ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾಹ್ವಾರೆ ಮೆಣಸಿನಕಾಯಿ!

ಮೆಣಸಿನಕಾಯಿ ಇಲ್ಲದ ಊಟವನ್ನೇ ನಾವು ಇವತ್ತು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಮಟ್ಟಿಗೆ ಅದು ನಮ್ಮ ಅಡಿಗೆಯ ಮೂಲ ಸಾಮಗ್ರಿ ಆಗಿಹೋಗಿದೆ.

ಆದರೆ ಈ ಮೆಣಸಿನಕಾಯಿ ಭಾರತದ್ದಲ್ಲವಂತೆ. ಬಲ್ಲವರು ಹೇಳುವ ಪ್ರಕಾರ, ಮಧ್ಯ ಅಮೆರಿಕೆಯಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಯನ್ನು, ಅಲ್ಲಿಂದ ಹೊರಜಗತ್ತಿನಲ್ಲಿ ಪರಿಚಯ ಮಾಡಿಸಿದ್ದು ಕೊಲಂಬಸ್. ೧೪೯೪ರಲ್ಲಿ ಸ್ಪೆಯಿನಿಗೆ, ಆಮೇಲೆ ಯೂರೊಪಿನ ಇತರ ದೇಶಗಳು , ನಂತರ ಏಷ್ಯಾದ ಬೇರೆ ಬೇರೆಕಡೆಗೆ ಹೀಗೆ ನಾವಿಕರ ಜೊತೆ ಅದು ಸಾಗಿತಂತೆ. (ಮಾಹಿತಿ:ವಿಕಿಪಿಡಿಯಾ - ಹಾಗೇ ಇದೇ ಅಭಿಪ್ರಾಯವನ್ನು ಬಿ.ಜಿ.ಎಲ್.ಸ್ವಾಮಿಯವರ ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಪುಸ್ತಕದಲ್ಲೂ ಓದಿದ್ದ ನೆನಪಿದೆ)

ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ ೨

ಒ೦ದು ಭಾವನೆಯನ್ನು ಗುರುತಿಸದೇ ಇರಲು ಸಾಧ್ಯವಿಲ್ಲವೇ? ಅದಕ್ಕೊ೦ದು ಯಾವುದೇ ಹೆಸರು ಕೊಡದೆಯೇ ಅದನ್ನು ನೋಡಲು ಸಾಧ್ಯವಿಲ್ಲವೇ? ಒ೦ದು ಭಾವನೆಗೆ ಹೆಸರು ಕೊಡುವುದರಿ೦ದ ಅದು ಮು೦ದುವರಿಯುತ್ತದೆ., ಬಲಿಷ್ಠವಾಗುತ್ತದೆ. ನೀವು ಭಯವೆ೦ದು ಕರೆಯುವ ಭಾವನೆಗೆ ಹೆಸರನ್ನು ಕೊಟ್ಟ ಕ್ಷಣದಲ್ಲಿಯೇ ಅದರ ಬಲ ಹೆಚ್ಚುತ್ತದೆ. ಅದು ನಿಮ್ಮನ್ನು ಆಳಲು ಪ್ರಾರ೦ಭಿಸುತ್ತದೆ.

ಹೃದಯ ಗೀತೆ

ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ
ಬಾ ಬೇಗ ನೀ ನನ್ನ ಬಳಿಗೆ
ಎನುತ ಮೀಟಿದನವ ನನ್ನ ಹೃದಯ ವೀಣೆ
ಅಂದಿನಿಂದ ನನಗೇನಾಗಿದೆಯೋ ನಾ ಕಾಣೆ

ಮನಸಿನ ಪುಟಗಳ ಮೇಲೆ
ಅವ ಬರೆದ ಹಾಡಿದೆ
ಹೃದಯ ತನನಂ ಎಂದಿದೆ
ಕಣಕಣವು ಅದ ಪ್ರತಿಧ್ವನಿಸಿದೆ

ಕಂಡ ಕನಸೆಲ್ಲ ನನಸಾಗಲೆಂಬ ಬಯಕೆ
ಸದಾ ನಿನ್ನ ನೆನಪುಗಳದೆ ಕನವರಿಕೆ
ಇದ್ದ ಕೋಟೆಗಳನೆಲ್ಲ ದಾಟಿ ಒಳಬಂದಿಹೆ ನೀ ಗೆಳೆಯ

