಮಾಡಿದ್ದ.. ನಾನೋ ಅವನೋ ಒಟ್ಟಿಗೆ ದಿನಕ್ಕೊಮ್ಮೆಯಾದರೂ ಸಿಲ್ಲಿ ಸಿಲ್ಲಿ ವಿಷಯಕ್ಕಾದರೂ ಫೋನ್ ಮಾಡ್ತಾನೆ ಇರ್ತೀವಿ.

ಹಾಗೆ ಮಾತಾಡ್ತಾ ಮಾತಾಡ್ತಾ ನನಗೊಂದು ಶಾಕ್ ಕೊಟ್ಟ. ಸಕತ್ ಶಾಕ್ ..

ಲೋಕರ ಮನೇಲಿ ಇವತ್ತು "೪ ವ್ಹೀಲರ್" ....ಅಂದ. ನನಗಂತೂ ಫುಲ್ ಶಾಕ್!!.

ಅಲಾ ಗೌಡ ...ಅಲಾ ಟಗರೂ..  ವಾರಕ್ಕೆ ಹತ್ತದಿನೈದು  ಸರೀನದ್ರೂ  ಫೋನ್ ಮಾಡ್ತಾ ಇರ್ತೀಯ... ನಿನ್ನ ಮದ್ವೆಗೆ ನಾನೇ ಫೋಟೋ ಗ್ರಾಪರ್. ನಿನ್ನ ಎಂಗೇಜ್ಮೆಂಟ್ ಲ್ಲಿ ಓಡಾಡಿದ್ದೇ ನಾನು ಮತ್ತು ದಿಲೀಪ. ನಂಗೆ ಹೇಳಿಲ್ವ ೪ ವ್ಹೀಲರ್ ತಗೊಂಡಿದ್ದು ... ತಡೀ ಮಗನೆ ಫೋನ್ ಮಾಡ್ತೀನಿ .. ಇನ್ನೂ ಏನೇನೋ ಯೋಚನೆಗಳು ಅರ್ದ ಸೆಕೆಂಡುಗಳಲ್ಲಿ ಬಂದು ಹೋದವು.

ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೨

ಐಶ್ವರ್ಯಳಿಗೆ ನನ್ನನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅಂದು ಆಕೆ ಬಹಳ ಮಾತಾಡಿದಳು. ಮಾತಿನಲ್ಲೆಲ್ಲಾ ಸ್ತ್ರೀ ಸ್ವಾತಂತ್ರ, ಸಮಾನತೆ, ಶೋಷಣೆ ಇವುಗಳೇ ತುಂಬಿದ್ದವು. ಸಂಸಾರ ಬಂಧನದಲ್ಲಿದ್ದ ನನಗೆ ಇದು ನಿಜವಾಗಲೂ ಬೋರ್ ಹೊಡೆಸಿತು. ನಾನು ಅವಳಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದಕ್ಕೆ, ನಗುತ್ತಾ "ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಅದು.

ಇದು ಕಾಡಿನ ಮೊಸಳೆ ನಾಡವರ ಪಾಲಾಗಿ ಕಣ್ಣೀರಿಟ್ಟ ಕಥೆ.

ಕಳೆದ ಜನೇವರಿ ೨೫ರ India Today ಸಾಪ್ತಾಹಿಕದಲ್ಲಿ, ಪುಟ ಸಂಖ್ಯೆ ೬೫ ರಲ್ಲಿ, ‘Mangrove Nightmare' ಶೀರ್ಷಿಕೆಯ ಅಡಿಯಲ್ಲಿ ಒರಿಸ್ಸಾದ ಭಿತಾರಕಾನಿಕಾ (ಮೊಸಳೆಗಳ) ರಾಷ್ಟ್ರೀಯ ಉದ್ಯಾನದ ಬಗ್ಗೆ ವಿಸ್ತೃತವಾದ ಲೇಖನವೊಂದು ಪ್ರಕಟಗೊಂಡಿತ್ತು. ಫರ್ಜಾದ್ ಅಹ್ಮದ್ ಅವರ ನುಡಿಚಿತ್ರ ನಿರೂಪಣೆ ಉಪ್ಪು ನೀರಿನ ಮೊಸಳೆಗಳನ್ನು ಓದುಗರ ಮೈಮೇಲೆ ಹತ್ತಿಸಿ, ಇಳಿಸಿದಷ್ಟು ಆಪ್ತವಾಗಿತ್ತು. ಕಾರಣ ಮೊಸಳೆಗಳು ಪ್ರೀತಿಗೆ ಪಾತ್ರವಾಗಬಲ್ಲ ಪ್ರಾಣಿಗಳಲ್ಲ. ನೋಡಿದ ಕೂಡಲೇ ಪ್ರಾಣ ಭಯ ಹುಟ್ಟಿಸಬಲ್ಲ ಕುರೂಪಿ ಜೀವಿಗಳು.

