ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅನ್ನವೆಂದರೆ ?

ಅನ್ನಂ ನ ನಿಂದ್ಯಾತ್ | ತದ್ ವ್ರತಂ | ಪ್ರಾಣೋ ವಾ ಅನ್ನಂ |
ಶರೀರಮನ್ನಾದಂ |ಪ್ರಾಣೆ ಶರೀರಂ ಪ್ರತಿಷ್ಠಿತಮ್ |
ಶರೀರೇ ಪ್ರಾಣಃ ಪ್ರತಿಷ್ಠಿತಃ | ತದೇ ತದನ್ನಮನ್ನೇ ಪ್ರತಿಷ್ಠಿತಮ್ |
ಸ ಯ ಏತದನ್ನಮನ್ನೇ ಪ್ರತಿಷ್ಠಿತಮ್ ವೇದ ಪ್ರತಿಷ್ಠತಿ |

ಸ್ತ್ರೀಯರ ಮೇಲಿನ ದಾಳಿಗಳು !

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವೇ? ಮಂಗಳೂರಿನ ಪಬ್ ಗಲಾಟೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಈಗ ಬೆಂಗಳೂರಿನಂತಹ ಮಹಾನಗರದಲ್ಲೂ ಕೂಡ ಹಲವಾರು ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ.

MODREN BHAKTE

ತೆಳ್ಳಗೆ ಬಳುಕುತಿರುವ ದೇಹ
ಚರ್ಮ ಕಂಟಿರುವ ಟೈಟ್ ಜೀನ್ಸು
ಬಿಗಿದುಕೊಂಡಿರುವ ಬ್ರಾಂಡೆಡ್
ಟಾಪ್ ನ ಹುಡುಗಿ ತನ್ನ
ಬಾಯ್ ಫ್ರೆಂಡ್ ನ ಸೊಂಟವನು
ಬಳಸಿ ಬಿಗಿದಿಡಿದು
ಸರ್ರನೆ ನುಗ್ಗುವ ಬೈಕಿನ
ಓಟಕೆ ಅವಳ ನೀಳಕೇಶ
ಗಾಳಿಯಲಿ ತೂರಾಡಲು
ಕಪ್ಪು ಕೂಲಿಂಗ್ ಗ್ಲಾಸ್
ಒಳಗಿನ ಅವಳ ಮಾದಕ
ಕಣ್ಣುಗಳು ದಾರಿ ಬದಿಯ
ದೇವರ ಗುಡಿಯ ಕಂಡೊಡನೆ
ಮನ ಶ್ರದ್ದ ಭಕ್ತಿಯಲೇ
ನಮಿಸಿತು.

ಒಬಾಮ ಬುದ್ದನಾದಾಗ

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣದಿಂದ ಎತ್ತಣ ಸಂಭಂಧವಯ್ಯ....ಎಂಥ ಸೊಗಸು davidickeರ ಆಲೋಚನೆಯೋ....ದೋರಾಲೋಚನೆಯೋ?

Source:http://www.davidicke.com/content/view/18281
ಸಹಾಯ: ಸುಪ್ರೀತ್

ಡಿ.ಎಲ್.ಐ ನಿಂದ ಬುಕ್ ಡೌನ್‍ಲೋಡ್‍ಗೆ ಒಂದು ಸಾಫ್ಟವೇರ್!

ನೀವು ಸಂಪದಕ್ಕೆ ಹೊಸಬರಲ್ಲದಿದ್ದರೆ, http://dli.iiit.ac.in ನಲ್ಲಿ ಟ್ರಿಪಲ್ ಐಟಿಯವರು ಸಾವಿರಾರು ಪುಸ್ತಕಗಳನ್ನು ಆನ್‍ಲೈನ್ ಓದುವದಕ್ಕಾಗಿ ಇಟ್ಟಿರುವದು ನಿಮಗೆ ತಿಳಿದೇ ಇದೆ. ಸುನೀಲ್ ಇದಕೊಂದು ಸಣ್ಣ ಪ್ರೋಗ್ರಮ್ ಬರೆದದ್ದರಿಂದ ಶುರುವಾಗಿ, ರೋಹಿತ್ ಅಜ್ಜಂಪುರ್ ಅವರು ಅದಕ್ಕೊಂದು ಎಗ್ಜೆಕ್ಯುಟೆಬಲ್ ಜಾರ್ ನೀಡಿದ್ದು ಹಲವರಿಗೆ ಗೊತ್ತು.

