ಎನ್ನ ರೂಪದಲ್ಲಿ ನಿನ್ನ ಸಾವು ಕಾಡಿತ್ತೆ?

ಎನ್ನ ರೂಪದಲ್ಲಿ ನಿನ್ನ ಸಾವು ಕಾಡಿತ್ತೆ?

ರಾತ್ರಿಯಲ್ಲಿ ನೀ ಬರುವುದು ಖಂಡಿತಾ
ಎಂದು ತಿಳಿದು ಬಾಗಿಲು ಜಡಿದು
ಕಿಟಕಿ ಮುಚ್ಚಿ ಹೊದಿಕೆ ಹೊದ್ದ ನಂತರವೂ
ನೀ ಬಂದು ಕಾಡುವುದೇಕೆ

ನಿನ್ನ ದೂರವಿಡಲು ನಾ ಮಾಡುವ
ಯತ್ನವೆಲ್ಲವೂ ಸಾಗರದಿ
ಹುಣಿಸೆ ಹುಳಿಯಾದಂತಾಗುವುದೇಕೆ
ನಾನೇನು ನಿನ್ನ ಪ್ರಿಯಳಲ್ಲ, ಅದರೂ ನೀ
ಬರುವೆ ನನ್ನಬಳಿಗೇಕೆ,
ಪ್ರಿಯನಿದ್ದಾನೆ ಬಳಿಯಲ್ಲೇ, ಜೋಕೆ

ಬೇಡ ಮತ್ತೆ ಹಾಡಬೇಡ ಆ ಹಾಡ
ನೆನಪಿಸಿಕೊಂಡರೆ ,ಮೈ ಜುಮ್ಮೆಂದು
ಕಿವಿಗಳು ಕೊರೆಯುತ್ತವೆ

ಬೇಡ ನೀ ಮುಟ್ಟಬೇಡ ಎನ್ನ
ಮುಟ್ಟಿದರೆ ಕಿರಿಕಿರಿ ಜೊತೆಗೆ ಕೋಪ
ಕೊಂಚ ಹೊತ್ತು ಉಳಿವ ನೋವು

ಹಳೇ ರಾಗಕ್ಕೆ ಮನಸೋತು
ಹೊದಿಕೆ ತೆಗೆದೆನೆಂದುಕೊಂಡೆಯಾ
ಅಯ್ಯೋ ಮರುಳ ನೀನು

ನಿನ್ನ ಸ್ಪರ್ಶದಿ ಮೋಡಿಗೊಳಗಾಗಿ
ಕೈತೆಗೆದೆನೆಂದುಕೊಂಡೆಯಾ
ಅಯ್ಯೋ ಮೂರ್ಖ ನೀನು

ನನ್ನ ಕರಸ್ಪರ್ಶದ ರಭಸಕ್ಕೆ
ಬವಳಿ ಬಂದಿತೇ ನಿನಗೆ
ನಿನ್ನ ಕತೆ ಮುಗಿಯಿತಿನ್ನು

ಸಾವ ಬಳಿ ಬಂದೆಕೆ ಹಾಡಿ ಕರೆದೆ
ಎನ್ನ ರೂಪದಲ್ಲಿ ನಿನ್ನ ಸಾವು ಕಾಡಿತ್ತೆ?
ಬಂತೇ ಕೊನೆಗೂ ನಿನ್ನ ಕೊನೆ?

Rating
No votes yet

Comments