ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಡೋಣ ಬನ್ನಿ ಕನ್ನಡಿಗರೇ ಇಂದು!!!

ಕನ್ನಡದ ಉಳಿವಿಗಾಗಿ ಯಾರೂ ಹೋರಾಡಬೇಕಾಗಿಯೇ ಇಲ್ಲ
ನಮ್ಮ ನಡೆ ನುಡಿಗಳಲ್ಲಿ ಸದಾ ಕನ್ನಡ ಇದ್ದರೆ ಅದುವೇ ಸಾಕಲ್ಲ

ಹೋರಾಟ ಮಾಡಿದವರೆಲ್ಲಾ ಕನ್ನಡವನು ಬಳಸಿದರೆಂದೇನೂ ಇಲ್ಲ
ಕನ್ನಡವ ಬೆಳೆಸಿದವರೆಲ್ಲಾ ಹೋರಾಟಗಾರರಾಗಿದ್ದರೆಂದೇನೂ ಅಲ್ಲ

ಹೋರಾಟ ಹಾರಾಟ ಇವು ಉಳಿಯುತ್ತವೆ ಬರೀ ಬಾಯಿ ಮಾತಾಗಿ
ಹೋರಾಡುವರು ಜನರಿಲ್ಲಿ ಹೆಚ್ಚಾಗಿ ತಮ್ಮ ಹೆಸರಿನ ಪ್ರಸಿದ್ಧಿಗಾಗಿ

ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಬರೆಯಬಹುದು!

ಅಂತೂ ಮುಂಜಾನೆಯಿಂದ ಈ ಗೂಗಲ್ ಕ್ರೋಮ್ ಬಗ್ಗೆ ತಲೆ ಕೆಡೆಸಿಕೊಂಡಿದ್ದಕ್ಕೆ ೫೦% ದಷ್ಥು ಪರಿಹಾರ ಸಿಕ್ತು....... ಗೂಗಲ್ ಕ್ರೋಮ್ ನಲ್ಲೂ ಸಹ ಕನ್ನಡ ಬರೆಯಬಹುದು...... ಹೇಗಂತೀರಾ..... ಬರಹ IME ಮೇಲೆ right click ಮಾಡಿ Language ಮೇಲೆ cursor ಅನ್ನು ಒಯ್ದು "KGP Keyboard" (Kannada Ganaka Parishat Keyboard Layout) ಅನ್ನು ಕ್ಲಿಕ್ಕಿಸಿ, ಈಗ ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಯಾವುದೇ ತೊಂದರೆಯಿಲ್ಲದೇ ಬರೆಯಬಹುದು.

ಜಿ-ಮೇಲ್ ನಲ್ಲಿ, ಕನ್ನಡದಲ್ಲಿ "Random Signature" ಕೊಡೋ ನನ್ನ ಪ್ರಯತ್ನ.


 ಸ್ನೇಹಿತರೇ..

"G-Mail ನಲ್ಲಿ..ಕನ್ನಡ" ದ ಬಗ್ಗೆ ನೀವುಗಳು ಈಗಾಗಲೆ ಓದಿರಬಹುದು..

ಗೊತ್ತಿಲ್ಲದವರಿಗೆ..

ಜಿ-ಮೈಲ್‌ನಲ್ಲಿ ಕನ್ನಡ ಸೆಟ್ಟಿಂಗ್ಸ್

ಬರಲಿದೆ - ಅರೆಪಾರದರ್ಶಕ ಕಾಂಕ್ರೀಟ್

ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಾಮಾಗ್ರಿ ಸಿಮೆಂಟ್. ಸಿಮೆಂಟ್ ಹಾಗೂ ಜಲ್ಲಿಕಲ್ಲಿನ ಮಿಶ್ರಣವೇ ಕಾಂಕ್ರೀಟು. ಒಂದು ವೇಳೆ ಈ ಕಾಂಕ್ರೀಟು ಪಾರದರ್ಶಕವಾಗಿದ್ದಿದ್ದರೆ?

