ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆಲವು ತಿಥಿಗಳ ತದ್ಭವಗಳು

ಪ್ರತಿಪದ್=ಪಾಡ್ಯ (ಪಾಡ್ಯಮಿ) ಮೊದಲ ದಿನ
ದ್ವಿತೀಯಾ=ಬಿದಿಗೆ ಎರಡನೆಯ ದಿನ
ತೃತೀಯಾ=ತದಿಗೆ ಮೂಱನೆಯ ದಿನ
ಚತುರ್ಥೀ=ಚೌತಿ ನಾಲ್ಕನೆಯ ದಿನ
ಪಂಚಮಿ ಐದನೆಯ ದಿನ
ಷಷ್ಠೀ=ಚಟ್ಟಿ, ಆಱನೆಯ ದಿನ
ಸಪ್ತಮೀ=ಸತ್ತವೆ, ಏೞನೆಯ ದಿನ
ಅಷ್ಟಮೀ=ಅಟ್ಟವೆ, ಎಂಟನೆಯ ದಿನ
ನವಮೀ=ನೌಮಿ, ನಾಮಿ, ಒಂಬತ್ತನೆಯ ದಿನ
ದಶಮೀ=ದಸವೆ, ಹತ್ತನೆಯ ದಿನ
ಏಕಾದಶಿ, ಹನ್ನೊಂದನೆಯ ದಿನ

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ.  ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗಂಟ್ಕೊಂಡಿರತ್ತಲ್ಲ ಅಂತ ನನಗನಿಸ್ತು. ಅದಕ್ಕೇ ಅವರನ್ನ ಹಾಗೇ ಕೇಳೂ ಬಿಟ್ಟೆ. 

ಅಲೆಮಾರಿ

ಸಂವಹನ ಕಾವ್ಯ ೨೦೦೮ ಈ ಕವನ ಸಂಕಲನದಲಿ ಪ್ರಕಟಗೊಂಡಿರುವ
ನನ್ನದೊಂದು ಕವನ ನಿಮ್ಮೊದಿಗೆ..............................ಸ್ನೇಹಿತರೆ

ಅಲೆಮಾರಿ

ಪಯಣಿಗನ ಆಲಂಗಿಸುವ
ತವಕದಿ ಮೈಚೆಲ್ಲಿರುವ
ಅಂತ್ಯವಿಲ್ಲದ ಹಾದಿ
ತಬ್ಬುವ ನೆಲೆಯ
ಹುಡುಕಾಟದಲಿ ಕಳೆದುಹೋಗಿರುವ
ಅಲೆಮಾರಿಯು ನಾ........
ದಾರಿ,ಹೆದ್ದಾರಿ,ಕಾಡುಡಾರಿ
ಕಾಲುದಾರಿ;ಗಮ್ಯ ಅಗಮ್ಯ
ಅರಿವಿಲ್ಲದ ಜೀವನದ ದಾರಿ

ನಿನ್ನ ಹೆಸರ ಕರೆವುದು.....

ಸಂಜೆಯ ಗೋಧುಳಿಯಲಿ
ಕೆಂಬಣ್ಣದ ರಶ್ಮಿಯ ಮಸುಕಿನಲಿ
ನೀ ಹೇಳದೆ ಉಳಿಸಿ ಹೋದ
ಮಾತುಗಳು ಮನದಲಿ ಹೆಪ್ಪುಗಟ್ಟಿ
ಆಳದಲಿ ಮಡುಗಟ್ಟಿದ ನಿನ್ನೊಲವ
ಭಾವಗಳು ಕೆದಕಿ ಎದೆಯ ಕೊಳವ
ನೋವಿನಲೆಗಳಲೆಳುವ ಕಲರವವು
ಕರೆವುದು ನಿನ್ನ ಹೆಸರ ಮತ್ತೆ ಮತ್ತೆ.

ನೀ ಬೆನ್ನ ತಿರುಗಿ ನಡೆದ ಹಾದಿಯ
ಮೇಲಣ ಹೆಜ್ಜೆಯ ಗುರುತಿಗೆ
ಮಾತ್ರ ತಿಳಿವುಂಟು ಮತ್ತೆ ಕೇಳದು
ಈ ಹೆಜ್ಜೆ ಸಪ್ಪಳ:

ಧಾರವಾಡದ ಮುಗದಕ್ಕೆ ‘ಪಕ್ಷಿ ಪ್ರಾಮುಖ್ಯ ಪ್ರದೇಶ’ ಎಂಬ ಮನ್ನಣೆ ಈ ಪಕ್ಷಿಯಿಂದ ದೊರಕೀತೇ?

ಡಾ. ಸಲೀಂ ಅಲಿ. ಭಾರತ ಕಂಡ, ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿ ಶಾಸ್ತ್ರಜ್ಞ. ಅವರು ಜನ್ಮಕೊಟ್ಟ ಸಂಸ್ಥೆಯ ಹೆಸರು ಬಾಂಬೆ ನ್ಯಾಶನಲ್ ಹಿಸ್ಟರಿ ಸೊಸಾಯಿಟಿ (ಬಿಎನ್ ಎಚ್ ಎಸ್). ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡ ಸಂಸ್ಥೆ ಅದು.

ಕಣ್ಣು-ನೀರು

ದೇವರೂ ಕೆಲವೊಮ್ಮೆ ಕಟುಕನಾಗಿ,

ಕಣ್ಣನ್ನೇ ಕಿತ್ತುಕೊಂಡರೂ,

ಕಣ್ಣೀರನ್ನೆಂದೂ ಕಸಿಯಲಾರ.

