ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮ್ಮ ಕಂಪ್ಯೂಟರಿನಲ್ಲಿ ಬಳಕೆಯಲ್ಲಿರೋ Port ಗಳಾವುವು

ಲಿನಕ್ಸ್ ನಲ್ಲಿ ತಂತ್ರಾಂಶ ಅಭಿವೃದ್ದಿ ಪಡಿಸುವಾಗ ಕಂಪ್ಯೂಟರಿನಲ್ಲಿ ಯಾವ ಯಾವ Port ಗಳು ಈಗಾಗಲೇ ಬಳಕೆಯಲ್ಲಿವೆ ಅನ್ನೋದನ್ನ ತಿಳಿದುಕೋ ಬೇಕಾಗುತ್ತೆ.

ಸ೦ಪದಕ್ಕೊ೦ದು ದೊಡ್ಡ ಗುಡ್ ಬೈ!!

ನಾನು ಮನುಷ್ಯನ ಒಳಿತಿನಲ್ಲೇ, ಮನುಷ್ಯನ ಆಳವಾದ ನಿರ್ಮಲ ಭಾವನೆಗಳಲ್ಲೇ ಅಚಲ ನ೦ಬಿಕೆಯಿಟ್ಟವನು. ನನ್ನ ಮನದಾಳದ ಅಭಿವ್ಯಕ್ತಿಗೆ ಸ೦ಪದ ಒ೦ದು ಒಳ್ಳೆಯ ಕನ್ನಡಿಯಾಗಬಹುದೆ೦ಬ ಆಸೆಯಿ೦ದ ಸ೦ಪದಕ್ಕೆ ಕಾಲಿರಿಸಿದೆ. ನಿಜಕ್ಕೂ ಸ೦ಪದ ನನ್ನನ್ನು ಸ೦ಪದ್ಭರಿತನನ್ನಾಗಿ ಮಾಡಿದೆ.

ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ

ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ
ಡಾ.ಎಸ್. ಕೆ. ನಟರಾಜ್ , ಕಡಾಕೊಳ್ಳ

ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ

ನೀರನ್ನು ಹಲವು ಬಣ್ಣದ ಮಾತುಗಳಲ್ಲಿ ಹೋಗಳಿದ್ದಾಗಿದೆ, ಅದಕ್ಕೆ ಹಲವು ಉಪಮೆಗಳನ್ನು ನೀಡಿದ್ದಾಗಿದೆ. ನೀರು ಜೀವಜಲ, ಜೀವಸೃಷ್ಟಿಯ ಮೂಲ, ಜೀವನಾಧಾರ ಹೀಗೆ ಸಾಗುತ್ತೆ ಪಟ್ಟಿ. ಆದರೆ, ಇವೆಲ್ಲಕ್ಕಿಂತ ಮಿಗಿಲಾಗಿ ಇಂದು ನಮಗೆ ನೀರು ಮತ್ತು ನೀರಿನ ಸಂರಕ್ಷಣೆ ಸಂಭಂದಿಸಿದ ವಿಷಯಗಳನ್ನು ತಿಳಿದುಕೊಳ್ಳುವುದು, ಒಂದು ಅನಿವಾರ್ಯತೆಯ ಪಟ್ಟಿಯಲ್ಲಿನ ಪ್ರಮುಖ ಕಾರ್ಯಕ್ರಮವಾಗಿ ನೋಡಬೇಕಾಗಿದೆ. ಬರುವ ದಿನಗಳಲ್ಲಿ ನಾವು ನಮ್ಮ ಕ್ಷಣದ, ದಿನದ ಹಾಗು ವರ್ಷದ ಆಧ್ಯಾತ ಪಟ್ಟಿಯಲ್ಲಿ ನೀರನ್ನು ಮೊದಲ ಸ್ಥಾನದಲ್ಲಿ ಚರ್ಚಿಸಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ವೈಜ್ಞಾನಿಕವಾಗಿ ಎನ್ನನ್ನೇ ಸೃಷ್ಟಿಸಿದರೂ ನೀರನ್ನು ಮಾತ್ರ ನಾವು ಸೃಷ್ಟಿಸಲಾರೆವು, ಸೃಷ್ಟಿಸಿದರೂ ಅದೇ ಆತ್ಮವಿಶ್ವಾಸದಲ್ಲಿ ಅದನ್ನು ನಮಗಾಗಿ ಉಪಯೋಗಿಸಲಾರೆವು. ನಮಗೆನಿದ್ದರು ಇಂದು ಪ್ರಕೃತಿ ನೀಡಿದ ವರದಾನವನ್ನೇ ಶೇಕರಿಸಿ, ಸಂರಕ್ಷಿಸಿ, ಸದುಪಯೋಗಪಡಿಸಿಕೊಂಡು ಅದರ ಪುನರ್ಬಳಕೆಯ ಹೊಸ ಮಾರ್ಗಗಳನ್ನು ಅಭಿವೃಧಿಪಡಿಸಿ ನಿತ್ಯದ ಜೀವನಾಧರವನ್ನು ಗೌರವಿಸುವ ಅನಿವಾರ್ಯತೆಯಲ್ಲಿದ್ದೇವೆ.
ಈ ಬರಹದ ಉದ್ದೇಶಗಳನ್ನು ಭಾಗಗಳಾಗಿ ಇಲ್ಲಿಡಲು ಪ್ರಯತ್ನಿಸುತ್ತೇನೆ. ನೀರಿನ ವೈಜ್ಞಾನಿಕ ಮಹತ್ವ, ರಸಾಯನಿಕ ಹೊಂದಾಣಿಕೆ ಹಾಗು ಗುಣಲಕ್ಷಣಗಳು, ನೀರಿನ ವಿವಿಧ ರೂಪಗಳು, ಅದರ ಬಳಕೆ, ನೀರಿನ ಜೀವನ ಚಕ್ರ, ಮಾಲಿನ್ಯ, ಪುನರ್ಬಳಕೆಯ ಪ್ರಸ್ತುತ ವಿಧಾನಗಳು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ನೀರಿನ ಮೇಲಿನ ಸಂಶೋಧನೆಗಳ ಪರಿಚಯಗಳನ್ನು ಈ ಅರ್ಥಪೂರ್ಣ ವೇದಿಕೆಯಲ್ಲಿ ನಾಡಿನವರೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಇದು.

ಸದವಕಾಶ

ದಕ್ಷಿಣ ಆಫ್ರಿಕಾದ ಕಾಡೊ೦ದರಲ್ಲಿ ಬ೦ಗಾರದ ಗಣಿಯ ಪತ್ತೆಯಾಯಿತು. ಕೇಳಬೇಕೇ. ಊರಿಗೆ ಊರೇ ಅಲ್ಲಿಗೆ ದೌಡಾಯಿಸಿತು. ಎಲ್ಲರೂ ಕೈಗೆ ಸಿಕ್ಕಿದಷ್ಟು ಬ೦ಗಾರವನ್ನು ದೋಚಲು ಮುಗಿಬಿದ್ದರು. ಒಬ್ಬ ಹೋದನೆ೦ದು ಮತ್ತೊಬ್ಬ. ಒ೦ದೂರಿನ ಜನರೆಲ್ಲ ಹೋದರೆ೦ದು ಮತ್ತೊ೦ದು ಊರಿನ ಜನರು ಅಲ್ಲಿ ಮುತ್ತಿಗೆ ಹಾಕಿ ಕೈಗೆ ಸಿಕ್ಕ ಬ೦ಗಾರವನ್ನು ಕಿತ್ತುಕೊಳ್ಳುತ್ತಿದ್ದರು.

ರೈತರ ಮೇಲೆ ಪ್ರಮಾಣ ಮಾಡಿದವರು ಮೋಸ ಮಾಡಲಾರರೇ?

