ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆಲಸ ಬೇಗ ಮುಗಿಸಿದಾಗ

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದುದರ ಡೀಟೈಲ್ಸ್ ಈಗ ಬೇಕಂತೆ.. ಅದೂ ಸ್ಟಾಟಿಸ್ಟಿಕ್ಸ್ ಸಮೇತ ಬೇಕಂತೆ. ಕಳೆದ ಎರಡು ಗಂಟೆಯಿಂದಾ ಹುಡುಕ್ತಾ ಇದೀನಿ ಆ ಸ್ಕ್ರಿಪ್ಟೇ ಸಿಕ್ತಿಲ್ಲ...

"ರಾಣಿ"

ಸಾಕು ಪ್ರಾಣಿಗಳನ್ನು "ಪ್ರಾಣಿ" ಎಂದು ಉಲ್ಲೇಖಿಸಬಾರದು, "ಪ್ರಾಣಿ" ಎಂದು ಹೇಳ ಹೊರಟರೆ ಎನೋ ಅದರ ನಾಮಾಂಕಿತಕ್ಕೆ ಮಸಿ ಎಳೆದಂತೆ ಮನಸಿಗೆ ಭಾಸವಾಗುತ್ತದೆ. ಅವುಗಳ ಇರುವಿಕೆಯು ಕುಟುಂಬದ ಒಬ್ಬ ಸದಸ್ಯನಿದ್ದಂತೆ.

ಶಂಖದ ತೀರ್ಥ ಸ್ಲಮ್ ಡಾಗು ಮತ್ತು ಮೆಕಾಲೆಯ ಮಿನಿಟ್ಟು !!!

ಕೆಲಸಕ್ಕೆ ಬಾರದ ಸಿನಿಮಾ ಬಗ್ಗೆ ಬರೆಯುತ್ತಾ ಸಮಯ ಹಾಳು ಮಾಡಿಕೊಳ್ಳುವುದು ಬೇಡವೆಂದುಕೊಂಡಿದ್ದೆ. ಆದರೆ ಕೈ ತುರಿಕೆ ತಡೆಯಲಾಗದೇ ಬರೆಯುತ್ತಿದ್ದೇನೆ. ಸ್ಲಂ ಡಾಗ್ ನಲ್ಲಿ ಒಂದು ದೃಶ್ಯದ ಬಗ್ಗೆ ನನಗೆ ಅಸಹನೆಯಿದೆ. ನಾಯಕ ಜಮಾಲ್ ಅಮೆರಿಕನ್ನರನ್ನು ಧೊಬಿ ಘಾಟ್ ನೋಡಲು ಕರೆದುಕೊಂಡು ಹೋಗಿರುತ್ತಾನೆ.

ಕವಿಯಾಗು

ಕವಿಯಾಗು, ಕಾವ್ಯದ ತರಂಗಗಳ ಸೆಲೆಯಾಗು
ಭೋರ್ಗರೆವ ಭಾವಗಳ ನಯ ನಿದರ್ಶಕನಾಗು ||
ರಾಗಗಳ, ರಂಜನೆಯ, ರಸಗಳಾ ನೆಲೆಯಾಗು
ಅರ್ಥಯಿಸೊ ಪದಗಳನು ಬೆಸೆವ ಕುಸುರಿಗನಾಗು || ೧ ||

ಜಗದಲ್ಲಿ ಹರಿದಿರ್ಪ ಹುಚ್ಚು ಹೊಳೆ ತೊರೆಗಳನು
ಚಕ್ರದಲಿ ಸಿಲುಕಿರ್ಪ ಜೀವಜಂತುಗಳನ್ನು ||
ಸಾವಕಾಶದಿ ನಿಂತು, ಸಾವಧಾನಿಸಿ ಕಂಡು
ಸೌಂದರ್ಯ ತೋರ್ಗೊಡಿಸೊ ಪ್ರಕೃತಿಯಾ ಕಣ್ಣಾಗು || ೨ ||

ಸಂಪದ ನೋಡದಿದ್ದರೆ

ಏಕೋ 4 -5 ದಿನದಿಂದ ಬೇಜಾರು ಮೂಡ್ ಆಫ್ ಅಂತಾರಲ್ಲ ಹಾಗೆ. ಯಾಕಪ್ಪ ಅಂದ್ಕೊಂಡ್ರೆ ನಮ್ಮ ಕಂಪ್ಯೂಟರ್ಗೆ ವೈರಸ್ ಹತ್ತಿದೆ. ಸಂಪದ ನೋಡಕ್ಕಾಗ್ತಿಲ್ಲ. ಒಮ್ಮೊಮ್ಮೆ ಪೇಜ್ ಓಪನ್ ಆಗತ್ತೆ ಇಲ್ಲ ಖಾಲಿ ಬಿಳಿ ಪೇಪರ್ ತೋರ್ಸತ್ತೆ ಹೀಗೇ ಆಗಿದೆ. ಪ್ರತಿದಿನ ಸಂಪದ ಓದದಿದ್ದರೆ ನನಗೆ ಯಾವ ಕೆಲ್ಸವೂ ತೋಚೋದಿಲ್ಲ.

