ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒತ್ತಾಕ್ಷರಗಳಿಗೆ ಯುನಿಕೋಡ್ ಏನು?

""ಕೀ = OC95 + OCC4""

ಇದು ಸರಿ ಇದೆಯಾ?

ಒತ್ತಾಕ್ಷರಗಳಿಗೆ ಯುನಿಕೋಡ್ ಇದೆಯೇ?

"ಒತ್ತಾಕ್ಷರ" - ಈ ಪದ ಯುನಿಕೋಡ್ ನಲ್ಲಿ ಹೇಗೆ?

ದಯವಿಟ್ಟು ತಿಳಿಸಿ,

ಆ ಹಾಡು

ಯಾವುದೇ ವ್ಯಕ್ತಿ ಯನ್ನು ಆತ ಸತ್ತ ಮೇಲೆ ಗುರುತಿಸುವುದು ಅವ ಮಾಡಿದ ಕೆಲಸ ಹೊಗಳುವುದು ನಮ್ಮ ಭಾರತದೇಶ ಪಾಲಿಸಿಕೊಂಡು ಬಂದ ಒಂದು ಸಂಪ್ರದಾಯ. ಆದರೆ ಕೆಲವು ಕಲಾವಿದರಿಗೆ ಆ ಭಾಗ್ಯ ಸಹ ಸಿಗುವುದಿಲ್ಲ ಉದಾಹರಣೆಗೆ ಮೊನ್ನೆ ತೀರಿಕೊಂಡ ಸುಲೋಚನ ಅವರ ವಿಷಯ ತಗೊಳ್ಳಿ. ನಮ್ಮ ಕನ್ನಡ ಭಾಷೆಗೆ

ವಿರಾಗಿಯ ಸ್ವಗತ!

ಕೂಡುತಿದೆ ಅಂತರ
ನಿನ್ನೆ - ಇಂದಿನ ನಡುವೆ.

ಕಳೆಯುತಿದೆ ಅಂತರ
ಇಂದು - ನಾಳಿನ ನಡುವೆ.

ವರುಷಗಳು ನಿಮಿಷಗಳಂತೆ
ಉರುಳುತಿಹುದು ನನ್ನ ಬಾಳಿನಲಿ;

ಕಳೆದ ದಿನಗಳೇ ಹೆಚ್ಚು
ಕಳೆಯಲಿರುವುದಿನ್ನು ಕಡಿಮೆ
ನನ್ನ ಬಾಳಿನಲಿ.

ಮುದುಕನಾಗಿಲ್ಲ ನಾನು
ಆದರೂ, ಮುಗಿದುಹೋಗಿದೆ
ಎಲ್ಲವೂ ಎನ್ನುವ ಭಾವನೆ
ನನ್ನ ಮನದಲ್ಲಿ.

ಯಾವುದನ್ನೂ ಸಾಧಿಸಿಲ್ಲ ನಾನು,
ಆದರೂ, ಇನ್ನೇನನ್ನೂ

ಕವಿಗಳೇ ಬರುವಿರಾ ನೀವು?

ಅಪ್ಪ ಹಾಕಿದ್ದ ಆ ಮರದ ನೆರಳಲ್ಲಿ

ಅದೆಷ್ಟು ಹಾಯಾಗಿ ಮಲಗಿದ್ದೆ ನಾನು!

ಹಣ್ಣು ಕಾಯ್ಗಳ ತಿಂದು

ಚಿಲಿಪಿಲಿ ಗುಟ್ಟುತ್ತಾ 

ನಲಿವ ಹಕ್ಕಿಗಳನ್ನು ಮರೆಯಲೇನು?

 

ಚೈತ್ರದಾ ಆಚಿಗುರು

ಘಮಘಮಿಸುವಾ ಹೂವು

ರುಚಿ ರುಚಿಯಾ ಹಣ್ಣು

ಇನ್ನು ಸಿಗುವುದೇನು?

