ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಧರ್ಮ’ ಇದರ ಆಂಗ್ಲ ಸಮಾನಾರ್ಥ ಪದವೇನು?

’ಧರ್ಮ’ ಇದು ಕನ್ನಡ ಪದವೇ? (ನಾನೇನೊ ಸಂಸ್ಕೃತ ಪದವೆಂದುಕೊಂಡಿದ್ದೇನೆ, ಮೂಲ, ಧಾತು ಇತ್ಯಾದಿಗಳು ತಿಳಿದಿಲ್ಲ)
ಇದರ ಆಂಗ್ಲ ಸಮಾನಾರ್ಥ ಪದವೇನು? ನನ್ನರಿವಿನಲ್ಲಿ,
ಸಂಸ್ಕೃತಿ - culture
ಜಾತಿ - caste
ಮತ - religion
ಪಂಗಡ - community
ನ್ಯಾಯ - justice
ಕರ್ತವ್ಯ - duty

ಯಾರೀಕೆ ?

ಭದ್ರೆಯ ಬಾಗಿಲಲಿ ನಿಂತವಳು
ಅಬ್ಬರದ ಉಡುಗೆಯಿಲ್ಲ.
ಸ್ನೋ,ಪೌಡರಿನ ಸೋಂಕಿಲ್ಲ .
ತುಟಿಗಳಿಗೆ ಸಂಜೆ ರಂಗನು ತುಂಬಿ
ಕನಸು ಕಂಗಳ ಹೊತ್ತು ನಿಂತವಳು.
ತೇರ ತೀರಕೆ ಸೇತುವಾಗಿ
ಕವನದೊಳಗಿನ ಮಾತಾಗಿ
ನಗೆ ಬೆಳದಿಂಗಳ ಚೆಲ್ಲಿ
ನೋವ ಮರೆಸಲು ನಿಂತವಳು.
ಪ್ರೀತಿ ಸೋನೆಯಲಿ ನೆಂದು
ಪ್ರೇಮ ಗಂಗೆಯಲಿ ಮಿಂದು
ಒಲವ ದೋಣಿಯನೇರಿ
ಕಣ್ಣಲೆ ಕಥೆ ಹೇಳಲು ನಿಂತವಳು.

" ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ "-೨೦೦೯ !

ಈ ನಾಟಕೋತ್ಸವ, ಮಾಹಿಮ್ ನ ಕರ್ನಾಟಕಸಂಘದವರು, ಹಾಗೂ ಕರ್ನಾಟಕಸರ್ಕಾರದೊಡಗೂಡಿ ನಡೆಸಲ್ಪಟ್ಟಿತು. ನಾಟಕೋತ್ಸದ ಉದ್ಘಾಟನೆಯನ್ನು ಮುಂಬೈನ ಹಿರಿಯ ರಂಗಭೂಮಿಯ ನಟ, ನಿರ್ದೇಶಕ, ನಾಟಕರಚನಾಕಾರ, ಡಾ. ಮಂಜುನಾಥ್ ಮಾಡಿದರು. ವೃತ್ತಿಯಲ್ಲಿ ವಿಜ್ಞಾನಿಯಾದರೂ ನಾಟಕ, ಸಂಗೀತ, ಸಾಹಿತ್ಯ- ಕಲಾಸಕ್ತರು ಡಾ. ಮಂಜುನಾಥ್ !

’ಮಹಾಶಿವರಾತ್ರಿ, ”ಎಂದಿನಂತೆ, ಹರ್ಷೋಲ್ಲಾಸಗಳಿಂದ ನಡೆಯಿತು !

ಮಹಾಶಿವರಾತ್ರಿ ಅಂಗವಾಗಿ ಮುಂಬೈ ನಗರದ ವಿವಿಧೆಡೆ ಅನೇಕ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಚೆಂಬೂರಿನ ’ಶಾರದಾಸೇವಾಸಮಿತಿ,’ ಯ ಅಮ್ಮನವರ ದೇವಸ್ಥಾನದಲ್ಲೂ ಶಿವರಾತ್ರಿಯ ಸಲುವಾಗಿ, ಪ್ರತಿವರ್ಷದಂತೆ, ಪೂಜೆ ಪುನಸ್ಕಾರಗಳು ಸುಗಮವಾಗಿ ಜರುಗಿದವು. ಘಾಟ್ಕೋಪರ್ ನ ಹಿಮಾಲಯೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆಯನ್ನು ಹಮ್ಮಿಕೊಂಡಿದ್ದರು.

ಇದೂ ಒಂದು ಒಗಟಾ?

