ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ಗೆಳೆಯನಿಗೊಂದು ಪತ್ರ

ಗೆಳೆಯ, ನೀ ಹೋದೆಯೆಲ್ಲಿಗೆ? ನಿನಗೆ ನನ್ನ ನೆನಪಾಗಲಿಲ್ಲವೇ? ನಿನಗಾಗಿ ಜೀವವೊಂದು ಕಾಯುತ್ತಿದೆಯೆಂದು ಗೊತ್ತಿದ್ದರೂ ಹೋದೆಯಾ! ನೀನಿಲ್ಲದೆ ಈ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ಮಂಕು ಬಡಿದಿದೆ ಈ ಬುದ್ಧಿಗೆ. ನಿನ್ನ ಪ್ರೀತಿ ಬಿಟ್ಟು ಬೇರೆ ಏನನ್ನು ಬಯಸಲಿಲ್ಲ ನಾನು. ಆದರೂ ನನ್ನ ಬಿಟ್ಟು ಹೋದದ್ದೆಲ್ಲಿಗೆ?

ಲಿನಕ್ಸಾಯಣ - ೩೯ - ಗ್ನು/ಲಿನಕ್ಸ್ ಕಲಿಸುತ್ತ ಯಹೂ ಡಾಟ್ ಕಾಮ್ ಹ್ಯಾಕ್ ಮಾಡಿದ್ದು

ಗ್ನು/ಲಿನಕ್ಸ್ ಕಲೀಬೇಕಾದ್ರೆ ಮತ್ತು ಕಲಿಸ್ಬೇಕಾದ್ರೆ ಮಜಾ ಬರುತ್ತೆ. ಇದು ಕಬ್ಬಿಣದ ಕಡಲೆ ಅಂದವರಿಗೆ, ನಗಿಸಿ ಕಡಲೆ ತಿನ್ನಿಸಿ, ಬೇಕಿದ್ರೆ ಹಲ್ಲೂ ಮುರೀಬಹುದು ನಗ್ತಾ ನಗ್ತಾ. ಇಲ್ರಿ ತಮಾಷೆ ಮಾಡ್ತಿಲ್ಲ.  ಈ ಕೆಳಗಿನ ಚಿತ್ರ ನೋಡಿ. ಮೊನ್ನೆ ನನ್ನ ಹುಡುಗರಿಗೆ, ಗ್ನು/ಲಿನಕ್ಸ್ ನಲ್ಲಿ ಡಿ.ಎನ್.ಎಸ್ (ಡೊಮೈನ್ ನೇಮಿಂಗ್ ಸಿಸ್ಟಂ) ಬಗ್ಗೆ ಹೇಳ್ತಾ, ಅದನ್ನ ಹ್ಯಾಗೆ ೫ - ೧೦ ನಿಮಿಷದಲ್ಲಿ ಎಲ್ಲವನ್ನ ಅರ್ಥ ಮಾಡ್ಕೊಂಡು ತಮ್ಮ ಸಿಸ್ಟಂಗಳಲ್ಲಿ ಕಾನ್ಫಿಗರ್ ಮಾಡ್ಕೊಳ್ಳೋದು ಅಂತ ಹೇಳ್ಬೇಕಾದ್ರೆ ಯಾಹೂ.ಕಾಮ್ ಹ್ಯಾಕ್ ಮಾಡಿ ತೋರಿಸಿದ್ದು.ತಮಾಷೆಯಾಗಿತ್ತು ಆದ್ರೆ, ಅದೇ ಅವರಿಗೆ ವಿಷಯವನ್ನ ಕಲಿಯೋ ಕುತೂಹಲ ಮೂಡಿಸಿದ್ದು. ನಂತರ ಅವರು ಕಲಿತ್ರು ಕೂಡ.

ಲಸಿಕೆಗಳು ಬೇಕೆ?

ಮಕ್ಕಳಿಗೆ ಲಸಿಕೆ ಹಾಕಬೇಕೇ ಬೇಡವೇ ಎಂಬ ಬಗ್ಗೆ ಬಹಳಷ್ಟು ಚರ್ಚೆ ಸಂಪದದಲ್ಲಿ ನಡೆದಿದೆ. ಇದರಿಂದ ಸಾಮಾನ್ಯರಿಗೆ ಗೊಂದಲವುಂಟಾಗುವುದು ಸಹಜವೇ. ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಹಾಗೂ ಅದನ್ನು ಪಾಲಿಸುವ ವೈದ್ಯರ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಬೇಸರ ಹಾಗೂ ಸಂಶಯಗಳಿರುವುದು ಕೂಡಾ ಈ ಚರ್ಚೆಯಲ್ಲಿ ವ್ಯಕ್ತವಾಗಿದೆ. ಅದನ್ನು ಅಲೋಪತಿ ತಜ್ಞರೆಂದು ಕರೆಯಿಸಿಕೊಳ್ಳುತ್ತಿರುವ ನಾವೆಲ್ಲರೂ ತೆರೆದ ಮನಸ್ಸಿನಿಂದ ಪರಿಗಣಿಸಬೇಕಾಗಿದೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಎಲ್ಲವೂ ಸಂಪೂರ್ಣವಾಗಿ ಸರಿಯಿದೆ ಎನ್ನಲಾಗದು ಹಾಗೂ ಸಾಕಷ್ಟು ಪಾರದರ್ಶಕತೆಯಿದೆಯೆಂದೂ ಹೇಳಲಾಗದು.

