ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೫

ಇತ್ತೀಚೆಗೆ ಡಿಸ್ಕವರಿಯಲ್ಲಿ ಬಾಗ್ದಾದ್ ಬ್ಯಾಟೆರಿ ಹಾಗೂ ಈಜಿಪ್ಟಿನ ಬ್ಯಾಟೆರಿ ಬಗ್ಗೆ ತೋರಿಸಿದಾಗ, ಭಾರತೀಯರಿಗೆ ಬ್ಯಾಟೆರಿ ಬಗ್ಗೆ ಏನು ಅರಿವಿದ್ದಿತು ಎಂದು ಹುಡುಕಿದಾಗ ಸಿಕ್ಕಿದು....

Slumdog Millionaire ಮತ್ತದರ Positive Effect

ನಾಳೆ ಆಸ್ಕರ್ ಪ್ರಶಸ್ತಿಗಳ ಘೋಷಣೆ ಆಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಗಮನಿಸುತ್ತಿದ್ದರೆ ಭಾರತದ ವಸ್ತು ಇರುವ ಮತ್ತು ಭಾರತದಲ್ಲಿ ತಯಾರಾದ ಸ್ಲಮ್‌‍ಡಾಗ್ ಮಿಲಿಯನೇರ್ ಹಲವು ಪ್ರಶಸ್ತಿಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರ್ಷ ಒಳ್ಳೊಳ್ಳೆಯ ಚಿತ್ರಗಳೇ ರೇಸ್‌ನಲ್ಲಿ ಇದ್ದಂತಿವೆ. ಅಷ್ಟಿದ್ದರೂ ಸ್ಲಮ್‌‍ಡಾಗ್ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯುವ ಸುದ್ದಿಯೂ ಇದೆ.
ಇಲ್ಲಿ, ನನ್ನ ಒಂದು ಸಂಶಯ ಏನೆಂದರೆ, ಅಕಾಡೆಮಿಯವರು ಬೇಕೆಂತಲೆ "ಮಿಲ್ಕ್"ಗೆ ಶ್ರೇಷ್ಠ ಚಿತ್ರ ಪ್ರಶಸ್ತಿ ಕೊಡಬಹುದು ಎಂದು. ನಾನು ಆ ಸಿನೆಮಾವನ್ನೆ ಅಲ್ಲ, ಆ ಪಟ್ಟಿಯಲ್ಲಿರುವ ಯಾವ ಚಿತ್ರವನ್ನೂ ನೋಡಿಲ್ಲ. ಹಾಗಾಗಿ ಅವುಗಳಲ್ಲಿ ನನಗೆ ಮೆಚ್ಚಿನದ್ದು ಯಾವುದು ಎಂಬ ಅಭಿಪ್ರಾಯ ಇಲ್ಲ. ಅದರೆ ಲಿಬರಲ್ ಮತ್ತು ಪ್ರಗತಿಪರ ಕಾಳಜಿಗಳನ್ನು ಪ್ರೋತ್ಸಾಹಿಸುವ ಅಕಾಡೆಮಿ ಈ ಸಲ ಅದೇ ಕಾರಣಕ್ಕೆ "ಮಿಲ್ಕ್"ನ ಕತೆ ಮತ್ತು ಅದರಲ್ಲಿರುವ ವಿಷಯದಿಂದಾಗಿ ಅದನ್ನೆ ಆಯ್ದುಕೊಳ್ಳಬಹುದು ಎನ್ನಿಸುತ್ತದೆ. ಅದರಲ್ಲಿನ ವಿಷಯ ಇವತ್ತಿನ ಅಮೆರಿಕನ್ ಲಿಬರಲ್‌ಗಳಿಗೆ ಬಹಳ ಮುಖ್ಯವಾದದ್ದು.

ಸಾವು!

ಕರೆಯುತ್ತಿದೆ, ಅದೋ ಆ ಸಾವು
ಕರೆವೆಣ್ಣಿನ ರೂಪದಲಿ
ಕೂಗುತ್ತಿದೆ, ಸನ್ನೆ ಮಾಡುತ್ತಿದೆ…
ಕೊಡುವುದಿಲ್ಲ, ನಾನು ಗಮನವ!

ನಾನು ಗಮನ ಕೊಡುವುದಿಲ್ಲ
ಏಕೆಂದರೆ ಹೆದರಿಕೆ ನನಗಿಲ್ಲ
ಪ್ರೀತಿ ಅಂತಹ ಲೌಕಿಕ ವಸ್ತುವೇ ಅಲ್ಲ!

ಕರೆಯುತ್ತಿದೆ ಆ ಸಾವು ವಾತ್ಸಲ್ಯಭರಿತ ಅಜ್ಜನ ಪೋಷಾಕಿನಲ್ಲಿ
ದೂರ, ದೂರ ದೂಡಲು ಈ ಜಗವನು

ಸ್ವಾಗತ

ಈ ನೆಲಕೆ ಮೂಡಿದ ಕೊಂಬು ನಾನು
ಬೇರಾರಿಗೂ ಲಭಿಸದ ಅಹಿಂಸೆ ಶಾಂತಿ ನಿಕೇತನ

ಸ್ವಾಗತ, ಸಚ್ಚಿದಾನಂದಾರ್ತಿಗಳಿಗೆ
ಆನಂದಾಶ್ರಮದ ಆನಂದಕೋಶಿಯ ಹಸನ್ಮುಖದ ಸ್ವಾಗತ

ಬನ್ನಿ, ಈ ನೆಮ್ಮದಿಯ ನೆರಳಿಗೆ
ಹಲವು ಹುಳುಕು ಬಳುಕು ಕೆಳದಾರಿಗಳ ಬಿಟ್ಟು ಬನ್ನಿ
ಯಾವುದಾದರೇನು ದಾರಿ? ನಾನಿರಲಿ ಗುರಿ!
ನಾನೇ ಸಚ್ಚಿದಾನಂದ !

