ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹನ್ನೆರಡು ಜ್ಯೋತಿರ್ಲಿಂಗಗಳು - ೬ [ಡಾಕಿನಿಯ ಭೀಮಶಂಕರ].

ಡಾಕಿನಿಯ ಭೀಮಶಂಕರ

ಎಲ್ಲಿದೆ?
ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿದೆ. ಪುಣೆಯಿಂದ ನಾಶಿಕ ರಸ್ತೆಯಲ್ಲಿ ಮಂಚರ್ ಎಂಬ ಊರಿಗೆ ಬಂದು ಸಹ್ಯಾದ್ರಿ ಪರ್ವತ ಶ್ರೇಣಿಯತ್ತ ತಿರುಗಿ ಖೋಡೆಂಗಾವ್ ಎಂಬ ಊರಿಗೆ ಬಂದರೆ ಸಮೀಪದ ಡಾಕಿನಿಯಲ್ಲಿ ಭೀಮಶಂಕರ ದೇಗುಲವಿದೆ. ಇದು ಬ್ರಹ್ಮಪುರ ಪರ್ವತ ಶಿಖರದಲ್ಲಿದ್ದು ಭೀಮಾ ನದಿ ಇಲ್ಲಿ ಉಗಮವಾಗುವುದು. ಸುಂದರ ದೇಗುಲ, ಪ್ರಾಕಾರ ಭವ್ಯ ಗೋಪುರಗಳು ಹಸಿರಿನ ಮಧ್ಯೆ ಕಂಗೊಳಿಸುತ್ತವೆ. ಲಿಂಗದ ಮಧ್ಯದಲ್ಲಿ ಗೆರೆ ಇದ್ದು, ಇದು ಶಿವ ಶಕ್ತಿ ಸ್ವರೂಪವಾಗಿದೆ. ಇದನ್ನು ಅರ್ಧನಾರೀಶ್ವರ ರೂಪ ಎಂದೂ ಶಿವಲೀಲಾಮೃತ ವರ್ಣಿಸುತ್ತದೆ. ಸಂತ ರಾಮದಾಸರು, ಗಂಗಾಧರ ಪಂಡಿತರು, ಸಂತ ಜ್ಞಾನೇಶ್ವರರು, ವರದಹಳ್ಳಿ ಶ್ರೀಧರ ಸ್ವಾಮಿಗಳು ಮೊದಲಾದ ಮಹಿಮರು ತಪಸ್ಸು ಮಾಡಿ ಅನುಗ್ರಹ ಪಡೆದ ಸ್ಥಳವಿದೆ. ಪೋರ್ಚುಗೀಸರು ಸ್ಥಾಪಿಸಿದರು ಎಂದು ನಂಬಲಾದ ಬೃಹದಾಕಾರದ ತೂಗಾಡುವ ಘಂಟೆ ಇಲ್ಲಿನ ಇನ್ನೊಂದು ವಿಶೇಷ.

ಮೊದಲ ನೋಟಕ್ಕೆ ಸೋತ ಮನಸ್ಸು .............

ಇವತ್ತು ಬೆಳಿಗ್ಗೆ ಮನೆಯಿಂದ ಆಪೀಸ್ ಗೆ ಬರುತ್ತಿರಬೇಕಾದರೆ ದಾರಿ ಮದ್ಯದಲ್ಲಿ ಒಂದು ಮುದ್ದಾದ ಹುಡುಗಿನ ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಪದಗಳ ಇಲ್ಲಿ ಕವನ ರೂಪ ಕೊಟ್ಟಿದ್ದೆನೆ ಅಷ್ಟೆ ,ಆ ಹುಡುಗಿ ಯಾರೆಂದು ಕೇಳಬ್ಯಾಡಿ ಏಕೆಂದರೆ ಅವರು ಯಾರು ಅಂತನೆ ಗೊತ್ತಿಲ್ಲ ,ಒಟ್ಟಿನಲ್ಲಿ ದೇವರು ಚೆನ್ನಾಗಿಟ್ಟಿರಲಿ ಆ ಹುಡುಗಿಯನ್ನು ಅಷ್ಟೆ.....

