ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಾಯೇ ನಿನ್ನ ಚರಣಕೆ

(ಕನ್ನಡತಿಯಾಗಿ ಹುಟ್ಟಿದ್ದಕ್ಕೆ ಹೆಮ್ಮೆ, ಧನ್ಯತೆಯನ್ನು ಅನುಭವಿಸುತ್ತಾ.... ಈ ನನ್ನ ಸಾಲುಗಳು ತಾಯಿ ಕನ್ನಡಾಂಬೆಗೆ...)
ತಾಯೆ ನಿನ್ನ ಚರಣಕೆ
ನಮಿಪೆ ಮನವು ಕುಣಿದಿದೆ
ನಿನ್ನ ಕೀರ್ತಿ ಹಾಡಲು
ಎನ್ನ ನಾಲಗೆ ಬಯಸಿದೆ|

ಕನ್ನಡ ನಾಡಿನ ಎಲ್ಲೆಡೆಯಲ್ಲೂ
ತಾಯೆ ನಿನ್ನದೆ ಗುಣಗಾನ
ನಿನ್ನ ಉದರದೊಳು ಜನಿಸಿರಲು
ಜನ್ಮವಾಯಿತಿದು ಪಾವನ|

ಒಲವಿನಿಂದಲಿ ಸಲಹಿರೆ ತಾಯೆ

ಶ್ರೀಕೃಷ್ಣ ದೇವರಾಯ

ದಕ್ಷಿಣ ಭಾರತದಲ್ಲಿ ಎಷ್ಟೋ ದೇವಸ್ಥಾನಗಳು ಇನ್ನು ತಮ್ಮ ವೈಭವನ್ನು ಊಳಿಸಿ ಕೊಂಡಿವೆ ಎಂದರೆ ಅದಕ್ಕೆ ಕಾರಣ....ಕನ್ನಡಿಗರ ಹೆಮ್ಮೆ....ಕನ್ನಡ ರಮಾರಮಣ.....ಶ್ರೀಕೃಷ್ಣ ದೇವರಾಯ ಅಲ್ಲವೇ.

ಇನ್ದಿಂಗು ತಿರುಪತಿಯಲ್ಲಿ ವೆಂಕಟೇಶ್ವರನ ನಂತರ ಮೊದಲ ಪೂಜೆ ಯಾರಿಗೆ ಸಲ್ಲುತ್ತದೆ ಶ್ರೀಕೃಷ್ಣ ದೇವರಾಯ ನಿಗೆ ಅಲ್ಲವೇ!!!

ಕಾ ಕಾ ಐಸ್ ಕ್ರೀಮ್ ಇಡ್ಬೋದಾ??

ಕಳೆದು ಹೋದ ಸಮಯವನ್ನ ಮೆಲುಕು ಹಾಕೋದು ಒಂದು ರೀತಿಯ ಅತ್ಯುತ್ತಮ ಟೈಂ ಪಾಸ್ ಅನ್ನಬಹುದು, ನಾಸ್ಟಾಲ್ಜಿಕ್ ಅಂತ ಕೆಲವೊಮ್ಮೆ ಅನ್ನಿಸಿದರೂ ಅದರಲ್ಲಿರೋ ಖುಷಿ ಇನ್ಯಾವುದ್ರಲ್ಲೂ ಇಲ್ಲ ಅಂದ್ರೆ ಅತಿಶಯೋಕ್ತಿ ಅಲ್ಲ.

ಚಿಕ್ಕವರಿದ್ದಾಗ ಮನೆ ಇದ್ದಿದ್ದು ತುಂಬಾ busy ಅನ್ನಿಸೋ ಅವೆನ್ಯೂ ರಸ್ತೆಯಲ್ಲಿ, ಬೆಂಗಳೂರಿನ ಹೃದಯಭಾಗ ಅನ್ನೋ ಒಂದು ಹೆಗ್ಗಳಿಕೆ ಜೊತೆಗೆ ಅಲ್ಲಿ ಸಿಗದ ವಸ್ತುಗಳೇ ಇಲ್ಲ ಅನ್ನೋ ಹೆಮ್ಮೆ ನಮಗೆ! ಇದರಿಂದ ನಿಮಗೇನು ಲಾಭ ಅಂತೆಲ್ಲಾ ಕೇಳಬೇಡಿ. :-)

ಬೆಂಗಳೂರಿನ ನಗರ್ತರ ಪೇಟೆ, ಬೆಂದಕಾಳೂರಿನ ಮೂಲನಿವಾಸಿಗಳು ಅನ್ನಬಹುದಾದ ದೇವಾಂಗದವರೇ ಹೆಚ್ಚಾಗಿರುವ ಕಬ್ಬನ್ ಪೇಟೆ, ಮಾಮೂಲು ಪೇಟೆ, ಕುಂಬಾರ ಪೇಟೆ, ಚಿಕ್ಕ ಪೇಟೆ, ದೊಡ್ಡ ಪೇಟೆ, ಮನೆವಾರ್ತೆ ಪೇಟೆ, ಬಳ್ಳಾಪುರ ಪೇಟೆ ಇವುಗಳಿಂದ ಸುತ್ತುವರೆದ ನಮ್ಮ ಮನೆಯಲ್ಲಿ ಯಾವಾಗಲೂ ಒಂದಲ್ಲಾ ಒಂದು ಕಾರಣದಿಂದ ಜನ ತುಂಬೇ ಇರೋವ್ರು. ಬೆಂಗಳೂರಿನಲ್ಲಿ ನಮ್ಮ ಬಂಧು-ಬಳಗ ಇದ್ದುದೆಲ್ಲ ಬಹುತೇಕ ಮಲ್ಲೇಶ್ವರದಲ್ಲಿ. ಅಲ್ಲಿಂದ ಕರಗದ ಸಮಯದಲ್ಲಿ ಕರಗ ನೋಡೋಕ್ಕೆ ಬರೋ ಜನ ಒಂದು ಕಡೆ, ಬೇರೆ ವೇಳೆಯಲ್ಲಿ ಚಿಕ್ಕಪೇಟೆಗೆ ಆಭರಣ, ಸೀರೆ ತೊಗೊಳ್ಳೋಕೆ ಬರೋ ನೀರೆಯರು, ಎಸ್. ಪಿ. ರೋಡ್ ಗೆ ಟೂಲ್ಸ್ ಇತ್ಯಾದಿ ತೊಗೊಳ್ಳೋಕ್ಕೆ ಬರೋ ಧೀರರು, ಸುಭಾಷ್ ಸ್ಟೋರ್ಸ್-ಗೆ ಬುಕ್ಸ್ ತೊಗೊಳ್ಳೋಕೆ ಬರೋ ವಿದ್ಯಾರ್ಥಿಗಳು, ಮಾಮೂಲು ಪೇಟೆಗೆ ವುಲ್ಲನ್ ತೊಗೊಳ್ಳಕ್ಕೆ ಬರೋ ಅಜ್ಜಿಯರು, ಇವರೆಲ್ಲರಿಗೂ ನಮ್ಮ ಮನೆ ಒಂದು ತಂಗುದಾಣ. ಇವೆಲ್ಲದರ ಜೊತೆಗೆ ಅಪ್ಪನ ಅಂಗಡಿಗೆ ಬರುತ್ತಿದ್ದ ನಮ್ಮ ಅನ್ನದಾತ ಗ್ರಾಹಕ ಬಂಧುಗಳನ್ನ ಮರೆಯೋದಕ್ಕೆ ಸಾಧ್ಯಾನೇ ಇಲ್ಲ.

ಕೈಗುಳಿಗೆ

ಕನ್ನಡದಲ್ಲಿ ಆಗಮ ಸನ್ಧಿಯಿಲ್ಲವೆಂಬುದು ಒನ್ದು ಪೆರಮೆಯೇ ಆಗಿದೆ. ಕೆಲವು ಬಗೆಯ ಆಗಮ ಸನ್ಧಿಗಳು ಹೇಗಾಗುತ್ತವೆನ್ದು ನನ್ನ ಹಿನ್ದಿನ ಬರೆಹಗಳಲ್ಲಿ ತೋರಿಸಿರುವೆನು.

http://sampada.net/forum/15169
http://sampada.net/forum/14250

ಆದರೆ ಸಂಪದದ ಕೆಲವು ಪುಟಗಳ ಗಮನಿಸಿದಾಗ ಈ ಕೆಳಗಣ ಅನುಮಾನಗಳಿರುವನ್ತೆ ಕಣ್ಡುಬನ್ತು:

ಯಾವ ಜನ್ಮದ Mohini ನೀನು... ಏನು ಮಾಡಿ ಹೋದೆ...

ಓ!! ಮಿಂಚಿನ ಚಲನೆ ನನ್ನ ಹೄದಯದಲ್ಲಿ...
ನಿನ್ನ ಮೊದಲು ನೋಡಿದಾಗ !
ಓ!! ಪ್ರೇಮದ ಜ್ವಾಲೆ ನನ್ನೊಳಗೆ...
ನೀ ನಾಚಿ ತೊದಲು ನುಡಿದಾಗ...
ಮಿಂಚಿನ ಚಲನೆಯೊ, ಪ್ರೇಮದ ಜ್ವಾಲೆಯೊ
ತಿಳಿಯದಾಗಿದೆ... ಯಾವ ಜನ್ಮದ ಮೊಹಿನಿ
ನೀನು... ಏನು ಮಾಡಿ ಹೋದೆ...
ಮೈ ಮನವೆಲ್ಲ ಉರಿಯತ್ತಿದೆ

ಎನ್ನ ಕಾಡುತಿರುವಪ್ರಶ್ನೆಗಳು

ಒಳ್ಳೆಯರೆಂಬ ಹಣೆಪಟ್ಟಿ ಕಟ್ಟಿ, ಸುಮ್ಮನೆ ಸಹಾಯ ಕೇಳೋದು...ಮಾಡಿದರೆ ಒಳ್ಳೆಯವ, ಇಲ್ಲದಿದ್ದರೆ ಕೆಟ್ಟವರೆ?

ಪ್ರೀತಿಸುತ್ತೇವೆ, ಹುಡುಗ ಅಥವಾ ಹುಡುಗಿ ಕೈ ಕೊಟ್ಟ ಮೇಲೆ, ಸಮಾಜ ಯಾಕೆ ದೇವದಾಸನಿಗೆ ಹೊಲಿಸುತ್ತ್ತಾರೆ, ಮನಸಿಗೆ ಏಕೆ ದೈರ್ಯ ತುಂಬುವುದಿಲ್ಲ?

ಕಾಲ ಬದಲಾದಂತೆ ನಾವು ಬದಲಾಗುತ್ತೇವೆ, ಆದರೆ ಗಡಿಯಾರದಲ್ಲಿ ಅದೇ ಸಮಯ, ಆದೆ ಮುಳ್ಳು?