 

ಚೈತ್ರಬಂದರೂ ಇಂದು

ಚಿಗುರಲೊಲ್ಲದು ಏಕೋ

ಅನಿಸಿಕೆ

ಒಮ್ಮೊಮ್ಮೆ (ಒಮ್ಮೊಮ್ಮೆ ಏನು? ಹಲವಾರು ಬಾರಿ!) ಅನ್ನಿಸುತ್ತೆ ನಾನು ಸಂಪದಕ್ಕೆ / ಬ್ಲಾಗು ಲೋಕಕ್ಕೆ addict ಆಗಿದ್ದೇನೋ ಅಂತ. ಹಲವಾರು ಬಾರಿ ಈ ಪ್ರತಿಕ್ರಿಯೆಗಳ ಸುಳಿಯಲ್ಲಿ ಸಿಲುಕಿ ನನ್ನ ಕೆಲಸವನ್ನೇ ಮುಂದಕ್ಕೆ ಹಾಕಿದ್ದೇನೆ.

ನನ್ನ ಕೆಲಸದ ಕಡೆಯಿಂದ ತುಂಬಾ ಸುಲಭವಾಗಿ "distract" ಮಾಡುವ ತಾಕತ್ತು ಈ ಸಂಪದದ ಬ್ಲಾಗುಗಳಿಗೆ ಪ್ರತಿಕ್ರಿಯೆಗಳಿಗೆ ಇದೆ.

ಹೃದಯದಲ್ಲಿರುವೆ ನೀನು

ಈ ಜಗತ್ತೇ ಅಂದುಕೊಂಡಿದೆ
ನಾನಿನ್ನ ಮರೆತಿರುವೆನೆಂದು!
ಅರಿವಿಲ್ಲ ಜಗಕೆ ಈ ಹೃದಯದಲಿ
ನಿನ್ನನ್ನು ಬಚ್ಚಿಟ್ಟುಕೊಂಡಿರುವೆನೆಂದು
ನೀ ನನ್ನ ನಗುವಿನಲ್ಲಿರುವೆಯೆಂದು
ನನ್ನ ಈ ಕಣ್ಣುಗಳ ಕಾಂತಿಯಲಿ
ಯಾರೂ ನಿನ್ನನ್ನು ನೋಡಬಾರದೆಂದು
ರೆಪ್ಪೆಗಳಲ್ಲಿ ಮುಚ್ಚಿಟ್ಟುಕೊಂಡಿರುವೆನೆಂದು
ತಿಳಿದಿದೆ ಜಗತ್ತು ನೀನಿಲ್ಲದೆ
ನನ್ನ ಕಣ್ಣುಗಳು ಮುಚ್ಚಿದೆಯೆಂದು!

ಕಾಫೀ....

ಕಾಫಿ, ಹೆಸರು ಕೇಳಿದ್ರೆ ಸಾಕು ಮೈಯೆಲ್ಲ ರೋಮಾಂಚನ ಆಗತ್ತೆ, ಇನ್ನೇನಾದ್ರು ಕೈಗೆ ಸಿಕ್ಕಿಬಿಟ್ರೆ....

ಚಿಕ್ಕಮಗಳೂರು, ಕಾಫಿಯ ಕಣಿವೆ, ಆ ಕಣಿವೆಯಲ್ಲಿ ನಮ್ಮದೊಂದು ಪುಟ್ಟ ಹಳ್ಳಿ.

ಪೇಟೆಯ ಜಂಜಡಗಳಿಂದ ತುಂಬಾ ದೂರದಲ್ಲಿರುವ ಹಳ್ಳಿ, 60 ಮನೆಗಳು, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಕರು (ಅಣ್ಣ, ತಮ್ಮ, ದೊಡ್ಡಪ್ಪ, ದೊಡ್ಡಮ್ಮ,ಚಿಕ್ಕಪ್ಪ, ಚಿಕ್ಕಮ್ಮ....).

ಹನ್ನೆರಡು ಜ್ಯೋತಿರ್ಲಿಂಗಗಳು - ೭ [ಹಿಮಾಲಯದ ಕೇದಾರನಾಥ].

ಹಿಮಾಲಯದ ಕೇದಾರನಾಥ.

ಎಲ್ಲಿದೆ?
ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ.

ಸ್ಥಳ ಪುರಾಣ.
ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ.
ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ.
ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ.
ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ.
ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ.

