ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಹಾ ಶಿವರಾತ್ರಿಯ ಶುಭಾಷಯಗಳು...........

ಸಂಪದಿಗರು ಮತ್ತು ಕನ್ನಡ ನಾಡಿನ ಜನತೆ ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಷಯಗಳು ....

ಆ ಶಿವ ಪರಮಾತ್ಮ ನಿಮ್ಮೆಲ್ಲರಿಗೂ ಸಕಲ ಐಶ್ವರ್ಯ,ಆರೋಗ್ಯ,ಆಯುಸ್ಸು ಎಲ್ಲಾ ಕೊಟ್ಟು ನಿಮ್ಮ ಮುಂದಿನ ಜೀವನ ಸುಖಕರವಾಗಿ ಇರಲಿ ಹಾಗೆನೆ ನಿಮ್ಮ ಬಾಳಲ್ಲಿ ನೆಮ್ಮದಿ ನೆಲಸಲಿ ಎಂದು ಹಾರೈಸುತ್ತೆನೆ..
ಓಂ ನಮಃ ಶಿವಾಯ

--ಗೌಡ್ರು

ದೇವರಿಗೊಂದು ಪ್ರಶ್ನೆ

ಮುಂಬೈ ನಗರಿಯಲಿ
ಉಗ್ರರು ಅಟ್ಟಹಾಸ ಮೆರೆದು
ನೂರಾರು ಜನರು ಮಡಿದಾಗ
ದು:ಖದ ಅರಿವಾಗಲಿಲ್ಲವೇ ದೇವರಿಗೆ?

ಅಮಾಯಕರ ಹೆಣಗಳು
ರಾಶಿರಾಶಿ ಬಿದ್ದು
ನೊಂದವರ ಅಳಲು ಮುಗಿಲು ಮುಟ್ಟಿದ್ದಾಗ
ಕೂಗು ಕೇಳದೇ ದೇವರಿಗೆ?

ನವಯುಗದ ನವಕನಸ
ಹೊತ್ತಿದ್ದ ಕಣ್ಗಳು
ಕ್ಷಣಾರ್ಧದಲ್ಲಿಯೇ ಮುಚ್ಚಿದಾಗ
ಕಣ್ ಕಾಣಲಿಲ್ಲವೇ ದೇವರಿಗೆ?

ಸಿಕ್ಕವರಿಗೆ ಗುಂಡು ಹಾರಿಸುತ್ತ
ರಾಜದರ್ಪದಲಿ

ಓದಿದ್ದು ಕೇಳಿದ್ದು ನೋಡಿದ್ದು-180 ರಹಮಾನ್‌ಗೆ ಎರಡು ಆಸ್ಕರ್!ಸ್ಲಮ್ಮಿಗೆ ಎಂಟು!!

ಸ್ಲಂ ಡಾಗ್ ಮಿಲಿಯನೇರ್‌ಗೆ ಆಸ್ಕರ್!

ibn

ಸಿನೆಮಾಟೋಗ್ರಫಿ ಮತ್ತು ಸ್ಕ್ರೀನ್ ಪ್ಲೇ ಗೆ ಪ್ರಶಸ್ತಿ

ನನ್ನೊಳಗೆ ಶಂಕರ

ಕ್ಷೀರಾಬ್ಧಿಯೊಳಗೆ
ನೆಲೆ ನಿಂತನೆ ಪ್ರಾಣಲಿಂಗ?
ಬೋಧಗೆ ಕಾದಿದೆ ಎನ್ನಾತ್ಮಲಿಂಗ
ಪ್ರ: ಬೋಧೆಗೆನು ಬೇಕು?
ಧರಿಸಲು ಧಿರಿಸೇನೆನಗೆ?
ಜ್ಞಾನದೊಳಗೆ ಜ್ಞಾನ ಗುರು
ಹೃದಯದೊಳಗೆ ಹೃದಯ ಸತ್ಯಲಿಂಗ
ಭಕ್ತರೊಳಗೆ ಭಕ್ತ ಜಂಗಮ
ಶುಚಿಯೊಳಗೆ ಶುಚಿ ಪಾದೋದಕ
ರುಚಿಯೊಳಗೆ ರುಚಿ ಪ್ರಸಾದ
ಮನದೊಳಗೆ ಮನ ವಿಭೂತಿ
ಕಣ್ಣೊಳಗೆ ಕಣ್ಣು ರುದ್ರಾಕ್ಷಿ
ವೇದದೊಳಗೆ ನಾದ ಮಂತ್ರ

ಹರಿದಾಸರು ಕಂಡ ಶಿವ - ಶಿವರಾತ್ರಿಗೆ ಶಿವಸ್ಮರಣೆ…

ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ

ಜಗನ್ನಾಥದಾಸರು ಹರಿಕಥಾಮೃತ ಸಾರದ ನಾಂದಿ ಸಂಧಿಯಲ್ಲಿ ಶಿವನ ಹನ್ನೊಂದು
ಹೆಸರುಗಳನ್ನು ಚಮತ್ಕಾರಿಕವಾಗಿ ಹೆಣೆದು ಏಕಾದಶ ರುದ್ರರನ್ನೂ ನೆನಪಿಸಿ ಸದಾ
ಸುಮಂಗಳವನ್ನು ಕೊಡು ಎಂದು ಶಿವನನ್ನು ಪ್ರಾರ್ಥಿಸುವ ಪದ್ಯ ಇದು. ಮುಂದೆ ಓದಲು haridasa.in ನ ಈ ಪುಟ ನೋಡಬಹುದು...

