ನಾನಂತೂ ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ

ನಾನಂತೂ ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ

ಅಂದು ಅದ್ಯಾವುದೋ ಪರದೇಶೀ ವಿಶ್ವವಿದ್ಯಾಲಯ ಗೌಡಾ
ನೀಡುತ್ತೇವೆಂದಾಗ ಹಿಂದು ಮುಂದು ನೋಡದೇ ಹೋದವರು

ಎಲ್ಲೂ ತುಟಿ ಪಿಟಕ್ಕೆನ್ನದೆ ನಾಲ್ಕಾರು ದಿನ ಹೊರ ದೇಶಗಳ
ಸುತ್ತಾಡಿ ತೆರಿಗೆ ಹಣವ ವ್ಯಯಿಸಿ ಪದವಿ ಸ್ವೀಕರಿಸಿ ಬಂದವರು

ಇಂದು ಜನ ಡಾಕ್ಟರ್ ಡಾಕ್ಟರ್ ಎಂದು ಗೌರವ ಪೂರ್ವಕವಾಗಿ
ಸಂಬೋಧಿಸುತಿರಲು ಬೇಡ ಎಂದು ಅಂಗಲಾಚುತಿರುವುದೇಕೆ

ಅಂದೇ ಆ ಪದವಿಯ ತಿರಸ್ಕರಿಸಿ ತೆಪ್ಪಗೇ ಇರುವುದ ಬಿಟ್ಟು
ನೀವಾಗಿಯೇ ಇಂದು ಸುಮ್ಮನೇ ಸುದ್ದಿ ಮಾಡುತ್ತಿರುವುದೇಕೆ?

ಪದವಿ ಬೇಕು ನಿಮ್ಮ ಮನೆಯ ಗೋಡೆಯಲಿ ರಾರಾಜಿಸುತಿರಲು
ಆದರೆ ಜನ ನಿಮ್ಮ ಅದರಿಂದ ಗುರುತಿಸಬಾರದು ಅನ್ನುವುದೇಕೆ

ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಜೀವನವೂ ಜನಮನಗಳನು
ಗೆಲ್ಲುವಂತಿರಬೇಕು, ಇಲ್ಲವಾದರೆ ಜನ ನಿಮ್ಮ ಗೆಲ್ಲಿಸುವುದೇಕೆ

ನಾನಂತೂ ನಿಮ್ಮನ್ನು ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ
ಇಲ್ಲವಾದರೆ ಹಾಗನ್ನಬಾರದೆಂಬ ಹೊಸ ಕಾನೂನು ಜಾರಿಗೆ ತನ್ನಿ

Rating
No votes yet

Comments