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ಕಳೆದೊಂದೆರಡು ದಶಕಗಳಲ್ಲಿ ‘ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಡಬೇಕು’ ಎಂಬ ಕೂಗು ಕೇಳಿಬರುತ್ತಿರುವುದು ಸರ್ವವೇದ್ಯ. ‘ಹೌದು, ದೂರವಿಡಬೇಕು, ಅವರು ಅಲ್ಲಿಗೆ ಸಲ್ಲದವರು’ ಮತ್ತು ‘ಯಾಕೆ ದೂರವಿಡಬೇಕು? ಅವರು ಕನ್ನಡಿಗರ ಪ್ರತಿನಿಧಿಗಳಲ್ಲವೇ?’ ಎಂಬಿತ್ಯಾದಿ ಉತ್ತರಗಳು ಸಹಜವಾಗಿಯೇ ಕೇಳಿಬಂದವು. ಈ ಬಾರಿ ಚಿತ್ರದುರ್ಗದಲ್ಲಿ ನಡೆದ ೭೫ನೆಯ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ‘ಸಾಹಿತ್ಯಕ್ಕೆ ಸರಕಾರದಿಂದೇನೂ ಆಗಬೇಕಾಗಿಲ್ಲ; ರಾಜಾಶ್ರಯ ಬೇಕಾಗಿಲ್ಲ; ರಾಜಕಾರಣಿಗಳನ್ನು, ಮಠಾಧೀಶರನ್ನು ದೂರವಿಡಿ’ ಎಂದು ಅಬ್ಬರಿಸಿದ್ದು ವಿಶೇಷವಾಗಿತ್ತು.

ಯಾರ್‍ಯಾರು ಯಾವ್ಯಾವ ವೇದಿಕೆಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ‘ಸಭಾಲಕ್ಷಣ’ದ, ಔಚಿತ್ಯದ ಪ್ರಶ್ನೆ ಇದಾಗಿದ್ದರೆ ವಿಷಯ ಇಷ್ಟು ಕಗ್ಗಂಟಾಗುತ್ತಿರಲಿಲ್ಲ. ಹಾಗಿದ್ದಲ್ಲಿ ರಾಜಕಾರಣಿಗಳು ತಾವಾಗಿಯೇ ದೂರವಿರುತ್ತಿದ್ದರು. (ಮಹಾರಾಷ್ಟ್ರದಲ್ಲಿ ಅಂತಹ ವಿದ್ಯಮಾನವಿದೆ; ಅದರರ್ಥ ಅಲ್ಲಿನ ರಾಜಕಾರಣಿಗಳು ನಮ್ಮ ರಾಜಕಾರಣಿಗಳಿಗಿಂತ ಉತ್ತಮರೆಂದಲ್ಲ.) ಆದರೆ ನಮ್ಮಲ್ಲಿ ಅದು ವೇದಿಕೆಯ ಔಚಿತ್ಯದ ವಿಷಯವಾಗಿಲ್ಲ; ಬದಲಿಗೆ ರಾಜಕಾರಣಿಗಳೆಂಬ ಅವಹೇಳನ, ಮತ್ಸರ, ತಾತ್ಸಾರವೇ ಮುಖ್ಯ ಕಾರಣವಾಗಿದೆ. ಈ ಭರ್ತ್ಸನೆಯು ಗಣತಂತ್ರ ಮನೋಭಾವಪ್ರೇರಿತವಲ್ಲ. ‘ಜನಪ್ರತಿನಿಧಿ’ ಎಂಬುದು ಕೇವಲ ಪದನಾಮವಾಯಿತೇ ವಿನಹ ನಿಜವಾಗಲಿಲ್ಲ. ರಾಜ-ಮಹಾರಾಜ-ನವಾಬರ ಸಿಂಹಾಸನದಲ್ಲಿ ಇವರನ್ನು ಕುಳ್ಳಿರಿಸಿದ್ದೇವೆ ಅಷ್ಟೆ. ಅವರನ್ನು ಬೇಡುವುದು, ಗಿಂಜುವುದು, ಆರಾಧಿಸುವುದು, ದ್ವೇಷಿಸುವುದು ಎಲ್ಲವೂ ಸುಲಭ ನಮಗೆ. ಆದುದರಿಂದ ಅವರು ಇವ್ಯಾವುದಕ್ಕೂ ಬಗ್ಗುವುದಿಲ್ಲ. ನಮ್ಮ ಸೋಲುಗಳೇ ಅವರ ಸುರಕ್ಷಾತಂತ್ರಗಳಾಗುತ್ತವೆ.

"ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲವಂತೇ"

ಒಂದು ವರ್ಷದಿಂದ ಅವರಿವರು ಹೇಳುತ್ತಿದ್ದ ಈ ಮಾತು "ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲ" ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಸರಿಯಾಗಿ