ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸದಾಚಾರಕ್ಕೆ ಯಾಕೆ ಲಿಂಗಭೇಧ?

ಸನಾತನ ಸಂಸ್ಕೃತಿಯ ತವರೂರೆಂದು ಬಣ್ಣಿಸಲ್ಪಡುವ ನಮ್ಮೀ ದೇಶದಲ್ಲಿ ಹೆಣ್ಣಿನ ಮೇಲಿನ ಶೋಷಣೆಗೂ ಕೂಡಾ ಸಂಸ್ಕೃತಿಯಷ್ಟೇ ಪುರಾತನವಾದ ಇತಿಹಾಸವಿದೆ. 'ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ !'ಎಂದು ಹೇಳಿದ ಮನುವಿನ ಮಾತನ್ನು 'ಹೆಣ್ಣಿಗೆ ಸ್ವಾತಂತ್ರ್ಯವಿಲ್ಲ' ಎಂಬುದಾಗಿ ಅರ್ಥ ಮಾಡಿಕೊಂಡಿರುವ 'ನಾವುಗಳು' ಅವಳನ್ನು ಪುರುಷ ಪ್ರಧಾನ ಸಮಾಜದಲ್ಲಿ ದೌರ್ಜನ್ಯಕ್ಕೊಳಪಡಿಸುತ್ತಾ ಬಂದಿದ್ದೇವೆ. ಸ್ತ್ರೀಗೆ ಯಾವಾಗಲೂ ಪುರುಷನು ತಂದೆಯ, ಸಹೋದರನ, ಗಂಡನ ಹಾಗೂ ಮಗನ ರೂಪದಲ್ಲಿ ರಕ್ಷಣೆ ನೀಡಬೇಕೇ ಹೊರತು ಆಕೆ ಹೆಣ್ಣೆಂಬ ಕಾರಣಕ್ಕೆ ಆಕೆಯ ಮೇಲೆ ದಬ್ಬಾಳಿಕೆ ನಡೆಸುವುದು ಯಾವ ನ್ಯಾಯ? ಸ್ತ್ರೀ ಪುರುಷರಿಬ್ಬರೂ ಒಂದೇ ನಾಣ್ಯದ ಮುಖಗಳಂತಿರುವಾಗ ಇವರಿಬ್ಬರ ನಡುವೆ ತಾರತಮ್ಯವೇಕೆ?

ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ, ಸತೀ ಸಹಗಮನ ಪದ್ದತಿ ಮೊದಲಾದ ಪದ್ದತಿಗಳಿಗೆ ಬಲಿಪಶುವಾಗಿದ್ದ ಭಾರತೀಯ ನಾರಿಯು ಇಂದು ಸಮಾನತೆಗಾಗಿ ಹೋರಾಟ ನಡೆಸಿ ಪುರುಷನೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವ ತಾಕತ್ತು ಲಭ್ಯವಾಗಿಸಿಕೊಂಡಿದ್ದ್ದರೂ, ಸಂಸ್ಕೃತಿಯ ನೆಪದಲ್ಲಿ ಆಕೆಯ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಯಾಕೆಂದರೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ಪ್ರಕರಣವೇ ಇದಕ್ಕೆ ಸ್ಪಷ್ಟ ಉದಾಹರಣೆ. ಹೆಣ್ಣಿನ ಮೇಲೆ ದೌರ್ಜನ್ಯ ಶೋಷಣೆಗಳು ಇಂದು ನಿನ್ನೆಯ ಘಟನೆಗಳಲ್ಲ. ಎಳೆ ಶಿಶುವಿನಿಂದ ಹಿಡಿದು ವೃದ್ಧೆಯ ವರೆಗೆ ಹೆಣ್ಣು ಶೋಷಣೆಗೊಳಗಾಗಿದ್ದಾಳೆ, ಶೋಷಣೆಗೊಳಗಾಗುತ್ತಿರುತ್ತಾಳೆ. ಇದಕ್ಕೆಲ್ಲಾ ಕಾರಣವೇನು? ಜಗತ್ತಿನ ಬದಲಾವಣೆಗಳೊಂದಿಗೆ ಭಾರತವೂ ಬದಲಾಗುತ್ತಾ , ಅಭಿವೃದ್ಧಿ ಹೊಂದುತ್ತಾ ಬಂದರೂ ನಾವೆಲ್ಲ ಅಜ್ಜ ನೆಟ್ಟಾಲಕ್ಕೆ ಜೋತು ಬೀಳುವ ಮಂದಿಗಳಂತೆ, ಓಬೀರಾಯನ ಕಾಲದಲ್ಲಿ ನಾವೇ ಸ್ವಯಂ ಸೃಷ್ಟಿಸಿದ ಕಟ್ಟಳೆಗಳಿಗೆ ಬದ್ಧರಾಗುತ್ತಿದ್ದೇವೆ ಅಲ್ಲವೇ?

