ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿರಋಣಿಯು ನಾನೆಲ್ಲರಿಗೆ .....

ಪ್ರಿಯ ಸಂಪದಿಗರೆ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟ ನಿಮ್ಮೆಲ್ಲರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ಸಂಪದದ ಜೊತೆ ಜೊತೆಗೆ ಇಡೀ ದಿನ ಸಾಗಿದ್ದು...... ತಿಳಿಯಲೇ ಇಲ್ಲ. ಅಲ್ಲದೆ ನಿಮ್ಮೆಲ್ಲರ ಹಾರೈಕೆಗೂ ಮೊದಲು ನನ್ನ ಗುರುಗಳ ಆಶೀರ್ವಾದ ಹಾಗೂ ಶುಭಾಶಯ ಕೋರುವ ಒಂದು ಪದ್ಯ ನನ್ನ ಕೈ ಸೇರಿತ್ತು.

ಜೀವನ

ಜೀವನವೆ೦ದರೆ ಕೇವಲ ಉಸಿರಾಡುವುದಲ್ಲ. ಜೀವನವೆ೦ದರೆ ಒ೦ದು -
ಸವಾಲು - ಸ್ವೀಕರಿಸಬೇಕು
ಕಾಣಿಕೆ - ಅದನ್ನು ತೆಗೆದುಕೊಳ್ಳಬೇಕು
ದು:ಖ - ತಾಳಿಕೊಳ್ಳಬೇಕು
ಕರ್ತವ್ಯ - ನಿರ್ವಹಿಸಬೇಕು
ಆಟ - ಆಡಬೇಕು
ಗೀತೆ - ಹಾಡಬೇಕು
ವಾಗ್ದಾನ - ನೆರವೇರಿಸಬೇಕು
ಒಗಟು - ಬಿಡಿಸಬೇಕು
ಆನ೦ದ - ಅನುಭವಿಸಬೇಕು
ಸೊಬಗು - ಆಸ್ವಾದಿಸಬೇಕು

ಮುಸ್ಸಂಜೆ ಬದುಕಿನಲ್ಲೊಂದು ವಿದಾಯದ ಘಳಿಗೆ ಭಾಗ ೨

ಇಲ್ಲಿಯವರೆಗೆ http://sampada.net/article/17298
ಮಗಳನ್ನು ಮೊದಲ ರಾತ್ರಿಯ ಕೋಣೆಗೆ ಕಳಿಸಿ ಮಂಚದ ಮೇಲೆ ಉರುಳಿದಳು ಪ್ರಮೀಳಾ. ನಾಳೆಯ ವಿದಾಯಕ್ಕೆ ಸಿದ್ದತೆಗಳನ್ನುಮಾಡುತ್ತಿದ್ದಂತೆ ಹಳೆಯ ನೆನಪುಗಳ ಮರ ಚಿಗುರತೊಡಗಿತು.

ಇದೂ ಮುಗಿಯುತ್ತೆ.. (ಮುಗಿಯಿತು)

(ಇಲ್ಲೀವರ್ಗೂ ಏನಾಗಿತ್ತು ಅಂದ್ರೆ....)

ಮಂಡಿಯೂರಿಯವರ ಮಾತಿನ ಮಾಂತ್ರಿಕ ಮೋಡಿಗೆ ಒಳಗಾದ ಕುಚೇಲನಿಗೆ ತಾನು ಕುರಿಯಲ್ಲ ಹುಲಿ
ಎಂಬ ಆತ್ಮವಿಶ್ವಾಸ ಮೂಡಿತು. ಇಷ್ಟು ದಿನ ತನ್ನೊಳಗಿದ್ದ ಶಕ್ತಿಯನ್ನು ಕಾಣದೆ ಸಂಕಟ
ಪಟ್ಟದ್ದಕ್ಕೆ ಆತನಿಗೆ ದುಃಖವಾಯಿತು. ಇನ್ನು ಮುಂದೆ ಮಂಡಿಯೂರಿಯವರ ಈ ಸೂಪರ್

ಪ್ರೇಮಾಂತರಂಗ!!!

"ಪ್ರೇಮಾಂತರಂಗ"

ನೀ ಅರಿಯಲಾರದೇ ಹೋದೆ,

ನಾ ನಿಂತು ನಿಂತಲ್ಲೇ ನಿನ್ನ ನೋಡುತ್ತಾ ನಿಂತಿದ್ದು,

ನನ್ನ ಕಣ್ಣಿನ ಧೃಷ್ಟಿ ಖಣಜದ ಕಣ ಕಣಗಳಲ್ಲೂ,

ನಿನ್ನ ಭಾವ ಚಿತ್ರವ ಬರೆದಿಟ್ಟಿದ್ದೂ,

ನನ್ನ ಸ್ಮೃತಿಪಟಲದ ಪದರ ಪದರಗಳಲ್ಲೂ,

ನಿನ್ನ ಪ್ರತಿಬಿಂಭವ ಪಸರಿಸಿದ್ದೂ,

ನನ್ನ, ಕಡೆಗೊಂದು ಸಲ ತಿರುಗಿ ನೋಡುವೆಯೆಂದು,

ಕಲ್ಲಾಗುವರೆಗೂ ಕಾದಿದ್ದು.

ನಾ ಮರೆಯಲಾರದೆ ಹೋದೆ,

ಲಿನಕ್ಸಾಯಣ - ೪೪ - ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ.

