ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಸವಳಿದ ಬಸವ

ಪಾರಂಪರಿಕ ವೃತ್ತಿಗಳಲ್ಲಿ ಬಸವನನ್ನು ಆಡಿಸುವ ವೃತ್ತಿಯು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ನಮ್ಮ ಚಿಕ್ಕಂದಿನ ದಿನಗಳಲ್ಲಿ ಊರೂರು ಸುತ್ತಿಕೊಂಡು ಬರುತ್ತಿದ್ದ ಗಂಗೆದ್ದಲೋರ(ತೆಲುಗಿನಲ್ಲಿ ಎತ್ತುಗಳನ್ನು ಎದ್ದುಲು ಎಂದು ಹೇಳುತ್ತಾರೆ) ಬಸವಣ್ಣಗಳನ್ನು ನೋಡುವುದೇ ನಮಗೆ ಖುಶಿ.

ನಮ್ಮ ಹಾಗೂ ನಮ್ಮಪ್ಪನ ನಡುವಿನ ಭಿನ್ನಾಭಿಪ್ರಾಯಗಳು...

ಹಾ.. ಸ್ನೇಹಿತರೇ.. ಇದೊಂತರ ವಿಚಿತ್ರ "ವಿಷಯ" ಚರ್ಚೆಗೋಸ್ಕರ ಆದ್ರೆ.. ಅಂತ ಅನಿಸುತ್ತದೆ ನನ್ನ ಮನಸ್ಸಿಗೆ..
ಪ್ರಪಂಚದ ಬುಧ್ಧಿವಂತರೆಲ್ಲಾ ಒಂದು ತರಹದ ಉತ್ತರ ನೀಡಿದರೆ ಹೃದಯವಂತರೆಲ್ಲಾ ಇನ್ನೊಂದು ತರಹ ಮಾತಾಡುತ್ತಾರೆ ಈ ವಿಷಯದಲ್ಲಿ. ಹ..ಹಾ.. ನಾನು ಯಾವ ಗುಂಪಿಗೆ ಸೇರುತ್ತೇನೋ ಗೊತ್ತಿಲ್ಲ... ಆದರೆ, ನನ್ನ ಮನಸ್ಸಿನಲ್ಲಿರೋ, ಮನಸ್ಸಿಗೆ ಹಿಂದೆ ಬಂದಿದ್ದ ಯೋಚನೆಗಳೆಲ್ಲ ಒಂದೆಡೆ ಹಾಕಿ, ಅದರ ಸಾರ ತೆಗೆಯೋ ಪ್ರಯತ್ನ ಇದು ಅನ್ಕೋತೀನಿ.. ಹಾ.. ಮುಂದಿನ ದಿನಗಳಲ್ಲಿ ನನ್ನ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯುತ್ತೋ ಗೊತ್ತಿಲ್ಲ.. ಸದ್ಯದ್ದು ಏನಿದೆಯೋ ಅದನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ..

ನಾವುಗಳು ಸಣ್ಣವರಿದ್ದಾಗ, ಅಂದರೆ ತುಂಬ ಸಣ್ಣವರಿದ್ದಾಗ.. ಸುಮಾರು ಹತ್ತು ವರ್ಷ ಆಗೋವರೆವಿಗೂ ನಮ್ಮಪ್ಪ ನಮಗೆ "ಮಹಾನ್ ವ್ಯಕ್ತಿ". ಅಲ್ಲಿ ಅರ್ಥ ಮಾಡಿಕೊಂಡಿದ್ವಾ ಅನ್ನೋ ಪ್ರಶ್ನೆ ಇಲ್ಲ.. ನಮ್ಮಪ್ಪನ ಕೈಯಲ್ಲಿ ಎಲ್ಲ ಸಾಧ್ಯ... ಬಹುಷಃ ಆಮೇಲೆ ಆ ಭಾವನೆ ಕಡಿಮೆಯಾಗುತ್ತಾ ಹೋಗುತ್ತೇನೋ? ಅಲ್ಲಿವರೆವಿಗೂ ಅಪ್ಪ ಮಾಡೋದೆಲ್ಲಾ, ಯಾವತ್ತೂ ಸರಿ ಇರುತ್ತೆ ಅಂದುಕೊಂಡಿದ್ದ ಮನಸ್ಸು, ಸ್ವಲ್ಪ ಉಲ್ಟಾ ಯೋಚನೆ ಮಾಡೋಕ್ಕೆ ಶುರು ಮಾಡುತ್ತಾ ಅಂತಾ.. ಅಪ್ಪನ ಎಲ್ಲಾ ತೀರ್ಮಾನಗಳು ಸರಿ ಅನ್ನಿಸೋದಿಲ್ಲ.. ಸ್ವಲ್ಪ ತಪ್ಪಿರಬೇಕು ಅನ್ನಿಸೋಕ್ಕೆ ಶುರುವಾಗಿರುತ್ತೆ.. ಅಂದರೆ ಮನಸ್ಸಿನಲ್ಲಿ ವಿರುದ್ಧವಾದ ಯೋಚನೆ ಶುರುವಾಗಿರುತ್ತೆ. ಹಾ.. ಮಿತ್ರರೇ.. ಸ್ವಲ್ಪ ಬುದ್ಧಿ ಅಂದರೆ "ಸ್ವಂತ ಬುದ್ಧಿ" ಅಂತಾರಲ್ಲ ಅದು, ಅದು ಬರೋದಿಕ್ಕೆ ಶುರುವಾಗಿರುತ್ತೆ..