ಹಂಗರಿ ದೇಶದ ಆರನ್ ಲೊಸೊನ್ಸ್ಕಿ ಎಂಬುವರು ಸಿಮೆಂಟಿಗೆ ಹಾಗೂ ಜಲ್ಲಿಕಲ್ಲಿಗೆ ಪರ್ಯಾಯವಾದ ಆದರೆ ಅವುಗಳಷ್ಟೇ ಸುದೃಢವಾದ ಸಾಮಾಗ್ರಿಗಳಿಂದ ಅರೆಪಾರದರ್ಶಕ ಕಾಂಕ್ರೀಟನ್ನು ಸಿದ್ಧಪಡಿಸಿದ್ದಾರೆ. ಲಿಟ್ರಾಕಾನ್ (LiTraCon - light transmitting concrete) ಎಂಬ ಹೆಸರಿನ ಈ ಸಾಮಾಗ್ರಿ ಹೊರಗಿನ ಬೆಳಕಿನ ಅರ್ಧದಷ್ಟನ್ನು ತನ್ಮೂಲಕ ಹಾಯಲು ಸಾಧ್ಯವಾಗುವಂತೆ ನಿರ್ಮಿತವಾಗಿದೆ. ಈ ಕಾಂಕ್ರಿಟನ್ನು ಅವರು ಸುಮಾರು ೨೦೦೧ ರಲ್ಲಿಯೇ ಸಿದ್ಧಪಡಿಸಿದ್ದರೂ ಇನ್ನೂ ಹತ್ತು ಹಲವು ಪರೀಕ್ಷೆಗಳ ಕಾರಣದಿಂದಾಗಿ ಮಾರುಕಟ್ಟೆಗೆ ತರುವಲ್ಲಿ ವಿಳಂಬವಾಗಿದೆ. ಜರ್ಮನಿಯ ಲಿಟ್ರಾಕಾನ್ ಸಂಸ್ಥೆ ಈ ವರ್ಷ ಈ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ನನ್ನ ಪುನರ್ಜನ್ಮ ಹಾಗು ಪೂರ್ವಜನ್ಮ ಸ್ಮರಣೆ

ಶಂಕ್ರಂಗೆ ಇದೇನಾಯ್ತಪ್ಪಾ ? ಸುಮ್ನೆ ಆಟೋ, ಟಾಯ್ಲೆಟ್ಟು ಫೋಟೋ ತೆಕ್ಕೊಂಡು ಇದ್ದೋನು ಸಡನ್ನಾಗಿ ಮರುಜನ್ಮ, ಪೂರ್ವಜನ್ಮ ಸ್ಮರಣೆ ಅಂತಾ ಏನೇನೋ ಮಾತಾಡ್ತಾ ಇದಾನಲ್ಲ ಅನ್ಕೊತಾ ಇದ್ದೀರಾ?

ಪುರಂದರದಾಸರ ಕಾಲದಲ್ಲಿ ಆಗಲೇ ’ಸೂಪ್’ ಇತ್ತೇ ?

ಹಿಂದೊಮ್ಮೆ ಇಂಗ್ಲೀಷಿನ ನೀಟು ಶಬ್ದ ಕನ್ನಡದಲ್ಲಿ ಇದೆ . ಅದೇ ಅರ್ಥದಲ್ಲೇ . ೧೬ ನೇ ಶತಮಾನದ ಪುರಂದರದಾಸರ ರಚನೆಯೊಂದರಲ್ಲೇ ಇದೆ ಅಂತ ಸಂಪದದಲ್ಲಿ ಚರ್ಚೆಯಾಗಿತ್ತು .

ಈಗ ಇದನ್ನು ನೋಡಿ !
'ನಿನ್ನ ನಾಮವೆ ಎನಗೆ ಅಮೃತಾನ್ನವು' ಎಂಬ ಪುರಂದರದಾಸರ ರಚನೆ ಇಲ್ಲಿದೆ .

