ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಣ್ಣಿನ ಇನ್ನೊಂದು ಮುಖ

ಕುಡಿನೋಟದಲ್ಲೇ ಕನಸನ್ನು
ಕದಿಯುವುದಿಲ್ಲಾ ನಾವು
ನೋಡುತ್ತೇವೆ ನಮ್ಮ ಕನಸುಗಳು
ನನಸಾಗುವುದೇ ಎಂದು :-)

ಕೇಳುತ್ತಿದ್ದರೂ ನಿಮ್ಮ ಕಥೆ
ಗಮನಿಸುವ ವ್ಯವಧಾನ
ನಿಮಗಿಲ್ಲ, ಅದೇ ನಮ್ಮ ವ್ಯಥೆ
ಕೇಳುತ್ತಿರುತ್ತಿರಿ ಇನ್ನೊಬ್ಬಳ ಕಥೆ :-)

ಬೆರಳು ಮಾಡುತ್ತಿರೀ ಬ್ರಹ್ಮನನ್ನು
ತಪ್ಪಿಸಿಕೊಳ್ಳಲು ನಿಮ್ಮನ್ನು
ನಾವಿದ್ದರೂ ನಿಮ್ಮಿಂದೆ
ಹೋಗುತ್ತೀರಿ ಇನ್ನೊಬ್ಬರ ಹಿಂದೆ :-)

ದಯವಿಟ್ಟು ಮಾನಿಟರ್ ಆರಿಸಿ ...

ನೀವು ಊಟಕ್ಕೆ ಹೋಗೋವಾಗ, ಕಾಫೀ, ಟೀ ಕುಡಿಯಲಿಕ್ಕೆ ಹೋಗೋವಾಗ ದಯವಿಟ್ಟು ಮಾನಿಟರ್ ಆರಿಸಿ ಹೋಗಿ.

ನಮ್ಮೂರಿನಲ್ಲಂತೂ ದಿನಕ್ಕೆ 6 ರಿಂದ 8 ಗಂಟೆ ಕರೆಂಟ್ ಇದ್ರೆ ಅದೇ ಹೆಚ್ಚು, ಅಲ್ಲಿಗೆ ಈ ಶತಮಾನ ಕಳೆದ್ರೂ ಜಾಸ್ತಿ ಕರೆಂಟ್ ಕೊಡೊಲ್ಲ. ಇಲ್ಲಾದ್ರು ಸ್ವಲ್ಪ ಉಳಿಸಿದ್ರೆ ಇಲ್ಲಿಗೇ ಇನ್ನೊಂದು ರೂಪದಲ್ಲಿ ಅನುಕೂಲ ಆಗತ್ತೆ.

ನಾನಂತೂ ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ

ಅಂದು ಅದ್ಯಾವುದೋ ಪರದೇಶೀ ವಿಶ್ವವಿದ್ಯಾಲಯ ಗೌಡಾ
ನೀಡುತ್ತೇವೆಂದಾಗ ಹಿಂದು ಮುಂದು ನೋಡದೇ ಹೋದವರು

ಎಲ್ಲೂ ತುಟಿ ಪಿಟಕ್ಕೆನ್ನದೆ ನಾಲ್ಕಾರು ದಿನ ಹೊರ ದೇಶಗಳ
ಸುತ್ತಾಡಿ ತೆರಿಗೆ ಹಣವ ವ್ಯಯಿಸಿ ಪದವಿ ಸ್ವೀಕರಿಸಿ ಬಂದವರು

ಇಂದು ಜನ ಡಾಕ್ಟರ್ ಡಾಕ್ಟರ್ ಎಂದು ಗೌರವ ಪೂರ್ವಕವಾಗಿ
ಸಂಬೋಧಿಸುತಿರಲು ಬೇಡ ಎಂದು ಅಂಗಲಾಚುತಿರುವುದೇಕೆ

ದಾಹ

ಬೇಸಿಗೆ ಬಂತೆಂದರೆ ಬಯಲುಸೀಮೆಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ.ಎಲ್ಲಿ ನೋಡಿದರೂ,ಬಿರುಬಿಸಿಲಿನ ಝಳ.ದನಕರುಗಳ ಪಾಡಂತೂ ಹೇಳತೀರದು.ಅಂತರ್ಜಲ ಆಳಕ್ಕಿಳಿದ ಪರಿಣಾಮವಾಗಿ ತೆರೆದ ಬಾವಿಗಳು ಒಣಗಿನಿಂತಿವೆ.ವಿದ್ಯುತ್ ಅಭಾವದಿಂದಾಗಿ ಕೊಳವೆಬಾವಿಗಳ ನೀರೂ ಸಕಾಲಕ್ಕೆ ಅಲಭ್ಯ.
ಇಂತಹ ಸಮಯಗಳಲ್ಲಿ ನೀರಡಿಕೆಯನ್ನು ಹಿಂಗಿಸಿಕೊಳ್ಳಲು ಜನ ಜಾನುವಾರುಗಳು ಕೆರೆಗಳನ್ನು ಅವಲಂಬಿಸುವುದು ಸಾಮಾನ್ಯ.ಪಾರಂಪರಿಕ ಜಲಮೂಲವಾದ ತಲಪರಿಗೆಗಳು ಈ ಸಂಧಿಗ್ಢ ಸಮಯದಲ್ಲಿ ಬಯಲುಸೀಮೆಯ ಬಹುತೇಕ ಜನರ ದಾಹಕ್ಕೆ ಪರ್ಯಾಯವಾಗಿ ನೀರೊದಗಿಸುತ್ತಿದ್ದವು.ತಲಪರಿಗೆಯ ನೀರು ಎಳನೀರಿನ ರೀತಿ.ತಲಪರಿಗೆಯ ಕಣ್ಣು ಎಂದು ಕರೆಯುವ ಭಾಗದಿಂದ ನೀರು ಒಸರುತ್ತದೆ.ಈ ನೀರನ್ನು ಬೇಸಾಯಕ್ಕೆ ಕೂಡಾ ತುಮಕೂರು ಜಿಲ್ಲೆಯಲ್ಲಿ ಬಳಸುತ್ತಾರೆ.
ಇತ್ತೀಚೆಗೆ ತಲಪರಿಗೆಗಳು ಕೂಡ ನಿರ್ವಹಣೆಯ ಕೊರತೆಯಿಂದಾಗಿ ಸೊರಗುತ್ತಿವೆ.ಮಧುಗಿರಿಯ ಚೋಳೆನಹಳ್ಳಿಯ ತಲಪರಿಗೆ,ಕಾರಮರಡಿಯ ಸೀನೀರು ಹೊಳೆ ತಲಪರಿಗೆ,ಪುರವರದ ತಲಪರಿಗೆ,ಬಸವನಹಳ್ಳಿಯ ಜೋಡಿ ತಲಪರಿಗೆಗಳು,ಪಾವಗಡ ತಾಲ್ಲೂಕಿನ ವಿನೋಬನಗರ,ವದನಕಲ್,ಮುಂತಾದ ಕಡೆ ಈ ನೀರಸೆಲೆಗಳು ಇನ್ನೂ ಜೀವಂತವಾಗಿವೆ.

ಮಗಳು ಋತುಮತಿಯಾದಾಗ.........

ಈಗಿನ ಕಾಲದಲ್ಲಿ cleanliness' ಮತ್ತು 'hygiene' ಎಂಬ ಎರಡನ್ನು ಬಿಟ್ಟರೆ "ಆ ಕಾಲದಲ್ಲಿ", ಅದರಲ್ಲೂ ವಿಶೇಷವಾಗಿ ಆ ಘಟ್ಟವನ್ನು ಪ್ರವೇಶಿಸುತ್ತಿರುವ ಬಾಲೆಯರು ಮತ್ತು ಪೋಷಕರು ಅನುಸರಿಸಬೇಕಾದ ಕೆಲವು ಸೂಚನೆಗಳ ಬಗ್ಗ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ.