ಆದರೆ ೧೯ನೇ ಶತಮಾನದ ಆದಿಯಿಂದ ಮೊಸಳೆಯ ಚರ್ಮಕ್ಕೆ ಎಲ್ಲಿಲ್ಲದ ಬೇಡಿಕೆ ಹುಟ್ಟಿಕೊಂಡಿತ್ತು. ಇಂದಿಗೂ ಅದು ಅವ್ಯಾಹತವಾಗಿ ಮುಂದು ವರೆದು, ಮೊಸಳೆಗಳ ನಿರಂತರ ಹನನಕ್ಕೆ ಮಾರ್ಗವಾಗಿದೆ. ಕಾರಣ ಕೊಂದವರನ್ನು ಅಷ್ಟು ಸುಲಭವಾಗಿ ಶಿಕ್ಷಿಸುವಂತಿಲ್ಲ. ಕಾರಣ ಅವರು ಅದಕ್ಕೆ ಕೊಡುವ ಸಬೂಬು ‘ಆತ್ಮ ರಕ್ಷಣೆಗಾಗಿ ಕೊಂದೆ’. ಇಂದಿಗೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮೊಸಳೆಯ ಚರ್ಮಕ್ಕೆ ಹಾಗು ಆ ಚರ್ಮದಿಂದ ತಯಾರಿಸಲಾದ ಬೆಲ್ಟ್, ಬೂಟು, ಕೋಟ್, ಹ್ಯಾಟ್ ಹಾಗು ವ್ಯಾನಿಟಿ ಬ್ಯಾಗ್ ಗಳಿಗೆ ಅಪಾರ ಬೇಡಿಕೆ ಇದೆ. ಸಾವಿರಾರು ಮಿಲಿಯನ್ ಡಾಲರ್ ಗಳ ವ್ಯಾಪಾರ ವಹಿವಾಟು ಸಹ ಮೊಸಳೆಯ ಚರ್ಮದ ಮೇಲೆಯೇ ಕುದುರಿದೆ ಎಂದರೆ ಆಶ್ಚರ್ಯವಾಗಬಹುದು.

ನಿನ್ನದೋ ಇಲ್ಲಾ ನನ್ನದೋ???

ಒಬ್ಬ ಮನುಷ್ಯ ತನ್ನ ಕಷ್ಟಗಳ ಸರಮಾಲೆಯಿಂದ ಬಹಳ ಬೇಸತ್ತಿದ್ದನು. ಅವನು ದಿನವು ದೇವರನ್ನು ಬೇಡುತಿರಲು: " ನಾನೇ ಏಕೆ? ಎಲ್ಲರು ಖುಷಿಯಿಂದಿರುವಾಗ ನಾನೊಬ್ಬನೇ ಎಕೆ ಇಷ್ಟು ನರಳುತ್ತಾ ಇದ್ದೀನಿ...?" . ಒಂದು ದಿನ, ತುಂಬ ಸಂಕಟದಿಂದ ದೇವರನ್ನು ಅವನು ಬೇಡಲು - "ಬೇಕಾದರೆ ಬೇರೆಯವರ ಕಷ್ಟವನ್ನು ನನಗೆ ಕೊಡು, ನನ್ನ ಕಷ್ಟಗಳನ್ನು ಮಾತ್ರ ತಗೆದುಕೊಂಡು ಬಿಡು!".

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳು

ಮಧೂರುಗಣೇಶ ಚತುರ್ಥಿಯಂದು ಕರಾವಳಿಯ ಅನೇಕ ಕಡೆ ಒಂದು ಹಾಡು ಕೇಳಿಬರುತ್ತದೆ. ಇದರ ಸಾಹಿತ್ಯ ಸರಿಯಾಗಿ ತಿಳಿದಿಲ್ಲ. ಆ ಹಾಡಿನಲ್ಲಿ ಕೆಳಗಿನ ಚರಣ ಬರುತ್ತದೆ. ಈ ಚರಣದಲ್ಲಿ ಕರಾವಳಿಯ ಪ್ರಸಿದ್ಧ ಗಣಪತಿ ದೇವಾಲಯಗಳ ಹೆಸರುಗಳಿವೆ.

