ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾಕೋ ಬೇಸರ

ಇತ್ತೀಚೆಗೆ ಯಾಕೋ ಬೇಸರ. ಯಾವ ಕೆಲಸ ಮಾಡಲು ಉತ್ಸಾಹವೇ ಇಲ್ಲ. ಬರೆಯೋದಿಕ್ಕೆ ಹೋದರೆ ಪದಗಳೇ ನೆನಪಾಗುವುದಿಲ್ಲ. ಯಾಕೆ ಅಂತಲೇ ಗೊತ್ತಾಗುವುದಿಲ್ಲ. ನನ್ನ creativity ಮುಗಿದೇ ಹೋಯ್ತೇನೋ ಅನ್ನುವ ಭಯ ಸಣ್ಣಗೆ ಮನದಲ್ಲಿ ಮೂಡಿ ಮೈ ನಡುಗುತ್ತದೆ. ಎಲ್ಲರಿಗೂ ಹೀಗಾಗುತ್ತದೆಯೋ ಅಥವಾ ನನಗೆ ಮಾತ್ರವೋ ಅನ್ನುವುದು ಅರ್ಥವಾಗುವುದಿಲ್ಲ.

ಈ ಮನಸು ಥರ ಥರ ಥರ ಥರ ಒಂಥರಾ......

ಅಲ್ಲ ನಮ್ಮ ಮನಸು ಎಷ್ಟು ವಿಚಿತ್ರ ಅಲ್ವೇನ್ರಿ. ನಾವು ಈ ಮನಸಿನ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ರು ನಮಗೆ ಈ ಭಾವನೆ ಬಂದು ಬಿಡುತ್ತೆ. ಪ್ರತಿಯೊಂದು ವಿಷಯದಲ್ಲೂ ನಮ್ಮ ಮನಸು ತೀರ ವಿಚಿತ್ರವಾಗೆ ಇರುತ್ತೆ. ಅದರಲ್ಲಿ ಮೂಡೋ ಭಾವನೆಗಳು ಅಷ್ಟೆ ವಿಚಿತ್ರ ಅಲ್ವ…

ಚುನಾವಣೆ... ಬರಲಿದೆ...ಮತ್ತೆ.

ಎಂದೋ ಬರೆದ ಚುಟುಕುಗಲಿವು ಆದರೇನು ನವನವೀನ ಆಗಿವೆ ಏಕೆಂದರೆ ಚುನಾವಣೆ ಮತ್ತೆ ಬರಲಿದೆ......

೧) ಬಿರು ಬಿಸಿಲಲ್ಲಿ ಬರಲಿದೆ
ಚುನಾವಣೆ....
ಆಗಲಿದೆ ಮತ್ತೆ ನೋ(ವೋ)ಟುಗಳ
ಚಲಾವಣೆ....!

೨) ಖಾಲಿ ಕೊಡ ಒಣಗಿದ ಹೊಟ್ಟೆ
ಕನಸು ಮುರುಟಿಕೊಂಡ ಕಂಗಳು
ಎಲ್ಲ ಅವೇ ಇರುತ್ತವೆ

ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ!!!

ದೇವರು ಇದ್ದಾನೆ ಎನ್ನುವುದು ನಿಜಕೂ ಒಂದು ಭ್ರಾಂತು
ದೇವರು ಇಲ್ಲ ಎನ್ನುವುದು ಇನ್ನೊಂದು ತೆರನ ಭ್ರಾಂತು

ದೇವರಿದ್ದಾನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲಿ ಗೌಣ
ಆದರೆ ದೇವರ ಹೆಸರಲಿ ಸಂಪಾದಿಸುತಿಹರು ಜನರಿಲ್ಲಿ ಹಣ

ದೇವರ ಹೆಸರಲ್ಲಿ ನೂರೆಂಟು ಅನಾಚಾರ ನಡೆಸುವವರೆಲ್ಲ
ಆತ್ಮಸಾಕ್ಷಿಯಾಗಿ ಆ ದುರಾತ್ಮಗಳಿಗೆ ದೇವರೆಂಬುದೇ ಇಲ್ಲ