ನಾ ಕಂಡ ಕವಿಮನೆ

ಕಳೆದ ವರ್ಷ ಮಲೆನಾಡಿನ ಆಸುಪಾಸಿನ ಸ್ಥಳಗಳಿಗೆ ಭೇಟಿ ನೀಡಿದಾಗ ನಮ್ಮ ನೋಡಲೇ ಬೇಕಾದ ಸ್ಥಳಗಳ ಲಿಸ್ಟ್ ನಲ್ಲಿ ಕವಿಶೈಲ ಮತ್ತೆ ಕವಿಮನೆ ಕೂಡ ಇತ್ತು. ಹಾಗೆಯೇ ಅಲ್ಲಿಗೆ ಹೋದೆವು ಕೂಡಾ, ಆಗ ಈ ಪಾಮರಳ ದೃಷ್ಟಿಯಲ್ಲಿ ಕಂಡ ಕವಿಮನೆಯನ್ನ ನಿಮ್ಮ ಜೊತೆಗೂ ಹಂಚಿಕೊಳ್ಳಬೇಕೆಂಬ ಇಚ್ಚೆ ಈ ಬರಹಕ್ಕೆ ಸ್ಫೂರ್ತಿ.

ಮೊದಲಿಗೆ ಹೋಗಿದ್ದು ಆನೆಗಳ ಆಡುಂಬೊಲವಾದ ಸಕ್ರೆಬೈಲಿಗೆ. ನೀರಿನಲ್ಲಿ ಉರುಳಾಡುತ್ತಾ, ಮಾಲೀಸು ಮಾಡಿಕೊಂಡು ಗಮ್ಮತ್ತು ಮಾಡುತ್ತಿದ್ದ ಆ ’ಹಿರಿ’ಜೀವಿಗಳ ಗಜಾಭಿಷೇಕ, ಅವುಗಳ ಶಿಸ್ತುಬದ್ಧನಡಾವಳಿ ಮತ್ತು ಆಟವನ್ನ ಕಣ್ ತನಿಯೆ ನೋಡಿ, ಮಂಡಗದ್ದೆಗೆ ಹೋದ್ವಿ. ಅಲ್ಲಿ ಪಕ್ಷಿಗಳು ಕಾಣಸಿಗದಿದ್ದರೂ ಅವುಗಳ ಕಲರವ ಕೇಳುತ್ತಿತ್ತು. ಬೆಂಗಳೂರಿನಲ್ಲಿ ವಾಹನಗಳ ಕರ್ಕಶ ಸದ್ದನ್ನೇ ಕೇಳಿ ದಣಿದಿದ್ದ ನಮ್ಮ ನಮ್ಮ ಕಿವಿಗಳಿಗೆ ಚಿಲಿಪಿಲಿ ಕೇಳಿಸಿ ಮಧುರಾನುಭೂತಿ ತರಿಸಿಕೊಂಡೆವು.

ಸಾಗರದ ಕವಿ ಲಿಂಗಣ್ಣಯ್ಯನವರ ಅನುಪಮ ಕಲಾಕ್ಋತಿ

ಸಾಗರದ ಕವಿ ಲಿಂಗಣ್ಣಯ್ಯ (ಎಸ್.ಕೆ.ಲಿಂಗಣ್ಣಯ್ಯ) ನವರ ಬಗ್ಗೆ ಈಗಾಗಲೇ ಪ್ರತ್ಯೇಕವಾಗಿ ಮಾಹಿತಿ ನೀಡಿದೆ. ಇಲ್ಲಿ ಅವರು ರಚಿಸಿದ ಅಪೂವಱವಾದ ಕಲಾಕ್ಋತಿಯನ್ನು ಆಸಕ್ತರಿಗಾಗಿ ಪರಿಚಯಿಸಿದೆ.ಿದು