ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಸ್ಕರ್‌ಗೆ ಹರ್ಷವೇಕೆ ?

ದೇಶದೆಲ್ಲಡೆಡೆ ಸ್ಲಂಡಾಗ್‌ನದ್ದೇ ಮಾತು.. ಸ್ಲಂ ಡಾಗ್‌ ಮೇನಿಯಾ.. ಜಯ ಹೋ ಸ್ಲಂ ಡಾಗ್‌.. ಹೀಗೆ ಭಿನ್ನ ಭಿನ್ನ ನಾಮಧೇಯದಿಂದ ದೃಶ್ಯಪತ್ರಿಕೋದ್ಯಮ (ದೃಶ್ಯ ಮಾಧ್ಯಮ) ಗಳು ಬಿಂಬಿಸುತ್ತಿವೆ. ಇದು ನಿಜಕ್ಕೂ ಭಾರತೀಯರು ಹರ್ಷ ವ್ಯಕ್ತಪಡಿಸುವ ವಿಚಾರವೇ ? ಎನ್ನುವ ಮಾತು ಮನಸ್ಸಿನಲ್ಲಿ ಸುಳಿಯದಿರದು.

ಬಾಳೆ ಗಿಡದ ಬಗ್ಗೆ

ಇವತ್ತು ನಮ್ಮ ತೋಟದ ಬಾಳೆಗಿಡದಲ್ಲಿ ಹೂ ಬಿಟ್ಟಿದೆ. ನಮಗೆಲ್ಲಾ ಬಹಳ ಸಂಭ್ರಮ. ನಮ್ಮ ಮನೆಗೆ ಯಾರೋ ಹೊಸ ಸದಸ್ಯ ಬಂದಂಥ ಸಡಗರ. ಆಗ ನಮ್ಮಮ್ಮ ಹೇಳ್ತಿದ್ದರು. ಬಾಳೆಗಿಡದಲ್ಲಿ ಗೊನೆ ಬಿಡಬೇಕಾದರೆ ಪ್ರಸವ ವೇದನೆಗಿಂತ ಬಹಳ ನೋವಾಗುತ್ತದೆಯಂತೆ. ಹಾಗೂ ಅದರ ಹೂ ಮೂಡುವಾಗ ಬಾಳೆಗಿಡ ಅಳುತ್ತದೆಯಂತೆ. ಅವರಿಗೂ ಕೂಡ ಅವರ ತಾಯಿ ಹೇಳುತ್ತಿದ್ದರಂತೆ. ನನಗೆ ಬಹಳ ಆಶ್ಚರ್ಯವಾಯಿತು.

ನನ್ನ ಚೆಲುವೆ

ನನ್ನ ಚೆಲುವೆ, ನನ್ನ ಒಲವೆ
ಆ ನಿನ್ನ ನಗುವೆ ನಿನ್ನ ವಡವೆ
ನನ್ನ ಮನಸೇ, ನನ್ನ ಕನಸೇ
ಯಾವ ಮನಸಿಗೆ ಕಾದಿರುವೆ

ನನ್ನ ಸುಮವೆ, ಅತಿಕ್ರಮವೆ
ಆ ನಿನ್ನ ರೂಪವೇ ನನ್ನ ಪ್ರತಿರೂಪವೇ
ನನ್ನ ಉಸಿರೆ, ನಿನ್ನ ಹೆಸರೇ
ಆ ನಿನ್ನ ಹೆಸರ ಈ ನನ್ನ ಹೃದಯದಿ ಕೊರೆದಿರುವೆ

ನನ್ನ ಕಾವ್ಯವೇ, ಶೃಂಗಾರವೇ
ಆ ನಿನ್ನ ಮಾತೇ ಸುಪ್ರಭಾತವೆ
ನನ್ನ ರಾಗವೇ, ಅನುರಾಗವೇ

ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ

ನನ್ನ ಕಡೆ ಒಂದು ವಾರೆ ನೋಟ ಬೀರು
ಒಂದು ಮುಗುಳ್ನಗೆಯನ್ನಾರು ತೋರು
ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ
ಪ್ರೀತಿಯನ್ನು ಬಾಯಿಂದ ಹೇಳಕ್ಕಾಗ್ತಯಿಲ್ವ

ನಿನ್ನಲ್ಲೇ ನನ್ನ ಜೀವನ ಅಡಗಿದೆ ಅನ್ನಿಸುತ್ತಿದೆ
ನನ್ನ ತಳಮಳ ಎಲ್ಲರಿಗೂ ಕಾಣಿಸುತ್ತಿದೆ
ನಿನಗೆ ಕಾಣಿಸುತ್ತಿಲ್ಲವೇನು?

