ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒ೦ದು ಮರೆಯಲಾರದ ಅನುಭವ.............

ನಾವು ಮದುವೆಯಾಗಿ ಕಲ್ಕತ್ತದಲ್ಲಿ ಇದ್ದೆವು.... ನನ್ನ ಮಗ ಹುಟ್ಟಿದ್ದು ಅಲ್ಲೇ..... ಆಗ ನನಗೆ ಸರಿಯಾಗಿ ಬೆ೦ಗಾಲಿ ಮಾತನಾಡಲು ಕೂಡ ಬರುತ್ತಿರಲಿಲ್ಲ. ಅ ದಿನಗಳಲ್ಲಿ, ಅಲ್ಲಿ ಒ೦ದು ಅಭ್ಯಾಸ ಇತ್ತು. ನರ್ಸಿನ್ಗ್ ಹೋ೦ನವರೇ ಈ ಹಿಜ್ಡಾ ಜನಾ೦ಗದವರಿಗೆ, ಅವರಲ್ಲಿ ಹುಟ್ಟುವ ಮಕ್ಕಳ ವಿವರಗಳನ್ನು ಕೊಟ್ಟುಬಿಡುತ್ತಿದ್ದರು. ನನಗೆ ಆ ವಿಷಯ ಗೊತ್ತಿರಲಿಲ್ಲಾ....

ಅರಿವಳಿಕೆ (ಅನೆಸ್ತೇಷಿಯಾ)

ರೋಗಿಯೊಬ್ಬನಿಗೆ ವಿಪರೀತ ಹೊಟ್ಟೆನೋವು. ಕೂಡಲೇ ಅವನನ್ನು ಆಸ್ಪತ್ರೆಗೆ ತರಲಾಯಿತು. ಪರೀಕ್ಷಿಸಿದ ಡಾಕ್ಟರರೆಂದರು - ಇದು ಅಪೆಂಡಿಸ್ಐಟಿಸ್. ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು. ಸರಿ, ರೋಗಿಗೆ ಅರವಳಿಕೆ ನೀಡಲು ಅರವಳಿಕೆ ತಜ್ಞರು ಬಂದರು; ಆಪರೇಷನ್ ಆಯಿತು. ಹೀಗೆ ದೇಹಕ್ಕೆ ಏನಾದರೂ ತೊಂದರೆಯಾಗಿ ಆಪರೇಷನ್ ಮಾಡಬೇಕಾದಾಗ ಅರಿವಳಿಕೆ ಇರಲೇಬೇಕು.

ಮಂಕುತಿಮ್ಮ - ೭೮೫

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |
ಯೆಂದೊ ತಾನೇ ಬಳಲಿ ತಣ್ಣಗಾಗುವುದು ||
ಮಂದದಾ ಕಾರ್ಮೋಂಡ ಬಿರಿದು ರವಿ ಬೆಳಗುವನು |
ಅಂದಿನಾ ಸುಖವೆ ಸುಖ -- ಮಂಕುತಿಮ್ಮ ||

"ಯುಗಾವತಾರಿ " ಬಸವಣ್ಣನವರ ಬಗೆಗೆ ಬರೆದ ಮಹಾಕಾವ್ಯ

ಸಂಪದಿಗರೆ,
ಸವಿತೃ ಅವರು ಬಸವಣ್ಣನವರ ಬಗ್ಗೆ ಇರುವ ಪುಸ್ತಕಗಳ ಬಗ್ಗೆ ಕೇಳಿದ್ದರು . ಬಹುಶಃ ಬಸವಣ್ಣನವರ ಬಗ್ಗೆ ಬರುತ್ತಿರುವ ಆರು ಸಂಪುಟಗಳ "ಯುಗಾವತಾರಿ" ಶ್ರೀ ಬಸವದರ್ಶನ ಕಾವ್ಯದ ಬಗ್ಗೆ ಅವರಿಗೆ ತಿಳಿದಿರಲಾರದು. ಅದಕ್ಕೆಂದೇ ಈ ಮಾಹಿತಿಯನ್ನು ತಮ್ಮೆಲ್ಲರಿಗೆ ನೀಡುತ್ತಿದ್ದೇನೆ.

ಆರ್ಥಿಕ ಹಿಂಜರಿತ: ಉದ್ಯೋಗ ಕಡಿತ ಅಥವಾ ಸಂಬಳ ಕಡಿತ. ನಿಮ್ಮ ಅಭಿಪ್ರಾಯ?

ಆರ್ಥಿಕ ಹಿಂಜರಿತ ತೀವ್ರ ಪರಿಣಾಮ ಬೀರುತ್ತಿದೆ. ಆಟೋಮೊಬೈಲ್ ಕಂಪೆನಿಯವರು ತಮ್ಮ ಕಾರ್ಖಾನೆಯನ್ನೇ ಸ್ತಬ್ದಗೊಳಿಸಿದಾಗ ಅನಿವಾರ್ಯವಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳಲೆಬೇಕಾಗುತ್ತದೆ. ಇದು ಬಹಳ ದುಃಖದ ಸಂಗತಿ. ಅಂತೆಯೇ ನಿನ್ನೆ ಟೈಮ್ಸ್ ಪತ್ರಿಕೆಯಲ್ಲಿ ಒಂದು ಪೋಲ್ ನಡೆಸಿದ್ದರು.