ಲಭ್ಯವಿರುವ ಎಲ್ಲಾ ಲಸಿಕೆಗಳನ್ನೂ ಕಡ್ಡಾಯವಾಗಿ ಹಾಕಿಸಿಕೊಳ್ಳಲೇ ಬೇಕು ಅಥವಾ ಯಾವ ಲಸಿಕೆಗಳನ್ನೂ ಹಾಕಿಸಿಕೊಳ್ಳಲೇ ಬಾರದು ಎನ್ನುವುದೆರಡೂ ಅತಿರೇಕವೆನಿಸುತ್ತದೆ. ಅದಾಗಲೇ ಹಲವರು ಹೇಳಿರುವಂತೆ, ಲಸಿಕೆಗಳು ವ್ಯಾಪಾರದ ಸರಕುಗಳಾದ ಬಳಿಕ ಅವುಗಳ ಬಗ್ಗೆ ಪಾರದರ್ಶಕವಾದ ಸತ್ಯವು ಹೊರಬೀಳುವುದು ಕಷ್ಟವೇ ಆಗಿಬಿಟ್ಟಿದ್ದು, ತಜ್ಞರೊಳಗೇ ಹಲವಾರು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿವೆ. ಅಂತಹ ಸನ್ನಿವೇಶದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಹಾಗೂ ಆತಂಕಗಳು ಸಹಜವಾಗಿಯೇ ಹುಟ್ಟುತ್ತವೆ; ದಬಾಯಿಸಿ ಸುಮ್ಮನಾಗಿಸುವುದರಿಂದ ಅವು ಇನ್ನಷ್ಟು ಹೆಚ್ಚುತ್ತವೆಯೇ ವಿನಃ ಬೇರೇನೂ ಆಗುವುದಿಲ್ಲ. ಹಾಗಾದರೆ, ತಜ್ಞರೊಳಗೇ ಇರುವ ಪರಸ್ಪರ ಭಿನ್ನವಾದ ಅಭಿಪ್ರಾಯಗಳಲ್ಲಿ ಸಾಮಾನ್ಯರು ಯಾವುದನ್ನು ಹೇಗೆ ಮತ್ತು ಏಕೆ ಆಯ್ದುಕೊಳ್ಳಬೇಕೆಂದು ಯಾರಾದರೂ ಕೇಳಿದರೆ, ಅದಕ್ಕೆ ಉತ್ತರಿಸುವುದು ಸ್ವಲ್ಪ ಕಷ್ಟವೇ. ಖಾಸಗೀಕರಣದಿಂದಾಗಿ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿರುವ ವೈದ್ಯ ಶಿಕ್ಷಣ ಹಾಗೂ ವೈದ್ಯ ವೃತ್ತಿಗಳ ಇಂದಿನ ಪರಿಸ್ಥಿತಿಯಲ್ಲಿ ಇಂತಹಾ ಹಲವಾರು ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳಲಿರುವುದಂತೂ ದಿಟ.

ನಾವು ಯಾರ ಪರವಾಗಿ?

ಅಮೇರಿಕಾದಲ್ಲಿ ನಾಗರೀಕ ಯುದ್ಧದ ಸಮಯ. ಅಧ್ಯಕ್ಷ ಅಬ್ರಹಾಮ್ ಲಿ೦ಕನ್ ರನ್ನು ವೈಟ್ ಹೌಸ್ ನ ವಕ್ತಾರನೊಬ್ಬ ಉದ್ದೇಶಿಸಿ ಹೇಳಿದ,
'ಸರ್, ದೇವರು ನಮ್ಮ ಪರವಾಗಿಯೇ ಇದ್ದಾನೆ. ಹೌದು, ನಮಗೆ ನ೦ಬಿಕೆಯಿದೆ. ದೇವರು ನಮ್ಮ ಪರವಾಗಿಯೇ ಇದ್ದಾನೆ' ಎ೦ದು.
ಅಬ್ರಹಾಮ್ ಲಿ೦ಕನ್ ಸ್ವಲ್ಪ ಯೋಚಿಸಿ ಉತ್ತರಿಸಿದರು:-

ಸ್ನೇಹಿತರ ನೆನಪಿನಲಿ.....

