ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವಾಮಿ ಬ್ರಹ್ಮಾನಂದಜೀಯವರ ಉಪನ್ಯಾಸಗಳು

ಕೆಳಗಿನ ಕೊಂಡಿಯನ್ನು ಚಿಟುಕಿಸಿ. ಬೇಕಾದಷ್ಟು MP3ಗಳು ಲಭ್ಯ. ಮಂಕುತಿಮ್ಮನ ಕಗ್ಗ ಕೂಡ ಲಭ್ಯ. ಹಾಗೆಯೇ ಸ್ವಾಮಿ ಬ್ರಹ್ಮಾನಂದಜೀಯವರ ಉಪನ್ಯಾಸಗಳು ಇವೆ.

http://brahmanandaji.blogspot.com/

ಬಿಲ್ ಗೇಟ್ಸ್ ಮತ್ತು ಅನಾಫಿಲಿಸ್ ಸೊಳ್ಳೆ!

ಇಮಾಮ್ ಸಾಬೀಗೂ ಗೋಕುಲಾಷ್ಟಮೀಗೂ ಅದೇನ್ರೀ ಸಂಬಂಧ ಅಂತ ಕೇಳ್ತೀರಾ?

ಐಟಿ ಕ್ಷೇತ್ರದ ಮಹಾನ್ ಸಾಧಕ ಬಿಲ್ ಗೇಟ್ಸ್ಗೂ ಮತ್ತು ಒಂದು ಯ:ಕಷ್ಚಿತ್ ಸೊಳ್ಳೆಗೂ ಸಂಬಂಧ ಕಲ್ಪಿಸೋದು ಇದೆಂಥಾ ತರಲೆ ಕೆಲಸಾ ಅಂತ ಅಂದುಕೋತೀರೇನೋ? ಒಂದು ರೀತಿ ಸಂಬಂಧ ಇದೆ ಅಂತ ಮುಂದೆ ನಿಮಗೇ ವೇದ್ಯವಾಗುತ್ತೆ.

ನಮ್ಮ ಇಂಫೋಸಿಸ್ ನಾರಾಯಣ ಮೂರ್ತಿಗಳ ತರಹಾನೇ ಗೇಟ್ಸ್ ಕೂಡಾ ತಾವೇ ಹುಟ್ಟು ಹಾಕಿದ ಮೈಕ್ರೋಸಾಫ್ಟ್ ಕಂಪನಿಯಿಂದ ನಿವೃತ್ತರಾದದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮ್ಮ ಮೂರ್ತಿಗಳು ಅದೇ ಕಂಪನಿಯ ಚೇರ್ಮನ್ ಮತ್ತು ಚೀಫ್ ಮೆಂಟರ್ ಆಗಿ ಮುಂದುವರೆಯುತ್ತಿರೋದು ಎಲ್ಲರಿಗೂ ತಿಳಿದ ವಿಚಾರವೇ? ಆದರೆ ವಿಶ್ವದ ಅತಿ ಹೆಚ್ಚು ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಈಗೇನು ಮಾಡುತ್ತಿದ್ದಾರೆ ಅಂತ ಅದೆಷ್ಟು ಜನರಿಗೆ ತಿಳಿದಿದೆ?

ಸಾವೆಂಬ ಪರಮಮಿತ್ರ

ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಅಹಿರ್ ಭೈರವ್

ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್ ಗೂ ಸ್ವರಗಳು ಒಂದೇ ಆದರೂ, ಹಾಡುವ ಶೈಲಿಯಲ್ಲಿ ವ್ಯತ್ಯಾಸ ಇದೆ.

ಒಗೆತ

ಒಗೆತ

ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ-

ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ

ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು

ಮೀಯುತ್ತಲೇ ಮಾಯೆಯರಿಯುವ ತಂತ್ರ;

 

(ಆ) ಮರ

ಕುಹೂ ಕುಹೂ... ಕೋಗಿಲೆ
ಹಾಡಿನಲಿ ಮೈ ಮರೆತಿತ್ತು
ಚೈತ್ರ ಮಾಸದ ಗೆಲುವು
ತುಂಬಿ ತುಳುಕಾಡುತಿತ್ತು.

ಕೋಗಿಲೆಯ ಸ್ನೇಹದೊಳು
ನಳನಳಿಸಿ ನಗುತಿತ್ತು
ಅವರಿವರಿಗೆ, ನಡೆದಾಡುವವರಿಗೆ,
ನೆರಳ ಮರವಾಗಿತ್ತು;
ಮಡಿಲ ಮೇಲಿನ ಹುಳಕೆ,
ಬಲೆ ನೇಯ್ವ ಜೇಡಕ್ಕೆ,
ಎಲೆ ಮನೆಯ ಇರುವೆಗೆ,
ಹಾಡು ಇಹ ಮರೆಸುತಿತ್ತು.

ಕಾಲ ಉರುಳುತಲಿತ್ತು
ಶಿಶಿರ ಹೊರಳುತಲಿತ್ತು
ಎಲೆಗಳೆಲ್ಲವೂ ಉದುರಿ

ಶೋಭನಮಹೋತ್ಸವದ ಆಹ್ವಾನ ಪತ್ರಿಕೆ

ಈ ದಿನ ಮಧ್ಯಾನ ಟಿವಿ ೯ ನಲ್ಲಿ ಒ೦ದು ಸುದ್ದಿ ನೋಡಿದೆ. ಆ೦ಧ್ರ ಪ್ರದೇಶದ ಒ೦ದು ಹಳ್ಳಿಯಲ್ಲಿ, ಒ೦ದು ಮದುವೆಯ .... ಅಲ್ಲ ಅಲ್ಲ, ಕ್ಷಮಿಸಿ, ಮೊದಲ ರಾತ್ರಿಯ ಆಹ್ವಾನ ಪತ್ರಿಕೆ - ಶೋಭನ ಮಹೊತ್ಸವದ ಆಹ್ವಾನ ಪತ್ರಿಕೆ. ಮತ್ತು ಮನೆಯ ಹೊರಗೆ ಅತಿ ದೊಡ್ಡದಾದ ಒ೦ದು ಜಾಹೀರಾತಿನ ಫಲಕ. ಅದರಲ್ಲಿ, ಜಗಜಟ್ಟಿಯ೦ತೆ ಮೈ ತೋರಿಸುತ್ತಿರುವ ಒಬ್ಬ ಮನುಷ್ಯ.