ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.

ಈಗಿನ ಕಾಲದಲ್ಲಿ ಯಾರು ಬೇಕಾದರೂ ಉಗ್ರರ ಹಿಂಸೆಗೆ ಬಲಿಯಾಗಬಹುದು. ಅಕಸ್ಮಾತ್ತಾಗಿ ನಾನೇನಾದರೂ ಉಗ್ರರ ಅಟ್ಟಹಾಸಕ್ಕೆ ಬಲಿಯಾದರೆ ದುಃಖ ಪಡಬೇಡಿ. ಈ ಕನ್ನಡಕಂದನಂತಹವರು ಅಥವಾ ಅವನಿಗಿಂತ ಉತ್ಕೃಷ್ಟರು ಹುಟ್ಟಿ ಬರುತ್ತಾರೆ.

ಜಾತಿ ಪಂಗಡದ ಚೌಕಟ್ಟು

ಕುರಿ ಮೇಯಿಸುತ್ತ ಬಂದವನಿಗೆ, ರೋಡಿನ ಇಬ್ಬದಿ ಹಾಕಿಸಿರುವ ಗಿಡಗಳ ಬಗ್ಗೆ "ಹುಷಾರಪ್ಪ, ಅದನ್ನೂ ಮೇದು ಹೋದಾವು ಕುರಿಗಳು" ಎಂದರೆ ಅವನಿಗೆ ಅದರಲ್ಲಿ ಜಾತಿ ಕಾಣುತ್ತದೆ. ಮಹಡಿಯ ಮೇಲೆ ನಿಂತು ಕೂಗಿ ಹೇಳಿದವನ 'ಎದುರಿಗೆ ಕಾಣುವ' ಅಂತಸ್ತು ಕಾಣುತ್ತದೆ. ಆದರೆ ಆ ಗಿಡಗಳು ಎಲ್ಲರಿಗೂ ಎಷ್ಟು ಮುಖ್ಯ, ಅವು ತನ್ನದೂ ಸ್ವತ್ತು, ಅವುಗಳನ್ನು ಬೆಳೆಸುವುದು ತನ್ನದೂ ಜವಾಬ್ದಾರಿ ಎಂದು ಅನ್ನಿಸುವುದಿಲ್ಲ. ಜಾತಿ ಪಂಗಡದ ಚೌಕಟ್ಟು ಬಂದು ಕುಳಿತುಕೊಳ್ಳುವುದು ಹೀಗೆ. ಕೂಗಿ ಹೇಳುತ್ತಿರುವವನಿಗೆ ತಾನು ಬ್ರಾಹ್ಮಣನೋ, ಲಿಂಗಾಯತನೋ, ಅಥವ so called "ಮೇಲ್ಜಾತಿ"ಯವನೋ ಎಂದು ಅರಿವಾಗುವುದೂ ಕುರಿ ಮೇಯಿಸುವವ ಜಾತಿಯ ಹೆಸರು ಹಿಡಿದು ಏಕವಚನದಲ್ಲಿ ಗುರುಗುಟ್ಟಿ ಸಿಟ್ಟಿನಲ್ಲಿ ಹರಿಹಾಯ್ದು ಹೋದಮೇಲೇನೆ. ಆ ಕ್ಷಣದ ವಿವೇಚನೆಯಲ್ಲಿ ಅವರವರಿಗೆ "ರೋಡು ಸುತ್ತ ಮರಗಳು ಬೆಳೆಯಲೂ ಬಿಡೋದಿಲ್ವಲ್ಲ" ಎಂಬ ತನ್ನರಿವಿನ ಕಾಳಜಿ, "ಕುರಿ ಸರಕಾರದ ರೋಡಿನಲ್ಲಿ ಮೇಯಿಸಿದರೂ ಮಾತು" ಎಂಬುದೂ ತನ್ನರಿವಿನ ಚೌಕಟ್ಟಿನ ಕಾಳಜಿಯೇ.

