ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾವುದು ಗ್ರಾಮ್ಯ, ಕೈಗುಳಿಗೆ-3

ಯಾವುದು ಗ್ರಾಮ್ಯ?:
ಮಾಂಗಾಯಿ - ಇದು ಗ್ರಾಮ್ಯವೆನ್ದು ಸಾಮಾನ್ಯ ತಿಳಿವಳಿಕೆ. ನಿಜವಾಗಿ ಮಾವಿನ್ ಕೂಡೆ ಕಾಯಿ ಮಾಂಗಾಯಿ ಶುದ್ಧ ಒರೆಯಾಗಿದೆ. ಇನ್ತಹ ಒರೆಗಳಿನ್ದಲೇ ಭಾಷೆಯ ನಿಜವಾದ ಗುಣ ಎದ್ದು ಕಾಣುವನ್ತಹುದು. ದ್ರಾವಿಡಾದಿ ಭಾಷೆಗಳಲ್ಲಿ ಇನ್ತಹ ಒರೆಗಳು ಕನಿಷ್ಠ ನೂರಾದರೂ ಇವೆ ಮತ್ತು ಅವು ಗ್ರಾಮ್ಯಗಳೆನ್ದೆಣಿಸಲ್ಪಡಲಿಲ್ಲ.

ನಮ್ಮ ರೆಹಮಾನ ಅಪ್ಪಟ ಭಾರತೀಯನಯ್ಯ

ನಮ್ಮ ರೆಹಮಾನ ಈತ ನಿಜದಿ ಅಪ್ಪಟ ಭಾರತೀಯನಯ್ಯ
ಈತನನು ಹರಿದು ಹಂಚಿ ಈ ರೀತಿ ಚಿಂದಿ ಮಾಡಬೇಡಿರಯ್ಯ

ಮದರಾಸಿನವನೆಂದರೆ ಕೆಲವರು ಮುಂಬಯಿಯವನೆಂಬರು
ಏಕೆ ಮುಕ್ತ ಮನಸ್ಸಿನಿಂದಾತನನು ಭಾರತೀಯನೆಂದೆಂಬರು

ಅವನ ಸಂಗೀತಕ್ಕೆ ಕಿವಿಗೊಡುವಾಗ ನಿಮ್ಮಲ್ಲಿತ್ತೇ ಈ ಭಾವ
ಅವನ ತಾಳಕ್ಕೆ ಕುಣಿವಾಗ ಅನಿಸಿದೆಯೇ ಅಲ್ಲಿ ಭೇದ ಭಾವ

ಯಶೋಧೆಯ ಸ್ವಗತ

ಕರುಳ ಬಳ್ಳಿಗಿಂತ ಮಿಗಿಲಾದ ಸಂಬಂಧವೊಂದು
ಬಂಧಿಸಿತ್ತು ನಮ್ಮಿಬ್ಬರನ್ನು
ಪ್ರೀತಿ ಒಲುಮೆ ಮಮಕಾರಗಳೆಂಬ
ಸರಪಳಿಯಿಂದ..
ನಾನು ಅವನನ್ನೆಷ್ಟೇ ಬೈದರು
ಮನದೊಳಗೆಲ್ಲ ಅವನೊಬ್ಬನಷ್ಟೇ ..
ಊರ ಮುಂದೆಲ್ಲ ಅವನನ್ನು ಹಂಗಿಸಿದರು
ಮನದೊಳಗಿನ ಪ್ರೀತಿಗೆ ಕೊನೆಯುಂಟೆ?

ಎಂದಿದ್ದರು ಎಂತಾದರು ಅವನೆಂದು ನನ್ನವನೇ
ನಾ ಇರದೇ ಅವನು ಬದುಕುವುದು ಸಾಧ್ಯವೇ?

ಬೆತ್ತಲೆ ಜಗತ್ತಿನ ಲೇಖಕರಿಗೆ....

ಪ್ರತಾಪ್ ಸಿಂಹರವರೆ ನಮಸ್ಕಾರ,

ಚೆನ್ನಾಗಿದ್ದೀರಾ. ಫೆಬ್ರವರಿ 21ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ‌ ನಿಮ್ಮ ಕುರುಡು ಕಾಂಚಾಣ ಲೇಖನ ಓದಿದೆ, ಚೆನ್ನಾಗಿ ಬರೆದಿದ್ದೀರಿ ಆದರೆ ಜನರಲೈಸಾಗಿ ಬರೆದಿದ್ದೀರಾ, ಬಾರೀ ಬೇಜಾರಾಯ್ತು. ನಿಮ್ಮ ಲೇಖನದಲ್ಲಿ ಬರೋ ವಿಚಾರಗಳನ್ನೆ ತೆಗೆದುಕೊಂಡು ಮಾತಾಡುವ...

ಗಾದೆ ಮಾತುಗಳು : ೧೦ ಕೊಟ್ರೆ ೩೩ ಸಿಕ್ತು.