"ಮಧೂರು ಗಣಪತಿ ಶರವು ಗಣಪತಿ ಕುಂಭಾಸಿ ಗಣಪತಿ ಶರಣಂ
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ ಗೋಕರ್ಣ ಗಣಪತಿ ಶರಣಂ"

ಈ ದೇವಸ್ಥಾನಗಳ ವಿಶೇಷತೆಯೆಂದರೆ (ಒಂದೆರಡು ಬಿಟ್ಟು) ಅಪಾರ ಪ್ರಕೃತಿ ಸೌಂದರ್ಯದಿಂದ ಆವರಿಸಿದೆ. ಇಲ್ಲಿ ನಾನು ಸಂಕ್ಷಿಪ್ತ ವಿವರಣೆಯನ್ನು ನೀಡಿದ್ದೇನೆ. ವಿಸ್ತಾರವಾಗಿ ಸಮಯವಿದ್ದಾಗ ಬರೆಯುತ್ತೇನೆ. ಈ ದೇವಸ್ಥಾನಗಳು ಎಷ್ಟು ಪ್ರಸಿದ್ಧಿ ಎಂದರೆ ಕರಾವಳಿಯ ಬಿರುಸಿನ ಮಳೆಗಾಲದ ಮಧ್ಯೆಯೂ ಗಣೇಶ ಚತುರ್ಥಿಯಂದು ಬಹಳ ಜನ ಸೇರುತ್ತಾರೆ. ಗಣಪತಿ ದೇವಸ್ಥಾನ ಎಂದು ಎಲ್ಲೂ ಇಲ್ಲ. ಗಣಪತಿ ಜೊತೆಗೆ ಶಿವನೂ ಇರುವನು. ಹಾಗೆ ಈ ಎಲ್ಲಾ ದೇವಸ್ಥಾನಗಳಿಗೂ ಐತಿಹಾಸಿಕ ಹಿನ್ನೆಲೆ ಇದೆ.

ಸಂಪದಿಗರಿಗೆಲ್ಲ ಮತ್ತೊಬ್ಬ ಹೊಸ ಸಂಪದಿಗಳ ನಮಸ್ಕಾರ!

ಸಂಪದಿಗರಿಗೆಲ್ಲ ಮತ್ತೊಬ್ಬ ಹೊಸ ಸಂಪದಿಗಳ ನಮಸ್ಕಾರ!
ನಾನು ಮೊದಲೇ ಸೇರ್ಪಡೆಯಗಿದ್ದೆ, ಆದರೆ ಪರಿಚಯಿಸಿಕೊಂಡಿರಲಿಲ್ಲ.

ನಾನು ಮೂಲತಃ ಹಾಸನದವಳು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ.
ಕನ್ನಡ ಲೇಖನಗಳನ್ನು ಓದುವುದು ಇಷ್ಟ, ಬರೆಯುವುದರಲ್ಲಿ ಹಿಂದು, ಬಿಡುವಿನ ಸಮಯದಲ್ಲಿ ಕನ್ನಡ ವೆಬ್ಸೈಟ್ ಹುಡುಕುವುದು ಹಾಗು ಲೇಖನಗಳನ್ನು ಓದುವುದೇ ಕೆಲಸ :-)

ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೩ ಯಾವುದು ಸರಿ?

(ಹಿಂದಿನ ಭಾಗ http://www.sampada.net/article/17670)
ಕೊಂಚ ಹೊತ್ತಾದ ಮೇಲೆ ಅವಳ ಅಳು ನಿಂತಿತು

ಹೇಳಲಾರಂಭಿಸಿದಳು

ಜಾಣೆಯಾಗಿರು ನನ್ನ ಮಲ್ಲಿಗೆ-ಭಾಗ ೨

ಹಿಂದಿನ ಭಾಗ http://www.sampada.net/article/17670
"ಶ್ವೇತಾ ನಂಗೆ ತಲೆ ನೋವ್ತಿದೆ ಸ್ವಲ್ಪ ಅಮೃತಾಂಜನ ಹಚ್ತೀಯಾ, ಏನಾದ್ರೂ ಮಾತ್ರ್ ಇದ್ದರೆ ಕೊಡು"ರಾತ್ರಿ ಮಲಗಿದ್ದಾಗ ರೂಮಿಗೆ ಬಂದುಅತ್ತೆ ಕೇಳಿದರು