ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಲಂ ಡಾಗ್ ... ಯಶಸ್ಸು

ಆಸ್ಕರ್ ಪ್ರಶಸ್ತಿಗಳನ್ನು “ಸ್ಲಂ ಡಾಗ್ ಮಿಲಿಯನಯರ್” ಒಂದರ ಮೇಲೊಂದರಂತೆ ಕೊಳ್ಳೆ ಹೊಡೆಯುತ್ತಿದ್ದಾಗ ನೆನಪಾಯಿತು “ಭಗವಾನ್ ನಹೀ ದೇತಾ, ದೇತಾ ತೋ ಥಪ್ಪಡ್ ಮಾರ್ ದೇತಾ” ಅದು ನಿಜವೋ ಅನ್ನಿಸಿತು! ದೇವರು ಜಿಪುಣ, ಆದರೆ ಕೊಟ್ಟರೆ ಭರಪೂರ ಕೊಡುತ್ತಾನೆ!

ಅಲ್ಲ, ಇದು ತನಕ ಎಷ್ಟೊಂದು ಬಾರಿ ಆಸ್ಕರ್ ಪ್ರಶಸ್ತಿಗೆ ನಮ್ಮ ಚಿತ್ರಗಳು ಹೋಗಿಲ್ಲ. ಕೊನೆಯ ಸುತ್ತಿನ ತನಕವೂ ಬಂದು ಬಂದು ಮುಗ್ಗರಿಸುತ್ತಿದ್ದುವು. ಆದರೆ ಈ ಬಾರಿ ಹಾಗಾಗಲಿಲ್ಲ - ಪ್ರಶಸ್ತಿಯ ಮೇಲೆ ಪ್ರಶಸ್ತಿಗಳು ಬಂದು ಬಿಟ್ಟಿವೆ. ಭಾರತೀಯ ಸಾಕ್ಷ್ಯ ಚಿತ್ರ- “ಸ್ಮೈಲ್ ಪಿಂಕೀ” ಕೂಡ ತಣ್ಣಗೆ ಆಸ್ಕರ್‌ನನ್ನು ಮುಡಿಗೇರಿಸಿಕೊಂಡು ಅಚ್ಚರಿ ಮೂಡಿಸಿದೆ.
ಇದೊಂದು ಖುಷಿಯ ಕ್ಷಣ. ಮುಕ್ತವಾಗಿ ಆನಂದಿಸುವ ಹೊತ್ತು.

ನಾನು ಚಲನ ಚಿತ್ರಗಳ ವಿಮರ್ಶಕನಲ್ಲ. ಸದಭಿರುಚಿಯ ಚಿತ್ರಗಳನ್ನು ಸವಿಯುವ ಒಬ್ಬ ಸಾಮಾನ್ಯ ಪ್ರೇಕ್ಷಕ ಮಾತ್ರ. ಈ ನೆಲೆಯಲ್ಲಿ ನೋಡಿದಾಗ ಅಮೀರ್ ಖಾನ್ ಚಿತ್ರಗಳು - “ಲಗಾನ್” ಆಸ್ಕರ್ ಪ್ರಶಸ್ತಿ ಪ್ರಾಯಶ: ಪಡೆಯಬಹುದಾಗಿತ್ತು ಎಂದು ಅನ್ನಿಸಿದರೂ, ಚಿತ್ರದ ಕೆಲವು ಭಾಗಗಳ ಹಾಡುಗಳು ಮತ್ತು ತೀರ ನಾಟಕೀಯತೆ ಆಸ್ಕರ್ ಪ್ರಶಸ್ತಿಯಿಂದ ಚಿತ್ರವನ್ನು ದೂರ ಇಟ್ಟವೇನೋ. ಇದು ಪ್ರಾಯಶ: “ರಂಗ್ ದೇ ಬಸಂತೀ”ಗೂ ಅನ್ವಯಿಸುತ್ತದೆ. ಹಾಗಾಗಿ ಈ ಬಾರಿ ಕೂಡ ಹಾಗೆಯೇ ಆಗಬಹುದೆಂದು ನನಗನ್ನಿಸಿತ್ತು. ಆದರೆ ನನ್ನೆಣಿಕೆ ತಪ್ಪಾದದ್ದು ತುಂಬ ಖುಷಿಯಾಯಿತು.