ಒಳ್ಳೆಯ ಗೈನೆಕಾಲಜಿಸ್ಟ್ ಗೊತ್ತಿದ್ರೆ ತಿಳಿಸಿ

ಬೆಂಗಳೂರ್ ಸೌತ್ ನಲ್ಲಿರುವ ಒಳ್ಳೆಯ ಆಬ್ಸ್ಟೆಟ್ರಿಶಿಯನ್ ಮತ್ತು ಗೈನೆಕಾಲಜಿಸ್ಟ್ ಗೊತ್ತಿದರೆ ತಿಳಿಸಿ ದಯವಿಟ್ಟು......(ಒಂದಕ್ಕಿಂತ ಜಾಸ್ತಿ ಇದ್ದರೆ ಇನ್ನೂ ಒಳ್ಳೆಯದು.)

ಗಂಡಸರು!

ಸಖೀ,
ಹುಣ್ಣಿಮೆಯ ಚಂದಿರನ
ಅಂದವನು ಕಂಡು
ಅವನ ಕೊಂಡಾಡಬೇಡ,
ಕಣ್ಣು ತೆರೆದು ನೋಡು,
ಅವನಲ್ಲೂ ಕಲೆಗಳಿವೆ;

ದಿಗಂತದಲಿ ಮೂಡುತಿರುವ
ಸೂರ್ಯನ ಸೌಮ್ಯತೆಯ
ನೀ ಬಣ್ಣಿಸಬೇಡ,
ಮೇಲೇರಿ ಬಂದು ಸುಟ್ಟು ಬಿಡುವ
ತಾಪವಡಗಿದೆ ಆತನಲಿ;

ತೀರದಲಿ ನಿಂತು
ಕಡಲ ಪ್ರಶಾಂತತೆಯ
ಮೆಚ್ಚಿಕೊಳ್ಳಬೇಡ,
ಅಬ್ಬರಿಸುವ
ತೆರೆಗಳನೇರಿಕೊಂಡು ಬಂದು
ನಿನ್ನನ್ನೇ ಕಬಳಿಸಿಕೊಳ್ಳುವ

"ಅದಾವ ಶಕ್ತಿ ತುಂಬಿಹುದು ”

ಅದಾವ ಶಕ್ತಿ ತುಂಬಿಹುದು
ತಾಯೆ ನಿನ್ನ ನುಡಿಯಲಿ
ಅದಾವ ಭಕ್ತಿ ನೆಲೆಸಿಹುದು
ನಿನ್ನ ನುಡಿಯ ಗುಡಿಯಲಿ||

ನಿನ್ನ ಹೆಸರೆ ಅಪ್ಯಾಯಮಾನ
ನುಡಿಯೆ ಎನ್ನ ತುಟಿಯಲಿ
ನಿನ್ನ ಲಿಪಿಯೆ ಶೋಭಾಯಮಾನ
ಭಾಷೆ ಭಾಷೆ ನಡುವಲಿ||

ನಿನ್ನ ನೆಲದ ಮಣ್ಣು ತಾನೆ
ಕರುಣೆಯೊಡಲ ಧಾತ್ರಿಯು
ಇಲ್ಲಿ ಹರಿವ ನೀರು ತಾನೆ
ಪವಿತ್ರ ಗಂಗೆ ತುಂಗೆಯು||

ಅಮ್ಮ ನಿನ್ನ ಮಕ್ಕಳೆನಲು
ನಿಜದಿ ನಾವು ಧನ್ಯರು

ಡಾ| ಬಿ ಎಸ್ ಯಡಿಯೂರಪ್ಪನಿಗಿನ್ನು ಡಾ| ಬೇಡ, ಹುಟ್ಟುಹಬ್ಬ ಬೇಡ.