೦೧. ಕಂತೆಗೆ ತಕ್ಕಂತೆ ಬೊಂತೆ
೦೨. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
೦೩. ಕಾಸಿಗೆ ತಕ್ಕ ಕಜ್ಜಾಯ
೦೪. ಮೋಟಾಳಿಗೊಂದು ಚೋಟಾಳು
೦೫. ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ವಂತೆ
೦೬. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ"
೦೭. ಬ್ಲಾಗ್ ಬರಹಗಾರನಿಗೆ ವರುಷ , ಕಾಮೆಂಟ್ ಮಾಡೋರಿಗೆ ನಿಮಿಷ
೦೮. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ

ಬ್ರ್ಹಹ್ಮ ಲಿಪಿ

ಅಂದೊಮ್ಮೆ
ಪೋಲಿಸರು ಬಂದು
ಮನೆಯ ಬಾಗಿಲು ತಟ್ಟಿದಾಗ
ಬೆಚ್ಚಿ ಬಿದ್ದೆ ನಾ,
ಪೋಲಿಸರಿಂದಲ್ಲ
ಅಕ್ಕಪಕ್ಕದ ಜೋಡಿ ಜೋಡಿ ಕಣ್ಣುಗಳು ಇಣುಕಿದಾಗ
"ಈಗಲೇ ಬರಬೇಕಂತೆ"
ಸಿಡಿಯಿತೊಂದು ಗುಂಡು
ಅಕ್ಕಪಕ್ಕದವರ ಮುಂದೆ
ಆಯಿತು ನನ್ನ ಮಾನ ತುಂಡು

ವಿಧಿಯಿಲ್ಲದೆ ನಡೆದೆ
ಪೋಲಿಸರು ನನ್ನ ಮುಂದೆ
ಕಣ್ಣುಗಳ ಜೋಡಿ ಬೆನ್ನ ಹಿಂದೆ

ಹೋದೆ ನಾನು ಸ್ಟೇಷನ್ಗೆ,

ಮುಸ್ಸಂಜೆ ಬದುಕಿನಲ್ಲೊಂದು ವಿದಾಯದ ಘಳಿಗೆ

ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಪ್ರಮೀಳಾಳೂ ವಧುವಿನ ಅಲಂಕಾರದಲ್ಲಿದ್ದ ಮಗಳ ಕೈ ಎತ್ತಿ ಹಿಡಿದು ನಿಂತಿದ್ದಳು.

ಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್

ಈ ವಿಷಯದ ಬಗ್ಗೆ thatskannada ದಲ್ಲಿ ಒಬ್ಬರು ಬರೆದಿದ್ದಾರೆ. ಇದರ ಪೂರ್ಣ ವರದಿ ಇಲ್ಲಿದೆ [http://thatskannada.oneindia.in/lifestyle/automobiles/2009/0220-why-honda-civic-hybrid-did-not-succeed.html]. ಇದರಲ್ಲಿ ವಿದ್ಯುತ್ ಮೋಟರ್ ಮತ್ತು ಪೆಟ್ರೋಲ್ ಇಂಜಿನ್ನು ಇದೆ . ಹಾಗೆ ಮೈಲೇಜ್ ಕೂಡ ೨೨. ವಿಕಿಪೀಡಿಯದಲ್ಲಿ [http://en.wikipedia.org/wiki/Honda_Civic_Hybrid] ನೋಡಿದಾಗ ಇದರ ಬೆಲೆ ಸುಮಾರು ೧೦ ಲಕ್ಷ. ಅವರು ಹೇಳಿದಂತೆ ಕಾರಿನ ತೆರಿಗೆ ಕಡಿಮೆ ಮಾಡಬೇಕಿತ್ತೇ?

ನಿಮಗೆ ಈ ಗೀತೆ ನೆನಪಿದೆಯಾ ?

ಸಂಪದಿಗರೇ.... ನಾನು ಹೈಸ್ಕೂಲಿನಲ್ಲಿ ಓದುವಾಗ ಹಿಂದೂ ಸೇವಾ ಪ್ರತಿಷ್ಠಾನದಿಂದ ನಮ್ಮ ಶಾಲೆಗೆ ಶಿಕ್ಷಕರು ಬಂದಿದ್ದರು. ಅವರು ಹೇಳಿಕೊಟ್ಟ ಈ ಹಾಡಿನ ಮೊದಲ ಸಾಲುಗಲು ನೆನಪಿವೆ. ಇನ್ನುಳಿದ ಸಾಲುಗಳು ನಿಮ್ಮ ಬಳಿ ಇದ್ದರೆ ಪ್ರತಿಕ್ರಿಯಿಸುತ್ತೀರಾ?
"ಮಾತೆ ಪೂಜಕ ನಾನು ಎನ್ನಯ
ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ
ಒಂದೇ ಆಸೆಯು ಮನದಲಿ "