ಕ್ಋಷ್ಣ-ಭಾಮೆಯರ ಸಂವಾದ

ಕೆಳದಿ ಆಸ್ಥಾನದ ಕವಿಮನೆತನದ ಸುಬ್ಬಾಭಟ್ಟ ಅಥವಾ ಸುಬ್ಬಕವಿ ವೆಂಕ-ಕವಿ-ದೇವಮ್ಮನ ಮಗನೆಂದು ಕೆಳದಿಯಲ್ಲಿರುವ ಕವಿ ವಂಶಸ್ಥರ ವಂಶಾವಳಿಯಿಂದ ತೋರುತ್ತದೆ. ಈತನ ಕಾಲವನ್ನು

Once again "ಹೃದಯ ಗೀತೆ" ( 'Vರ'ನ ಕವಿತೆ )

ನಾ ಬರೆದ ಕವಿತೆಗಳು ನನ್ನ ಕವಿತೆಗಳಲ್ಲ
ಒಂಟಿಯಾಗಿದ್ದ ಹೃದಯ ಹೇಳಿದ ಮಧುರ ಮಾತುಗಳು
ಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು ಕನಸಿನ ಚೆಲುವೆ
ವಿರಹದ ಹಾಡುಗಳಲ್ಲಿ ತುಂಬಿಹೋಗಿದೆ ಅವಳಿಲ್ಲದ ನೋವೆ

ಸ್ನೇಹದಿಂದ ಪುಟಿದೇಳುವ ಪ್ರೀತಿ ಕಾರಂಜಿ
ಬೆಚ್ಚನೆಯ ಬಾಹುಗಳಲಿ ಆಗುವುದು ಪ್ರೀತಿ ಬಂದಿ
ನನ್ನ ಹೃದಯ ವೀಣೆ ಮೀಟುವ ಬೆರಳು ನಿನ್ನದು

ಪ್ರಕೃತಿಯ Love failure case ಗಳು

೧ .ರವಿಯ ಸ್ವಾಗತಕ್ಕೆ
ಭೂರಮೆಯು ಸಂಭ್ರಮದಿ
ಇಬ್ಬನಿಯ ಹಾರ ತೊಟ್ಟಿಹಳು
ಪಾಪ! ಈ ಪ್ರೀತಿಯ ತಿಳಿಯದ
ಆ ಸೂರ್ಯನು ಸುಡುಸುಡು ತಾಪದಿ
ಆ ಹಾರವನ್ನೇ ನಾಶ ಮಾಡಿದನು..

೨. ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು
ಸುತ್ತೆಲ್ಲ ಸೌಗಂಧ ಸೂಸಿ
ಪ್ರಿಯಕರನಿಗಾಗಿ ಅರಳಿ ನಿಂತಳು ಪಾರಿಜಾತ
ಎಷ್ಟೋ ಹೊತ್ತಾದ ಮೇಲೆ
ಹಿಂದಿರುಗಿದ ದಿನಕರನಿಗೆ

ದೀಪಕ

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ
ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ
ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ
ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ

ವಿರಮಿಸಿರಲು ನಾ ಮರಳ ದಂಡೆಯಲ್ಲಿ
ನೀ ಕಂಡೆ ದೃಷ್ಟಿಗೆ ಅನತಿ ದೂರದಲ್ಲಿ
ಎತ್ತಲೋ ನೋಡುತಾ ಮುಗ್ಗರಿಸುತ್ತಿದ್ದೆ ನೀನು
ಕಂಡೆನೆಂತಹ ಚೆಲುವು ಬಳಿ ಧಾವಿಸಲು ನಾನು

ಆಸ್ಕರ್ ಪರಿಣಾಮ:ಭಾರತದ ಹೊಸ ರಾಷ್ಟ್ರಗೀತೆ "ಜೈ ಹೋ"!

ಎಂಟು ಆಸ್ಕರ್ ಪ್ರಶಸ್ತಿಗಳು,ಸಾಲದೆಂಬಂತೆ "ಸ್ಮೈಲ್ ಪಿಂಕಿ" ಸಾಕ್ಷ್ಯಚಿತ್ರಕ್ಕೂ ಪ್ರಶಸ್ತಿ!!
ಭಾರತೀಯ ನಿರ್ದೇಶಕ ಸ್ಲಂ..ಡಾಗನ್ನು ನಿರ್ದೇಶಿಸಿಲ್ಲ ನಿಜ,ನಿರ್ಮಾಪಕನೂ ಭಾರತೀಯನಲ್ಲ. ಆದರೆ ಚಿತ್ರ ಭಾರತೀಯ ಮೂಲದ್ದೇ,ಚಿತ್ರಕ್ಕಾಗಿ ದುಡಿದವರೂ ಭಾರತೀಯರು. ಇದೊಂದು ಭಾರತೀಯ ಚಿತ್ರ.