ನನಗಿನ್ನು ಡಾ| ಬೇಡ, ಹಾರ, ತುರಾಯಿ ಬೇಡ, ಹುಟ್ಟುಹಬ್ಬ ಆಚರಿಸಲ್ಲ ಅಂತ ಡಾ|ಮುಖ್ಯ ಮಂತ್ರಿ ಹೇಳಿದ್ದಾರೆ. http://thatskannada.oneindia.in/news/2009/02/24/donot-call-me-as-dr-yeddyurappa-says-karnataka-cm.html
ಅದನ್ನು ಹೊಗಳಿ ಭಟ್ಟರು ಲೇಖನವೂ ಬರೆದಾಯ್ತು. http://thatskannada.oneindia.in/column/bhat/2009/0226-bs-yeddyurappa-and-honorary-doctorate.html

ಜಿಡ್ಡು ಕೃಷ್ಣಮೂರ್ತಿ-ಚಿ೦ತನಧಾರೆ 4

ತಾನು ಮುಖ್ಯಸ್ಥನಾಗಿದ್ದ "ಆರ್ಡರ್ ಆಫ್ ದಿ ಸ್ಟಾರ್" ಸ೦ಸ್ಥೆಯನ್ನು ಹಾಗೂ ತನ್ನನ್ನು ವಿಶ್ವಗುರುವನ್ನಾಗಿಸಲು ಪ್ರಯತ್ನಿಸುತ್ತಿದ್ದ ಹಾಗೂ ಆ ನಿಟ್ಟಿನಲ್ಲಿ ತನ್ನನ್ನು ಬಾಲ್ಯದಿ೦ದಲೂ ಪೋಷಿಸಿದ ಅನಿ ಬೆಸೆ೦ಟರನ್ನೂ ತಿರಸ್ಕರಿಸಿ, ಅದನ್ನು ವಿಸರ್ಜಿಸುವ ಹಿನ್ನೆಲೆಯಲ್ಲಿ ಹಾಲೆ೦ಡಿನ ಅಮೆನ್ ನಲ್ಲಿ ೧೯೨೯ ರ ಆಗಸ್ಟ್ ನಲ್ಲಿ ಜಿದ್ದು ಕೃಷ್ಣಮೂರ್ತಿಯವರು ನೀಡಿದ ಐತಿಹ

ನಾವು ಹುಡುಗಿಯರೇ ಹೀಗೆ ಮುಂದುವರೆದ ಭಾಗ

ಹುಡುಗರಾ ನೀವು ಸಿಕ್ಕಾಗ ದಾರಿಯಲಿ
ತಾಯಿ ಇದ್ದರೆ ನಮ್ಮೊಡನಲಿ
ನಗದಿದ್ದರೂ ,ಮಾತ ಆಡುತ್ತೇವೆ ಮನಸಿನಲಿ

ಮೆಚ್ಚುಗೆ ಕಾಣಬಯಸುತ್ತೇವೆ ನಿಮ್ಮ ಕಣ್ಣಲ್ಲಿ
ಕಂಡರೆ ಸಂತಸ ಮನದೂರಿನಲ್ಲಿ
ಬೀಳದಿದ್ದರೂ ಸರಿ ಪ್ರೀತಿ ಬಲೆಯಲಿ

ನಾವೇನು ಸ್ಥಿತ ಮನದವರಲ್ಲ್ಲ,
ನಿಮ್ಮನ್ನು ಕಂಡೂ ಕಾಣದ ಹಾಗೆ ದೂರವಿರಲು
ನಾವೇನು ಸನ್ಯಾಸಿನಿಯರಲ್ಲ ,

300 ಮೈಲಿ ಪ್ರತಿ ಗ್ಯಾಲನ್ ಅಥವಾ 120 ಮೈಲಿ ಪ್ರತಿ ರೀಚಾರ್ಜ್ ಗೆ ಪಯಣಿಸಲಿರುವ ಕಾರು

ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಗರದಲಿರುವ ಆಪ್ಟೆರಾ ಸಂಸ್ಥೆಯ ಹೊಸ ಮಾರದಿಯ ಈ ಕಾರು ಪ್ರತಿ ಗ್ಯಾಲನ್ ಗೆ 300ಮೈಲಿ ಓಡಿ ಅಚ್ಚರಿ ಮೂಡಿಸಿದೆ.