ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಛೇ! ಇವನೆ೦ಥ ಅಸಭ್ಯ ಮನುಷ್ಯ...

ಅದೊ೦ದು ಏರೋಡ್ರೋಮ್. ಯುವತಿಯೊಬ್ಬಳು ತನ್ನ ಫ್ಲೈಟ್ ನ್ನು ಹಿಡಿಯಲು ಲೌ೦ಜ್ ಗೆ ಬರುತ್ತಾಳೆ. ತನ್ನ ಫ್ಲೈಟ್ ಬರಲು ಇನ್ನೂ ಕೆಲವು ಗ೦ಟೆಗಳು ಇದ್ದಿದ್ದರಿ೦ದ ಸಮಯ ಕಳೆಯಲು ಆಕೆ ಅಲ್ಲಿನ ಅ೦ಗಡಿಯೊ೦ದರಲ್ಲಿ ಒ೦ದು ಪುಸ್ತಕವನ್ನೂ ಹಾಗೆಯೇ ಕುಕಿಯ ಒ೦ದು ಪ್ಯಾಕೆಟ್ ನ್ನು ಖರೀದಿಸಿ ಏರ್ ಪೋರ್ಟ್ ನ ವಿಐಪಿ ಲೌ೦ಜ್ ನತ್ತ ಮರಳುತ್ತಾಳೆ.

ಐಶ್ವರ್ಯ ಮತ್ತು ಆಕೆಯ ಸ್ವಾತಂತ್ರ-ಭಾಗ ೧

ಬಾಗಿಲಿಗೊರಗಿ ನಿಂತಿದ್ದ ಸೌಮ್ಮ್ಯ ದಿಗ್ರ್ಭ್ರಮೆಗೊಳಗಾಗಿದ್ದಳು. ಎದುರಿಗೆ ಅವಿನಾಶ್ ತಪ್ಪಿಸ್ಥತನಂತೆ ತಲೆ ಬಗ್ಗಿಸಿ ನಿಂತಿದ್ದನು. ಹಿಂದಿನ ದಿವಸ ಬಾಲ್ಯ ಗೆಳತಿ ಐಶ್ವರ್ಯಳ ಸಾವು ಅವಳನ್ನು ಕಂಗೆಡಿಸಿತ್ತು. ಸಾವಿನ ಕಾರಣವೂ ಸೌಮ್ಯಳನ್ನು ಜರ್ಜರಿತಗೊಳಿಸಿತ್ತು.

ಡಾರ್ವಿನ್ ನ ವಿಕಾಸವಾದ: ಒಂದು ಕಿರು-ಪರಿಚಯ

[ಈ ಬರಹವನ್ನು ಸಂಪದದ ಲೇಖನ ಒಂದಕ್ಕೆ ಕಮೆಂಟಿನ ರೂಪದಲ್ಲಿ ಮೊದಲು ಬರೆದಿದ್ದೆ. ಇನ್ನು ಹೆಚ್ಚಿನ ಜನರಿಗೆ ತಲುಪಲಿ ಎಂದು ಕೆಲವು ಬದಲಾವಣೆಗಳೊಂದಿಗೆ ಲೇಖನವಾಗಿಸುತ್ತಿದ್ದೇನೆ.]

ವಿಕಾಸವಾದದ ಬಗ್ಗೆ ಜನರಲ್ಲಿ ತಿಳುವಳಿಕೆಗಿಂತ ತಪ್ಪು-ತಿಳುವಳಿಕೆ ಹೆಚ್ಚು ಎಂದರೆ ತಪ್ಪಾಗಲಾರದು. ಇದಕ್ಕೆ ಬಹುಷಃ ವಿಕಾಸವಾದದ ತಿರುಳನ್ನು ಪರಿಣಾಮಕಾರಿಯಾಗಿ ತಿಳಿಸಲು ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ ಕಾರಣವಾಗಿರಬಹುದು. ಅಥವಾ ಮಾಧ್ಯಮಗಳಿಂದ ವಿಕಾಸವಾದದ 'ಮಂಗನಿಂದ ಮಾನವ' ಅನ್ನುವ over-simplification ಕೂಡ ಇರಬಹುದು. ಒಟ್ಟಿನಲ್ಲಿ ವಿಕಾಸವಾದದ ಬಗ್ಗಿನ ಬಹಳಷ್ಟು ಅಪನಂಬಿಕೆಗಳು ಮತ್ತು ಅನುಮಾನಗಳು ವಿಕಾಸವಾದದ ಮೂಲಭೂತ concept ಗಳ ತಿಳುವಳಿಕೆಯ ಅಭಾವದಿಂದ ಉಂಟಾದವು ಅನಿಸುತ್ತದೆ. ಆ ದಿಟ್ಟಿನಲ್ಲಿ ವಿಕಾಸವಾದದ concept ಗಳ ಕಿರುಪರಿಚಯ ಈ ಲೇಖನದ ಉದ್ದೇಶ. ನಿಮ್ಮೆಲ್ಲರ ಪ್ರತಿಕ್ರಿಯೆ, ಅನುಮಾನಗಳಿಗೆ ಸ್ವಾಗತ. 