ಪಾಪ-ಪುಣ್ಯ

ಹೋ ಬೆಳದಿಂಗಳ ಚಂದಿರ, ಹೋ ಶ್ವೇತ ಸುಂದರ
ಹೋ ಕೆಂಪು ಸೂರ್ಯ, ಹೋ ಕೋಟಿ ಕಿರಣಗಳ ಒಡೆಯ
ನಿಮ್ಮ ಇರುವಿಕೆ ಶಾಶ್ವತ, ಆದರೂ ಸೇವೆ ನಿಸ್ವಾರ್ಥ

ನಾ ಅಧಮ ಮಾನವ, ಸ್ವಾರ್ಥ-ಅನರ್ಥಗಳ ಸಮಾಗಮ
ಬೇಡಿದೆ ಹಲವು ದೇವರುಗಳ ಸುದೀರ್ಘ ಬದುಕಾ
ಸೇವಿಸಲು ಸಂತೋಷ ನಿತ್ಯ ಸುಖ

ನಾ ಅಲೆದೆ ಆಲಯಗಳ, ಮಂದಿರ ಮಸೀದಿಗಳ
ಪಾಪಗಳ ಪರಿಹರಿಸಲು, ಪುಣ್ಯಗಳ ಕೂಡಲು

ಕೀಯು, ಕೈಗುಳಿಗೆ-2

ಪೆಲಟಲೈಸೇಷನ್ ಎಂಬ ಪ್ರಕ್ರಿಯೆ ಕನ್ನಡಕ್ಕೆ ಅನ್ಯವಾದುದು.

ಕೀಯುವಿಕೆ  ಎನ್ದರೆ ಕೊಳೆಯುವಿಕೆ. ಕೀವು(ನಾ.) ಇದರಿನ್ದಲೇ ಹುಟ್ಟಿಕೊಣ್ಡಿದೆ.ನಾಮಪದವಾಗಿ ಕೀವು ಮಾತ್ರ ಹೆಚ್ಚು ಬೞಕೆಯಲ್ಲಿದೆ.

ಇತರ ದ್ರಾವಿಡಾದಿ ಭಾಷೆಗಳಲ್ಲಿ:
ಚೀಯು(ಮ.) ಕ್ರಿಯಾಪದವಾಗಿ ಬೞಕೆಯಲ್ಲಿದೆ. ನಾಮಪದವಾಗಿ ವ್ಯಾಪಕ ಬೞಕೆಯಿಲ್ಲ.

ಧರ್ಮ-ಮತ ...ಸುಮ್ನೆ ಹೀಂಗೆ ಎರಡು ಮಾತು!

ಧರ್ಮ ಪದ "ದೃ" ಧಾತುವಿನಿಂದ ಬಂದಿದೆಯಂತೆ!    ಈ ಧಾತುವಿಗೆ to sustain; carry, hold ಎಂಬ ಅರ್ಥ ಇದೆ ಅಂತೆ.

"ಧಾರಣಾತ್ ಧರ್ಮಮಿತ್ಯಾಹು, ಧರ್ಮೋ ಧಾರಯತೇ ಪ್ರಜಾ:"!
ಎತ್ತಿ ಹಿಡಿಯುವುದರಿಂದ ಅದು ಧರ್ಮ!.  ಅದು ಪೀಳಿಗೆಯನ್ನು ಕಾಪಡುತ್ತೆ

"ಧರತಿ ಲೋಕಂ ಇತಿ ಧರ್ಮ:"
ಲೋಕವನ್ನು ಯಾವುದು ಕಾಪಾಡುತ್ತೋ ಅದು ಧರ್ಮ!

ಹತ್ತು ಗಾದೆ ಮಾತುಗಳು!

೦೧. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

೦೨. ಆಪತ್ಕಾಲೇ ನಾಸ್ತಿ ಮರ್ಯಾದಾ.

೦೩. ಇತ್ತಿತ್ತ ಬಾ ಅಂದರೆ, ಇದ್ದ ಮನೆ ಕಿತ್ತುಕೊಂಡ.

೦೪. ಊರೆಲ್ಲಾ ಸೂರೆಯಾದ ಮೇಲೆ ಕೋಟೆ ಬಾಗಿಲು ಹಾಕಿದರು.

೦೫. ಒಂದು ಮಸಿ ಒಂದು ಚಿತ್ತಾರವನ್ನೇ ಕೆಡಿಸಿತು.

೦೬. ಒಡೆದು ಹೋದ ಹಾಲಿಗೆ ಅತ್ತೇನು ಪ್ರಯೋಜನ?

೦೭. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು.

