ನನ್ನ್ಹುಡುಗಿ - ನನ್ನ ಹುಡುಗಿ

ನನ್ನ್ಹುಡುಗಿ - ನನ್ನ ಹುಡುಗಿ

ಯಾರು ಆ ಅರಗಿಣಿ ಕೊಕ್ಕಲ್ಲಿ ಗುಲಾಬಿ ಬಣ್ಣ ತುಂಬಿದವರು
ಯಾರು ಆ ಗುಲಾಬಿ ಹೂವಲ್ಲಿ ನನ್ನುಡುಗಿಯ ನಗುವನ್ನು ಇಟ್ಟವರು
ಯಾರು ನನ್ನ್ಹುಡುಗಿಯ ನಗುವಿಗೆ ಪ್ರೀತಿಯ ಬಣ್ಣ ಹಚ್ಚಿದವರು
ಯಾರು ಈ ಪ್ರೀತಿಯ ಬಣ್ಣಕ್ಕೆ ಪ್ರೇಮಿಯ ಹೆಸರನ್ನು ಇಟ್ಟವರು

ಯಾರು ಹರಿವ ನೀರಿಗೆ ದಾರಿಯನ್ನು ತೋರಿದವರು
ಯಾರು ಆ ಹರಿವ ನೀರಲ್ಲಿ ಮೀನಿಗೆ ಹೆಜ್ಜೆಯನಿಡಲು ಅವಕಾಶ ಮಾಡಿಕೊಟ್ಟವರು
ಯಾರು ಆ ಮೀನಿನ ಕಣ್ಣಲ್ಲಿ ಹೊಳೆಯುವ ಬಣ್ಣ ತುಂಬಿದವರು
ಯಾರು ಆ ಹೊಳೆಯುವ ಕಣ್ಣಲ್ಲಿ ನನ್ನ್ಹುಡುಗಿಯ ಚಿತ್ರ ಬರೆದವರು

ಯಾರು ಕಾಣದ ಊರಲ್ಲಿ ಕಣ್ಣಿಗೆ ಕಾಣುವ ಕಾಡನ್ನು ಬೆಳೆಸಿದವರು
ಯಾರು ಆ ಕಣ್ಣಿಗೆ ಕಾಣುವ ಕಾಡಲ್ಲಿ ಕುಣಿಯುವ ಜಿಂಕೆಯ ತಂದಿಟ್ಟವರು
ಯಾರು ಆ ಕುಣಿಯುವ ಜಿಂಕೆಯ ಮೈಗೆ ಬಣ್ಣದ ರಂಗೋಲಿ ಬಿಟ್ಟವರು
ಯಾರು ಆ ಜಿಂಕೆಯ ಚೆಲುವಲ್ಲಿ ನನ್ನ್ಹುಡುಗಿಯ ಚೆಲುವನ್ನು ತುಂಬಿದವರು

ಯಾರು ಆ ಕೋಗಿಲೆಗೆ ಹಾಡನು ಹಾಡಲು ಹೇಳಿಕೊಟ್ಟವರು
ಯಾರು ಆ ನವಿಲಿಗೆ ನಾಟ್ಯವ ಮಾಡಲು ಹೇಳಿಕೊಟ್ಟವರು
ಯಾರು ಆ ಗಂಧದ ಮರದಲಿ ಸುಗಂಧದ ಪರಿಮಳ ತುಂಬಿದವರು
ಯಾರು ಈ ಸುಂದರ ಪ್ರಕೃತಿ ಸೊಬಗಲ್ಲಿ ಮತ್ತೆ ಮತ್ತೆ ನನ್ನ್ಹುಡುಗಿಯ ನಗೆಯನ್ನು ನೆನಪಿಸುವವರು

Rating
No votes yet

Comments