 

ನನ್ನಿಂದ ದೂರಾಗಿಯೂ ಅಳದಿರು

ಎಂದು ಕಣ್ಣೀರನ್ನೇ ಕಸಿಯುವಸ್ಟೇಕೆ

ನೀ ಕಠಿಣಳಾದೆ?!

 

ಮಾಹಿತಿ: ಕುರುಡನೂ ಅಳುವಾಗ ಕಣ್ಣೀರು ಸುರಿಯುತ್ತದೆ!

ಮಿಸ್ಸಿಂಗ್ ಇನ್ ಯಾಕ್ಶನ್ (ಎಮ್. ಐ. ಏ.)

ಸಂಪದದಲ್ಲಿ ಕೆಲ ಮಿತ್ರರು ಮಿಸ್ ಆಗ್ತಿದ್ದಾರಲ್ಲ, ಇನ್ ಯಾಕ್ಶನ್ ಅಂದ್ರೆ ನನ್ನ ಅರ್ಥದಲ್ಲಿ ಅವರವರ "ಬರವಣಿಗೆ" ಯಲ್ಲಿ (ಅದೂ ಒಂದು ಯಾಕ್ಶನ್ ಅಲ್ವಾ?)
ನನಗೆ ತೋರಿದಂತೆ..........

ಸವಡಿಯವರು.......ಅವರ ಲೇಖನದೊಂದಿಗೆ ಕಾಣ್ತಾ ಇಲ್ಲ,
ಫಾಲಚಂದ್ರ ಅವರು ಅವರ ಚಿತ್ರಗಳೊಂದಿಗೆ ಕಾಣ್ತಾ ಇಲ್ಲ,
ಕಲ್ಪನಾ ಅವರೂ ಕಾಣ್ತಾ ಇಲ್ಲ,
ಸವಿತಾ ಅವರು ಈಚೆಗೆ ಕಾಣ್ತಾ ಇಲ್ಲ,

ಪ್ರಕೃತಿ

ನಾ ಬೇಡಿದೆ
ಜೀವನದಾ ಬಳ್ಳಿಯು ಸೊರಗುತಿರುವಾಗ
ನೀರಿಲ್ಲದೆ ತಾ ಒಣಗುತಿರುವಾಗ
ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ
ಚಿಗುರುವ ಚೈತನ್ಯ ತುಂಬುವ
ಸುಧೆಯಾಗು ನೀನು, ಮಳೆಯಾಗು ನೀನು ……

ನಿರಾಸೆಯ ಗವಿಯ ನಾ ಹೊಕ್ಕಿರುವಾಗ
ಕತ್ತಲ ಭೀತಿಯಿಂದ ತತ್ತರಿಸಿರುವಾಗ
ಭಯಾನಕ ಕಗ್ಗತ್ತಲ ಕೊಂದು
ಬಾಳ ದಾರಿಯ ತೋರುವ
ಆಶಾಕಿರಣವಾಗು ನೀನು, ಬೆಳಕಾಗು ನೀನು…….

ಕಷ್ಟಗಳ ಚಳಿಯಲ್ಲಿ ನಾ ನಡುಗಿರುವಾಗ
ದುಷ್ಟರ ಅಟ್ಟಹಾಸದೆದುರು ಕಂಗೆಟ್ಟಿರುವಾಗ
ಚಳಿಯ ಮಾರುತಗಳ ಎದುರಿಸಿ
ದುಷ್ಟರ ಹಾದಿಯನು ದುರ್ಗಮಗೊಳಿಸುವ
ತಡೆಯಾಗು ನೀನು, ಹೆಬ್ಬಂಡೆಯಾಗು ನೀನು…….

ಹುಡುಗಿಯರೇ ಹುಡುಗರನ್ನು ಪಟಾಯಿಸಬೇಕೆ? ಇಲ್ಲಿ ನೋಡಿ

ಯಾವತ್ತೋ ಪಲ್ಲವಿ ಎನ್ನುವರೊಬ್ಬರು ಹುಡುಗರ ಗಮನ ಸೆಳೆಯಲು ಏನು ಮಾಡಬೇಕು ಎಂದು ಕೇಳಿದ್ದುದನ್ನು ಇಂದು ಓದಿದೆ
ಅವರಿಗೆ ಹಾಗು ಅವರಂತಹ ಮತ್ತೂ ಹಲವರಿಗಾಗಿ
ಯಾವ ಹುಡುಗನನ್ನು ಪಟಾಯಿಸಬೇಕೋ ಅವನ ದಿನಚರಿ ಗಮನಿಸಿ ನಂತರ ಇವುಗಳನ್ನು ಜೊತೆಗೆ (ಅವನನ್ನೂ)ಫಾಲೋ ಮಾಡಿ

ಮೊದಲ ಹೆಜ್ಜೆ ಹೀಗೆ??

ಒಂದು ತಿಂಗಳ ಹಿಂದೆ ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ !!
ಇಲ್ಲೇ ಹಾದಿಯಲ್ಲಿ ನಡೆಯುತ್ತಿದ್ದಾಗ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದೆ ,
ಮರವೋ ಕಂಬವೋ ತಿಳಿಯಲಿಲ್ಲ ....
ಈಗ ನೆಲದ ಮೇಲೆ ನಡೆಯುವುದು ಕಲಿಯುತ್ತಿದ್ದೇನೆ !!

ಈಶ್ವರ ಭಟ್ "ಕಿರಣ"