ಮಿರೋ ಎಂಬ ಮೀಡಿಯ ಕಿಟಕಿ

ಚಿತ್ರ: ಮಿರೋ ಎಂಬ ಮೀಡಿಯ ಕಿಟಕಿ

ಡೆಮಾಕ್ರಸಿ ಪ್ಲೇಯರ್ ಎಂದು ಶುರುವಾದ ಮಿರೋ ಯೋಜನೆಗೆ ಈಗ ೨.೦ ಆವೃತ್ತಿಯ ಸಂತಸ. ಇದೊಂದು ಇಂಟರ್ನೆಟ್ ಟಿವಿ ಪ್ರೋಗ್ರಾಮು. ಅಂದರೆ ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ವೀಡಿಯೋ, ಲೈವ್ ಸ್ಟ್ರೀಮುಗಳು  - ಇವನ್ನೆಲ್ಲ ಒಂದೆಡೆಯೇ ಲಭ್ಯವಾಗಿಸುವ ತಂತ್ರಾಂಶ. ಟಿ ವಿ ಇದ್ದ ಮೇಲೆ ಮತ್ಯಾಕೆ ಇಂಟರ್ನೆಟ್ ಟಿವಿ? ಎಂಬ ಪ್ರಶ್ನೆ ಬರಬಹುದು. ಈ ಸಾಫ್ಟ್ವೇರಿನಲ್ಲಿ ನಿಮಗೆ ಬೇಕಾದ ಕಾರ್ಯಕ್ರಮವನ್ನು ನಿಮಗೆ ಬೇಕಾದ ಸಮಯಕ್ಕೆ ನೋಡಬಹುದು! ಸಾಮಾನ್ಯವಾಗಿ ನೀವು ಮಾಡುವುದೇನು? "ಎಂಟು ಗಂಟೆಗೆ ನನ್ನ ಫೇವರೇಟ್ ಕಾರ್ಯಕ್ರಮ... ಅಷ್ಟರಲ್ಲಿ ಮನೆ ಸೇರಬೇಕು" ಎಂದುಕೊಂಡು ಓಡುತ್ತಿರುತ್ತೀರಿ.

ಒಂದೊಮ್ಮೆ - ನಿಮಗೆ ಬೇಕಾದ ಕಾಯಕ್ರಮದ ಬೇಕಾದ ಎಪಿಸೋಡು ನಿಮಗೆ ಬೇಕಾದ ಸಮಯಕ್ಕೆ ಪ್ಲೇ ಮಾಡುವ ಹಾಗಿದ್ದರೆ? ಇದನ್ನು ಮಿರೋ ಮಾಡುತ್ತದೆ.

ಮುಂದೆ ಓದಿ >> 

('ಟೆಕ್' ಸಂಪದ ತಂತ್ರಜ್ಞಾನ ಆಸಕ್ತ ಕನ್ನಡಿಗರ ತಂತ್ರಜ್ಞಾನ ಕುರಿತ ಟಿಪ್ಪಣಿಗಳು, ಬರಹಗಳನ್ನು ಒಂದೆಡೆ ಲಭ್ಯವಾಗಿಸುವ 'ಸಂಪದ' ಸಮುದಾಯದ ಮತ್ತೊಂದು ಪೋರ್ಟಲ್. ಈ ಪೋರ್ಟಲ್ಲಿನ ಸುತ್ತ ಈಗಾಗಲೇ ಇರುವ ಟೆಕ್ ಆಸಕ್ತರ ಸಮುದಾಯ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರೆಯಲು ಎಲ್ಲ ಟೆಕ್ ಆಸಕ್ತರನ್ನು ಪ್ರೋತ್ಸಾಹಿಸುವ ಉದ್ದೇಶ ಇಟ್ಟುಕೊಂಡಿದೆ. ಟೆಕ್ ಸಂಪದದಲ್ಲಿ ಪಾಲ್ಗೊಳ್ಳುವುದು ಬಹಳ ಸುಲಭ - ನಿಮ್ಮ ಸಂಪದ ಐಡಿ ಬಳಸಿ ಇಲ್ಲಿ ಲಾಗಿನ್ ಆಗಿ)

ಮರ ನುಂಗಿದ ಮರ

ಕೆರೆ ಕೆಲಸದ ಮೇಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿದ ಸಂಧರ್ಭ.ಕಿಬ್ಬನಹಳ್ಳಿ ಕ್ರಾಸ್ ನಿಂದ ಸಿ.ಎನ್.ಹಳ್ಲಿ ಮಾರ್ಗದಲ್ಲಿ ಜೆ.ಸಿ ಪುರದ ಬಳಿ ಈ ಮರವನ್ನು ಕಂಡು ವಿಸ್ಮಯವಾಯಿತು.ದಾರಿಯಲ್ಲಿಯೇ ಜೀಪ್ ನಿಲ್ಲಿಸಲು ಹೇಳಿ ಮರದ ಬಳಿ ಹೋದೆ.ಆಲದ ಮರವೊಂದು ಈಚಲ ಮರವನ್ನು ಬಿಗಿದಪ್ಪಿ ಸಾಯಿಸಿದ್ದನ್ನು ಕಂಡು ಅಚ್ಚರಿಯಾಯಿತು.