ಕವಿತೆಯೆಂದರೇನು?

ಕವಿತೆ, ಕೆಲವು ಪದಗಳ ಸಾಲೇ
ಸಾಲಿನ ಕೊನೆಯ ಪ್ರಾಸವೇ
ಪ್ರಾಸದೊಳಗಿನ ಭಾವವೇ
ಭಾವದೊಳಗಿನ ಕಲ್ಪನೆಯೇ
ಕಲ್ಪನೆಗೊಂದು ಚಿಂತನೆಯೇ
ಚಿಂತಣದೊಂದಿನ ವಿಷಯವೇ
ವಿಷಯದ ಹಿಂದಿನ ಘಟನೆಯೇ
ಘಟನೆಗೊಂದು ತರ್ಕವೇ
ತರ್ಕಕ್ಕೆ ನಿಲುಕದ ಸತ್ಯವೇ
ಸತ್ಯದೊಳಗಿನ ಸೌಂದರ್ಯವೇ
ಸೌಂದರ್ಯವೆಂಬ ಕನಸೇ
ಕನಸಿಂದ ದೊರೆತ ಸ್ಪೂರ್ತಿಯೇ
ಸ್ಪೂರ್ತಿಯಿಂದ ಹುಟ್ಟಿದ ಶಿಲ್ಪವೇ

ಒಂದು ಖಾಸ್ ಅನಿಸಿಕೆ - ಸಿಟ್ಟಿಗೇಳದೆ, ಸಿಟ್ಟಿಗೆಬ್ಬಿಸದೇ ಬರೆಯುವ ಬಗ್ಗೆ

ಯಾವುದೇ ವಿಷಯವನ್ನು ಸಮಾಧಾನಚಿತ್ತದಿಂದ, ಸಿಟ್ಟಿಗೇಳದೆ ಕೇಳುವ (ಅಥವಾ ಸಂಪದ ದಲ್ಲಿ ಬರುವ ಬರಹ, ಪ್ರತಿಕ್ರಿಯೆಗಳ ಮಟ್ಟಿಗೆ ಹೇಳುವದಾದರೆ 'ಓದುವ ಅಥವಾ ಬರೆಯುವ ') ಸಾಮರ್ಥ್ಯವುಳ್ಳವರೇ ನಿಜವಾದ ವಿದ್ಯಾವಂತರು.

(ಅಮೆರಿಕದ ಕವಿ ರಾಬರ್ಟ್ ಫ್ರಾಸ್ಟ್ (೧೮೭೪-೧೯೬೩): Education is the ability to listen to almost anything without losing your temper or your self-confidence.)

ಎಲ್ಲಾ ಮಹಿಳಾ ಸಂಪದಿಣಿಯರಿಗೆ......

ಎಲ್ಲಾ ಮಹಿಳಾ ಸಂಪದಿಣಿಯರಿಗೂ

ಮಹಿಳಾ ದಿನದ ಶುಭಾಶಯಗಳು....!

ನಾಳೆ ಮಾತ್ರವಲ್ಲ ಎಲ್ಲ ದಿನವೂ

ನಿಮ್ಮದೇ ಆಗಿರಲಿ.......

ಇದಕ್ಕೇನು ಮಾಡೋದು?