ಚಿಕ್ಕಂದಿನಲ್ಲಿ ಕಲಿತಿದ್ದ ಒಗಟಿನ ತರಹದ ವಾಕ್ಯ(?) ಇದು.

ಆರಡಿ ವಾಹನನ ವಾಹನನ
ದಾರಿಯೊಳ್ ತರುತಿರ್ದಳೋರ್ವ ರಮಣಿ
ಮಾರಾರಿಯ ಪೊತ್ತವನ್ ನೂಂಕಲ್
ಕಡಲಾಹಾರ ಪಿತನ ಭಂಗವಾಯ್ತೆಂದಳಲ್ದಳ್ ಇಂದುಮತಿ

ಬಲ್ಲವರು ಬಿಡಿಸೀಯಾರೆ?

ಕವಿತೆ ಹುಟ್ಟುವ ಸಮಯ....

ಕವಿತೆಗಳು ಹುಟ್ಟುತ್ತವೆ
ನಿನ್ನ ಹೆಜ್ಜೆಯ ಗುರುತನ್ನು ಹೆಕ್ಕಿ
ಅದರ ಮೇಲೆ ನನ್ನ ಹೆಜ್ಜೆಯನ್ನಿಡುವಾಗ...

ಕವಿತೆಗಳು ಹುಟ್ಟುತ್ತವೆ
ನಿನ್ನ ಹಿತವಾದ ಸ್ಪರ್ಶದಂತೆ
ಮಂದ ಮಾರುತವು ನನ್ನ ಮೈ ತಾಕಿದಾಗ

ಕವಿತೆಗಳು ಹುಟ್ಟುತ್ತವೆ
ನಿನ್ನ ಹಾದಿಯಲಿ ಕಣ್ಣಿಟ್ಟು
ಕಾತರದಿ ಕಾಯುವ ಆ ವೇಳೆಗಳಲಿ...

ಕವಿತೆಗಳು ಹುಟ್ಟುತ್ತವೆ
ಕನಸಲ್ಲಿ ನೀ ಬಂದು ಹೋದರೂ

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು!!! (ಕವನ)

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !!!

ಈ ಪದಗಳು ಸ್ವಲ್ಪ ಸ್ವಲ್ಪನೇ ಮಾಯವಾಗಿ ಮರೆತಂತೆ ಆಗುತ್ತಿದೆ. ಪೂರ್ತಿ ಮರೆಯುವ ಮುನ್ನ ಎಲ್ಲಾದರೂ ಬರೆಯುವುದು ಒಳಿತು ಎಂದು ಈ ಪ್ರಯತ್ನ. ನಿಮ್ಮಗಳ ಅನಿಸಿಕೆ ತಪ್ಪದೇ ತಿಳಿಸಿ ಎಂದು ನಮ್ರತೆಯ ಕೋರಿಕೆ.

ಅಣ್ಣ ಕಲಿಸಿದ ಕನ್ನಡ ಪದಗಳು !
ಅಣಿಅಣಿಯಾದ ಕರುನಾಡ ಪದಗಳು !

ಎನಾದ್ರೂ ತೊಂದ್ರೆ ಆದ್ರೇ,
"ಎಡವಟ್-ಎಂಗರವಟ್" ಅಂದ್ರೆ,

ನನ್ನ ನಿಲುವು ನನ್ನದು

ನನ್ನ ಹಿಂದೂ ದ್ವಂದ್ವ; ಎಂಬ ಲೇಖನವನ್ನು ಸಂಪದದಲ್ಲಿ  ಬರೆಯುತ್ತಾ ನಾರಾಯಣ ಅವರು ತಮ್ಮ ಮಾನಸಿಕ
ತುಮಲವನ್ನು ತೋಡಿಕೊಂಡಿದ್ದರು.ಅದಕ್ಕೆ ಉತ್ತರವಾಗಿ ನಾನು ಸ್ಪಷ್ಟ ನುಡಿಗಳಲ್ಲಿ ನಾನು ಹಿಂದು ಎನ್ನಲು
ಸಂಕೋಚವೇಕೆ ? ಎನ್ನುತ್ತಾ ಬಿಚ್ಚು ಮಾತುಗಳಲ್ಲಿ ನನ್ನ ಆರ್.ಎಸ್.ಎಸ್. ಸಂಬಂಧವನ್ನು ಹೇಳಿದ್ದೆ. ಇದೀಗ

