ಜಾಮುನ್ ಮಾವಿನ ಗುಂಗಿನಲ್ಲಿ

ಜಾಮುನ್ ಮಾವಿನ ಗುಂಗಿನಲ್ಲಿ

"ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ" ಎನ್ನುತ್ತಾ ೩ ಅಡಿಕೆ ಗಾತ್ರದ ಹಣ್ಣುಗಳಿದ್ಡ ಸಣ್ಣ ತಟ್ಟೆಯನ್ನು ಕೈಗಿತ್ತರು ಬೇಳೂರು ಹೆಗಡೆ ಸುಬ್ಭಣ್ಣ.

ಒಂದು ಹಣ್ಣು ಬಾಯಿಗೆ ಹಾಕ್ಕೊಂಡು ಚೀಪಿದೆ. ಜೇನಿನಂತೆ ಸವಿಯಾದ ರಸ ಹೀರಿದೆ. ಬಾಯಲ್ಲಿ ಉಳಿದ ಪುಟ್ಟ ಗೊರಟನ್ನು ಉಗುಳಿದೆ. "ಬಹಳ ಸವಿಯಾಗಿದೆ. ಮಾವಿನಹಣ್ಣು ಇದ್ದ ಹಾಗಿದೆ. ಏನಿದು?" ಕೇಳಿದೆ. "ಅದು ಅಡಿಕೆಮಾವು. ಈ ತಳಿಗೆ ಜಾಮುನ್ ಮಾವು ಅಂತೀವಿ. ಇಲ್ಲಿ ಒಬ್ಬರ ತೋಟದಲ್ಲಿ ಇದರ ಮರವಿದೆ. ಪ್ರತಿ ವರುಷ ಹಣ್ಣು ತರುತ್ತೇನೆ. ಸಕ್ರೆ ಪಾಕದಲ್ಲಿ ಹಾಕುತ್ತೇನೆ. ಹೀಗೆ ಬಂದವರಿಗೆ ಕೊಡುತ್ತೇನೆ" ಎನ್ನುತ್ತಾ ಡಬ್ಬದ ಮುಚ್ಚಳ ಹಾಕಿದರು ಹೆಗಡೆ ಸುಬ್ಬಣ್ಣ.

(ಪೂರ್ಣ ಲೇಖನ ಸದ್ಯದಲ್ಲೇ ಸೇರಿಸಲಿದ್ದೇನೆ. ಬ್ಲಾಗ್ ಮಾಡುವ ನನ್ನ ಮೊದಲ ಪ್ರಯತ್ನ ಇದು) 

Rating
No votes yet

Comments