ನೋಡಲಿಕ್ಕೆ ಅವರೂ ಎಲ್ಲರಂತೆಯೇ, ಬಡತನ ಅವರನ್ನು ಈ ಸ್ಥಿತಿಗೆ ದೂಡಿದೆಯೋ ಅಥವಾ ಇದು ಅವರೇ ಆರಿಸಿದ ದಾರಿಯೋ ಅವರೇ ಹೇಳಬೇಕು , ನಿಮಗೆ ಈಗಾಗಲೇ ಗೊತ್ತಾಗ್ತಿರಬೇಕು ನಾನು ಯಾರ ಬಗ್ಗೆ ಹೇಳ್ತಿದ್ದೀನಿ ಅಂತ,

ನನ್ನಿಂದಾಗಿ ಸ್ಕೂಲ್ಗೊಂದಿವ್ಸ ರಜಾ..!!!!!

ಅಂದು ಭಾನುವಾರ.ನಾನೂ ಸಿದ್ದ,ಶಿವ,ರಂಗ್ದಾಮ,ಮೂರ್ತಿ,ಎಲ್ಲಾ ನಮ್ಮೂರಿನ ವಲಕಲ ಬಯಲಿನ ಹುಣಿಸೇಗಿಡಗಳ ಬಳಿ ಗುಳೂರ್ಕೆ ಆಟ ಆಡ್ತಾ ಇದ್ವಿ.ಸಿದ್ದ ಸಿಕ್ಕಿಹಾಕ್ಕೊಂಡಿದ್ದ.ಅವನು ನಮ್ಮನ್ನು ಪತ್ತೆ ಹಚ್ಚಿ ಔಟ್ ಮಾಡ್ಬೇಕಿತ್ತು.ನಾನು ಮೂಲೇಲಿದ್ದ ಮೋಟು ಮರದ ಮೇಲೆ ಕೂತಿದ್ದೆ.ಅಲ್ಲಿಗೆ ಮೇಕೆ ಮೇಯಿಸಲು ಬಂದಿದ್ದ ನಮ್ ಸ್ಕೂಲ್ ಜವಾನ ರಶೀದಣ್ಣ ನನ್ ಕಡೆ ನೋಡಿ"ನಾಳಿಕ್ ಇಸ್ಕೂ

ಡಾ. ರಾಜ್ ಇಲ್ಲಿ ತಪ್ಪಿದ್ದಾರೆಯೇ ?

ಕವಿರತ್ನ ಕಾಳಿದಾಸ ಚಿತ್ರದ "ಮಾಣಿಕ್ಯ ವೀಣಾ ಉಪಲಾಲಯಂತಿ" ಹಾಡನ್ನು ಡಾ.ರಾಜ್ ಹಾಡಿದ್ದಾರೆ. ಸಂಪೂರ್ಣ ಸಂಸ್ಕೃತದಲ್ಲಿರುವ ಈ ಹಾಡನ್ನು ಅಷ್ಟು ಸ್ಪಷ್ಟವಾಗಿ, ಅಮೋಘವಾಗಿ ಹಾಡಿದ್ದಾರೆ.
ಮೊದಲನೆಯ ಚರಣದಲ್ಲಿ
"ಚತುರ್ಭುಜೆ ಚಂದ್ರಕಲಾವತಂಸೆ
ಕುಚೋನ್ನತೆ ಕುಂಕುಮ ..."

ಇಂದಿನಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ... ನೀವು ಬನ್ನಿ

ಪ್ರಿಯ ಸಂಪದಿಗರೇ,

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ "ಕನ್ನಡ ಪುಸ್ತಕ ಪ್ರಾಧಿಕಾರ" ದಿಂದ ಪುಸ್ತಕ ಮೇಳ - ಇಂದಿನಿಂದ (7 ಮಾರ್ಚ್) 10 ಮಾರ್ಚ್ ವರೆಗೆ.... ಬೆಳಿಗ್ಗೆ
10 ರಿಂದ ಸಂಜೆ 8ರ ತನಕ.

ಅಯ್ದ ಪುಸ್ತಕಗಳಿಗೆ ಭಾರಿ ರಿಯಾಯಿತಿಯೂ ಇದೆ... ಮರೆಯದೆ ಹೋಗಿ... :)