ಸತ್ತವರ ಮಾನ ಸತ್ತ ಮೇಲೂ ಕಳೆಯಬೇಡಿ...

ಈ ಕವಿತೆ ಚಂದ್ರಶೇಖರ್‍ ಪಾಟೀಲ್‌ (ಚಂಪಾ) ಅವರ ಸಂಕ್ರಮಣ ಮಾಸಿಕದ ಸೆಪ್ಟೆಂಬರ್‌-ಅಕ್ಟೋಬರ್‌ ೨೦೦೮ರ ಸಂಚಿಕೆಯಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು. ಸಂಪದಿಗರ ಅವಗಾಹನೆಗೆಂದು ಕೊಡುತ್ತಿದ್ದೇನೆ. ಲೇಖಕರ ವಿವರ ಅಲ್ಲಿ ಅಚ್ಚಾಗಿಲ್ಲ. ನಿಮಗೆ ಈ ಕವಿಯ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.

ರಜೆ

ಬಾಲ್ಯದಲ್ಲಿ ಶಾಲೆಯಲ್ಲಿ
ಅಮ್ಮನನ್ನು ನೆನೆಯುತ್ತ
ಕಣ್ಣೀರು ಹಾಕುತ್ತ
ಅಆಇಈ ತಿದ್ದುತ್ತಿದ್ದ
ನರಕದಂತಹ ದಿನಗಳಲ್ಲಿ
ದೇಶದ ಪ್ರಮುಖನೊಬ್ಬ ಸತ್ತರೆ
ನಮಗೋ ರಜೆ....ಹಾಲು ಸಕ್ಕರೆ !
ಅಷ್ಟು ಖುಷಿಯಾಗಲಿಕ್ಕಿಲ್ಲ
ನೊಬೆಲ್‌ ಬಹುಮಾನ ಸಿಕ್ಕರೆ !

ಸಂಪದಿಗರೆ...

ಸಂಪದಿಗರೆ...
k.c.e.t. ( ಕೆ ಸಿ ಇ ಟಿ) ಎಕ್ಶಾಮ್ ಯಾವಾಗ? ಅಪ್ಪ್ಲಿಕೇಶನ್ ಫಾರಂ ಯಾವಾಗ ಕೊಡ್ತಾರೆ ಇವೆಲ್ಲಾ ವಿವರಗಳನ್ನು ತಿಳಿಸುತ್ತೀರಾ?
ಹಾಗೆಯೇ ಕಾಮೆಡ್ ಕೆ ಅಪ್ಪ್ಲಿಕೇಶನ್ ಫಾರಂ ಯಾವಾಗ ಕೊಡ್ತಾರೆ ತಿಳಿಸುತ್ತೀರಾ?
(comed k)

ಸೀತ ಆರ್. ಮೊರಬ್

ವಿಭಕ್ತಿಗಳು!!! (ಒಂದು ಅನುಮಾನ)

ನನಗೆ ಕೆಲವು ವಿಭಕ್ತಿಗಳ ಬಗ್ಗೆ ಸ್ವಲ್ಪ ಅನುಮಾನ ಇದೆ, ದಯವಿಟ್ಟು ತಿಳಿದವರು ಸರಿಪಡಿಸಿ. ನಿಮಗೆಲ್ಲ ಮುಂಗಡವಾಗಿ ಧನ್ಯವಾದಗಳು!

* ಪ್ರಥಮಾ ವಿಭಕ್ತಿ-------------ಉ

* ದ್ವಿತೀಯಾ ವಿಭಕ್ತಿ-----------ಅನ್ನು

* ತೃತೀಯಾ ವಿಭಕ್ತಿ-----------ಯಿಂದ

* ಚತುರ್ಥೀ ವಿಭಕ್ತಿ------------ಗೆ, ಗೋಸ್ಕರ

* ಪಂಚಮೀ ವಿಭಕ್ತಿ------------ಅದರಿಂದ??? ಇದು ಸರಿಯಾಗಿದೆಯಾ, ಇಲ್ಲದಿದ್ದಲ್ಲಿ, ತಿಳಿಸಿರಿ.

ಮೆಕಾಲೆ ಶಿಕ್ಷಣದಿಂದ ಮಹರ್ಷಿ ಶಿಕ್ಷಣದ ಕಡೆಗೆ

 [ಮಿತ್ರ ಅನಂತನಾರಯಣ ಒಂದು ಲೇಖನ ಕಳಿಸಿಕೊಟ್ಟಿದ್ದಾರೆ.ಶಾಲೆಯ ಸ್ಮರಣ ಸಂಚಿಕೆಗಾಗಿ ಬರೆದಿರುವ ಈ ಲೇಖನವನ್ನು ಸಂಪದಿಗರಿಗಾಗಿ ಪ್ರಕಟಿಸಿರುವೆ]