ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶ್ರಿಲಂಕ ಕ್ರಿಕೇಟಿಗರೆ ಮೇಲೆ ಉಗ್ರರ ದಾಳಿ

ಶ್ರಿಲಂಕ ಕ್ರಿಕೇಟಿಗರು ಪ್ರವಾಸಿಸುತ್ತಿದ್ದ ಬಸ್ಸಿನ ಮೇಲೆ ಉಗ್ರರ ದಾಳಿ ಮಾಡಿದ್ದಾರೆ. ಇದು ಅದುನಿಕ ಕ್ರಿಕೇಟ್ ನ್ ಮೇಲೆ ಒಂದು ಶಾಶ್ವತ ಕಪ್ಪು ಚುಕ್ಕೆ. ಇದು
ಪಾಕಿಸ್ಥಾನ ದಲ್ಲಿನ ದುರಾಡಳಿಥಕ್ಕೆ ಒಂದು ಸಾಕ್ಶಿ. ಆಲ್ಲಿ ನಿಜವಾಗಿ ಯಾರದು ಅಧಿಕಾರ? ಚುನಾಯಿತ ಸರಕಾರದ್ದಾ ಅಥವಾ ಉಗ್ರರದಾ?

ಶ್ರೀಲಂಕಾ ಕ್ರಿಕೆಟ್ಟಿಗರ ಮೇಲೆ ಹಲ್ಲೆ

ಇತ್ತೀಚಿನ ಸುದ್ದಿಯಂತೆ ಶ್ರೀಲಂಕಾ ಕ್ರಿಕೆಟ್ಟಿಗರ ಮೇಲೆ ಹಲ್ಲೆ ನಡೆದಿದೆ. ಕೆಲವು (೫-೭) ಆಟಗಾರರು ಗಾಯಗೊಂಡಿದ್ದಾರೆ ಅಂತ ನ್ಯೂಸ್ ಬರುತ್ತಿದೆ. ಬೇಸರ ಆಗೋ ಸಂಗತಿ.
http://news.bbc.co.uk/1/hi/world/7920260.stm

ನನಗೆಲ್ಲೋ ಪಾಕಿಸ್ತಾನ ಭಯೋತ್ಪಾದನೆಯ ಸುಳಿಯಲ್ಲಿ ಸಿಕ್ಕಿಹೋಗಿದೆ, ಮತ್ತೆ ಮೇಲೆ ಬರಲಾರದು ಅನ್ನಿಸಹತ್ತಿದೆ.

ಭವಾನಿ ಮತ್ತು ಸುಪ್ರೀತರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!

ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿರುವ ಸುಪ್ರೀತ್ ಮತ್ತು ಭವಾನಿಯವರಿಗೆ ಹಾರ್ದಿಕ ಶುಭಾಶಯಗಳು.
ನಿಮ್ಮೀರ್ವರಿಗೂ ದೀರ್ಘ ಆಯುಷ್ಯ ಹಾಗೂ ಸದಾ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಇನ್ನೂ ಬಹಳಷ್ಟು ಬರೆಯಿರಿ. ಸಂಪದವನ್ನು ಸಮೃದ್ಧಗೊಳಿಸಿ.

ಕಹಿಮರದಲಿ ಸಿಹಿಹಣ್ಣುಗಳು

ಬಾಳ್ವೆಯೆನುವ ಈ ಕಹಿ ಮರದೊಳು
ಬಿಟ್ಟಾವು ನೋಡೆರಡು ಇನಿವಣ್ಗಳು
ನಲ್ವಾತು*ಗಳ ಸವಿಯುವುದೊಂದು
ಒಳ್ಳೆಯವರೊಡನಾಟ ಎರಡನೆಯದು

ನಲ್ವಾತು: ಒಳ್ಳೆಯ ಮಾತು

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) :

ಸಂಸಾರಕಟು ವೃಕ್ಷಸ್ಯ  ದ್ವೇಫಲೇ ಹ್ಯಮೃತೋಪಮೇ |
ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೇ ಜನೇ || 

 

ಆಂಗ್ಲದೊಳ್ ಸ್ವರದೊಡಗೂಡದ ರಕಾರದ ಪಿಂದಣ ಇಕಾರಮಕಾರಮಕ್ಕುಂ

ಆಂಗ್ಲಭಾಷೆಯಲ್ಲಿ ಯಾವುದೇ ಸ್ವರವನ್ನು ಮುಂದಿಟ್ಟುಕೊಳ್ಳದ r ಹಿಂದಿನ ಇಕಾರ (i) ಅಕಾರವಾಗಿ (a) ಉಚ್ಚರಿಸಲಾಗುತ್ತದೆ.
ಉದಾಹರಣೆಗೆ, sir, stir, circle, shirt, skirt, mirth. ಹೆಚ್ಚಾಗಿ ಸ್ವರರಹಿತ ರಕಾರದ ಹಿಂದಿನ ಇಕಾರವನ್ನು ಅಕಾರವಾಗಿಯೇ ಉಚ್ಚರಿಸುತ್ತೇವೆ.

ಸಹವಾಸ ದೋಷ ಕೊಳ್ಳಿಗೆ ದೊಣ್ಣೆ

ನಾನು ಚಿಕ್ಕವನಾಗಿದ್ದಾಗ ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿ ಹೇಳ್ತಾ ಇದ್ರು, ಸಹವಾಸ ದೋಷ ಕೊಳ್ಳಿಗೆ (ಕೊರಳಿಗೆ) ದೊಣ್ಣೆ ಅಂತ. ಅ ಸಮಯದಲ್ಲಿ ಅದು ನಂಗೆ ಅಷ್ಟು ಅರ್ಥ ಆಗದಿದ್ರೂ, ಈಗ ಅದು ಎಷ್ಟು ನಿಜ ಅಂತ ಗೊತ್ತಾಗ್ತಿದೆ. ಸ್ನೇಹಿತರ, ಸಹಪಾಠಿಗಳ ಅಥವಾ ಸಹವಾಸಿಗಳ ಜೊತೆಗೆ ನಾವು ಇರುವಾಗ ಅವರ ಗುಣ, ಸ್ವಭಾವ, ನಡತೆ, ಅಭ್ಯಾಸಗಳು ನಮ್ಮನ್ನು ತುಂಬ influence ಮಾಡುತ್ತದೆ.