504_master-black-fn185k-50m

ಅಂತೂ ಇಂತೂ ಕಡೆಗೆ ನನ್ನ Motorola Motoming
A1200 ಮೊಬೈಲ್ ಮೂಲಕ Airtel GPRS ಕನೆಕ್ಷನ್ ಬಳಸಿ ಉಬುಂಟು ನಲ್ಲಿ ಇಂಟರ್ನೆಟ್ ಪಡೆಯೋ ಹಾಗಿದೆ. ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಕೆಟ್ಟಿದ್ದು ಎರಡು ತಿಂಗಳಾದರೂ ಅವರಿಗ್ಯಾರಿಗೂ ಕರ್ತವ್ಯ ಪ್ರಜ್ಞೆಯಿಲ್ಲದವರಂತೆ ಕಂಡು ಬಂದದ್ದರಿಂದ, ಮತ್ತು ಅಪ್ಪ ಅವರಲ್ಲಿಗೆ ದಿನವೂ ಅಲಿಯೋದು, ನಾನು ಪ್ರತಿ ಬಾರಿ ಕಾಲ್ ಮಾಡಿ ನನ್ನ ತಲೆ ಬಿಸಿ ಮಾಡಿಕೊಳ್ಳೋದನ್ನ ತಪ್ಪಿಸ್ಲಿಕ್ಕೆ ಇದು ಒಂದು ತರಾ ಸುಲಭ ಉಪಾಯ ಅನ್ನಿಸ್ತು. ಮೇಲಧಿಕಾರಿಗಳೂ ಕಿವಿಗೆ ಹತ್ತಿ ಇಟ್ಟು ಕುಂತ್ರೆ ನಾನೇನು ಮಾಡ್ಲಿ ಹೇಳಿ. ಟೆಕ್ನಿಕಲ್ ಸೊಲ್ಯೂಶನ್ ಹ್ಯಾಗಾದ್ರೂ ಕಂಡಿಡಕೊಳ್ಬೇಕಲ್ವಾ? 

ಸರಿ, ನೀವು ಹ್ಯಾಗೆ ಇದನ್ನ ನಿಮ್ಮ ಉಬುಂಟುವಿನಲ್ಲಿ ಸಾಧ್ಯವಾಗಿಸ್ಕೊಳ್ಳ ಬಹುದು ಅನ್ನೋದನ್ನ ಈಗ ನೋಡೋಣ. 

ಲಿನಕ್ಸಾಯಣ - ೪೩ - ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್

ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ, ತಲೆಯಿಂದ ಬುಡದವರೆಗೆ ಎಲ್ಲವನ್ನೂ ಸರಿಯಾಗಿ ಜೋಡಿಸ್ಲಿಕ್ಕೆ ಇತರರಿಗೂ ಸಾಧ್ಯವಾಗುವಂತೆ ಮಾಡ್ಬೇಕು. 

ಲಿನಕ್ಸಾಯಣ - ೪೨ - ಗ್ನು/ಲಿನಕ್ಸ್ ನಲ್ಲಿ ವಿಂಡೋಸ್ ಮೀಡಿಯಾ ಹ್ಯಾಗೆ ಪ್ಲೇ ಮಾಡೋದು?

ವಿಂಡೋಸ್ ನ WMA ಫಲ್ ಇತ್ಯಾದಿಗಳನ್ನ ಗ್ನು/ಲಿನಕ್ಸ್ ನಲ್ಲಿ ಲೈಸೆನ್ಸ್, ಪೇಟೆಂಟುಗಳ ಕಿರಿಕಿರಿಯಿಂದಾಗಿ ಪ್ಲೇ ಮಾಡ್ಲಿಕ್ಕಾಗಲ್ಲ. video/x-asf-unknown or MSS2 ಕೋಡೆಕ್ (Codec)ಗಳಿಲ್ಲ ಎಂಬ error ಮೆಸೇಜ್ ನಿಮಗೆ ಸಾಮಾನ್ಯವಾಗಿ ಕಾಣತ್ತೆ. ಅದಕ್ಕೆ ಉತ್ತರ ಅಂದ್ರೆ MPlayer ಬಳಸೋದು. ಇದು ಸುಲಭವಾಗಿ ಅನೇಕ ಬಗೆಯ ಮೀಡಿಯಾ ಫೈಲ್ಗಳನ್ನು ಪ್ಲೇ ಮಾಡುತ್ತ್ತೆ.

ಈಗಾಗಲೇ ಹಳೆಯ Mplayer ಇದ್ದು ಅದು ಕೆಲಸ ಮಾಡ್ತಿಲ್ಲ ಅಂದ್ರೆ Mplayer ವೆಬ್ ಸೈಟ್ ಗೆ ತೆರಳಿ, essentials ಕೋಡೆಕ್ ಡೌನ್ಲೋಡ್ ಮಾಡ್ಕೊಳ್ಳಿ. ನಂತರ ಅವನ್ನು  /usr/lib/win32 ಗೆ ಕಾಪಿ ಮಾಡಿ ಮತ್ತೆ Mplayer ಶುರು ಮಾಡಿದರಾಯಿತು. ವಿಂಡೋಸ್ ಫೈಲ್ಗಳನ್ನು ಗ್ನು/ಲಿನಕ್ಸ್ ನಲ್ಲಿ ನೀವು ಪ್ಲೇ ಮಾಡ್ಲಿಕ್ಕೆ ಶುರುಮಾಡಬಹುದು.

mplayer