ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರಿಗುಬ್ಬಿ ಮತ್ತು ಶಕ್ತಿಮದ್ದು ಗುರುಗಳು

ಇದು ಸುಮ್ನೆ ಬರೀತಿರೋದು, ಇದ್ರಲ್ಲಿ ಯಾವುದೇ ನೀತಿ  ಇಲ್ಲ... ಮೊನ್ನೆ  ಆಫೀಸ್ ಕ್ಯಾಂಟೀನ್ ನಲ್ಲಿ ತಿಂಡಿ ತಿಂತಿದ್ದಾಗ ಮನಸಿಗೆ ಬಂದದ್ದು, ನಾನು ಮತ್ತೆ ರಾಘವ ಕಾಫಿಗೆ  ಹೋದಾಗ ಆ ಕಥೆನ ಮತ್ತಷ್ಟು ಎಳ್ದಿದೀವಿ...

ಸ್ಥಿತಪ್ರಜ್ಞ ಶಿವ

ಭೀತಿರ್ನಾಸ್ತಿ ಭುಜಂಗ ಪುಂಗವ ವಿಷಾತ್
ಪ್ರೀತಿರ್ನಚಂದ್ರಾಮೃತಾತ್
ನಾಶೌಚಂ ಹಿ ಕಪಾಲದಾಮ ಲುಲನಾತ್
ಶೌಚಂ ನ ಗಂಗಾಜಲಾತ್||
ನೋದ್ವೇಗಶ್ಚಿತಿಭಸ್ಮನಾ ನ ಚ ಸುಖಂ
ಗೌರೀ ಸ್ತನಾಲಿಂಗನಾತ್
ಆತ್ಮಾರಾಮತಯಾ ಹಿತಾಹಿತಸಮಃ
ಸ್ವಸ್ಥೋಹರಃ ಪಾತುಮಾಮ್||

ಹಾವಿನ ಹೆಡೆಯೊಳಿರುವ ವಿಷದಿಂದ ಭಯವಿಲ್ಲ
ಚಂದ್ರನೊಳಿರುವಾಮೃತದೊಳಾಸೆಯಿಲ್ಲ

ನೋವಿನ ಮೋಹ...

ನನಗೆ "ಹಾಡು" ಕಾಡುತ್ತವೆ...
ಆಗ "ನೋವು" ಮೋಹ ವಾಗುತ್ತದೆ...

ನನಗೆ ಹಾಡು ಕಾಡುತ್ತವೆ...
ನೋವು ನನ್ನ ಸ್ನೇಹಿತವಾಗ್ತದೆ...

ನನಗೆ ಹಾಡು ಕಾಡುತ್ತವೆ...
ಆ ಮರುಕ್ಷಣವೇ ಅವಳ ನೆನಪಾಗುತ್ತದೆ....

ನನಗೆ ಹಾಡು ಕಾಡುತ್ತವೆ...
ಅವಳು ಬಿಟ್ಟು ಹೋದ ನೋವು ಮತ್ತೆ
ಕಾಡುತ್ತದೆ...

ನನಗೆ ಹಾಡು ಕಾಡುತ್ತವೆ...
ಆಗ "ನೋವು" ಮತ್ತೆ ಮೋಹವಾಗುತ್ತದೆ...

ಬಯ್

ಬಯ್ ಕ್ರಿಯಾಪದವಾದಾಗ ಎರಡು ಅರ್ಥಗಳು
೧) ಬಯ್=ಶಪಿಸು, ನಿಂದಿಸು
೨) ಬಯ್=ಪೇಱಿಸು, ಒಂದಱ ಮೇಲೊಂದು ಜೋಡಿಸು

೧) ಬಯ್ ಭೂತಕೃದ್ವಾಚಕ ಬಯ್ದ=ಶಪಿಸಿದ, ನಿಂದಿಸಿದ
೨) ಬಯ್ ಭೂತಕೃದ್ವಾಚಕ ಬಯ್ತ=ಪೇಱಿಸಿದ, ಒಂದಱ ಮೇಲೊಂದು ಜೋಡಿಸಿದ