ಸಾಮಾನ್ಯವಾಗಿ ಈಚಲ ಮರ ತುಂಬಾ ಒರಟು ಮೈಯನ್ನು ಹೊಂದಿರುತ್ತದೆ.ಅದರ ಕಾಂಡ ಮುಳ್ಳು ಹಂದಿಯ ತರಹ ಒರಟಾಗಿರುತ್ತದೆ.ಒಂದು ಗರಿ ಉದುರಿದ ಮೇಲೆ ಅದರ ಕುರುಹಾಗಿ ಗರಿಯ ಅವಶೇಷವೊಂದು ಅಲ್ಲಿ ಉಳಿದಿರುತ್ತದೆ.ಆ ಜಾಗದಲ್ಲಿ ಮಣ್ಣು,ಧೂಳು ಸೇರಿಕೊಳ್ಳಲು ಅವಕಾಶವಿರುತ್ತದೆ.ಯಾವುದೋ ಪಕ್ಷಿ ಆಲದ ಹಣ್ನನ್ನು ತಿಂದು ಅಲ್ಲಿ ಹಿಕ್ಕೆಯಿಟ್ಟಿತೋ,ಅಥವಾ ಬೀಜವನ್ನೇ ಉದುರಿಸಿತೋ ತಿಳಿಯದು.ಆದರೆ ಅಲ್ಲಿ ಗಿಡವಾಗಿ ಮೊಳೆತ ಆಲವಂತೂ ಈಚಲನ್ನು ಕಬಳಿಸಿದೆ.

ನಿನ್ನಿ ಆಸ್ಕರ್, ನಂದೂ ಎರಡು ಮಾತು...

ಭಾಳ ವರ್ಷ ಆದ ಮ್ಯಾಲೆ ಆಸ್ಕರ್ಸ್ ನೋಡಿದೆ ನಿನ್ನೆ. ನಮ್ಮ ರೆಹಮಾನ್ ದೀವಾರ್ ಸ್ಟೈಲಿನ್ಯಾಗ ’ಮೇರೆ ಪಾಸ್ ಮಾ ಹೈ’ ಅಂದದ್ದು ಮತ್ತ ಹಂಗ ’ಎಲ್ಲ ಅವಂದೇ’ ಅಂತ ದೇವರಿಗೆ ತಮಿಳಿನ್ಯಾಗ ಥ್ಯಾಂಕ್ಸ್ ಹೇಳಿದ್ದು ನೋಡಿ, ಕೇಳಿ ಖುಷಿ ಆತು. ಸ್ಲಮ್ ಡಾಗ್ ಸಿನೆಮಾನ ಇನ್ನ ನೋಡಿಲ್ಲ. ಹಂಗ ನೋಡಿದರ ನಿನ್ನೆ ಅವಾರ್ಡಿಗೆ ಬಂದಿದ್ದ ಯಾವ ಪಿಕ್ಚರ್ನೂ ನೋಡಿಲ್ಲ! ಆಸ್ಕರ್ ನಡ್ಸೊ ಕೋಡ್ಯಾಕ್ ಥೇಟರಿಗೆ ಹೋಗಿ ಅಲ್ಲಿ ಟೂರ್ ತೊಗೊಂಡರ ಗೈಡ್ ಹೇಳ್ತಿರ್ತಾನ ಇಂಥಾ ವರ್ಷ ಇಂಥಾ ಆಕ್ಟರ್ ಇಲ್ಲಿ ಕೂತಿದ್ದ(ದ್ಳು) ಅಂತ. ಇನ್ನ ಮ್ಯಾಲಿಂದ ನಮ್ ದೇಸಿ ಮಂದಿ ಹೋದಾಗ ರೆಹಮಾನ್ ಇಲ್ಲಿ ಕೂತಿದ್ದ ಅಂತನೂ ಹೇಳಲಿಕ್ಕೆ ಶುರು ಮಾಡ್ತಾರೇನೋ...

...and the Oscar goes to... ಅಂತ ಹೇಳಿ ಹೆಸರು ಅನೌನ್ಸ್ ಮಾಡಿದ ಕೂಡ್ಲೆ ಸ್ಟೇಜಿಗೆ ಬಂದು ಆಸ್ಕರ್ ತೊಗೋತಾರಲ್ಲ, ಅವರು ಮಾಡೋದು, ಮಾತಾಡೋದು ನೋಡ್ಬೇಕು.