ಬೃಹತ್ ದೇವಾಲಯ

ಕೆಲವು ದಿನಗಳ ಕೆಳಗೆ ಚಂದನ ವಾಹಿನಿಯಲ್ಲಿ “ಥಟ್ಟಂತ ಹೇಳಿ” ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ಬಂಪರ್ ಪ್ರಶ್ನೆಯಲ್ಲಿ ಪ್ರಖ್ಯಾತ ಚೋಳ ವಂಶದ ಪ್ರಖ್ಯಾತ ರಾಜನಾದ ರಾಜೇಂದ್ರ ಚೋಳ ಎಂಬ ಉತ್ತರ ಬರುವಂತೆ ಪ್ರಶ್ನೆ ಕೇಳಿದ್ದರು. ಮೊದಲೆರಡು ಸುಳುಹುಗಳೂ ರಾಜೇಂದ್ರ ಚೋಳ ಮಾಡಿದ ಕೆಲಸಗಳ ಬಗ್ಗೆ ಇದ್ದವು. ಆದರೆ ಮೂರನೆಯ ಸುಳುಹು “ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಸ್ಥಾನವನ್ನು ಕಟ್ಟಿಸಿದವನು” ಎಂದು ಇತ್ತು. ಆದರೆ ನನಗೆ ತಿಳಿದಮಟ್ಟಿಗೆ ಬೃಹದೀಶ್ವರ ದೇವಸ್ಥಾನವನ್ನು ಕಟ್ಟಿಸಿದವನು ರಾಜೇಂದ್ರ ಚೋಳನ ತಂದೆಯವರಾದ ರಾಜರಾಜ ಚೋಳನ್ ಅವರು. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅದರಲ್ಲಿ ಆ ದೇವಾಲಯವನ್ನು ಕಟ್ಟಿಸಿದವರು ರಾಜರಾಜ ಚೋಳನ್ ಎಂದೇ ಬರೆದಿದೆ.
ತಮಿಳಿನ ಹಿರಿಯ ಸಾಹಿತಿ ಕಲ್ಕಿಯವರು “ಪೊನ್ನಿಯಿನ್ ಶೆಲ್ವನ್” ಎಂಬ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ, ಅದು ಐತಿಹಾಸಿಕ ಕಥೆ, ರಾಜರಾಜ ಚೋಳನ್ ಅವರ ಚಿಕ್ಕ ವಯಸ್ಸಿನ ದಿನಗಳ ಕಥೆ. ಅದರಲ್ಲಿ ಅವರು ಇನ್ನೂ 19 ವರ್ಷದ ಯುವಕನಾಗಿದ್ದಾಗಲೇ ಶ್ರೀಲಂಕೆಯನ್ನು ಗೆದ್ದು ಬರುತ್ತಾರೆ. ಆನಂತರದ ಒಂದು ಸನ್ನಿವೇಶದಲ್ಲಿ ಅವರು ತಮ್ಮ ಸೋದರಿಯೊಂದಿಗೆ ಒಂದು ಮಾತನ್ನು ಹೇಳುತ್ತಾರೆ. “ಅಕ್ಕಾ, ಶ್ರೀಲಂಕಾದಲ್ಲಿ ಬುದ್ದನ ಪ್ರತಿಯೊಂದು ವಿಗ್ರಹವೂ ಆಕಾಶದೆತ್ತರಕ್ಕೆ ನಿಲ್ಲಿಸಿದ್ದಾರೆ. ಅವನ್ನು ನೋಡಿ ಈಗ ನಮ್ಮ ತಮಿಳುನಾಡಿನಲ್ಲಿರುವ ಚಿಕ್ಕ ಚಿಕ್ಕ ಈಶ್ವರ ದೇವಾಲಯಗಳನ್ನು ನೋಡಿದರೆ ನನಗೆ ಅವಮಾನ ಎನ್ನಿಸುತ್ತಿದೆ. ನಾನು ನಮ್ಮ ಊರಿನಲ್ಲೂ ಒಂದು ದೊಡ್ಡದಾದ ಶಿವಾಲಯ ಕಟ್ಟಿಸಬೇಕೆಂಬ ಆಸೆ ಇದೆ.” ಎಂದು ಹೇಳುತ್ತಾರೆ.
ಕಲ್ಕಿಯವರು ಇದನ್ನು ರಾಜರಾಜಚೋಳನ್ ಕಟ್ಟಿಸಿದ್ದು ಎಂಬುದರಿಂದಲೇ ಅವರ ಬಾಯಿಂದ ಈ ಮಾತು ಹೇಳಿಸಿದ್ದಾರೆ ಎಂದು ಕಾಣುತ್ತದೆ.