ಅವರವರ ಅರಿವಿನ ಚೌಕಟ್ಟು, ಅವರವರು ಹಾಕಿಕೊಂಡ ಜಾತಿಯ ಚೌಕಟ್ಟು, ಅವರವರು ಬೆಳೆದು ಬಂದ ಪರಿಸರದಲ್ಲಿ ಜಾತಿ, ವರ್ಗ, ಪಂಗಡಗಳ ಪ್ರಭಾವ ಎಷ್ಟೆಷ್ಟು ಬೀರಿ ಏನೆಲ್ಲ ಬೇಸರ, ಅನಾಹುತಗಳಿಗೆ ಈಡು ಮಾಡಿತ್ತು - ಇದೆಲ್ಲದರ ಮೇಲೆ ಅವರವರ ಕಾಳಜಿ, ಮನಸ್ಸು, ಮುಕ್ತವಾಗಿ ಆಲೋಚಿಸುವ ಶಕ್ತಿ ಎಲ್ಲವೂ ರೂಪುಗೊಂಡಿರುತ್ತದೆ.

ಬಿರಿ, ಬಿರನೆ, ಬಿಱು, ಬಿಱುಸು, ಬಿಱುಕು

ಬಿರಿ=ಕ್ರಿಯಾಪದವಾಗಿ ಅರಳು. ನೋಡಿ ಬಿರಿದ ಮಲ್ಲಿಗೆಗಂಡೊಡಂ= ಅರಳಿದ ಮಲ್ಲಿಗೆ ಕಂಡರೂ
ಬಿರನೆ = ವೇಗವಾಗಿ,
ಬಿಱು, ಬಿಱುಸು=ಕಠೋರ, ಪೆಡಸು, ಬಲವಾದ ನೋಡಿ ಬಿಱುನುಡಿ=ಕಟುನುಡಿ, ಬಿಱುಗಾಳಿ=ಬಲವಾಗಿ ಬೀಸುವ ಗಾಳಿ.
ಬಿಱುಕು=ಪೆಡಸಾಗಿರುವ (brittle) ಕಲ್ಲು, ಗಾಜುಗಳೇ ಬಿಱುಕು ಬಿಡವುದು ಒಡೆಯುವುದು ಸಾಮಾನ್ಯ.

ಶಿಷ್ಯ, ಮಗಾ ಅಂತ ಇರೋವಾಗ‌ ಮಚ್ಚಾ ಯಾಕೆ?

ನೀವು ತುಂಬಾ ಜನರನ್ನು ನೋಡಿರಬಹುದು, ಮಚ್ಚಾ ಅಂತ ಕರೀತಾರೆ.
ನಮ್ಮದೇ ಪದಗಳು ಶಿಷ್ಯ, ಮಗಾ ಅಂತ ಇರ್ಬೇಕಾದ್ರೆ ಅದೆಲ್ಲಾ ಯಾಕಲ್ವ?

ಅಯ್ಯಯ್ಯೋ ಇವರು ಕನ್ನಡ ಕೊಲ್ತಾ ಇದ್ದಾರಪ್ಪೋ !!

ಡಿ.ಎನ್.ಶಂಕರ ಭಟ್ಟರು ಕನ್ನಡ ಬರಹದಲ್ಲಿರುವ ತೊಂದರೆಗಳ ಬಗ್ಗೆ, ಅದನ್ನು ಸರಿಪಡಿಸುವ ಬಗ್ಗೆ, ಕೆಲವು

ಈ ಮನಸ್ಸೇಕೆ ಹೀಗೆ?

ಸಖೀ,
ಎಲ್ಲವನೂ, ಎಲ್ಲರನೂ,
ಅರಿತರೂ ಅರಿಯಬಹುದೇನೋ;
ಆದರೆ,
ನಮ್ಮ ಮನಸ್ಸನ್ನೇ ಅರಿಯಲಾಗದು.

ಒಂದೊಂದು ದಿನವೂ,
ಒಂದೊಂದು ತೆರನಾಗಿ,
ಅದು ನಮ್ಮನ್ನು
ಚಕಿತಗೊಳಿಸುತ್ತಲೇ ಇರುತ್ತದೆ.