೨) ಬಯ್‍ಗೆ ಉದಾಹರಣೆ:
ಪಂಪನ ಆದಿಪುರಾಣದ ಈ ಪದ್ಯ

ಕಟ್ಟಿದ ಕುಱಿಗಳ್ ಬೋನದೊ-
ಳಟ್ಟೇಱಿಸಿ ಬಯ್ತ ಬಾಡುಗಳ್ ಬಡ್ಡಿಸಿ ತಂ-

ಜೋಕು ಹುಟ್ಟುವ ಸಮಯ!

ಕವಿತೆ ಹುಟ್ಟುವುದು ಹೇಗೆ, ಕವಿತೆಯ ಅಪ್ಪ ಅಮ್ಮ ಯಾರು, ಕಥೆ ಜನ್ಮ ತಾಳುವ ಪರಿಸರ
ಎಂಥದ್ದು, ಕಾದಂಬರಿ ಮೊಟ್ಟೆ ಒಡೆದು ಮರಿಯಾಗುವದಕ್ಕೆ ಬೇಕಾದ ಕಾವು ಎಷ್ಟು ಎಂದೆಲ್ಲಾ
ಅಳತೆ ಮಾಪಕಗಳನ್ನು ಹಿಡಿದು jokes
ಬೆವರು ಹರಿಸುವ ಸಂಶೋಧಕ, ಪಂಡಿತರಿಂದ ತಪ್ಪಿಸಿಕೊಂಡಿರುವ ಪ್ರಶ್ನೆ- ಜೋಕುಗಳು
ಹುಟ್ಟುವುದು ಹೇಗೆ? ಈ ಜಗತ್ತಿನಲ್ಲಿರುವ ಅಸಂಖ್ಯಾತ ದಾಖಲಿತ ಜೋಕುಗಳಿಗೆ ಅಪ್ಪ
ಅಮ್ಮಂದಿರು ಯಾರೂ ಇಲ್ಲವೇ? ಒಂದು ಜೋಕು ಹುಟ್ಟು ಪಡೆದು ಬೇರೆ ಬೇರೆ ಸಂಸ್ಕೃತಿಯ ಜನರ
ನಡುವೆ ನಲುಗಿ ಹೊಸ ರೂಪ ಪಡೆದು ದೂರ ದೂರದವರೆಗೆ ಪಸರಿಸುವ ರೀತಿಯೇ ಅದ್ಭುತ. ಎಲ್ಲಿಯೋ
ಸಿಕ್ಕ ಉತ್ಕೃಷ್ಟವಾದ ಹೇಳಿಕೆಯನ್ನು ದಾಖಲಿಸುವಾಗಲೂ, ಭಾಷಣದಲ್ಲಿ, ಬರವಣಿಗೆಯಲ್ಲಿ,
ಪತ್ರಿಕೆಗಳ ಸಂಪಾದಕೀಯ ಪುಟದ ಮೂಲೆಯಲ್ಲಿ ಬಳಸುವಾಗಲೂ ಅದನ್ನುದುರಿಸಿದ ವ್ಯಕ್ತಿಯ
ಹೆಸರನ್ನು ಹಾಕಲಾಗುತ್ತದೆ. ಹೆಸರು ತಿಳಿಯದ ಹೇಳಿಕೆಗಳಿಗೆ ‘ಅನಾಮಿಕ’ನ ಹೆಸರನ್ನಾದರೂ
ಅಂಟಿಸಿ ಕೈತೊಳೆದುಕೊಳ್ಳಲಾಗುತ್ತದೆ. ಆದರೆ ಮನುಷ್ಯ ತನ್ನೆಲ್ಲಾ ಸಂಕಟವನ್ನು ಕ್ಷಣಕಾಲ
ಮರೆತು ನಕ್ಕು ಹಗುರಾಗಲು ನೆರವಾಗುವ ಅಕ್ಷರಗಳ ಈ ಆಭರಣಗಳನ್ನು ಕಡೆದಿರಿಸಿದ ಅಗೋಚರ
ಶಿಲ್ಪಿಗಳ ನೆನಪೂ ನಮಗೆ ಆಗುವುದಿಲ್ಲ!