ರಾಜಕೀಯದಲ್ಲಿ ಯಾರು
ಯಾರೊಂದಿಗೆ ಬೇಕಾದರೂ
ಮಾಡಿಕೊಳ್ಳುತ್ತಾರೆ ರಾಜಿ

ಸ್ವಾರ್ಥದ ಚಿಂತನೆಯಷ್ಟೇ
ತುಂಬಿಹುದು ದೇಶದ ಭವಿಷ್ಯದ
ಬಗ್ಗೆ ಇಲ್ಲ ಎಳ್ಳಷ್ಟೂ ಕಾಳಜಿ

ನಿನ್ನೆ ತನಕ ಮುಖ ಕಂಡರೆ ಹರಿ
ಹಾಯುತ್ತಿದ್ದವರು ಒಂದಾಗಿದ್ದಾರೆ
ನಗುನಗುತಾ ಇಂದು

ವೈರಿಯ ವೈರಿ ಆದುದಕಷ್ಟೆ ಆತ
ಆಗಿದ್ದಾನೆ ಅಗತ್ಯ ಇಲ್ಲದಿದ್ದರೂ
ಇಂದು ತನ್ನ ಆತ್ಮೀಯ ಬಂಧು

ತುಮಕೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ" ಕಾರ್ಯಕ್ರಮ

ನೀರ ನಿಶ್ಚಿಂತೆ!

ಬರುವ ಭಾನುವಾರ, ಮಾರ್ಚ್ ೧೫, ೨೦೦೯ ರಂದು ತುಮಕೂರಿನಲ್ಲಿ "ನೀರ ನಿಶ್ಚಿಂತೆ" ಕಾರ್ಯಕ್ರಮದ ಮೂರನೇ ಆವೃತ್ತಿ ಆಯೋಜಿಸಲಾಗಿದೆ. ಕಾರ್ಯಕ್ರಮ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ ಕೆಳಗಿನಂತೆ:

೧೦.೩೦ - ೧೧.೩೦ - ಸ್ಥಳೀಯ ಸಮುದಾಯದ ಪರಿಚಯ

೧೧.೩೦ - ೧೨.೩೦ - ಕಂಪ್ಯೂಟರಿನಲ್ಲಿ ಕನ್ನಡ: ಕನ್ನಡದಲ್ಲಿ ಬರೆಯಲು ತಂತ್ರಜ್ಞಾನ

೧೨.೩೦ - ೧.೩೦ - "ನೀರ ನಿಶ್ಚಿಂತೆ"ಯೆಡೆಗೆ ಅರಿವು ಮೂಡಿಸಲು ಅಂತರ್ಜಾಲದ ಬಳಕೆ, ಹೇಗೆ?

ನನ್ನ ಬದುಕಿನ ಅತಿ ಕೆಟ್ಟ ಘಳಿಗೆಗಳು - ಇದಕ್ಕೆ ಪರಿಹಾರ ಇಲ್ಲವೇ??

ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ
ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾರಣ ನಾನೆ ಎಂಬುದೂ ನನಗೆ ಅರಿವಿತ್ತು.

ಚಂದಿರನೇತಕೆ ಓಡುವನಮ್ಮಾ? (ಹೋಳಿ ಹುಣ್ಣಿಮೆಯ ನೆನಪಲ್ಲಿ)

“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.

ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ. ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?

ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.

(ಅ)ತಿಥಿ

ನಿನ್ನೆ ನಮ್ಮ ಅಕ್ಕನ ಮನೆಯಿಂದ ಊಟ ಮಾಡಿ ವಾಪಸ್ ಮನೆಗೆ ಹೋಗ್ತಿದ್ದೆ. ರಾಜಾಜಿನಗರ 2ನೇ ಬ್ಲಾಕ್ ಹತ್ತಿರ ಒಂದು ಬಾರ್ ಇತ್ತು, ಅದರ ಹೆಸರು 'ಅತಿಥಿ ಬಾರ್ ಮತ್ತು ರೆಸ್ಟೋರೆಂಟ್', ಅದನ್ನು ನೋಡಿದಾಗ ಅಲ್ಲಿ ಮನಸ್ಸಿಗೆ ಬಂದದ್ದು ಹೀಗೆ....

ಒಳಗೆ ಹೋಗುವಾಗ ಅವನು ಅತಿಥಿ
ಹೊರಗೆ ಬರುವಾಗ ಅವನ ತಿಥಿ