ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕವಿತೆಯ ತಂತು

ಪಲ್ಲವಿ ಸಂಪದದ ಇತಿಹಾಸ ಆಗಿಬಿಟ್ಟಿದ್ದಾರೆ. ಒಂದಷ್ಟು ಒಳ್ಳೆ ಚರ್ಚೆಗಳನ್ನು ಮಾಡಿ, ಲೇಖನಗಳನ್ನು ಬರೆದು, ಫಡಕ್ಕನೆ ಮಿಂಚಿದ್ದ ಅವರು, ಅದೇಕೋ ಇದ್ದಕ್ಕಿದ್ದಂತೆ ಸಂಪದ ಬಿಟ್ಟು ಹೊರನಡೆದರು. ಅವರು ಪ್ರಾರಂಭಿಸಿದ್ದ ’ಕವಿತೆ ಬರೆಯೋಣ್ವ’ ಪೋಸ್ಟನ್ನು ಓದಿದೆ. ಆ ಪೋಸ್ಟಿಗೆ ಬಂದ ಅಷ್ಟು ಕಮೆಂಟುಗಳಲ್ಲಿ ಇದ್ದ ಕವಿತೆಗಳು ನಿಜಕ್ಕು ನನಗೆ ಅಚ್ಚರಿ ಮೂಡಿಸಿತು.

ಸೂರ್ಯಕಾಂತಿ ಏಕೆ ಸೂರ್ಯನೆಡೆಗೇ ಯಾವಾಗಲೂ ಮುಖ ಮಾಡಿರುತ್ತದೆ?

ಶ್ರವಣಿಕಾ ಮುಣಿಗಳ ಆಶ್ರಮದಲ್ಲಿ, ಮುನಿಗಳ ಶಿಶ್ಯಂದಿರು, ನಾರದರಿಗೆ ಒಂದು ಪ್ರಶ್ನೆ ಕೇಳಿದರು, ಸೂರ್ಯಕಾಂತಿಯೇಕೆ ಸೂರ್ಯನೆಡೆಗೆ ಯಾವಾಗಲೂ ಮುಖ ಮಾಡಿರುತ್ತದೆ? ಆಗ ನಾರದ ಮುನಿಗಳು, ಅದರ ಹಿಂದಿನ ಕತೆಯನ್ನು ಹೇಳಿದರು.

೩/೩ ಧೋನಿಗೆ ಸಂಚಿನ ಅರಿವಿತ್ತೇ!?

೩/೩ ರ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲಿನ ಬಾಂಬ್‌ದಾಳಿ ಪ್ರಥಮ ಪುಟದ ಸುದ್ದಿಯಾದಾಗ, ಒಳಪುಟದಲ್ಲಿದ್ದ ಒಂದು ಸಣ್ಣ ಸುದ್ದಿ:

“ನಾಯಕನ ನಿರ್ಧಾರದಿಂದ ಪಾಕ್ ತಂಡ ಪಾರು-
ಲಾಹೋರ್- ತಂಡದ ನಾಯಕನ ಕೊನೆಯ ಕ್ಷಣದ ನಿರ್ಧಾರ ಬದಲಾವಣೆಯಿಂದ ಪಾಕಿಸ್ತಾನ ತಂಡ ಕೂಡ ಉಗ್ರರ ದಾಳಿಗೀಡಾಗುವುದು ತಪ್ಪಿದೆ.

" ಕನ್ನಡ ಚಿತ್ರರಂಗದ ಕಾಯಿಲೆ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?"

ಕನ್ನಡಿಗರ ಬದುಕಿನ ಜತೆ-ಜತೆಗೆ ಹಾಸುಹೊಕ್ಕಾಗಿರುವ ಕನ್ನಡ ಚಿತ್ರೋದ್ಯಮಕ್ಕೆ ಎಪ್ಪತ್ತೈದು ವರ್ಷ ತುಂಬಿದೆ . ಈ ಸಂಭ್ರಮಾಚರಣೆಗೆ ಕಾರಣರಾದ ಕನ್ನಡ ಚಲನಚಿತ್ರೋದ್ಯಮದ ಎಲ್ಲರಿಗೂ ಶುಭ ಹಾರೈಕೆಗಳು. ಸಿನಿಮಾ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲಿ ಒಂದಾಗಿದ್ದು ನಾಡಿನ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವುದಷ್ಟೇ ಅಲ್ಲದೆ ರೂಪಿಸುವುದರಲ್ಲೂ ಪರಿಣಾಮಕಾರಿ.

ಸಂಗಾತಿ

AFFECTION

ಬಿರು ಬಿಸಿಲಿಗೆ ನಾನಾವಿಯಾಗಿ
ಬೆರೆತಿದ್ದೆ ಗಾಳಿಯೊಡನೆ
ಏನು ಗುರಿಯೋ ಎತ್ತ ಪಯಣವೋ
ನಾ ತಿಳಿಯದಾಗಿದ್ದೆ

ಮುಂಜಾನೆಯ ಯಾವ ಹೂವ
ಮುತ್ತಾಗಿದ್ದೆ ನೀನು
ತಂಗಾಳಿಯೊಡನೊಮ್ಮೆ
ಬಂದು ಸೇರಿದ್ದೆ

ಗೊತ್ತೇನು ಗುರಿಯೇನು
ನೀ ನನ್ನೊಡನಿರಲು
ಕನಸೇನು ನನಸೇನು
ಜೊತೆ ಬಾಳುತಿರಲು

ನೀಲಾಕಾಶವ ಮರೆಸಿ

ನಮ್ಮ ಕನ್ನಡ ಚಲನ ಚಿತ್ರರಂಗದ ಅಮೃತ ಮಹೋತ್ಸವ

 

 

ಸಂಪದ ಮಿತ್ರರೇ, ಇದೆ ತಿಂಗಳ ೧ನೆ ತಾರೀಕಿಂದ ಶುರುವಾಗಿ ಮೂರರವರೆಗೆ ನಡೆದ, ನಮ್ಮ ಕನ್ನಡ ಚಲನ ಚಿತ್ರರಂಗದ ೭೫ ನೇ ವರ್ಷದ ಅಮೃತ ಮಹೋತ್ಸವ ವನ್ನು ನೀವು ಸಹಾ ನೇರವಾಗಿ ನೋಡಿರಬಹುದು, ಅಥವಾ ಟಿ ವಿ ಯಲ್ಲೂ ನೋಡಿರಬಹುದು. ಈ ಸುದಿನದ ಸಲುವಾಗಿ ನಾನೂ ಸಹಾ ಕಾತರದಿಂದ ಕಾಯುತ್ತಿದ್ದೆ. ಆ ದಿನ ಭಾನುವಾರ ಆಗಿದ್ದರಿಂದ ನನಗೆ,ಬಿಡುವಿದ್ದುದರಿಂದ,ನನ್ನ ಸ್ನೇಹಿತರಿಬ್ಬರ ಜೊತೆ ಈ ಸಮಾರಂಭಕ್ಕೆ ಸಾಕ್ಷಿಯಾಗಲು ಹೋದೆ. ನಾವು ಸ್ಥಳ ತಲುಪಿದಾಗ , ಅರಮನೆ ಮೈದಾನದಲ್ಲಿ ಅಸ್ಟೊಂದು ಜನರಿರಲಿಲ್ಲ, ಆಗ ಸಮಯ ೩.೫೦ ಆಸು ಪಾಸು.