'Vರ'ನ ಹನಿಗವನಗಳು

ತುಂಟ'ನಲ್ಲ'

ಕಲ್ಲುಸಕ್ಕರೆ ಇವಳ ಗಲ್ಲ
ಕೆನ್ನೆಗಳೆರಡು ರಸಗುಲ್ಲ
ಸೊಂಟವ ಹಿಡಿಯಲು ಬಿಡಲಿಲ್ಲ
ಏಕೆಂದರೆ ನಾನು ಇವಳ ನಲ್ಲ ಅಲ್ಲವಲ್ಲ!!

ಶೂರ್ಪನಖಿ

ಚೆಂದುಳ್ಳಿ ಚೆಲುವೆ ಎಂದು ಹೇಳಿದ್ದಳು
ನನ್ನ ಟೆಲಿಫೋನ್ ಸಖಿ
ಭೇಟಿಯಾದಾಗಲೇ ನನಗೆ ಗೊತ್ತಾಯಿತು
ಅವಳು ಶೂರ್ಪನಖಿ !!

- Vರ ( Venkatesha ರಂಗಯ್ಯ )

ಮತಾಂತರ ತಡೆವ ಯತ್ನದಲ್ಲಿ ನಾನು ಗೆದ್ದೆ !

"ನೇನು ಸಂಡೇ ರಾನು, ಏಮ್ ಬಟ್ಲುಂಡೋ ಈ ಬದ್ದೇ ಈಯಂಡಿ" ಐರನ್ ಹೆಂಗಸು ಹೇಳ್ಖುತ್ತಿದ್ದಳು ನಮ್ಮ ತಾಯಿಯ ಬಳಿ ಅವಳದ್ದು ತೆಲಗು.
ಅಮ್ಮನಿಗೂ ತೆಲಗು ಬರುತ್ತೆ
ಆದರೆ ನಂಗೆ ಅಷ್ಟೊಂದು ಬರಲ್ಲ ಹಾಗಾಗಿ ಸಂಭಾಷಣೆಯನ್ನು ಕನ್ನಡದಲ್ಲೇ ಬರೆಯುತ್ತೇನೆ
"ಯಾಕೆ ಎಲ್ಲಿಗೆ ಹೋಗ್ತಿಯಾ" ಅಮ್ಮ ಕೇಳಿದರು
"ಚರ್ಚ್‌ಗೆ ಹೋಗ್ಬೇಕು"ಎಂದಳು

ನಗೆ ಮಲ್ಲಿಗೆ

ನಗೆ ಮಲ್ಲಿಗೆ

ಶರತ್ಕಾಲ,ಹಿಮದ ಕೌದಿ ಹೊದಿಸಿ
ಭುವಿವ ಮೈ ಹಾಸಿನ ಮೇಲೆಲ್ಲ
ಕೊರೆವ ಚಳಿ ಆವರಿಸಿ
ಬಸಿದು ವೃಕ್ಷಗಳ ಬನಿಯನು
ಎಲೆಯುದಿರಿಹ ರೆಂಬೆ-ಕೊಂಬೆಗಳ
ಬೋಳುವನ ಶೋಭಿಸುವುದು
ಉರಿವ ತಾಪದಲೆ,
ಜಳಪಿಸುವ ರವಿಯ ಕಿರಣಗಳಿಗೆ
ಮೈಯೊಡ್ಡಿ ನಲುಗಿ ನಲಿವುದು ಬನ.

ಮಾಗಿಯಲಿ ಮಾಗಿದೆಲೆಗಳ
ಕೊಂಡಿ ಕಳಚಿ ಜಾರಿದೆಲೆಗಳ
ತಬ್ಬಿಮಣ್ಣು ಪ್ರೀತಿ ಹಬ್ಬಲು