ಕೆಲವು ಪಿ.ಸಿ.ನಲ್ಲಿ ಜೆ.ಆರ್.ಇ ಇನ್ಸ್’ಸ್ಟಾಲ್ಡ್ ಇರಲ್ಲ. ಹೆಚ್ಚಿನ ಬಳಕೆದಾರರು, ಬಳಸುವ ಓ.ಎಸ್ ಅಂದರೆ ವಿಂಡೋಸ್. ಹಾಗಾಗಿ ಇಸ್ಟಾಲ್‍ ಮಾಡೋದು > ಬಳಸೋದು, ಟೈಪ್‍ನ ಸಾಫ್ಟವೇರ್ ಹೆಚ್ಚಿನವರಿಗೆ ಬಳಸಲು ಸರಳ.

ಡಿ.ಎಲ್.ಐ ನಲ್ಲಿ ಪ್ರತಿಯೊಂದು ಪುಸ್ತಕಕ್ಕೂ ಒಂದು ಬಾರ್ ಕೋಡ್ ಇದೆ. ಈ ಸಾಫ್ಟವೇರ್‌ನಲ್ಲಿ ಬರೀ ಆ ಬಾರ್‌ಕೋಡ್ ಕೊಟ್ಟರೆ ಸಾಕು. ಪುಸ್ತಕವು ಡೌನ್‍ಲೋಡ್ ಆಗಿ, ನೀವು ಸೆಲೆಕ್ಟ್ ಮಾಡಿದ ಫೋಲ್ಡರ್ ನಲ್ಲಿ, ನೀವು ನೀಡಿದ ಫೈಲ್ ಹೆಸರಿನೊಂದಿಗೆ ಪಿ.ಡಿ.ಎಫ್ ರೂಪದಲ್ಲಿ ನಿಮ್ಮ ಪಿ.ಸಿನಲ್ಲಿ ಕುಳಿತುಕೊಳ್ಳುತ್ತದೆ :) ಆನ್‍ಲೈನ್ ಓದೋದಕ್ಕಿಂತ ಇದು ಬೆಟರ್ ಅಲ್ವೇ? ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ರಾಮಾಯಣ : ಸ್ತ್ರೀ ಶೋಷಣೆಯ ಪ್ರತೀಕವೇ ?

ರಾಮಾಯಣವನ್ನು ನೂರಾರು ಕವಿಗಳು ಸಾವಿರಾರು ರೀತಿಯಲ್ಲಿ ಬರೆದಿದ್ದಾರೆ. ಪ್ರತಿ ಕವಿಯ ಬಳಕೆಯಲ್ಲೂ ರಾಮಾಯಣ ಹೊಸ ರೂಪವನ್ನು ಪಡೆದುಕೊಂಡಿದೆ. ಇವಕ್ಕೆಲ್ಲ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ. ಇಲ್ಲಿ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣವನ್ನೇ ಚರ್ಚಿಸುತ್ತೇನೆ.

ಕಂಸೋಲ್ಕೇಳಿದ್ ಪ್ರಶ್ನೆ!

ಮೊನ್ನೆ ಹೀಗೇ ಖುಶ್ಯಾಗ್ಕೆಲ್ಸ್ದಲ್ಲಿ ಮುಳ್ಗಿ ರಾತ್ರಿ ಹನ್ನೊಂದ್ರವರ್ಗೂ ಕೋಡೊಳ್ಗೊಂದ್ ಹಳೇಹುಳ ಹುಡುಕ್ತಾ ಇದ್ದಾಗ, ಇದ್ಕಿದ್ದಂಗೆ ಈ ‌ಪ್ರಶ್ನೆ ತಪಕ್ಕಂತೆದ್ರಿಗ್ಬಂತು! ಏನ್ಪ್ರಶ್ನೇ! ಎರ್ಡ್ನಿಮ್ಷಾ ಹಂಗೇ ಯೋಚ್ನೇ ಮಾಡ್ತಾ ನಿಂತ್ಬಿಡ್ತು ಮನ್ಸೂಂತೀನಿ! :P ಆಗ್ಗೀಚಿದ್ದಿಲ್ಲಿ ಕೆಳ್ಗಿರೋ ಹೈಕು!

ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.)

ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ ಬರೆಯುವುದಕ್ಕೆ ಸ್ವಲ್ಪ ಮುಂಚೆಯೆ ನೋಡಿದ್ದು. ಅದನ್ನು ನೋಡಿಕೊಂಡು ಹೊರಬರುತ್ತ, ಇಂತಹ ಒಳ್ಳೆಯ ಸಿನೆಮಾವನ್ನು "ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು," ಎಂದು ಹೇಳುತ್ತಿರುವವರ ಮನಸ್ಥಿತಿಯವರ ಕುರಿತು ಯೋಚಿಸುತ್ತಿದ್ದೆ. ಈ ಸಿನೆಮಾದ ಬಗ್ಗೆ ಈ ರೀತಿಯ ಆಕ್ಷೇಪಣೆ ಎತ್ತುವವರು ರೋಗಗ್ರಸ್ತ ಮನಸ್ಸಿನವರೂ, ಕೀಳರಿಮೆಯಿಂದ ನರಳುತ್ತಿರುವ ಅಹಂಕಾರಿಗಳೂ, ತಮಗಿಂತ ಕೀಳಾದವರು ತಮ್ಮ ಸೇವೆಯನ್ನು ಮಾಡಲಷ್ಟೆ ಲಾಯಕ್ಕು ಎನ್ನುವ ಮನೋಭಾವದವರೂ ಆಗಿರಲೇಬೇಕು ಎಂಬಂತಹ ಕಟು ಅಭಿಪ್ರಾಯ ನನ್ನಲ್ಲಿ ಸುಳಿಯಿತು.

ಈ ಸಿನೆಮಾದ ಬಗ್ಗೆ ಜನ ಮಾತನಾಡಲು ಆರಂಭಿಸಿದಾಗಿನಿಂದ ಅಂತರ್ಜಾಲದಲ್ಲಿ, ಭಾರತದ ಮಾಧ್ಯಮಗಳಲ್ಲಿ, ಕನ್ನಡದ ಪತ್ರಿಕೆಗಳಲ್ಲಿ ಅದರ ಬಗ್ಗೆ ಬಂದ ವಿಮರ್ಶೆ ಮತ್ತು ಅಭಿಪ್ರ್ರಾಯಗಳನ್ನು ಓದುತ್ತ ಬಂದಿದ್ದೇನೆ. ಯಾವ ಸಮುದಾಯ ಅಥವ ವರ್ಗದ ಭಾರತೀಯರಿಗೆ ವಿದೇಶಗಳಲ್ಲಿ ಅವಕಾಶಗಳಿರುತ್ತವೆಯೊ ಅಥವ ಭಾರತದ ನವ-ಆರ್ಥಿಕ ವ್ಯವಸ್ಥೆಯಲ್ಲಿ ಯಾವ ವರ್ಗಗಳಿಗೆ ಹೆಚ್ಚು ಲಾಭವಾಗುತ್ತದೊ ಅಂತಹವರೆ ಈ ಸಿನೆಮಾ ನಮ್ಮ ದೇಶದ ಮಾನ ಹರಾಜು ಹಾಕುತ್ತಿದೆ ಎಂದು ಬೊಬ್ಬೆಯಿಡುವವರಲ್ಲಿ ಮುಂಚೂಣಿಯಲ್ಲಿರುವವರು. ಸುಲಭವಾಗಿ ಗುರುತಿಸಬಹುದಾದ ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕೆ ಸೇರಿದ ಜನ ಇವರು. ವಾಸ್ತವವನ್ನು ಮುಚ್ಚಿಟ್ಟು ಭಾವೋದ್ರೇಕ ವಿಷಯಗಳ ಮೇಲೆ ಬುಡಕಟ್ಟು ಕಟ್ಟಬಯಸುವ, ಮಧ್ಯಕಾಲೀನ ಯುಗಕ್ಕೆ ಹೋಗಬಯಸುವ ಗುಂಪಿದು. ಇದಕ್ಕೆ ಮುಂಚೆ "ವೈಟ್ ಟೈಗರ್" ಕಾದಂಬರಿ ಭಾರತದ ಮಾನ ಕಳೆಯುತ್ತದೆ ಎಂದು ಟೀಕಿಸಿದ ಗುಂಪೂ ಇದೇನೆ. ಕರ್ನಾಟಕದ ಗೃಹ ಸಚಿವರ ಮಾತನ್ನೆ ನೋಡಿ: