ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಾಗೆ ಸುಮ್ಮನೇ ಒಂದು ಪ್ರಶ್ನೆ ?

ನೀವು ಪ್ರೀತಿಸಿದವರು ಬೇರೆ ಯಾರನ್ನಾದರೂ ಮದುವೆಯಾದರೆ, ಅವರ ಮದುವೆಗೆ ಏನು ಉಡುಗೋರೆ ಕೊಡ್ತೀರಾ.......?????

ತಪ್ಪದೇ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಕೊಚ್ಚಿಕೊಂಡು ಹೊದ ಮಳೆ ನೀರಿ ಸಂಗ್ರಹಗಳು.

ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಸಮೂದಯ ಅದರಿತ ಯೋಜನೆಗಳನ್ನು ಹೆಚ್ಚು ರೂಪಿಸುತ್ತದೆ.

ದಿನಬಳಕೆಯಲ್ಲಿ ಕನ್ನಡ ಪದದ ಬದಲು ಆಂಗ್ಲ ಪದ

ನಮ್ಮ ದಿನಬಳಕೆಯಲ್ಲಿ ನಾವು ಕನ್ನಡ ಪದ ಉಪಯೋಗಿಸುವ ಬದಲು ಆಂಗ್ಲ ಪದಗಳನ್ನು ಉಪಯೋಗಿಸಿ ಕನ್ನಡ ಪದಗಳನ್ನು ಕಣ್ಮರೆ ಹೇಗೆ ಮಾಡುತ್ತಿದ್ದೇವೆಂದು ನೋಡೋಣ:

೧. light off ಮಾಡು - "ದೀಪ ಆರಿಸು"
೨. door open ಮಾಡು - "ಬಾಗಿಲನ್ನು ತೆಗೆ"
೩. window ತೆಗಿ - "ಕಿಟಕಿಯನ್ನು ತೆಗಿ"
೪. ಊಟ ready ಇದೆ - "ಊಟ ತಯಾರಾಗಿದೆ"

ವಿನೀತರು ಮತ್ತು ಸೊಕ್ಕುಳ್ಳವರು

ನಿಮ್ಮದು ದೊಡ್ಡ ದೇಶ; ನೀವು ವಿನೀತರಾಗಿರಬೇಕು ಎಂದು ಮುಷರಫ್‍ರವರು ಈಚೆಗೆ ಭಾರತಕ್ಕೆ ಅಪ್ಪಣೆ ಕೊಡಿಸಿದ್ದಾರೆ
ಇದು ಒಂದು ನಿಯಮವನ್ನು ರೂಪಿಸುವಂಥದ್ದು. ಅಂದರೆ
೧. ಉಳ್ಳವರು
೨.ಮುಂದುವರೆದವರು
೩.ಅಭಿವೃದ್ಧಿಹೊಂದಿದ ರಾಷ್ರಗಳು
೪.ವಿಧ್ಯಾಭ್ಯಾಸ ಮಾಡಿದವರು
೫.ಬಹು ಸಂಖ್ಯಾತರು
೬.ಸಬಲರಾದ ಪುರುಷರು

ಫ್ಲೈಯಿಂಗ್ ಸಾಸರ್

ಯು.ಎಫ್.ಓ ಅಂದ್ರೆ unidentified flying object, ಅಪರಿಚಿತ ಹಾರಾಡುವ ವಸ್ತುಗಳು.. ಈ ಯು.ಎಫ್.ಓಗಳು ಆಕಾಶದಲ್ಲಿ ಟೀ ಸಾಸರುಗಳನ್ನ ಒಂದರ ಮೇಲೆ ಒಂದರಂತೆ ಬೋರಲಾಗಿ ಇಟ್ಟಂತೆ ಕಂಡದ್ರಿಂದ ಇವುಗಳಿಗೆ ಫ್ಲೈಯಿಂಗ್ ಸಾಸರ್ ಅಂತ ಕರೆದರು.

