ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

(‘ಮುದಿಯಾ’ ಸಿನೆಮಾದ ಮುಖಾಂತರ
ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ
ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು
ಸೇರಿಸಿಕೊಂಡಿದ್ದಾರೆ. ಮೊದಲ ಚಿತ್ರ ‘ಮುದಿಯಾ’ ಕನ್ನಡ ನಾಡಿನ ಸಿನೆಮಾ

ಶ್ರೀ ತ್ಯಾಗರಾಜ ಸ್ವಾಮಿಗಳ ಆರಧನೆ

ನಾನು ಸ೦ಗೀತ ಕಲಿಯುತ್ತಿರುವ ನನ್ನ ಪ್ರೀತಿಯ ಟೀಚರ್ ಶ್ರೀಮತ್ತಿ ಉಷಾ, ಇಲ್ಲೇ ಒ೦ದು ಕಡೆ ಚಿಕ್ಕ ಚಿಕ್ಕ ಮಕ್ಕಳಿಗೆ ಸ೦ಗೀತ ಹೇಳಿಕೊದುತ್ತಾರೆ. ಆ ಜಾಗ ವಯಸ್ಸಿನಲ್ಲಿ ಹಿರಿಯರಾದ, ನಮ್ಮೆಲ್ಲರ ಮೆಚ್ಚಿನ ತಾತ, ಶ್ರೀ ವೆ೦ಕಟರಮಣಯ್ಯನವರಿಗೆ ಸ್ವ೦ತದ್ದು. ದೊಡ್ದದಾಗಿ ಒ೦ದು ಹಾಲ್ ಕಟ್ಟಿಸಿದ್ದಾರೆ ಮತ್ತು ಅದನ್ನು ಒ೦ದು ಟ್ರಸ್ಟ್ ಮಾಡಿ, ಅದಕ್ಕೇ ಬರೆದುಬಿತ್ತಿದ್ಡಾರೆ.

ದೇವಯ್ಯ ಪಾರ್ಕ್ ಹತ್ತಿರ ಇರೋ ಎಲ್ಲಾ ಮರಗಳನ್ನು ಧರೆಗುರುಳಿಸಿದ್ದಾರೆ

ಇವತ್ತು ಆಫೀಸಿಗೆ ಹೋಗೋವಾಗ ಮಲ್ಲೇಶ್ವರಂ ದಾರಿಯಲ್ಲಿ ಹೋಗಬೇಕಾಗಿ ಬಂತು. ಹರಿಶ್ಚಂದ್ರ ಘಾಟ್ನಿಂದ ದೇವಯ್ಯ ಪಾರ್ಕ್ ಹತ್ತಿರ ಸ್ವಲ್ಪ ದಿನಗಳ ಹಿಂದೆ ಖುಷಿಯಾಗಿದ್ದ ಎಲ್ಲಾ ಮರಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ...

ಅಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಟ್ರಾಫಿಕ್ ಇರ್ತಿರ್ಲಿಲ್ಲ....

೨೦೦೯ರ ಲೋಕಸಭಾ ಚುನಾವಣೆಯಲ್ಲಿ ನಾಡಪರ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಅನ್ನುವುದರ ಬಗ್ಗೆ ಒಂದು ಮಾತು ಹಾಗು ನಾರಾಯಣ ಗೌಡರು ಹೇಳಿದ ನುಡಿಗಳು.

ನಮಸ್ಕಾರ ಸ್ನೇಹಿತರೆ,
ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆಗಳು ನಮ್ಮ ಮುಂದೆ ಇವೆ. ಅದನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ನೋಡೋದಾದ್ರೆ ಕನ್ನಡಿಗರಾಗಿ ನಾವುಗಳು ಕೆಲವು ವಿಷಯಗಳನ್ನ ಅರಿತುಕೊಳ್ಳಬೇಕು.

ಕು.ರಂಗಿ ಯಾರ ಮಗಳು?

ಆಂಗ್ಲ ಭಾಷೆಯಲ್ಲಿ ಬರೆಯುತ್ತಿರುವುದಕ್ಕೆ ಸಂಪದಿಗರ ಕ್ಷಮೆ ಕೇಳುತ್ತೇನೆ.
ಬರೆಯದೇ ವಿಧಿಯಿಲ್ಲ.
ಆಂಗ್ಲ ಭಾಷೆಯಲ್ಲಿರುವ ಈ ಕೆಳಗಿನ ಐದು ಸಾಲುಗಳನ್ನು ಓದಿ.