ಮನಸಲೇ ಬೆರೆತು ಕಣ್ಣಿಂದ ದೂರಾಗಿರುವ
ಗೆಳೆಯರನು ಮನಸೇಕೊ ನೆನೆಯುತಿದೆ ಇಂದು
ಜೀವನದಲಿ ನೆನಪಿನ ಬುತ್ತಿಯನು ಹೊತ್ತು
ತರುವವರನ್ನು ಮನಸೇಕೊ ನೆನೆಯುತಿದೆ ಇಂದು

ನೀವೇನಂತೀರಿ???

ನಮ್ಮಕ್ಕನ ಮಗಳು ಒಂದು ಮೆಸೇಜ್ ಕಳ್ಸಿದ್ಲು....ಅದು ಹೀಗಿತ್ತು...

ಇವ‌ತ್ತಿನ‌ ಪ್ರಪ‌ಂಚ‌ದ‌ ನಿರಾಕ‌ರಿಸ‌ಲಾಗ‌ದ ಸ‌ತ್ಯಗ‌ಳು

1) ಇವ‌ತ್ತು ನ‌ಮ್ಮ ಹ‌ತ್ತಿರ‌ ದೊಡ್ಡ ಮ‌ನೆಗ‌ಳಿವೆ ಆದ‌ರೆ ಚಿಕ್ಕ ಕುಟುಂಬ‌.

2) ಜಾಸ್ತಿ ಪ‌ದ‌ವಿ ಆದ‌ರೆ ಸಾಮಾನ್ಯ ಜ್ನಾನ‌ ಕ‌ಡಿಮೆ.

3) ಕಾಯಿಲೆಗ‌ಳಿಗೆ ಹೊಸ‌/ಮುಂದುವ‌ರಿದ‌ ಚಿಕಿತ್ಸಾ ವಿಧಾನ‌ಗ‌ಳು ಆದ‌ರೆ ಕೆಟ್ಟ ಆರೋಗ್ಯ.

ನನ್ನವನು

ತುಂಬಾ ದಿನದ ಹಿಂದೆ 'ನನ್ನವಳು' ಇನ್ನುವ ಕವನವನ್ನು ನನ್ನ ಸ್ನೇಹಿತರೊಬ್ಬರು ಮೇಲ್ ಮಾಡಿದ್ದರು ಅದನ್ನೆ ಸ್ವಲ್ಪ ಬದಲಾಯಿಸಿ ಮೊದಲ ಸಲ ಬರೆಯುವ ಪ್ರಯತ್ನ ಮಾಡಿದ್ದೇನೆ. ಬರೆಯುವಲ್ಲಿ ಎಲ್ಲದರೂ ಎಡವಿದ್ದರೆ ಕ್ಷಮಿಸಿ.

ನನ್ನವನು

ನನ್ನವನು ಆಕಾಶದಲ್ಲಿನ ಸೂರ್ಯನಾಗಿರಬೇಕಿಲ್ಲ
ನನ್ನ ಹಣೆಯ ಕುಂಕುಮವಾಗಿದ್ದರೆ ಸಾಕು!

ನನ್ನವನಿಗೆ ಕಾರು, ಬಂಗಲೆ ಇರಬೇಕೆಂದೇನಿಲ್ಲ

ನನ್ನ ಮನದೊಳಗೆ ಅನುಮಾನಗಳು

ಅಮೇರಿಕಾ ಮತ್ತು ಬಿನ್ ಲಾಡೆನ್ ನಡುವೆ
ಒಳ ಒಪ್ಪಂದ ನಡೆದಿರಬಹುದೇನೋ ಅಂತ

ಇಲ್ಲದೇ ಹೋಗಿದ್ದರೆ ಆತನನ್ನು ಬಂಧಿಸಲು
ಇನ್ನೂ ಅಸಾಧ್ಯವಾಗಿರುವುದು ಏಕೆ ಅಂತ

ಅಮೇರಿಕಾದ ಸೈನ್ಯದ ಮುಂಚೂಣಿಯಲ್ಲಿ
ಇದ್ದಂತಿದೆ ನೋಡಿ ಲಾಡೆನನಿಗೆ ಅಧಿಕಾರ

ಲಾಡೆನ ಹೋದ ಕಡೆ ಎಲ್ಲಾ ಅಮೇರಿಕಾ
ಹೋಗಿ ಸ್ಥಾಪಿಸುತ್ತಿದೆ ತನ್ನ ಅಧಿಕಾರ

ಅಫಘಾನಿಸ್ತಾನದಲಿ ತುಂಬಿಕೊಂಡಾಯ್ತು