ತಟ್ಟೆಯಂತಿರುವ! ಸ್ವಯಂ ಬೆಳಕಿನಿಂದ ಕೂಡಿರುವ! ಅಪರಿಮಿತ ವೇಗದಲ್ಲಿ ಫೈಟರ್ ವಿಮಾನಗಳ ಕಣ್ಣಿಗೇ ಕಾಣದಂತೆ ಮಾಯವಾಗುವ ರೆಕ್ಕೆಗಳೇ ಇಲ್ಲದ ಹಾರುವ ಯಂತ್ರಗಳು!!ಯಾವುದೇ ಯಂತ್ರದ ಶಬ್ಧವೂ ಇಲ್ದೆ ನೆಲದಿಂದ ನೇರವಾಗಿ ಮೇಲಕ್ಕೇರುವ, ಹೊಗೆಯನ್ನೂ ಉಗುಳದೆ ಯಾವುದೇ ರೆಕ್ಕೆಗಳೇ ಇಲ್ಲದೆ ನಿಶ್ಯಭ್ದವಾಗಿ ಆಕಾಶದಲ್ಲಿ ಚಲಿಸುವ, ಅಲ್ಲೇ ನಿಶ್ಚಲವಾಗಿ ನಿಲ್ಲುವ ಮತ್ತು ನಿಂತಲ್ಲೇ ಗಂಟೆಗೆ ಎಂಟರಿಂದ…ಇಪ್ಪತ್ತು ಸಾವಿರ ಮೈಲುಗಳ ವೇಗದಲ್ಲಿ ಇದ್ದಕ್ಕಿದ್ದಂತೆ ಚಲಿಸುವ ಮತ್ತು ಅದೇ ವೇಗದಲ್ಲಿ ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ಹಠಾತ್ತಾಗಿ ದಿಕ್ಕು ಬದಲಿಸುವ ಈ ಯು.ಎಫ್.ಓಗಳು ನಮ್ಮ ಪುರಾಣಗಳ ಮಂತ್ರಚಾಲಿತ ವಿಮಾನಗಳ ಕಲ್ಪನೆಗಳನ್ನೂ ಮೀರಿಸುವಂತಿವೆ!!

ಲಿನಕ್ಸಾಯಣ: ಸಾಮಾನ್ಯ ಕಂಪ್ಯೂಟರ್ ಬಳಕೆದಾರರಿಗೆ ಒಂದು ಗ್ನು/ಲಿನಕ್ಸ್ ಕೈಪಿಡಿ

ಕರ್ತೃ: ಓಂಶಿವಪ್ರಕಾಶ್

ಲಿನಕ್ಸಾಯಣ ಕಂಪ್ಯೂಟರ್ ಬಳಸುವವರಿಗೆ ಗ್ನು/ಲಿನಕ್ಸ್ ಕುರಿತು ಪರಿಚಯ ಮಾಡಿಕೊಡುವ ಸರಳ ಲೇಖನಗಳ ಸರಣಿ. ತೀರ ಸಾಮಾನ್ಯ ಬಳಕೆದಾರರಿಗೂ ಉಪಯೋಗವಾಗುವಂತೆ ಈ ಲೇಖನಗಳ ಸರಣಿಯನ್ನು ಹೆಣೆಯಲಾಗಿದೆ.

ಲೇಖಕರಾದ ಓಂಶಿವಪ್ರಕಾಶ್ ವೃತ್ತಿಯಿಂದ ಕಂಪ್ಯೂಟರ್ ಇಂಜಿನಿಯರ್, ಗ್ನು/ಲಿನಕ್ಸ್ ಇವರ ಪ್ರಮುಖ ಕಾರ್ಯಕ್ಷೇತ್ರ.

ಈಗಾಗಲೇ ಗ್ನು/ಲಿನಕ್ಸ್ ಕುರಿತಾದ 'ಲಿನಕ್ಸಾಯಣ' ಲೇಖನಗಳಿಂದ ಹಲವರಿಗೆ ಉಪಯುಕ್ತ ಮಾಹಿತಿ ತಲುಪಿಸಿರುವ ಈ ಲೇಖಕರ ಸರಣಿ ಪುಸ್ತಕವಾಗಿ ಒಂದೆಡೆ ಲಭ್ಯವಾಗಿಸುವ ಪ್ರಯತ್ನ. 

ಮಹಿಳಾ ದಿನದೊಂದು ಕನಸು..

ಜನಿಸಿದಂದು ಹೆಣ್ಣುಮಗುವೊಂದು
ಯಾರೂ ಚಿಂತೆ, ದು:ಖಕ್ಕೀಡಾಗದಿರಲಿ
ಹೊರೆಯೆಂಬ ಭಾವ ಬೆಳೆಯಗೊಡದೆ
ಸ್ವಾಭಿಮಾನಿಯಾಗಿ ಬೆಳೆಸುವಂತಾಗಲಿ

ಎಲ್ಲರೂ ವಿದ್ಯಾವಂತೆಯರಾಗಲಿ
ಪಡೆದ ವಿದ್ಯೆಯ ಸದುಪಯೋಗವಾಗಲಿ
ಆರ್ಥಿಕ ಸಬಲೀಕರಣವಾಗಲಿ
ಸಾಮಾಜಿಕ ಹೊಣೆ ಹೊರುವಂತಾಗಲಿ

ಮದುವೆ ಮಾರುಕಟ್ಟೆಯಾಗದಿರಲಿ
ದಕ್ಷಿಣೆಗೆ ವರ ಪಡೆವ ವ್ಯಾಪಾರವಾಗದಿರಲಿ