ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಾಮುನ್ ಮಾವಿನ ಗುಂಗಿನಲ್ಲಿ

"ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ" ಎನ್ನುತ್ತಾ ೩ ಅಡಿಕೆ ಗಾತ್ರದ ಹಣ್ಣುಗಳಿದ್ಡ ಸಣ್ಣ ತಟ್ಟೆಯನ್ನು ಕೈಗಿತ್ತರು ಬೇಳೂರು ಹೆಗಡೆ ಸುಬ್ಭಣ್ಣ.

ದೇವರೆಂಬ ಭ್ರಾಂತು

[ಇಂದು, ಫೆಬ್ರವರಿ ೨೮ ಇಂಡಿಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ - ಅದಕ್ಕೆ ನನ್ನ ಪುಟ್ಟ ಕಾಣಿಕೆ]

ಈಗಷ್ಟೆ ಡಾ. ರಿಚರ್ಡ್ ಡಾಕಿನ್ಸನ ‘The God Delusion’ ಪುಸ್ತಕ ಓದಿ ಮುಗಿಸಿದೆ.
ಅವನ ಇತರ ವೈಜ್ಞಾನಿಕ ಪುಸ್ತಕದ ಹಾಗೆ ಇದು ಡಾರ್ವಿನನ ವಿಕಾಸವಾದದ ಬಗ್ಗೆಗಿನ ಪುಸ್ತಕವಲ್ಲ. ಆದರೂ, ದೇವರಂಬ ಭ್ರಾಂತಿನ ಬಗ್ಗೆ ವೈಜ್ಞಾನಿಕ ಕಾಣ್ಕೆಗಳ ಆಧಾರದ ಮೇಲೆ ಹಾಗು ಆ ಕಾಣ್ಕೆಗಳ ಬಗ್ಗೆಗಿನ ಸಂಶೋಧನೆಗಳ ಬಗ್ಗೆಗಿನ ಪುಸ್ತಕ.

ಮೋಹನ ರಾಗ !

ಮೌನದ ಕಣಿವೆಯೊಳಗೆ ಆತ ಇಳಿದ. ಒಂದೊಂದೇ ಮೆಟ್ಟಿಲು...ಮೊದಲ ಮೆಟ್ಟಿಲು ಇಳಿದಾಗ ಮಾತಿನ ಜಗತ್ತಿನ ಬಹಳಷ್ಟು ಭಾಗ ಕಾಣುತ್ತಿತ್ತು. ಎರಡನೇ ಮೆಟ್ಟಿಲಿನಲ್ಲಿ ಅದೇ ಜಗತ್ತು ಅದೃಶ್ಯವಾಗತೊಡಗಿತು. ಮೊದಲು ಕಾಣೆಯಾದದ್ದು ಕಾಲು...ಹೀಗೇ ಮೆಟ್ಟಿಲು ಮೆಟ್ಟಿಲು ಇಳಿದು ಕೊನೆಯ ಮೆಟ್ಟಿಲಿನಲ್ಲಿದ್ದಾಗ ಮೇಲಕ್ಕೆ ತಲೆ ಎತ್ತಿದ.

"ಸಾಂಗತ್ಯ" ವೆಂಬ ಆಸಕ್ತರ ಸಮೂಹ

ಒಂದು ಖುಷಿಯನ್ನು ಹಂಚಿಕೊಳ್ಳಲು ಕಾರಣ ಬೇಕಿಲ್ಲ. ಖುಷಿಯಾಗಿದೆ, ಅದಕ್ಕೇ ಹಂಚಿಕೊಳ್ಳುತ್ತಿದ್ದೇನೆ ಎಂದರಷ್ಟೇ ಸಾಕು. ಹಾಗೆಯೇ "ಸಾಂಗತ್ಯ’ ಹೊಸದೊಂದು ಬ್ಲಾಗ್. ಇತ್ತೀಚೆಗಷ್ಟೇ ಆರಂಭವಾದದ್ದು.

"ನೀಲಿಹಲ್ಲು"

ಏನಿದು ಈ ನೀಲಿಹಲ್ಲು ಎಂದು ಆಶ್ಚರ್ಯವಾಗುತ್ತಿರಬಹುದಲ್ಲವೇ??

ಹಲ್ಲು ಎಂದರೆ ಎಲ್ಲರಿಗೂ ತಕ್ಷಣ ಹೊಳೆಯುವುದು ಫಳಫಳನೆ ಹೊಳೆಯುವ ಹಲ್ಲು, ಬೆಳ್ಳಗಿರುವ ಹಲ್ಲು. ಆದರೆ ಕೆಲವರಿಗೆ ಸ್ವಲ್ಪ ಹಳದಿಯಾಗಿರುತ್ತದೆ. ಆ ಬಿಳಿ, ಹಳದಿ ಹಲ್ಲುಗಳ ವಿಚಾರ ಬಿಡಿ (ನಾನೆಲ್ಲಿ ಹಿಡಿದುಕೊಂಡಿದ್ದೇನೆ ಬಿಡುವುದಕ್ಕೆ ಅಂತ ಕೇಳಬೇಡಿ ಮತ್ತೆ).

