ಕವಿತೆ ಹುಟ್ಟುವ ಸಮಯ....

ಕವಿತೆ ಹುಟ್ಟುವ ಸಮಯ....

ಬರಹ

ಕವಿತೆಗಳು ಹುಟ್ಟುತ್ತವೆ
ನಿನ್ನ ಹೆಜ್ಜೆಯ ಗುರುತನ್ನು ಹೆಕ್ಕಿ
ಅದರ ಮೇಲೆ ನನ್ನ ಹೆಜ್ಜೆಯನ್ನಿಡುವಾಗ...

ಕವಿತೆಗಳು ಹುಟ್ಟುತ್ತವೆ
ನಿನ್ನ ಹಿತವಾದ ಸ್ಪರ್ಶದಂತೆ
ಮಂದ ಮಾರುತವು ನನ್ನ ಮೈ ತಾಕಿದಾಗ

ಕವಿತೆಗಳು ಹುಟ್ಟುತ್ತವೆ
ನಿನ್ನ ಹಾದಿಯಲಿ ಕಣ್ಣಿಟ್ಟು
ಕಾತರದಿ ಕಾಯುವ ಆ ವೇಳೆಗಳಲಿ...

ಕವಿತೆಗಳು ಹುಟ್ಟುತ್ತವೆ
ಕನಸಲ್ಲಿ ನೀ ಬಂದು ಹೋದರೂ
ಅದನ್ನೇ ನೆನಪಿಸಿ ದಿನ ಕಳೆದಾಗ

ಕವಿತೆಗಳು ಹುಟ್ಟುತ್ತವೆ ಹೀಗೆ...
ನಿನ್ನ ನಿರೀಕ್ಷೆಯಲ್ಲಿ ಸಮಯ
ಕಳೆಯುವಾಗ, ಮತ್ತೆ ಕಳೆದ
ಸಮಯವನ್ನು ನೆನಪಿಸಿದಾಗ.....