ಸೀನನ ಬಾಲ್ಯಲೀಲೆಗಳು

ಮಾಯಕೊ೦ಡದ ಸುಬ್ಬರಾಯರ ಒಬ್ಬನೇ ಮಗ ಸೀನ. ಇವರ ವ೦ಶಕ್ಕೆಲ್ಲಾ ಇವನೊಬ್ಬನೆ ಗ೦ಡು ಸ೦ತಾನ. ಆದ್ದರಿ೦ದಲೇ ಏನೋ ಅಮ್ಮನ ಕಣ್ಮಣಿಯಾಗಿ ಬೆಳೆಯುತ್ತ್ತಿದ್ದ. ಮಗುವಾಗಿದ್ದಾಗಿ೦ದಲೂ ಏನಾದರು ಒ೦ದು ಸಮಸ್ಯೆ ಇವನನ್ನು ಕಾಡುತ್ತಲೇ ಇತ್ತು. ಇವನಿಗೆ ನಾಲಕ್ಕು ವರ್ಷ ಆದಾಗ, ಒಬ್ಬಳು ತ೦ಗಿ ಹುಟ್ಟಿದಳು.

ಆಗ ಡಿ ಡಿ ಒಂದು ಈಗ ನೂರೊಂದು..

ಆಗೆಲ್ಲ ಮನೆಗಳಲ್ಲಿ ಒಂದು ಟಿ.ವಿ, ಒಂದೇ ಚಾನೆಲ್.

ಅದರಲ್ಲಿ ಬರೋ ಕಾರ್ಯಕ್ರಮಗಳಿಗೆ ಕಾತರದಿಂದ ಕಾಯ್ತಿದ್ವಿ, ಕನ್ನಡ ಬರೋಕಿಂತ ಮೊದ್ಲು...

ರಾಮಾಯಣ, ಮಹಾಭಾರತ, ಚಿತ್ರಹಾರ್, ಮೋಗ್ಲಿ, ತೆಹಕಿಕಾತ್, ಮಾಲ್ಗುಡಿ ಡೇಸ್, ಸ್ಟ್ರೀಟ್ ಹಾಕ್, ರಂಗೋಲಿ.

ಆಮೇಲೆ ಕರ್ನಾಟಕ ಪ್ರಾದೇಶಿಕ ಪ್ರಸಾರ ಬಂದ್ಮೇಲೆ...

ಮಾಯಾಮೃಗ, ಗುಡ್ಡದ ಭೂತ, ಚಿತ್ರಮಂಜರಿ, ಭಾನುವಾರದ ಸಂಜೆಯ ಚಲನಚಿತ್ರ.

ಅನಾಮಿಕ ಕವನ

ಪ್ರದ್ಯೋತನನುದ್ಭವಕೆ
ನಾಚಿದಳು ಉಷೆ
ಹೊಂಗಿರಣಗಳಿಳಿದಂತೆ
ಹಾರಿದಳು ನಿಶೆ
ಸ್ವಪ್ನದಿಂ ತಿಳಿದೆದ್ದೆ
ಕಂಡದ್ದು ಕಣ್ಮರೆ
ಈಗ
ನಿಜದಿಂ ಬಂದಂತಾಗಿದೆ
ಸಸ್ಯ ಶ್ಯಾಮಲ ವರ್ಣೆ
ಕತ್ತಲ ಹೆರಳ ಗಾಳಿಗೆ ಬಿಟ್ಟು
ತಿಳಿ ತಿಂಗಳಿನ ನಗುವ ಹೊತ್ತು
ಮಾನಸಲೋಕದಪ್ಸರೆ
ಬಂದಾಳೋ ಅಮ್ಬಂತೆ
ಬಂದಳು ಮಲ್ಲಿಕಾ ಕೃಷ್ಣೆ
**********************************************
************************************************

ಹೇಳು ಕಾಯಬೇಕೇಕೆ ನಾವಿನ್ನು ೩೬೫ ದಿನ?

ಸಖೀ,
ಫೆಬ್ರವರಿ ಹದಿನಾಲ್ಕರಂದು ಹೊಸಬಟ್ಟೆಯ
ತೊಟ್ಟು, ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು
ಅಂಜುತ್ತಾ ನಾಚುತ್ತಾ ಬಂದ ನಿನ್ನ ಒನಪು,

ನಿನ್ನ ಬರಸೆಳೆದು ನಾ ಅಪ್ಪಿಕೊಂಡಾಗ
ನನ್ನ ನಾಸಿಕಗಳ ಒಳಹೊಕ್ಕು ಮುದ ನೀಡಿದ
ಸುಗಂಧ ಮಿಶ್ರಿತ ನಿನ್ನ ಮೈಬೆವರಿನ ಕಂಪು,

ನಿನ್ನ ಹಿಮ್ಮಡಿಗಳನೆತ್ತಿ, ತುದಿಗಾಲಲಿ ನಿಂತು
ನನ್ನ ಕಿವಿಯೊಳಗೆ ಕೇಳಿಯೂ ಕೇಳಿಸದಂತೆ ನೀ