ಭಳಿರೇ ಭಳಿರೇ ರೆಹಮಾನ!!!

ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಗೆ ಎರಡು ಆಸ್ಕರ್ ಪ್ರಶಸ್ತಿಗಳು.
ಈ ದಿನ (೨೩ ಫೆಬ್ರವರಿ ೨೦೦೯) ಭಾರತೀಯರಿಗೆಲ್ಲಾ ಹೆಮ್ಮೆಯ ದಿನ.

ಭಳಿರೇ ಭಳಿರೇ ಎ. ಆರ್. ರೆಹಮಾನ
ಸಾಕೆ ನಿನಗೀ ಎರಡು ಬಹುಮಾನ!?

ದೇವರು ಹರಸಲಿ ನಿನ್ನನು ಇಂತೆಯೇ
ಹೊತ್ತುತರುವಂತವನಾಗು ವರುಷ ವರುಷ
ನೀನು ಇನ್ನಷ್ಟು ಬಹುಮಾನ!!!

ನಾನು ಓದಿದ ಎರಡು ಪರಭಾಷೆಯ ಕಿರುಕಾದಂಬರಿಗಳು

ಇವೆರಡೂ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು . ಎಲ್ಲ ಭಾರತೀಯ ಭಾಷೆಗಳಿಂದ ಆಯ್ದ ಒಳ್ಳೆಯ ಪುಸ್ತಕಗಳನ್ನು ಇತರ ಎಲ್ಲ ಭಾಷೆಗಳಿಗೆ ಅನುವಾದ ಮಾಡಿಸಿ ಪ್ರಕಟಿಸುತ್ತಾರೆ.
ಒಂದು 'ಬಿಳಿಯ ಲಕೋಟೆ'. ಬೆಂಗಾಲಿ ಭಾಷೆಯದು . ಮತಿನಂದಿ ಅನ್ನೋರು ಬರೆದದ್ದು . ರಮಾ ಅನ್ನೋರು ಅನುವಾದ ಮಾಡಿರೋದು . ಅನುವಾದವೂ , ಕತೆಯೂ ಚೆನ್ನಾಗಿವೆ. ಕತೆ ಏನಪ್ಪಾ ಅಂದ್ರೆ ...

ಅತ್ತರೆ ಕಂಬನಿ.. ನಕ್ಕರೆ ಇಬ್ಬನಿ..

ಎದೆಯೊಳು
ಸಾವಿರ ಗುಟ್ಟುಗಳು

ಆದರೆ ಈ
ಕಣ್ಣುಗಳು
ಪರಮವಾಚಾಳಿ!

*****

ನನ್ನ ಪಾಲಿಗೆ
ತಾನೇ ಆಗಿದ್ದರೂ
ಅಮ್ಮ
ದೇವರನು ನೋಡಲು
ತೀರ್ಥಯಾತ್ರೆಗೆ
ಹೋಗ್ತಾಳಂತೆ!

*****

ಹಸಿವೆಯ
ನೂರೆಂಟು
ಸೂರ್ಯರು
ಕಾಡುವಾಗ
ಅನ್ನದಗುಳಗುಳೂ
ಬೆಳ್ದಿಂಗಳು!

******

ನನ್ನವಳು
ಸಾಗರವಾದರೆ

ನಾನು
ಎಲ್ಲ ಕಡೆಯಿಂದ
ಮುತ್ತಿಕ್ಕಿಸಿಕೊಳ್ಳುವ
ದ್ವೀಪ!

******

ಶಾಪ್ಪಿಂಗ್ ಮಾಲ್ ಗಳೇ

ನೀವೂ ಪುಸ್ತಕಗಳನ್ನು ಡಿಜಿಟೈಸ್ ಮಾಡುತ್ತಿದ್ದೀರಿ!

ನೀವು
ಅಂತರ್ಜಾಲವನ್ನು ಬಳಸುತ್ತಿದ್ದರೆ, ಪುಸ್ತಕವನ್ನು ಡಿಜಿಟೈಸ್ ಮಾಡುವ ಯೋಜನೆಯಲ್ಲಿ