ಆಂಗ್ಲದೊಳ್ ನಕಾರದ ಪಿಂದಣ ಕಕಾರಂ ನಿಶ್ಶಬ್ದಂ

ಆಂಗ್ಲಭಾಷೆಯಲ್ಲಿ ನಕಾರದ ಹಿಂದಿನ ಕಕಾರವನ್ನು ಉಚ್ಚರಿಸುವುದಿಲ್ಲ. ಉದಾಹರಣೆಗೆ know, kneel, knit ಎಲ್ಲಾ ಉದಾಹರಣೆಯಲ್ಲೂ ಕಕಾರ ನಿಶ್ಶಬ್ದ.

ಬಬ್ಲಿ

ನಿನ್ನೆ ರಾತ್ರಿ ಹನ್ನೊಂದುವರೆಯಲ್ಲಿ ನಮ್ಮ ಮನೆಯ ಲ್ಯಾಂಡ್ ಲೈನ್ ಗೆ ಕರೆ ಬಂತು. ಫೋನ್ ಎತ್ತಿದರೆ ನಮ್ಮ ರಮೇಶ್ ಜೋರಾಗಿ ಅಳ್ತಾ ಇದ್ದಾರೆ.

-" ಏನ್ರಿ ಆಯ್ತು? ಯಾಕೆ ಅಳ್ತಾ ಇದ್ದೀರಿ?"

ಲ್ಯೆಂಗಿಕ ಶೋಷಣೆ ಕುಟುಂಬದಲ್ಲೇ ಯಾಕೆ ?

ಲ್ಯೆಂಗಿಕ ಶೋಷಣೆಯೆಂಬ ಪಿಡುಗು ಕುಟುಂಬದಲ್ಲೇ ಯಾಕೆ ಹೆಚ್ಚು ? ನನ್ನ ಗೆಳೆಯನ ಮನೆಯಲ್ಲಿ ಎಲ್ಲರೂ ತುಂಬಾ ಸಂಪ್ರದಾಯಸ್ಥ ಮನೆತನದವರು, ನನ್ನ ಗೆಳೆಯನ ಹೆಸರು ಸುಮುಖ್, ಅವನಿಗೊಬ್ಬಳು ಅಕ್ಕ, ಮತ್ತು ಸುಮುಖ್ ತಂದೆ - ತಾಯಿ ಅಷ್ಟೆ, ಬಹಳ ವರ್ಷಗಳ ಹಿಂದೆ ಮದುವೆಯಾದ ಸುಮುಖ್ ಅಕ್ಕಾ, ತನ್ನ ಗಂಡನ ಜೊತೆ ತುಂಬಾ ಹೊಂದಿಕೆಯಿಂದಿದ್ದಳು.

ಮದುವೆಯಾಗದೆ, ಪ್ರೀತಿಸುತ್ತಿರುವವರಿಗೆ ಹೀಗೊಂದು ಮಾಹಿತಿ :-)

ತುಂಭಾ ಭದ್ರವಾಗಿ ಅಂಟಿಕೋಬೇಡ, ತುಂಬಾ ಅವಸರದಿಂದ ಬಿಡಬೇಡ - ಇದೇ ಜಯಶಾಲಿ ಪ್ರೇಮದ ರಹಸ್ಯ (ಸ್ಪಾನಿಷ್ ಗಾದೆ)

ಪ್ರೇಮಿಸುವುದು ಹಾಗೂ ಬುದ್ಧಿವಂತನಾಗಿರುವುದು ಎರಡೂ ಒಟ್ಟಿಗೆ ಅಸಾಧ್ಯ (ಸ್ಪೇನ್ ಗಾದೆ)

ಸುಖ ಎಂದರೇನೆಂಬುದು ಮದುವೆ ಆಗುವವರೆಗೆ ನನಗೆ ತಿಳಿದಿರಲಿಲ್ಲ. ನಂತರ ಕಾಲ ಮಿಂಚಿ ಹೋಗಿತ್ತು (ಯಹೂದಿ ಗಾದೆ)

ಕೃಪೆ : ಸುಧಾ

ಹೆಣ್ಣೇ ಹೆಣ್ಣ ಮೆಟ್ಟಿ ನಿಂತಿರಲು!!!

ಸಮಾನರೆಲ್ಲ ಮನುಜರಿಲ್ಲಿ
ಮಹಿಳೆಯರೇ ನಿಮ್ಮನ್ನು
ನೀವೇ ಹಳಿಯದಿರಿ

ಸಮಾನತೆಯ ಕೋರೀ ಕೋರೀ
ಸಮಾನರಲ್ಲ ಎಂದು ನೀವೇ
ಜಗಕೆ ಸಾರದಿರಿ

ಸಮಾನತೆಯ ಬೇಡಿಕೆಯಲ್ಲೇ
ಸಮಾನರಲ್ಲ ಎಂಬುದಕೆ
ಸಮ್ಮತಿ ಇಹುದಲ್ಲವೇ

ಎಲ್ಲ ಒಂದೇ ಎನುವ ಭಾವ
ಇರಲು ಈ ಬೇಡಿಕೆಗಳ ನೀವು
ಮರೆಯಬಹುದಲ್ಲವೇ

ಎಲ್ಲ ರಂಗಗಳಲೂ ನಿಮಗೆ
ಮುಕ್ತ ಅವಕಾಶ ಇರಲು
ಸಾಧಸಿಯೇ ತೋರಿಸಿರಿ