ಕೆಲವೊಮ್ಮೆ,
ಕಾರಣವಿಲ್ಲದೇ
ದಿನವಿಡೀ ಅಳಿಸುತ್ತದೆ,
ಇನ್ನು ಕೆಲವೊಮ್ಮೆ,
ಹುಮ್ಮಸ್ಸಿನಿಂದ ತುಂಬಿ ತುಳುಕುತ್ತದೆ.

ಕೆಲವೊಮ್ಮೆ,
ಯಾರ ಮಾತಿಗೂ ಕಿವಿಗೊಡದೇ,

ಚುನಾವಣೆ ಮತ್ತು ರಾಜಕೀಯ

ಚುನಾವಣೆ

 

ಬಂದಿತದೋ ಚುನಾವಣೆ

ಪಕ್ಷಗಳ ಹಣಾಹಣೆ

ಒಲಿಯುವುದಾರಿಗೋ ಆ ಮಣೆ.......... ???

 

ಆಶ್ವಾಸನೆಗಳ ಬೊಗಳೆ,

ಅವರೇನು ಶ್ವಾನಗಳೆ,

ಬಿಡಲು ಸುಮ್ಮನೆ ಬೊಗಳೆ

ಅಥವಾ............. ?

ಮತದಾರರೇನು ಕುರಿಗಳೇ

ಎಲ್ಲದಕ್ಕೂ ಆಡಿಸಲು ತಲೆ.........

 

 

ರಾಜಕೀಯ

 

ನಿರ್ಭಯ ಕರ್ನಾಟಕ

ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುವುದೆಂತು? ಕಳೆದ ಹತ್ತು ದಿನಗಳಲ್ಲಿ 7 ಬಾರಿ ಮಹಿಳೆಯರ ಮೇಲೆ ಆಕ್ರಮಣ ನಡೆದಿದೆ! ಅದೂ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಾದ ಇನ್ ಪಂಟ್ರಿರಸ್ತೆ, ಕನ್ನಿಗಾಂ ರಸ್ತೆ, ರೆಸ್ಟ್ ಹೌಸ್ ಕಾಲೋನಿ, ವಸಂತನಗರ, ಇಂದಿರಾನಗರ, ಹಲಸೂರುಗಳಲ್ಲಿ.

ನಿರ್ಭಯ ಕರ್ನಾಟಕ

ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುವುದೆಂತು? ಕಳೆದ ಹತ್ತು ದಿನಗಳಲ್ಲಿ 7 ಬಾರಿ ಮಹಿಳೆಯರ ಮೇಲೆ ಆಕ್ರಮಣ ನಡೆದಿದೆ! ಅದೂ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶಗಳಾದ ಇನ್ ಪಂಟ್ರಿರಸ್ತೆ, ಕನ್ನಿಗಾಂ ರಸ್ತೆ, ರೆಸ್ಟ್ ಹೌಸ್ ಕಾಲೋನಿ, ವಸಂತನಗರ, ಇಂದಿರಾನಗರ, ಹಲಸೂರುಗಳಲ್ಲಿ.

ಶ್ರಿಲಂಕ ಕ್ರಿಕೇಟಿಗರ ಮೇಲೆ ಉಗ್ರರ ದಾಳಿ

ಶ್ರಿಲಂಕ ಕ್ರಿಕೇಟಿಗರು ಪ್ರವಾಸಿಸುತ್ತಿದ್ದ ಬಸ್ಸಿನ ಮೇಲೆ ಉಗ್ರರ ದಾಳಿ ಮಾಡಿದ್ದಾರೆ. ಇದು ಅದುನಿಕ ಕ್ರಿಕೇಟ್ ನ್ ಮೇಲೆ ಒಂದು ಶಾಶ್ವತ ಕಪ್ಪು ಚುಕ್ಕೆ. ಇದು
ಪಾಕಿಸ್ಥಾನ ದಲ್ಲಿನ ದುರಾಡಳಿಥಕ್ಕೆ ಒಂದು ಸಾಕ್ಶಿ. ಆಲ್ಲಿ ನಿಜವಾಗಿ ಯಾರದು ಅಧಿಕಾರ? ಚುನಾಯಿತ ಸರಕಾರದ್ದಾ ಅಥವಾ ಉಗ್ರರದಾ?