ಬರೆದೆ ನಿನ್ನ್ ಹೆಸರ ಹೃದಯದಲ್ಲಿ

ಬರೆದೆ ನಿನ್ನ್ ಹೆಸರ ಹೂವಿನಲ್ಲಿ
ಗಾಳಿಯಲ್ಲಿ ತೂರಿ ಹೋಯ್ತು!
ಬರೆದೆ ನಿನ್ನ್ ಹೆಸರ ಮರಳಿನಲ್ಲಿ
ನೀರಿನ ಅಲೆಗಳಿಂದ ಕರಗಿ ಹೋಯ್ತು!
ಬರೆದೆ ನಿನ್ನ್ ಹೆಸರ ಕಾಗದದ ಮೇಲೆ
ಹರಿದು ಹೋಯ್ತು!
ಬರೆದೆ ನಿನ್ನ್ ಹೆಸರ ಹೃದಯದಲ್ಲಿ
ಶಾಶ್ವತ ಆಯ್ತು!!

ನಟರಾಜ್ ಗೌಡ

ಬರೆದೆ ನಿನ್ನ್ ಹೆಸರ ಹೂವಿನಲ್ಲಿ
ಗಾಳಿಯಲ್ಲಿ ತೂರಿ ಹೋಯ್ತು!
ಬರೆದೆ ನಿನ್ನ್ ಹೆಸರ ಮರಳಿನಲ್ಲಿ

ವಿಚ್ಛೇದನ ಒಂದು ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೂರಕವಾಗಿ ನಮ್ಮ ಸರ್ವೋಚ್ಛ ನ್ಯಾಯಾಲಯವೂ ಕೂಡ ಹಿಂದೂ ವೈವಾಹಿಕ ಪದ್ದತಿಯಲ್ಲಿನ ನ್ಯೂನತೆಗಳನ್ನು ಬೊಟ್ಟು ಮಾಡಿ ತೋರಿಸುತ್ತಿದೆ.
ಇಲ್ಲಿ ತಪ್ಪು ಯಾರದು ಎನ್ನುವ ಜಿಜ್ಙಾಸೆಗಿಂತ ಇದರಿಂದ ವಿಚ್ಚೇದಿತ ದಂಪತಿಗಳ ಮಕ್ಕಳ ಮೇಲಾಗುವ ಪರಿಣಾಮಗಳು ನಿಜಕ್ಕೂ ಆಘಾತಕಾರಿ.

ಕನ್ನಡ ವಿಕಿಪಿಡಿಯಾಗೆ ಸರ್ಕಾರದಿಂದ ೨ ಕೋಟಿ ರೂ.

ಬಜೆಟ್ ನಲ್ಲಿ ಕನ್ನಡ ವಿಕಿಪಿಡಿಯಾಗೆ ಸರ್ಕಾರದಿಂದ ೨ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾನ್ಯ ಯಡಿಯೂರಪ್ಪನವರು ಘೋಷಿಸಿದರು. ಈ ಹಣದ ಸದ್ಬಳಕೆಯಾಗಿ ಕನ್ನಡ ವಿಕಿಪಿಡಿಯಾ ಮತ್ತಷ್ಟು ಮಾಹಿತಿಯೊಂದಿಗೆ ಕಂಗೊಳಿಸಲಿ ಎಂದು ಹಾರೈಸುತ್ತೇನೆ.

ಶ್ರೀನಿವಾಸ