ನಮ್ಮ ಕಚೇರಿಯಲ್ಲಿ ನನ್ನ ಸಹುದ್ಯೋಗಿಯೊಬ್ಬರು ನನ್ನ ಬಳಿಬಂದು ನನಗೆ ನೀಲಿಹಲ್ಲು ಬೇಕಿದೆ, ಸಿಗತ್ತ ಅಂದರು. ಅದಕ್ಕೆ ನಾನು ನೀಲಿಹಲ್ಲ ಎಂದು ಆಶ್ಚರ್ಯಪಟ್ಟು, ನನ್ನ ಬಳಿಯಂತು ಇಲ್ಲ. ಅಂಗಡಿಯಲ್ಲು ದೊರೆಯುವುದಿಲ್ಲ ಅನ್ಸತ್ತೆ. ಎಲ್ಲಿ ತಯಾರಿ ಮಾಡುತ್ತಾರೋ ನನಗೆ ಗೊತ್ತಿಲ್ಲ. ಒಂದು ಕೆಲಸ ಮಾಡಿ, ನೀವು ನೇರ ದಂತವೈದ್ಯರ ಬಳಿ ಹೋಗಿ ವಿಚಾರಿಸಿ ಎಂದು ವ್ಯಂಗ್ಯವಾಗಲ್ಲದಿದ್ದರೂ ಸ್ವಲ್ಪ ತಮಾಷೆಯಾಗೇ ಉತ್ತರಿಸಿದೆ.

ಬುಧಮಂಗಳಯುತಿ

ಮಾರ್ಚ್ ೧ ಮತ್ತು ೨, ೨೦೦೯ಱ ಬೆಳಿಗ್ಗೆ ೫.೫೫ಱಿಂದ ೬.೧೫ಱೊಳಗೆ ಬುಧಮಂಗಳರು ಜೊತೆಯಾಗಿರುವುದನ್ನು ನೋಡಿ. ಫೆಬ್ರುವರಿ ೨೪, ೨೬-೨೮ಱ ಮುಂಜಾನೆ ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಮಂಜು ಕವಿದಿದ್ದಱಿಂದ ಗ್ರಹವೀಕ್ಷಣೆ ನಿರಾಶಾದಾಯಕವಾಗಿತ್ತು.

ನನ್ನ್ಹುಡುಗಿ - ನನ್ನ ಹುಡುಗಿ

ಯಾರು ಆ ಅರಗಿಣಿ ಕೊಕ್ಕಲ್ಲಿ ಗುಲಾಬಿ ಬಣ್ಣ ತುಂಬಿದವರು
ಯಾರು ಆ ಗುಲಾಬಿ ಹೂವಲ್ಲಿ ನನ್ನುಡುಗಿಯ ನಗುವನ್ನು ಇಟ್ಟವರು
ಯಾರು ನನ್ನ್ಹುಡುಗಿಯ ನಗುವಿಗೆ ಪ್ರೀತಿಯ ಬಣ್ಣ ಹಚ್ಚಿದವರು
ಯಾರು ಈ ಪ್ರೀತಿಯ ಬಣ್ಣಕ್ಕೆ ಪ್ರೇಮಿಯ ಹೆಸರನ್ನು ಇಟ್ಟವರು

ಯಾರು ಹರಿವ ನೀರಿಗೆ ದಾರಿಯನ್ನು ತೋರಿದವರು
ಯಾರು ಆ ಹರಿವ ನೀರಲ್ಲಿ ಮೀನಿಗೆ ಹೆಜ್ಜೆಯನಿಡಲು ಅವಕಾಶ ಮಾಡಿಕೊಟ್ಟವರು

ಸಂಪದಕ್ಕೂ ಟೂಲ್-ಬಾರ್ ಮಾಡಿದರೆ ಹೇಗಿರುತ್ತೆ??

ಸಂಪದ ಕನ್ನಡದ ಎಲ್ಲ ಕಮ್ಯುನಿಟಿ ತಾಣಗಳಿಗಿಂತ ವಿಶೇಷವಾಗಿದೆ. ಆದರೆ ಪ್ರತೀ ಬಾರಿಯೂ ನಮ್ಮ ಬರಹಗಳಿಗೆ ಪ್ರತಿಕ್ರಿಯೆ ಬಂದಾಗ ಅದು ಒಳಪೆಟ್ಟಿಗೆ (inbox) ಗೆ ಹೋಗುತ್ತೆ..... ಇದರ ಬದಲು IE ಯ ಟೂಲ್-ಬಾರ್ ನಲ್ಲೇ ನಮ್ಮ ಬರಹಗಳಿಗೆ ಬಂದ ಪ್ರತಿಕ್ರಿಯೆಗಳು ಗೊತ್ತಾಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.

ಎನ್ನ ರೂಪದಲ್ಲಿ ನಿನ್ನ ಸಾವು ಕಾಡಿತ್ತೆ?

ರಾತ್ರಿಯಲ್ಲಿ ನೀ ಬರುವುದು ಖಂಡಿತಾ
ಎಂದು ತಿಳಿದು ಬಾಗಿಲು ಜಡಿದು
ಕಿಟಕಿ ಮುಚ್ಚಿ ಹೊದಿಕೆ ಹೊದ್ದ ನಂತರವೂ
ನೀ ಬಂದು ಕಾಡುವುದೇಕೆ

ನಿನ್ನ ದೂರವಿಡಲು ನಾ ಮಾಡುವ
ಯತ್ನವೆಲ್ಲವೂ ಸಾಗರದಿ
ಹುಣಿಸೆ ಹುಳಿಯಾದಂತಾಗುವುದೇಕೆ
ನಾನೇನು ನಿನ್ನ ಪ್ರಿಯಳಲ್ಲ, ಅದರೂ ನೀ
ಬರುವೆ ನನ್ನಬಳಿಗೇಕೆ,
ಪ್ರಿಯನಿದ್ದಾನೆ ಬಳಿಯಲ್ಲೇ, ಜೋಕೆ

ಬೇಡ ಮತ್ತೆ ಹಾಡಬೇಡ ಆ ಹಾಡ