ಈ ಸಂಜೆ ಯಾಕಾಗಿದೆ

ಮತ್ತದೇ ಸಂಜೆ, ನಿನ್ನಿಲ್ಲದೆ ನಿನ್ನ ಜೊತೆಯಿಲ್ಲದೆ....ಈ ಸಂಜೆ ಯಾಕಾಗಿದೆ

ಪ್ರತಾಪ್ ಸಿಂಹರ ಪ್ರತಾಪ, ತೇಜಸ್ವಿ ಯವರ ಬರಹದ ತೇಜಸ್ಸು....ತಿಳಿಯುವುದರಲ್ಲೇ ವೀಕೆಂಡು ಮುಗಿತು.
ಕ ಸ ನಿಸಾರ್ ಅಹ್ಮದರ "ಮತ್ತದೇ ಸಂಜೆ, ನಿನ್ನಿಲ್ಲದೆ ನಿನ್ನ ಜೊತೆಯಿಲ್ಲದೆ " ಗೀತೆ ಜ್ಞ್ಯಾಪಕಕ್ಕೆ ಬರ್ತಾ ಇದೆ.

ನಿಮ್ಮ ಜನ್ಮ ದಿನಾಂಕ ಹೇಳ್ತೀರಾ ?

ಸಂಪದಿಗರೇ, ನಾವೆಲ್ಲರೂ ಸಂಪದ ಕುಟುಂಬದ ಸದಸ್ಯರಾಗಿರುವುದು ಸರಿ. ಎಲ್ಲರೂ ಒಬ್ಬರಿಗೊಬ್ಬರು ಪರಿಚಿತರೇ.... ಕೆಲವರು ಪ್ರತಿಕ್ರಿಯೆಗಳಿಂದಾಗಿ , ಕೆಲವರು ತಮ್ಮ ಬ್ಲಾಗು, ಲೇಖನಗಳಿಂದಾಗಿ .
ಸಂಪದದ ಮಿಲನಕ್ಕೆ ಕಾಯೋಣ . ಹೀಗೇ ನಮ್ಮೆಲ್ಲರ ನಡುವಿನ ಕೊಂಡಿಯಾಗಿ ಸಂಪದ ಇದೆ. ಆದರೆ ನಿಮ್ಮೆಲ್ಲರ ಜನ್ಮ ದಿನಾಂಕ ತಿಳಿದಿದ್ದರೆ ಕಡೇ ಪಕ್ಷ ಶುಭಾಷಯವನ್ನಾದರೂ ಕೋರಬಹುದಲ್ಲಾ

ನಮಗೇನು ಬೇಕು??

ಮಾನವ ಜನ್ಮಅಮೂಲ್ಯವಾದದ್ದು. ಅದಕ್ಕೆಂದೇ - 'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರೊಬ್ಬರು ಹಾಡಿದ್ದಾರೆ. ಸನ್ಮಾಗಿಱಗಳೆಲ್ಲರೂ ಈ ಮಾತನ್ನೇ ವಿಧವಿಧವಾಗಿ ನಿರೂಪಿಸಿದ್ದಾರೆ.

ಕೈ ಇರೋವಾಗ ಬಾಯಿ ಯಾಕಯ್ಯಾ?

ನಿನ್ನೆ ನಾವೆಲ್ಲಾ ಗೆಳೆಯರು ನಮ್ಮ ಒಬ್ಬ ಗೆಳೆಯನ ಮದುವೆಗೆ ಮೊಳಕಾಲ್ಮೂರಿಗ ಹೋಗಿದ್ದೆವು, ಮುಹೂರ್ತ ಆದ ಮೇಲೆ ಎಲ್ಲರೂ ಊಟಕ್ಕೆ ಹೋಗಿ ಕುಳಿತೆವು. ಎಲ್ಲರಿಗೂ ಊಟ ಹಾಕಿಕೊಂಡು ಬರ್ತಿದ್ರು, ಎಲೆ ಮೇಲೆ ಪಲ್ಯ, ಪಾಯಸ ಆಸೀನವಾಗಿದ್ದವು.

ನಿಮಗೂ ಹೀಗೇ ಆಗುತ್ತಾ ?

ಅಬ್ಬಾ ! ಎರಡು ದಿನ ಸಂಪದದ ಒಡನಾಟ ಇಲ್ಲದ್ದಕ್ಕೇ ಮನಸು ಯದ್ವಾತದ್ವಾ (?) ಚಡಪಡಿಸಿಬಿಡ್ತು. ಬಂದ್ಬಿಟ್ಟೆ......
ನೀವೆಲ್ಲರೂ ಕ್ಷೇಮ ತಾನೆ ?

ಅಂದ ಹಾಗೆ ನಮ್ಮ ಸೋಮಾರಿ ಎಲ್ಲಿ ಕಾಣ್ತಿಲ್ಲವಲ್ಲಾ ?
ಎಲ್ ಒಂಟೋದೋ ಸೋಮಾರಿ ....... ?