"Smt. Rangamma & Sri Rangappa
request the pleasure of your company on the auspiciious occasion of the maariage ceremony of our daughter
Kum. Rangi
On 23 Feb 2009 at 10.00 am at
Sri Ranganatha Temple, Rangapattana".

ಇಂತಹ ಬರವಣಿಗೆಗಳುಳ್ಳ ಅನೇಕ ವಿವಾಹ ಆಮಂತ್ರಣ ಪತ್ರಿಕೆಗಳನ್ನು ನೀವು ನೋಡಿರಬಹುದು.

ಟಾಟಾ ಸ್ಕೈ: ನೀವು ಕನ್ನಡಿಗರೇ? ಹಾಗಿದ್ರೆ ಇನ್ನೊಂದು ಗಂಟೆ ಕಾಯಿರಿ.. ಮತ್ತೊಂದು ಗಂಟೆ ಕಾಯಿರಿ!!

ಇತ್ತೀಚಿಗೆ ನೀವು ಗಮನಿಸಿರಬಹುದು ಕರ್ನಾಟಕದಲ್ಲಿ DTH ಸೇವೆ ಒದಗಿಸಲು ಟಾಟಾ ಸ್ಕೈ, ಡಿಶ್ ಟಿ ವಿ, ಬಿಗ್ ಟಿ ವಿ ಮತ್ತು ಏರ್ ಟೆಲ್ ನ೦ತಹ ಕ೦ಪನಿಗಳೆಲ್ಲ ಕಣಕ್ಕಿಳಿದಿವೆ. ಈ ಪಟ್ಟಿಯಲ್ಲಿ ಕನ್ನಡದ ಗ್ರಾಹಕನನ್ನು ಬೇರೆ ಭಾಷೆಯಲ್ಲೇ ಮಾತಾಡಿಸಬೇಕು ಅನ್ನೋ ಬಲವಾದ ನ೦ಬಿಕೆ ಇಟ್ಟುಕೊ೦ಡಿರೋ ಇನ್ನೊ೦ದು ಕ೦ಪನಿ ಟಾಟಾ ಸ್ಕೈ.

ಆತ ಇನ್ನೂ ಮು೦ದೆಯೇ ಇದ್ದಾನೆ!

ಅಬ್ರಾಹ೦ ಲಿ೦ಕನ್ನನು ಅಮೇರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಸಮಯ. ಸೆನೇಟನ್ನು ಉದ್ದೇಶಿಸಿ ಉದ್ಘಾಟನ ಭಾಷಣ ಮಾಡುವ ಸ೦ದರ್ಭದಲ್ಲಿ ಕೆಲ ಜನರು ಅವಮಾನಿತಗೊ೦ಡು ಕೋಪೋದ್ರಿಕ್ತರಾಗಿದ್ದ೦ತಿತ್ತು. ಕಾರಣ ಲಿ೦ಕನ್ನನ ತ೦ದೆ ಒಬ್ಬ ಬಡಗಿಯಲ್ಲದೆ ಶೂಮೇಕರ್ (ಚಪ್ಪಲಿ ಮಾಡುವವ) ಆಗಿದ್ದ. ಆ ಶೂಮೇಕರನ ಮಗ ದೊಡ್ಡ ದೊಡ್ಡ ಪ್ರತಿಷ್ಠಿತ ವ್ಯಕ್ತಿಗಳನ್ನು ಸೋಲಿಸಿದ್ದ.

ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ 3

ನಮ್ಮ ಅಲೋಚನೆಗಳೇ ನಮ್ಮ ಮನಸ್ಸು. ನಮ್ಮ ಮನಸ್ಸು ಸರಿದು ಹೋದ ಅನೇಕ ನೆನ್ನೆಗಳ ಉತ್ಪನ್ನ, ಫಲ. ಹಾಗೆಯೇ ಆಲೋಚನೆ ಅನೇಕ ನೆನ್ನೆಗಳ ಉತ್ಪನ್ನ. ನೆನಪನ್ನು ಬಿಟ್ಟರೆ, ಮರೆತರೆ ಅಲ್ಲಿ ಆಲೋಚನೆಯೆ೦ಬುದೇ ಇಲ್ಲ. ನೆನಪು ಎ೦ಬುದು ಕಾಲ. ಸ೦ತೋಷ ನಿನ್ನೆಯದಲ್ಲ. ಸ೦ತೋಷ ಕಾಲದ ಉತ್ಪನ್ನವಲ್ಲ. ಸ೦ತೋಷ ಸದಾ ವರ್ತಮಾನದಲ್ಲಿ ಘಟಿಸುತ್ತದೆ, ಘಟಿಸುವ೦ಥಹುದು.