ಜೆ. ಕೃಷ್ಣಮೂರ್ತಿ-ಚಿ೦ತನಧಾರೆ

"ಜ್ಞಾನವೆ೦ಬ ಆಳವಾದ ಸರೋವರವನ್ನು ಒಳಹೊಕ್ಕು ನೋಡಿದ್ದೇನೆ. ಅದರಲ್ಲಿನ ಅಸ೦ಖ್ಯಾತ ಪ್ರತಿಬಿ೦ಬಗಳನ್ನು ಗಮನಿಸಿದ್ದೇನೆ. ಪವಿತ್ರವಾದ ದೇಗುಲದಲ್ಲಿನ ಕಲ್ಲು ನಾನಾಗಿದ್ದೇನೆ. ಕತ್ತರಿಸಿಕೊಳ್ಳುವ, ತುಳಿಸಿಕೊಳ್ಳುವ ಒ೦ದು ಯಕಷ್ಚಿತ್ ಹುಲ್ಲು ನಾನಾಗಿದ್ದೇನೆ. ಗಗನವನ್ನು ಚು೦ಬಿಸುವ ಭವ್ಯವಾದ, ಎತ್ತರವಾದ ವೃಕ್ಷವೂ ನಾನು. ಬೇಟೆಗೆ ಬಲಿಯಾಗುವ ಮೃಗ ನಾನಾಗಿದ್ದೇನೆ.

ನಮ್ಮ ಒಳ್ಳೆತನ ಅತಿಯಾದಾಗ

ತುಂಬಾ ದಿನಗಳಿಂದ ನನ್ನ ತಲೆ ತಿನ್ನುತ್ತಿರುವ ಒಂದು ವಿಚಾರವನ್ನು ಸಂಪದಿಗರಿಗೆ ವರ್ಗಾಯಿಸಿ ಅವರ ಅಭಿಪ್ರಾಯವನ್ನು ಮಾನ್ಯ ಮಾಡಿ ನಾನು ಹಗುರವಾಗಬೇಕೆಂದು ಈ ಬರಹ.

ನೇರಳೆಮರ

ಬಹುಶಃ ಇಡೀ ಬಯಲಲ್ಲಿ ನಾನೊಬ್ನೆ ಮರ ಅನ್ಸುತ್ತೆ , ಬಿಸಿಲ ಧಗೆ ಸುಡ್ತಾ ಇದ್ರೂ ನಿಂತಿದೀನಿ. ಸುಮಾರು 30 ಹೆಜ್ಜೆ ದೂರದಲ್ಲಿ ಒಂದು ಮಾವಿನಮರ ಇದ್ದ , ಕುಳ್ಳಾಮಣಿ !. ಉಳಿದ ಮಾವಿನ ಮರಗಳ ತರಹ ಉದ್ದ , ಅಗಲ ಬೆಳೀಲೆ ಇಲ್ಲ. ಅವ್ನು ನಿಂತಿದ್ದು ಬಾಗಾಯ್ತಿ ಜಮೀನಿನ ಬದುವಿನ ಮೇಲೆ , ಸರಿಯಾಗಿ ಗೊಬ್ರ , ನೀರು ಬಿದ್ದಿರ್ಲಿಲ್ಲ .

ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರಿಸಿ..ಪ್ಲೀಸ್

ಮುಂಬಯಿಯ ಕರ್ನಾಟಕ ಸಂಘದಲ್ಲಿ ಎರಡು ದಿನಗಳ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ನಡೆಯಿತು.. ಈ ಬಾರಿ ’ಕೋಮು ಸೌಹಾರ್ದ’ ಎಂಬ ವಿಷಯವನ್ನು ನೀಡಲಾಗಿತ್ತು. ಅಂದರೆ ಎಲ್ಲ ನಾಟಕಗಳ ವಸ್ತು ’ಕೋಮು ಸೌಹಾರ್ದತೆ’ ಆಗಿರಬೇಕು ಎಂಬುದು. ಮೊದಲ ದಿನ (೨೧-೦೨-೨೦೦೯) ಭದ್ರಾವತಿಯ ಎಂ.ಪಿ.ಎಂ ಕಲಾವಿದರು ’ಒಬ್ಬನೇ ಚಂದಿರ’ ಅನ್ನುವ ನಾಟಕವನ್ನು ಪ್ರದರ್ಶಿಸಿದರು.