ಮೊದಮೊದಲ ಕಲ್ಪನೆಗಳು -ಕೃತಿ :ದೇವರು - ಎ.ಎನ್. ಮೂರ್ತಿರಾವ್

ಮೊದಮೊದಲ ಕಲ್ಪನೆಗಳು

ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?

ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.

ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ

ಬಿಸಿಲ ಬೇಗೆಯಲಿ ತಂಗಾಳಿಯ ಒಂದು ಅಲೆ ಬಂದು ನನ್ನ ಚುಂಬಿಸಿ ಮರೆಯಾಯಿತು
ತಂಗಾಳಿಯಂತ ಹೆಣ್ಣೆ ನಿನ್ನಿಂದ ಹೃದಯದಲ್ಲಿ ಪ್ರೇಮಜ್ವಾಲೆ
ಈ ಜ್ವಾಲೆ ಶಮನ ನಿನ್ನ ಪ್ರೀತಿಯಿಂದ ನಂದಿಸು ಬಾರೆ ಅಮೄತ ಧಾರೆ !

ಓ ನನ್ನ ಕನಸಿನ ರಾಜಕುಮಾರಿ, ಓ ನನ್ನ ಕನಸಿನ ರಾಜಕುಮಾರಿ
ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ !!

ಕುರಿಗಳು

ಹಿಂದೆ..........
ಹಿಂದೆ ಗುರುವಿದ್ದ , ಮುಂದೆ ಗುರಿಯಿತ್ತು
ಸಾಗುತ್ತಿತ್ತು ವಿದ್ಯಾರ್ಥಿಗಳ ದಂಡು;

ಇಂದು..........
 ಹಿಂದೆ  ಗುರುವಿಲ್ಲ, ಮುಂದೆ ಗುರಿಯಿಲ್ಲ
ಸಾಗುತ್ತಿದೆ ರಣಹೇಡಿಗಳ ಹಿಂಡು.
..................... ಕುವೆಂಪು


ಕುರಿಗಳು ಸಾರ್ ಕುರಿಗಳು
ಸಾಗಿದ್ದೇ ಗುರಿಗಳು
ಇವನ ಬಾಲವ ಅವನು ಮೂಸುತ
ಅವನ ಬಾಲವ ಇವನು ಮೂಸುತ
ಮೂಸಿ ತಲೆ ತಗ್ಗಿಸಿ ಅಂಡಲೆಯುವ
                         ನಾವು ನೀವು
ಕುರಿಗಳು ಸಾರ್ ಕುರಿಗಳು
                   ಸಾಗಿದ್ದೇ ಗುರಿಗಳು!

.........................ನಿಸಾರ್ ಅಹ್ಮದ್  

ಏರಿದರೆ - ಜಾರಿದರೆ?!


ಏರಿದರೆ ... ಮಂಚ, ಗದ್ದುಗೆ, ಸಿಂಹಾಸನ
ಹೆಚ್ಚೆಂದರೆ
... ಎರಡು ಮೂರಡಿ ಮೇಲೆ !

ಜಾರಿದರೆ ... ಗೋರಿ, ಸಮಾಧಿ, ಬೃಂದಾವನ
ಹೆಚ್ಚೆಂದರೆ
... ಎರಡು ಮೂರಡಿ ಕೆಳಗೆ!!

 

................

ಮೂಲ::  ತುಂಬ ಹಿಂದೆ ಓದಿದ್ದು... ನನ್ನ ಹಳೆ ಡೈರಿಯಲ್ಲಿ ಇತ್ತು. 

ಮಕ್ಕಳ ಭವಿಷ್ಯ ನಿರ್ಧಾರದಲ್ಲಿ ತಂದೆ ತಾಯಿಯ ಪಾತ್ರವೆಷ್ಟು??

ವಯಸ್ಸಿಗೆ ಬಂದ ಮಕ್ಕಳ ಮೇಲೆ ತಂದೆ ತಾಯಿ ಹೇರುವ ಅಭಿಪ್ರಾಯ ಎಷ್ಟರ ಮಟ್ಟಿಗೆ ಸರಿ??
ಅದು ಯಾವುದೇ ವಿಷಯದಲ್ಲಿ ಆಗಿರಬಹುದು.... ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮನೆ...........
ಮಕ್ಕಳ ಅಭಿಪ್ರಾಯಕ್ಕೆ ಬೆಲೆ ಕೊಡಲೇಬಾರದೆ??
ಮಕ್ಕಳ ಕನಸಿಗೆ ಯಾವ ಬೆಲೆ??

ಸಾರಾಂಶ

ಇದು ನನ್ನ ಮೊದಲ ಪ್ರಕಟಿತ ಕವನ.ಗೆಳೆಯ ಎ.ಜಿ. ಅಬ್ದುಲ್ ರೆಹಮಾನ್ ಮಹಾಲ್ ದಾರ್ (ಗದಗ ದವರು)

ಒಂದು ಕವಿತಾ ಸಂಕಲನ ಹೊರ ತಂದಿದ್ದರು. ಸುಮಾರು ೧೯೯೦ ಇರಬೇಕು. ನನ್ನ ಕವನ ಅದರಲ್ಲಿ ಪ್ರಕಟಿಸುವ

ಕರುಣೆ ಮಾಡಿದ್ದರು. ಆ ಕವನ ಈಗ ಸಂಪದಿಗರಿರಗಾಗಿ....

ಸಾರಾಂಶ
-----------

ಉಷೆ ಹೊಂಬಣ್ಣದ ಓಕುಳಿ ಭುವಿ ಮೇಲೆಲ್ಲ