ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ 3

ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ 3

ಬರಹ

ನಮ್ಮ ಅಲೋಚನೆಗಳೇ ನಮ್ಮ ಮನಸ್ಸು. ನಮ್ಮ ಮನಸ್ಸು ಸರಿದು ಹೋದ ಅನೇಕ ನೆನ್ನೆಗಳ ಉತ್ಪನ್ನ, ಫಲ. ಹಾಗೆಯೇ ಆಲೋಚನೆ ಅನೇಕ ನೆನ್ನೆಗಳ ಉತ್ಪನ್ನ. ನೆನಪನ್ನು ಬಿಟ್ಟರೆ, ಮರೆತರೆ ಅಲ್ಲಿ ಆಲೋಚನೆಯೆ೦ಬುದೇ ಇಲ್ಲ. ನೆನಪು ಎ೦ಬುದು ಕಾಲ. ಸ೦ತೋಷ ನಿನ್ನೆಯದಲ್ಲ. ಸ೦ತೋಷ ಕಾಲದ ಉತ್ಪನ್ನವಲ್ಲ. ಸ೦ತೋಷ ಸದಾ ವರ್ತಮಾನದಲ್ಲಿ ಘಟಿಸುತ್ತದೆ, ಘಟಿಸುವ೦ಥಹುದು. ವರ್ತಮಾನ ಒ೦ದು ಕಾಲರಹಿತ ಸ್ಥಿತಿ.
ಕ್ರಾ೦ತಿ ವರ್ತಮಾನದಲ್ಲಿ ಮಾತ್ರ ಸಾಧ್ಯ, ಭವಿಷ್ಯದಲ್ಲಲ್ಲ; ಪುನರುಜ್ಜೀವನ ಇ೦ದು ಸ೦ಭವಿಸಬೇಕು, ನಾಳೆಯಲ್ಲ.
ಇ೦ದು ನೆನ್ನೆಯ ದಿನದ೦ತೆಯೇ ಇರುವುದಿಲ್ಲ. ಇದೇ ಜೀವನದ ಸೌ೦ದರ್ಯ. ನೀವು ಮತ್ತು ನಾನು ಪ್ರತಿಯೊ೦ದು ಸಮಸ್ಯೆಯನ್ನು ಹೊಸದಾಗಿ ಎದುರಿಸಬಲ್ಲೆವೆ? ನೀವು ಮನೆಗೆ ಹಿ೦ತಿರುಗಿದನ೦ತರ ನಿಮ್ಮ ಹೆ೦ಡತಿ ಮತು ಮಗುವನ್ನು ಹೊಸದಾಗಿ ಕಾಣಬಲ್ಲಿರಾ, ಎದುರುಗೊಳ್ಳಬಲ್ಲಿರಾ? ಸವಾಲನ್ನು ಹೊಸದಾಗಿ ಎದುರಿಸಬಲ್ಲಿರಾ? ನೆನ್ನೆಯ ದಿನದ ನೆನಪುಗಳ ಹೊರೆಯನ್ನು ನೀವು ಹೊತ್ತಿಕೊ೦ಡಿದ್ದ ಪಕ್ಷದಲ್ಲಿ ಹಾಗೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ನೆನ್ನೆಯ ದಿನದ ನೆನಪುಗಳ ಕಲೆಗಳಿಲ್ಲದೆ ನೀವು ಅದರೆಡೆಗೆ ಬರಬೇಕು.

ಅನುಭವವಾಗುತ್ತಿರುವ ಕ್ಷಣದಲ್ಲಿ ಅಲ್ಲಿ ಗಮನಿಸುವವನೂ ಇರುವುದಿಲ್ಲ, ಗಮನಿಸಲ್ಪಡುವುದೂ ಇರುವುದಿಲ್ಲ. ಅಲ್ಲಿ ಅನುಭವಿಸುವಿಕೆ ಮಾತ್ರ ಇರುತ್ತದೆ.

ನಾನು ಯಾವುದಕ್ಕೆ ಒಡೆಯರಾಗಿದ್ದೇವೆಯೋ ಅದೇ ನಾವಾಗಿದ್ದೇವೆ. ಒಬ್ಬನು ಹಣಕ್ಕೆ ಒಡೆಯನಾಗಿದ್ದರೆ ಅವನೇ ಹಣ ಆಗಿದ್ದಾನೆ. ಯಾವ ಮನುಷ್ಯನು ಆಸ್ತಿ ಪಾಸ್ತಿಯೊಡನೆ ಏಕೀಕರಿಸಿಕೊ೦ಡಿರುತ್ತಾನೆಯೋ ಅವನೇ ಆಸ್ತಿಪಾಸ್ತಿ ಅಥವಾ ಮನೆ ಅಥವಾ ಮನೆಯ ಮರಮುಟ್ಟುಗಳು (ಫರ್ನಿಚರ್) ಆಗಿದ್ದಾನೆ. ಯಾವ ಮನುಷ್ಯನು ಕಾಮುಕನಾಗಿದ್ದಾನೆಯೋ ಅವನೇ ಕಾಮನಾಗಿದ್ದಾನೆ. ಕಾಮವನ್ನು ಕಾಮುಕನಿ೦ದ ಬೇರೆಯಾಗಿ ನೋಡಲು ಸಾಧ್ಯವೇ ಇಲ್ಲ. ದುರಾಸೆಯನ್ನು ದುರಾಸೆಪೀಡಿತ ವ್ಯಕ್ತಿಯಿ೦ದ ಭಿನ್ನವಾಗಿ ನೋಡಲು ಸಾಧ್ಯವಿಲ್ಲ. ಮಾನವ ಮಾಡುತ್ತಿರುವ ಪ್ರಮಾದ ಇದೇ.