ನನ್ನ ಉಳಿಸೋದು ನಿನ್ನ ಕೈಯ್ಯಲ್ಲಿದೆ
ನನ್ನ ಕಡೆ ಒಂದು ವಾರೆ ನೋಟ ಬೀರು

ಹಿಂದ ನೋಡದ ಗೆಳತಿ.....

ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).

ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ!

ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ
ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ

ಕೊಳಗೇರಿಗಳೇ ಇಲ್ಲದಿರುತ್ತಿದ್ದರೆ ಇಂದೇನಾಗುತ್ತಿತ್ತು
ಇಂದು ಇಷ್ಟೊಂದು ಪ್ರಶಸ್ತಿಗಳಲ್ಲಿ ಹೇಗೆ ಸಿಗುತ್ತಿತ್ತು

ಕೊಳಗೇರಿಗಳು ಇದ್ದುದಕೇ ಚಿತ್ರ ನಿರ್ಮಾಣವಾಯ್ತು
ನೈಜತೆ ಹೆಚ್ಚಿದುದಕೇ ಜನ ಮೆಚ್ಚುಗೆಯೂ ಆಯ್ತು

ಆಸ್ಕರ್‍ ಗೆಲುವಿನ ನೆರಳಲ್ಲಿ…

ರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್‍ ಬಂದಿದ್ದು ಖುಷಿಯಾಯಿತು
ಎ.ಆರ್‍.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್‍ ಬಂದಿದ್ದೂ ಖುಷಿಯಾಯಿತು.

ಆದರೆ, ಇದು ಐತಿಹಾಸಿಕ ಘಟನೆ, ಚರಿತ್ರಾರ್ಹ ಸುದ್ದಿ. ಭಾರತಕ್ಕೆ ಸಂದ ಗಣನೀಯ ಆಸ್ಕರ್‍ ಎಂಬುದೆಲ್ಲಾ ಕೇಳಿ ಇದನ್ನು ಬರೆಯೋಣ ಅನಿಸಿತು.

ಮೊದಲ ಆಸ್ಕರ್‍ ಪಡೆದ ಭಾರತೀಯರು - ಭಾನು ಅತೈಯ್ಯ (ಜಾನ್ ಮೊಲ್ಲೊ ಜತೆ) “ಗಾಂಧಿ” ಚಿತ್ರದ ಉಡುಗೆತೊಡುಗೆಗಾಗಿ - ೧೯೮೨ರಲ್ಲಿ.

ಆದರೆ ಅದಕ್ಕಿಂತಲೂ ಹೆಚ್ಚಿನದು-

೧೭ ವರ್ಷದ ಹಿಂದೆ - ೧೯೯೨ರಲ್ಲಿ ತಮ್ಮ ಸಾವಿಗೆ ಒಂದೆರಡು ದಿನದ ಮುಂಚೆ ಬದುಕಿಡೀ ಸಿನೆಮಾಕ್ಕೆ ಕೊಟ್ಟ ಕೊಡುಗೆಗಾಗಿ ಸತ್ಯಜಿತ್ ರಾಯ್‌ರವರಿಗೆ
Lifetime achievement Oscar ಕೊಟ್ಟು ಪುರಸ್ಕರಿಸಿದ್ದರು. ಜಾಗತಿಕ ಸಿನೆಮಾದಲ್ಲಿ
ಅವರ ಮಟ್ಟ ಹಾಗು ಕೊಡುಗೆಯನ್ನು ಸ್ಮರಿಸಿಕೊಂಡಿದ್ದರು. ಆ ಸುದ್ದಿ ಕೇಳಿ ಉಬ್ಬಿಹೋದ ದಿನ
- ಒಂದೆರಡು ದಿನಕ್ಕೇ ಸತ್ಯಜಿತ್ ರಾಯ್ ತೀರಿಹೋದ ದಿನ ಎರಡೂ ನೆsatyajit-ray-oscar-180ನಪಾಯಿತು.

ಆಸ್ಕರ್‍ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೇರಿಕ ನೆಲದ ಹೊರಗೆ ಹೋಗಿ, ಕಲ್ಕತ್ತೆಯ
ಆಸ್ಪತ್ರೆಯಲ್ಲೇ ಅವರಿಗೆ ಆಸ್ಕರ್‍ ಕೊಟ್ಟು ಗೌರವಿಸಿದ್ದನ್ನು ನಾವು ಹೇಗೆ ಮರೆತೇವು?

ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ

ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ
ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ

ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು
ಇಂದು ನನ್ನೊಂದಿಗೆ ಬಾರದೇ ಉಳಿದಳವಳು

ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು
ಅವಳ ನನ್ನ ಸಖ್ಯ ಎಂದಿಗೂ ಬಿಟ್ಟಿರಲಾರದಷ್ಟು

ಚಿಕ್ಕವರ ನಾ ನಿರ್ಲಕ್ಷಿಸಿದಷ್ಟೂ ಕಡಿಮೆ ನನ್ನ ಕಷ್ಟ
ದೊಡ್ಡವರತ್ತ ಗಮನ ಹರಿಸುವುದು ಇಂದು ನನಗಿಷ್ಟ

ಮೀನಿಗೆ ಮುತ್ತಿಟ್ಟದ್ದು ಪ್ರೇಯಸಿಯಲ್ಲ..ಸಾವಿನ ರೂಪದಲ್ಲಿ ಹಾವು!

‘ಸರ್.. ಹೇಳಿ-ಕೇಳಿ ಅದು ಮಂಡಿಹಾಳ ಕೆರಿ. ‘ಮಂಡಿ’ ಹಾಳಾದವರು ಮಾತ್ರ ಅಲ್ಲಿಗೆ ಹೋಗಬೇಕ್ರಿ..!? ನೀವು ಹೋಗೋದಲ್ದ ನನ್ನನ್ನೂ ಬ್ಯಾರೆ ಕರಕೊಂಡ ಹೋಗತೇನಿ ಅಂತೀರಿ’ ಗೆಳೆಯ ಛಾಯಾಪತ್ರಕರ್ತ ಗೋವಿಂದರಾಜ್ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬೇರೆ ಊರಿಗೆ ಹೋಗೋಣ ಎಂದೂ ತಮ್ಮ ವಾದ ಮಂಡಿಸಲು ಅನುವಾಗಿದ್ದರು. ಕಾರಣ.. ‘ಅಲ್ಲೇನೂ ಮಣ್ಣು ಸಿಗುದುಲ್ಲ. ಕಲ್ಲು ಮಾತ್ರ’ ಎಂಬುವುದು ಅವರ ವಾದ.
ಆದರೆ ಈ ಪ್ರವಾಸ ನಮಗೊಂದು ಅವಿಸ್ಮರಣೀಯ ಪ್ರಸಂಗ. ಬಹುಶ: ನಮ್ಮ ಜೀವಿತಾವಧಿಯಲ್ಲಿ ಮತ್ತೊಮ್ಮೆ ಆ ಪ್ರಸಂಗವನ್ನು ನಾವು ಅನುಭವಿಸಲಾರೆವು. ಅನಾಯಾಸವಾಗಿ ಮತ್ತು ಅಷ್ಟೇ ಆಯಾಚಿತವಾಗಿ ಬಣ್ಣ-ಬಣ್ಣದ ನುಡಿಚಿತ್ರ ನಮ್ಮೆದುರಿಗೆ ಪ್ರತ್ಯಕ್ಷವಾಗಿತ್ತು. ಬಿರು ಬಿಸಿಲಿನಲ್ಲಿ ಬಸವಳಿದಿದ್ದ ನಮಗೆ ತಂಪೆರೆದಂತಹ ಅನುಭವ. ತೊಟ್ಟು ಹನಿ ನೀರು ಸಿಗುವ ಆಶಾವಾದಿತ್ವ ಉಡಿಗಿರುವ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ ‘ಥ್ರಿಲ್’ ನಾವು ಅನುಭಸಿದ್ದೆವು. ನಮ್ಮ ರೊಟ್ಟಿ ಜಾರಿ ತುಪ್ಪದೊಳಗೆ ಬಿದ್ದಿತ್ತು!
ಗೆಳೆಯ ಛಾಯಾಪತ್ರಕರ್ತ ಗೋವಿಂದರಾಜ್ ಜವಳಿ ಹಾಗು ನಾನು ಗ್ರಾಮೀಣ ಕೆರೆಗಳ ಪುನರುಜ್ಜೀವನ ಕುರಿತು ವಿಶೇಷ ಮಾಹಿತಿಗಳನ್ನು ಸಂಗ್ರಹಿಸಲು ತೆರಳಿದ್ದೆವು. ಧಾರವಾಡದಿಂದ ೧೩ ಕಿ.ಮೀ ದೂರದಲ್ಲಿರುವ ಮಂಡಿಹಾಳ ಕೆರೆಗೆ ನಮ್ಮ ಪ್ರವಾಸ ದ್ವಿಚಕ್ರ ವಾಹನದ ಮೇಲೆ.