ಏನೆಂದು ನಾ ವರ್ಣಿಸಲಿ

ವೈಭವವಲ್ಲದಿದ್ದರೂ ಶುಚಿ

ನೆನ್ನೆ ಬೆಂಗಳೂರಿನ ರಾಗಿಗುಡ್ಡದ ಬಯಲು ರಂಗಮಂದಿರದಲ್ಲಿ ಒಂದು ಕಾರ್ಯಕ್ರಮವಿತ್ತು. ಅಲ್ಲಿ ನಾನು ಗಮನಿಸಿದ್ದು ನೆಲ ಪೂರ್ತಿ ಸಗಣಿಯಿಂದ ಸಾರಿಸಿದ್ದುದು.

"ಕುಹೂ! ಕುಹೂ! " ಕೋಕಿಲವಾಣಿ !

"ಕುಹೂ! ಕುಹೂ! " ಕೋಕಿಲವಾಣಿ !
ಜಗ ಜುಮ್ಮೆಂದುದು ಅದ ಕೇಳಿ!
ನೀರವ ಪರ್ವತ ಕಾನನ ಶ್ರೇಣಿ
ಮರುದನಿಗೈದಿತು ಮುದತಾಳಿ.

ಗಾನವ ಕೇಳಿ ಮಹಾಂಬರ ಸುಮ್ಮನೆ
ಮಾತಾಡದೆ ಬಣ್ಣಿಸುತ್ತಿತ್ತು!
ಕಂದರದಲ್ಲಿದ್ದೊಂದು ಸರೋವರ
ತೆರೆಗಳ ಕೈಪರೆಯಿಕ್ಕಿತ್ತು!
ಮಾಧುರ್ಯದಿ ಪಿಕ ತನ್ನನೆ ಮರೆಯುತೆ
"ಕುಹೂ! ಕುಹೂ! " ಕೂಗಿತ್ತು!

ಆಲಿಸಿದೊರ್ವನು ಗಾನಕೆ ನೊಂದು
ಸೂಚನೆ ಕೊಟ್ಟನು ಇಂತೆಂದು

ವಿಜ್ಞಾನ ಮತ್ತು ಧರ್ಮ ಮತ್ತು ಆಧ್ಯಾತ್ಮ-ಹಲವು ಸ೦ಶಯಗಳು ಮತ್ತು ಉತ್ತರಗಳು

ಒಬ್ಬ ಪ್ರಾಧ್ಯಾಪಕನು ಒ೦ದು ತರಗತಿಯಲ್ಲಿ ಹೀಗೆ ಹೇಳಿದನ೦ತೆ, ' ನಾವು ಅನೇಕ ಪರಿಹಾರಗಳನ್ನು ಕ೦ಡು ಹಿಡಿದಿದ್ದೇವೆ. ಆದರೆ ಸಮಸ್ಯೆ ಏನೆ೦ಬುದೇ ಮರೆತುಹೋಗಿದೆ.'
We have invented so many solutions, but we have forgot what is the problem?
'ಇದು ವಿಜ್ಞಾನ ಮತು ತ೦ತ್ರಜ್ಞಾನಗಳಿಗೆ ಚೆನ್ನಾಗಿ ಅನ್ವಯವಾಗುತ್ತದೆ.

ಕೆಲ್ಸಾ ಕೆಲ್ಸಾ ಕೆಲ್ಸಾ ...

ಸಿಕ್ಕಾಬಟ್ಟೆ ಕೆಲ್ಸ ಬಾಕಿ ಉಳ್ಕೊಂಡಿದೆ. ಇವತ್ರಾತ್ರಿ ಒಳಗೆ ಮುಗ್ಸ್ಲೇಬೇಕು. ಆದ್ರೂ ಹಾಳಾದ್ದು ಕೆಲ್ಸ ಮಾಡೋ ಮನ್ಸೇ ಬರ್ತಿಲ್ಲ್ವೇ! :'(

ಒಂದ್ ಸ್ಟ್ರಾಂಗ್ಕಾಫಿ ಹಾಕ್ಕೊಂಡ್ಬಂದು ಕೂತ್ರೇನಾದ್ರೂ ಬರತ್ತೇನೋ ... ಭಾನ್ವಾರ ಆದ್ರೂ ಮುಗ್ಸೋಕಾಗಿಲ್ಲ! ಛೆ! ... 

/* ಅದ್ಸರಿ ಇದನ್ಯಾಕ್ ಬ್ಲಾಗ್ದೆ ಇಲ್ಲಿ ನಾನು ... ಇರ್ಲಿ :)‌*/